25.1 C
Karnataka
Sunday, May 24, 2026
    Home Blog Page 85

    ರಾಜ್ಯದ ನಾಲ್ವರು ಸಚಿವರ ಪ್ರಮಾಣ ವಚನ

    ನೂತನ ಸಚಿವರ ಪದಗ್ರಹಣ ಸಮಾರಂಭ ಇದೀಗ ಮುಕ್ತಾಯಗೊಂಡಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದರು. 15 ಮಂದಿ ಸಚಿವರು ಸಂಪುಟ ದರ್ಜೆಯವರಾಗಿದ್ದು ಉಳಿದ 28 ಸಚಿವರು ಸ್ಟೇಟ್ ದರ್ಜೆಯ ಸಚಿವರಾಗಿದ್ದಾರೆ.

    ನಿರೀಕ್ಷೆಯಂತೆ ಕರ್ನಾಟಕದ ರಾಜೀವ್ ಚಂದ್ರಶೇಖರ್, ಶೋಭ ಕರಂದ್ಲಾಜೆ, ನಾರಾಯಣ ಸ್ವಾಮಿ ಮತ್ತು ಭಗವಂತ ಖೂಬ ಸ್ಟೇಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

    ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರಹ್ಲಾದ ಜೋಷಿ, ಸದಾನಂದ ಗೌಡ ಪ್ರತಿನಿಧಿಸುತ್ತಿದ್ದರು. ಹೊಸದಾಗಿ ಪ್ರಮಾಣ ಸ್ವೀಕರಿಸಿದ ನಾಲ್ವರು ಸಚಿವರು ಸ್ಟೇಟ್ ದರ್ಜೆಯವರಾಗಿರುವದರಿಂದ ಸಂಪುಟದಲ್ಲಿ ಕರ್ನಾಟಕದ ಏಕೈಕ ಸಚಿವರೆಂದರೆ ಪ್ರಹ್ಲಾದ ಜೋಷಿ ಮಾತ್ರ.

    ಇಂದು ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರ ಪಟ್ಟಿ ಇಂತಿದೆ, ರಾತ್ರಿಯ ವೇಳೆಗೆ ಖಾತೆಗಳ ಹಂಚಿಕೆಯಾಗಲಿದೆ.

    CABINET MINISTERS 
    1.  Shri Narayan Tatu Rane
    2.  Shri Sarbananda Sonowal
    3.  Dr. Virendra Kumar
    4. Shri Jyotiraditya M Scindia
    5.  Shri Ramchandra Prasad Singh
    6. Shri Ashwini Vaishnaw
    7. Shri Pashu Pati Kumar Paras
    8. Shri Kiren Rijiju
    9. Shri Raj Kumar Singh
    10. Shri Hardeep Singh Puri
    11. Shri Mansukh Mandaviya
    12. Shri Bhupender Yadav
    13. Shri Parshottam Rupala
    14. Shri G. Kishan Reddy
    15. Shri Anurag Singh Thakur
    MINISTERS OF STATE
     
    1. Shri Pankaj Choudhary
    2. Smt. Anupriya Singh Patel
    3. Dr. Satya Pal Singh Baghel
    4. Shri Rajeev Chandrasekhar
    5. Sushri Shobha Karandlaje
    6. Shri Bhanu Pratap Singh Verma
    7. Smt. Darshana Vikram Jardosh
    8. Smt. Meenakshi Lekhi
    9. Smt. Annpurna Devi
    10. Shri A. Narayanaswamy
    11. Shri Kaushal Kishore
    12. Shri Ajay Bhatt
    13. Shri B. L. Verma
    14. Shri Ajay Kumar
    15. Shri Chauhan Devusinh
    16. Shri Bhagwanth Khuba
    17. Shri Kapil Moreshwar Patil
    18. Sushri Pratima Bhoumik
    19. Dr. Subhas Sarkar
    20. Dr. Bhagwat Kishanrao Karad
    21. Dr. Rajkumar Ranjan Singh
    22. Dr. Bharati Pravin Pawar
     23. Shri Bishweswar Tudu
    24. Shri Shantanu Thakur
    25. Dr. Munjapara Mahendrabhai
    26. Shri John Barla
    27. Dr. L. Murugan
    28. Shri Nisith Pramanik

    ಮತ್ತಿಬ್ಬರು ಸಚಿವರ ರಾಜೀನಾಮೆ

    ಕೇಂದ್ರ ಸಚಿವ ಸಂಪುಟ ಪುನರಾಚನೆ ಸಮೀಪಿಸುತ್ತಿದ್ದಂತೆ ಕ್ಷಣ ಕ್ಷಣಕ್ಕೂ ಬೆಳವಣಿಗೆಗಳು ಆಗುತ್ತಿವೆ. ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಮತ್ತು ವಾರ್ತಾ ಸಚಿವ ಪ್ರಕಾಶ್ ಜಾವೇಡೆಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

    ಸಂಭಾವ್ಯ ಸಚಿವರ ಪಟ್ಟಿ

    ರಾಷ್ಟ್ರೀಯ ಸುದ್ದಿ ವಾಹಿನಿಗಳ ಪ್ರಕಾರ ಒಟ್ಟು 43 ಸಂಸದರು ಮೋದಿ ಸಂಪುಟದ ಸಚಿವರಾಗಿ ಇಂದು ಸಂಜೆ ಪದಗ್ರಹಣ ಮಾಡುವ ನಿರೀಕ್ಷೆ ಇದೆ. ಇದರಲ್ಲಿ ಸಂಪುಟ ದರ್ಜೆ ಮತ್ತು ಸ್ಟೇಟ್ ದರ್ಜೆಯ ಸಚಿವರೂ ಇದ್ದಾರೆ. ಈಗ ಹಾಲಿ ಸ್ಟೇಟ್ ದರ್ಜೆ ಸಚಿವರಾಗಿದ್ದವರು ಸಂಪುಟ ಸಚಿರಾಗುವ ಪಕ್ಷದಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸ ಬೇಕಾಗುತ್ತದೆ.

    ಮೂಲಗಳ ಪ್ರಕಾರ ಪಟ್ಟಿ ಇಂತಿದೆ,

    1. Jyotiraditya Scindia
    2. Sarbananda Sonowal
    3. Dr Virendra Kumar
    4. Narayan Rana
    5. Kiren Rijiju
    6. Ashwini Vaishnaw
    7. Pashupati Kumar Paras
    8. RCP Singh
    9. Raj Kumar Singh
    10. Hardeep Singh Puri
    11. Mansukh Mandaviya
    12. Bhupender Yadav
    13. Parshottam Rupala
    14. G Kishan Reddy
    15. Anurag Singh Thakur
    16. Dr Satya Pal Singh Baghel
    17. Anupriya Singh Patel
    18. Pankaj Choudhary
    19. Rajeev Chandrasekhar
    20. Shobha Karandlaje
    21. Bhagwanth Khuba
    22. A Narayanaswamy
    23. Meenakashi Lekhi
    24. Annpurna Devi
    25. Bhanu Pratap Singh Verma
    26. Kaushal Kishore
    27. Ajay Bhatt
    28. B L Verma
    29. Ajay Kumar
    30. Chauhan Devusinh
    31. Darshana Vikram Jardosh
    32. Kapil Moreshwar Patil
    33. Pratima Bhoumik
    34. Dr Subhas Sarkar
    35. Dr Bhagwat Kishanrao Karad
    36. Dr Rajkumar Ranjan Singh
    37. Dr Bharati Pravin Pawar
    38. Bishweswar Tudu
    39. Shantanu Thakur
    40. Dr Munjapara Mahendrabhai
    41. John Barla
    42. Dr L Murugan
    43. Nisith Pramanik

    ಹೊಸ ಸಚಿವರ ಸೇರ್ಪಡೆಗೆ ಕ್ಷಣ ಗಣನೆ; ರಾಜ್ಯದಿಂದ ನಾಲ್ವರು ಖಚಿತ

    ಸಂಭಾವ್ಯ ಸಚಿವರೊಂದಿಗೆ ಲೋಕ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ನಡೆಸಿದ ಸಭೆ
    ಹಲವು ಹಾಲಿ ಸಚಿವರ ರಾಜಿನಾಮೆಯಿಂದ ಕೇಂದ್ರ ಸಂಪುಟ ಹೊಸ ರೂಪ ಪಡೆಯುವುದು ನಿಶ್ಚಿತವಾಗಿದೆ. ಪ್ರಧಾನಿ ಸಂಪುಟ ಸೇರುವ ಹೊಸ ಸಚಿವರೊಂದಿಗೆ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ನಡೆಸಿದ ಸಭೆ ಮುಕ್ತಾಯಗೊಂಡಿದೆ.
    
    ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್, ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್ ನಿಶಾಂಕ್, ಸಂತೋಷ್ ಗಂಗ್ವಾರ್,  ಬಾಬುಲ್ ಸುಪ್ರಿಯೋ ಸೇರಿದಂತೆ 11 ಸಚಿವರು ಸರ್ಕಾರದಿಂದ ನಿರ್ಗಮಿಸಿದ್ದಾರೆ. ಮತ್ತೊಬ್ಬ ಸಚಿವ ಥಾವರ್ ಚಂದ್ ಗಹ್ಲೋಟ್  ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. 
    
     ಈ ಬಾರಿ ಜೆಡಿಯು ಸಂಪುಟದಲ್ಲಿ ಸ್ಥಾನ ಪಡೆಯಲಿದೆ.   ಪಶುಪತಿ ಕುಮಾರ್ ಪರಾಸ್  ಸೇರ್ಪಡೆಗೊಳ್ಳುವ ಮೂಲಕ ಎಲ್ ಜೆ ಪಿ ಕೂಡ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲಿದೆ. ಜ್ಯೋತಿರಾಧಿತ್ಯ ಸಿಂಧ್ಯಾ ಸೇರ್ಪಡೆ ಮಧ್ಯಪ್ರದೇಶ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗಲಿದೆ. 
    
    ಕರ್ನಾಟಕದಿಂದ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಮತ್ತು ರಾಜ್ಯಸಭೆ ಸದಸ್ಯ  ರಾಜೀವ್ ಚಂದ್ರಶೇಖರ್ ಸಂಪುಟ ಸೇರುವುದು ಬಹುತೇಕ ನಿಶ್ಚಿತವಾಗಿದೆ. ಇದರಿಂದ  ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ , ಪ್ರಹ್ಲಾದ್ ಜೋಷಿ ಸೇರಿ ಕೇಂದ್ರ ಸಂಪುಟದಲ್ಲಿ ರಾಜ್ಯದ  ಪ್ರಾತಿನಿಧ್ಯ 6ಕ್ಕೆ ಏರಲಿದೆ.  

    ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಕ್ರಿಯಾಯೋಜನೆ

    ಕರ್ನಾಟಕದ ಪಾಲಿಗೆ ಮಹತ್ವದ್ದಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅತಿ ಶೀಘ್ರದಲ್ಲಿ ಕಾರ್ಯಾರಂಭ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ತಿಳಿಸಿದರು.

    ಬುಧವಾರ ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಾರಾಂತ್ಯದಲ್ಲಿ ಮುಖ್ಯಮಂತ್ರಿಗಳು ಕ್ರಿಯಾ ಯೋಜನೆಗೆ ಸಂಬಂಧಪಟ್ಟಂತೆ ಕಾನೂನು ತಜ್ಞ ಹಾಗೂ ತಾಂತ್ರಿಕ ಪರಿಣಿತರ ಜೊತೆ ಚರ್ಚೆ ಮಾಡಲಿದ್ದಾರೆ ಎಂದರು.

    ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟಿನಲ್ಲಿ ಮಿಸಲೇನಿಯಸ್ ಅರ್ಜಿ ಮಾತ್ರ ಬಾಕಿ ಇದೆ. ಈ ಕುರಿತು ಸಿಎಂ ಈ ವಾರ ಸಭೆ ಕೈಗೊಳ್ಳಲಿದ್ದಾರೆ. ಯೋಜನೆಯ ಅನುಷ್ಠಾನಕ್ಕೆ ಯಾವ ಯಾವ ಒಪ್ಪಿಗೆ ಪಡೆಯಬೇಕು ? ಮುಂದೆ ಯಾವ ರೀತಿ ಹೋಗಬೇಕು ಎಂಬುದರ ಕುರಿತು ಕಾನೂನು ಪರಿಣಿತರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಅವರು ತಿಳಿಸಿದರು.‌

    ಮೇಕೆದಾಟು ಯೋಜನೆ ರಾಜ್ಯಕ್ಕೆ ಮಹತ್ವದ್ದು. ಕಾವೇರಿ ನೀರು ನಿರ್ವಹಣೆಯಲ್ಲಿ ಮುಖ್ಯ ಪಾತ್ರವಹಿಸುವ ಭವಿಷ್ಯದ ಯೋಜನೆ. ಮತ್ತು ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಯಲ್ಲಿ ಮಹತ್ವದ ಪಾತ್ರವಹಿಸುವ ಸಮಾನಾಂತರ ಅಣೆಕಟ್ಟು ಇದಾಗಲಿದೆ. ಆದ್ದರಿಂದ ಈ ಯೋಜನೆಯನ್ನು ಜಾರಿ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಮುಖ್ಯಮಂತ್ರಿಗಳು ಈ ವಾರಾಂತ್ಯದೊಳಗೆ ಕಾನೂನು ಪಂಡಿತರ ಮತ್ತು ತಾಂತ್ರಿಕ ಪರಿಣಿತರ ಸಭೆ ಕರೆಯಲಿದ್ದಾರೆ ಎಂದು ಅವರು ಹೇಳಿದರು.

    ಕೋವಿಡ್: ದೈನಿಕ ಹೊಸ ಪ್ರಕರಣಗಳಿಗಿಂತಲೂ ಚೇತರಿಕೆಯೇ ಹೆಚ್ಚು

    ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಅಡಿಯಲ್ಲಿ ಈವರೆಗೆ 36.13 ಕೋಟಿ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ.

    ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 43,733 ಹೊಸ ಪ್ರಕರಣಗಳು ದಾಖಲಾಗಿವೆ.

    ಭಾರತದ ಒಟ್ಟು ಸಕ್ರಿಯ ಪ್ರಕರಣಗಳು 4,59,920ಕ್ಕೆ ಇಳಿಕೆಯಾಗಿದೆ.

    ಒಟ್ಟು ಪ್ರಕರಣಗಳ ಪೈಕಿ ಶೇ.1.5ರಷ್ಟು ಸಕ್ರಿಯ ಪ್ರಕರಣಗಳಿವೆ.

    ಈವರೆಗೆ ದೇಶಾದ್ಯಂತ ಒಟ್ಟು 2,97,99,534 ಜನರು ಚೇತರಿಸಿಕೊಂಡಿದ್ದಾರೆ.

    ಕಳೆದ 24 ಗಂಟೆಗಳ ಅವಧಿಯಲ್ಲಿ 47,240 ರೋಗಿಗಳು ಗುಣಮುಖರಾಗಿದ್ದಾರೆ.

    ಸತತ 55ನೇ ದಿನವೂ ದೈನಿಕ ಹೊಸ ಪ್ರಕರಣಗಳಿಗಿಂತಲೂ ದೈನಿಕ ಚೇತರಿಕೆಯೇ ಹೆಚ್ಚಾಗಿದೆ.

    ಚೇತರಿಕೆಯ ದರ ಶೇ. 97.18ಕ್ಕೆ ಹೆಚ್ಚಾಗಿದೆ.

    ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗಿದ್ದು, ಪ್ರಸ್ತುತ ಶೇ. 2.39ರಲ್ಲಿದೆ.

    ದೈನಿಕ ಪಾಸಿಟಿವಿಟಿ ದರ ಶೇ.2.29 ಆಗಿದ್ದು, ಸತತ 16ನೇ ದಿನವೂ ಶೇ.3ಕ್ಕಿಂತ ಕಡಿಮೆ ಇದೆ.

    ಪರೀಕ್ಷೆಯ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಗಿದ್ದು ಈವರೆಗೆ ಒಟ್ಟು– 42.33 ಕೋಟಿ ಪರೀಕ್ಷೆ ನಡೆಸಲಾಗಿದೆ.


    ದ್ರೋಹ ಮಾಡಿದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದ ಸಿದ್ಧರಾಮಯ್ಯ

    ಪದೇ ಪದೇ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು‌ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.ಅಧಿಕಾರಕ್ಕಾಗಿ ಯಾರೂ ಪಕ್ಷಕ್ಕೆ ಬರಬಾರದು. ಜನಸೇವೆಯ ಗುರಿ ಇದ್ದವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

    ಕೆಪಿಸಿಸಿಯ ಮೈಸೂರು ನಗರ ಹಾಗೂ ಗ್ರಾಮಾಂತರ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆ, ಸಹಾಯ ಹಸ್ತ, ಸೈಕಲ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.‌

    ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಮಾತುಗಳು :

    ಕಾಂಗ್ರೆಸ್ ಎಂದರೆ ಒಂದು ಚಳವಳಿ, ಬಡವರ ಪಕ್ಷ. ನಾವು ನೊಂದವರ ಪರ. ಅನ್ಯಾಯಕ್ಕೆ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ.

    ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸಿಎಂ ಆಗಿದ್ದಾರೆ. 17 ಶಾಸಕರನ್ನು ಖರೀದಿಸಿ ಸರ್ಜಾರ ರಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ.

    ಕೊರೊನಾ ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಬರುವ ಮಾಹಿತಿ ಇದೆ. ಒಂದು, ಎರಡನೇ ಅಲೆಯಲ್ಲಿ ನಮಗೇನೂ ಆಗಿಲ್ಲ ಎಂದು ಜನ ಮೂರನೇ ಅಲೆಯನ್ನು ನಿರ್ಲಕ್ಷ್ಯ ಮಾಡಬಾರದು.

    ಇದು ದೊಡ್ಡ ಸಾಂಕ್ರಾಮಿಕ ರೋಗ. ಅದರಿಂದ ದೂರ ಇರಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು.

    ಎರಡನೇ ಅಲೆಯಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸರ್ಕಾರ ಹೇಳುವುದಕ್ಕಿಂತ ಹತ್ತು ಪಟ್ಡು ಹೆಚ್ಚು ಜನ ಮರಣ ಹೊಂದಿದ್ದಾರೆ. ಮೂರೂವರೆ ಲಕ್ಷ ಮಂದಿ ಸತ್ತಿರಬಹುದು.

    ಯಡಿಯೂರಪ್ಪ ಅವರು ಈಗಾಗಲೇ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜನರಿಗೆ ಒಳ್ಳೆಯದಾಗಬೇಕಾದರೆ ಈ ಸರ್ಕಾರ ತೊಲಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು.

    ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ‌ ಮಾಡಿರುವ ತೆರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು.

    ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವ ನಾರಾಯಣ, ಮಾಜಿ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ರಮಾನಾಥ ರೈ, ಶಾಸಕರಾದ ಮಂಜುನಾಥ್, ಮಾಜಿ ಶಾಸಕರಾದ ವಾಸು, ವೆಂಕಟೇಶ್, ಸೋಮಶೇಖರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಮೈಸೂರು ನಗರ ಅಧ್ಯಕ್ಷ ಮೂರ್ತಿ, ಗ್ರಾಮಾಂತರ ಸಮಿತಿ ಅಧ್ಯಕ್ಷ ಡಾ. ವಿಜಯಕುಮಾರ್ ಹಾಜರಿದ್ದರು.

    ಶೋಭಾ ಕರಂದ್ಲಾಜೆಗೆ ಕೇಂದ್ರ ಮಂತ್ರಿ ಸ್ಥಾನ ?

    ಇಂದು ಸಂಜೆ 6 ಗಂಟೆಗೆ ಕೇಂದ್ರದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಸಂಭವನೀಯ ಸಚಿವರು 7 ಲೋಕಲ್ಯಾಣ ಮಾರ್ಗ ಕ್ಕೆ ಆಗಮಿಸುತ್ತಿದ್ದಾರೆ. ಈ ಹಿಂದೆ ರೇಸ್ ಕೋಸ್ ರಸ್ತೆ ಎಂದು ಕರೆಯುತ್ತಿದ್ದ ಈ ರಸ್ತೆಯಲ್ಲಿ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸ ಇದೆ. ಇಲ್ಲಿಗೆ ಬರಲು ಆಹ್ವಾನ ನೀಡಿದವರಿಗೆ ಬಹುತೇಕ ಮಂತ್ರಿಗಿರಿ ಪಕ್ಕಾ ಎನ್ನಲಾಗುತ್ತಿದೆ.

    ರಾಷ್ಟ್ರೀಯ ಸುದ್ದಿ ವಾಹಿನಿಗಳ ಪ್ರಕಾರ ಕರ್ನಾಟಕ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಧಾನ ಮಂತ್ರಿಗಳ ಗೃಹ ಕಚೇರಿಗೆ ಆಗಮಿಸಿರುವುದರಿಂದ ಅವರು ಸಂಪುಟ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆೆ.

    ಈಗಾಗಲೇ ಪ್ರಧಾನ ಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದವರ ಪಟ್ಟಿ

    ಜ್ಯೋತಿರಾಧಿತ್ಯ ಸಿಂಧಿಯಾ

    ನಾರಾಯಣ ರಾಣೆ

    ಸರ್ಬಾನಂದ ಸೋನೋವಾಲ

    ಅನುಪ್ರಿಯ ಪಟೇಲ್

    ಕಪಿಲ್ ಪಟೇಲ್

    ಮೀನಾಕ್ಷಿ ಲೇಖಿ

    ಅಜಯ್ ಭಟ್

    ಭೂಪೇಂದ್ರ ಯಾದವ್

    ಸುನಿತಾ ದುಗ್ಗಲ್

    ಹೀನಾ ಗವಿಟ್

    ಶೋಭಾ ಕರಂದ್ಲಾಜೆ

    ಅಜಯ್ ಮಿಶ್ರಾ

    ಪಶುಪತಿ ಪರಸ್

    ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

    ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರು ಒಂದಿಷ್ಟು ಸಮಾನಾಸಕ್ತ ತಂಡವನ್ನು ಕಟ್ಟಿಕೊಂಡು ಆರಂಭಿಸಿದ ಪ್ರಿಪೆಡ್‌ ಕಲಿಕಾ ಆಪ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ನರ್ಸಿಂಗ್‌, ಪ್ಯಾರಾಮೆಡಿಕಲ್‌ ಮತ್ತು ಅಲೈಡ್‌ ಹೆಲ್ತ್ ಕೇರ್‌ ವಿದ್ಯಾರ್ಥಿಗಳಿಗೆ, ಇಂಗ್ಲಿಷ್‌ನಲ್ಲಿ ಕಲಿಯುವುದು ಕಷ್ಟ ಎನ್ನುವವರಿಗೆ ಈ ವೈದ್ಯರ ತಂಡವು ಸರಳವಾಗಿ ಆಪ್‌ ಮೂಲಕ ಬೋಧಿಸುತ್ತಿದೆ.

    ಶೈಕ್ಷಣಿಕ ಹಬ್ ಆದ ಬಾಗಲಕೋಟೆಯ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ. ಈ ಕುರಿತು ನಮ್ಮ ವೆಬ್‌ಸೈಟ್‌ನಲ್ಲಿ ಈ ಹಿಂದೆಯೇ ಲೇಖನವನ್ನೊಂದನ್ನು ಪ್ರಕಟಿಸಿದ್ದೇವು. ಈ ಆಪ್‌ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಎನ್ನುವ ವಿವರ ಇಲ್ಲಿದೆ.

    ಹಂತ ೧

    www.preped.in ವೆಬ್‌ಸೈಟ್‌ನಲ್ಲಿ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಲಿಂಕ್‌ ನೀಡಲಾಗಿದೆ. ಡೌನ್‌ಲೋಡ್‌ ಆಪ್‌ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮಲ್ಲಿ ಕ್ಯೂಆರ್‌ ಕೋಡ್ ಸ್ಕ್ಯಾನರ್‌ ಇದ್ದರೆ ಅದರ ಮೂಲಕವೂ ಡೌನ್‌ಲೋಡ್‌ ಕೊಡಬಹುದು.

    ಸ್ಕ್ಯಾನ್‌ ಮಾಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ

    ಹಂತ ೨

    ಅಪ್‌ಗೆ ಸಂಬಂಧಪಟ್ಟ ಒಂದು ಎಪಿಕೆ ಫೈಲ್‌ ಡೌನ್‌ಲೋಡ್ ಆಗುತ್ತದೆ.

    ಅದನ್ನು ಕ್ಲಿಕ್ ಮಾಡಿ ಇನ್ಸ್ಟಾಲ್‌ ಕೊಟ್ಟರೆ ನಿಮ್ಮ ಮೊಬೈಲ್‌ನಲ್ಲಿ ಈ ಆಪ್ ಸ್ಥಾಪನೆಯಾಗುತ್ತದೆ.

    ಗೊತ್ತಿಲ್ಲದ ಮೂಲದ್ದು ಎಂಬ ಆಯ್ಕೆಯಲ್ಲಿ ಅನುಮತಿ ನೀಡಿ,ಗೂಗಲ್‌ ಪ್ಲೇ ಸ್ಟೋರ್‌ ಹೊರತುಪಡಿಸಿದ ಆಪ್‌ಗಳಿಗೆ ಹೀಗೆ ಅನುಮತಿ ಕೇಳಲಾಗುತ್ತದೆ.

    ಗೂಗಲ್‌ ಪ್ಲೇ ಸ್ಟೋರ್‌ನವರಿಗೆ ಕಮಿಷನ್‌ ಹೆಚ್ಚು ಕೊಡಬೇಕಿರುವುದರಿಂದ, ವಿದ್ಯಾರ್ಥಿಗಳಿಗೆ ಆಪ್‌ ದುಬಾರಿಯಾಗಬಾರದು ಎನ್ನುವ ಕಾರಣಕ್ಕೆ ಸದ್ಯ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಆಪ್‌ ಅನ್ನು ಪರಿಚಯಿಸಲಾಗಿಲ್ಲ ಎಂದು ಡಾ. ಸಂದೀಪ್‌ ಮಾಹಿತಿ ನೀಡಿದ್ದಾರೆ.

    ಹಂತ ೩

    ಆಪ್‌ ತೆರೆಯಿರಿ. ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. ಒಟಿಪಿ ಬರುತ್ತದೆ. ಆ ಒಟಿಪಿ ಹಾಕಿ ಲಾಗಿನ್ ಆಗಿ. ಪುಟ್ಟ ಆಪ್‌ನೊಳಗೆ ಇರುವ ನೂರಾರು ವಿಡಿಯೋಗಳಲ್ಲಿ ನಿಮಗೆ ಬೇಕಾದ ಶೈಕ್ಷಣಿಕ ವಿಡಿಯೋವನ್ನು ನೋಡಿ. ಕಲಿಯಿರಿ.

    Preped ವಿಶೇಷತೆಗಳೇನು?

    •  ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಗೆ ಸಂಬಂಧಪಟ್ಟ ಕೋರ್ಸ್ಗಳನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ಕಲಿಯುವ ಅವಕಾಶ. (ಕೇವಲ 300 ರೂ, 500 ರೂ. ಗೆ ಇಂತಹ ಕೋರ್ಸ್ಗೆ ಸೇರಬಹುದಾಗಿದೆ).

    •    ಕನ್ನಡ ವಿದ್ಯಾರ್ಥಿಗಳನ್ನುಗಮನದಲ್ಲಿಟ್ಟುಕೊಂಡು ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್ಕೇರ್ ಸಬ್ಜೆಕ್ಟ್ಗಳನ್ನು ಅತ್ಯಂತ ಸರಳವಾಗಿ ಅರ್ಥ ಮಾಡಿಸುವ ಪ್ರಯತ್ನ ಇದಾಗಿದೆ.

    •   ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರಕಬೇಕುಎನ್ನುವುದು preped.in ಕಾಳಜಿ. ಈ ವಿಶೇಷ ಕೋರ್ಸ್ಗಳಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್ಕೇರ್ ಕೋರ್ಸ್ಗಳನ್ನು ಅತ್ಯಂತ ಸುಲಭವಾಗಿ ಪಾಸ್ ಆಗಬಹುದು.

    •   Preped. ಇನ್ ವೆಬ್ ಮತ್ತು ಆಪ್‌ನಲ್ಲಿ ೫೦೦ಕ್ಕೂ ಹೆಚ್ಚು ವಿಡಿಯೋ ಲೆಕ್ಚರರ್ಗಳನ್ನು ಅಪ್ಲೋಡ್ ಮಾಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ಬೋಧಕರು ಬೋಧಿಸುವುದು ಇದರ ವಿಶೇಷ. ಮುಖ್ಯವಾಗಿ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿ ಕಲಿಯಲು ಸಾಧ್ಯವಾಗಲಿದೆ. ಶೀಘ್ರದಲ್ಲಿ ಕೋರ್ಸ್‌ಗಳನ್ನು ಕಲಿಯಬಹುದು.

    •     ೧೦ನೇ ತರಗತಿ ಬಳಿಕದ ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್‌ಕೇರ್‌ ವಿಷಯಗಳನ್ನುಕಲಿಯಬಹುದು.

    ಪ್ರಿಪೇರ್ ಎಜುಟೆಕ್ ವೆಬ್ಸೈಟ್  ನೋಡಲು ಇಲ್ಲಿ ಕ್ಲಿಕ್ ಮಾಡಿ

    ಪ್ರಿಪೇರ್ ಎಜುಟೆಕ್ ಅವರ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ.

    ಪ್ರಿಪೆಡ್‌.ಇನ್‌ App ಡೌನ್ಲೋಡ್ಮಾಡಿಕೊಳ್ಳಿ

    (ಪ್ರಾಯೋಜಿತ ಬರಹ)

    ದಿಲೀಪ್ ಕುಮಾರ್ ಇನ್ನಿಲ್ಲ

    ಹಿಂದೀ ಚಿತ್ರರಂಗದ ಖ್ಯಾತ ಕಲಾವಿದ ದಿಲೀಪ್ ಕುಮಾರ್ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ವಾರ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಸೇರಿಸಲಾಗಿತ್ತು.

    ಕಳೆದ ಎರಡು ತಿಂಗಳಿಂದ ಅವರು ಆಸ್ಪತ್ರೆ ಸೇರುವುದು ನಂತರ ಸುಧಾರಿಸಿಕೊಂಡು ಮನೆಗೆ ವಾಪಸ್ಸು ಬರುವುದು ನಡೆದಿತ್ತು. ಆದರೆ ಈ ಬಾರಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅವರಿಗೆ 98 ವರ್ಷ ವಯಸ್ಸಾಗಿತ್ತು.

    ಹಿಂದಿ ಚಲನಚಿತ್ರ ರಂಗದ ತಮ್ಮ ಕಾಲದ ಅತಿ ಶ್ರೇಷ್ಠ ನಟರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗುತ್ತದೆ. 1944 ರಿಂದ 1966 ರವರೆಗೆ ಸುಮಾರು 62 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶೋಕರಸ ಪ್ರಧಾನ ಭೂಮಿಕೆಗಳಲ್ಲಿ ಪ್ರಸಿದ್ಧರಾದ ಕಾರಣ ಅವರನ್ನು ದುರಂತ ನಾಯಕನೆಂದೂ ಕರೆಯುತ್ತಾರೆ. ಅನೇಕ ಪ್ರಶಸ್ತಿಗಳಿಂದ ಮಾನಿತರಾದ ಇವರು ಭಾರತೀಯ ಚಲನಚಿತ್ರ ರಂಗದ ಸರ್ವೋಚ್ಚ ಸನ್ಮಾನವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ಆಗಿದ್ದಾರೆ.. ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು.

    ಪ್ರಧಾನಿ ಶೋಕ

    ದಿಲೀಪ್ ಕುಮಾರ್ ಅವರ ನಿಧನ ನಮ್ಮ ಸಾಂಸ್ಕೃತಿಕ ಅತಿ ದೊಡ್ಡ ನಷ್ಟ ಎದು ಪ್ರಧಾನಿ ನರೇಂದ್ರ ಮೋದಿ ಶೋಕಿಸಿದ್ದಾರೆ.

    ದಿಲೀಪ್ ಚಿತ್ರ ಜೀವನ

    ದಿಲೀಪ್ ಕುಮಾರರ ಹುಟ್ಟು ಹೆಸರು ಮಹಮ್ಮದ್ ಯೂಸುಫ್ ಖಾನ್. ಅಂದಿನ ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕರೂ ಬಾಂಬೇ ಟಾಕೀಸ್ ಸ್ಟೂಡಿಯೊ ಮಾಲಿಕರೂ ಆಗಿದ್ದ ಹಿಮಾಂಶು ರಾಯ್ ಅವರ ಪತ್ನಿ ದೇವಿಕಾ ರಾಣಿಯವರು ಹಿಂದಿ ಚಿತ್ರ ರಂಗವನ್ನು ಪ್ರವೇಶಿಸಲು ಯೂಸುಫ್ ಖಾನರಿಗೆ ಸಹಾಯ ಮಾಡಿದರು. 1944ರಲ್ಲಿ ಭಗವತೀ ಚರಣ ವರ್ಮಾರವರು ತಮ್ಮ ಜ್ವಾರ್ ಭಾಟಾ ಚಿತ್ರದ ನಾಯಕನ ಪಾತ್ರವನ್ನಿತ್ತು ದಿಲೀಪ್ ಕುಮಾರ್ ಎಂದು ಹೆಸರಿಟ್ಟರು. ಅಮಿಯಾ ಚಕ್ರವರ್ತಿಯವರ ನಿರ್ದೇಶನದ ಈ ಚಿತ್ರದ ಪಾತ್ರವರ್ಗದಲ್ಲಿ ಮೃದುಲಾ, ಶಮೀಮ್, ಆಗಾ, ಕೆ ಎನ್ ಸಿಂಘ್, ಮುಮ್ತಾಜ್ ಅಲಿ, ಮೊದಲಾದವರಿದ್ದ ಈ ಚಿತ್ರದ ಸಂಗೀತ ನಿರ್ದೇಶಕರು ಅನಿಲ್ ಬಿಸ್ವಾಸ್ ಆಗಿದ್ದರು. ಆದರೂ ಚಿತ್ರ ಅಷ್ಟೇನೂ ಜನಪ್ರಿಯವಾಗಲಿಲ್ಲ.

    1947ರಲ್ಲಿ ಬಿಡುಗಡೆಯಾದ ಜುಗ್ನು ಚಿತ್ರ ಜಯಪ್ರದವಾಯಿತು. ಬಳಿಕ ಅಂದಾಜ್ (1949), ದೀವಾರ್ (1951), ಆಗ್ (1952), ಅಮರ್ (1954), ಆಜಾದ್ (1955), ದೇವದಾಸ್ (1955), ಮುಸಾಫಿರ್ (1957), ಮಧುಮತಿ (1958) ಮತ್ತು ಮುಘಲ್ ಎ ಆಜಮ್ (1960) ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವನ್ನು ಪಡೆಯಿತಲ್ಲದೆ, ದಿಲೀಪ್ ಕುಮಾರರೂ ಚಿತ್ರರಂಗದಲ್ಲಿ ಅಮೋಘ ಖ್ಯಾತಿಯನ್ನು ಪಡೆದರು. ಅಂದಾಜ್ , ದೀದಾರ್ , ಅಮರ್ , ದೇವದಾಸ್ಮಧುಮತಿ, ಇತ್ಯಾದಿ ಚಿತ್ರಗಳು ಶೋಕರಸಭರಿತ ಚಿತ್ರಗಳಾಗಿದ್ದು, ದಿಲೀಪ್ ಕುಮಾರರು ದುರಂತ ನಾಯಕನೆಂಬ ಬಿರುದನ್ನು ಪಡೆದರು.

    ಕಳೆದ ತಿಂಗಳು ಆಸ್ಪತ್ರೆ ಸೇೇರಿದಾಗ ಪತ್ನಿ ಸಾಯಿರಾಬಾನು ಜೊತೆ

    ಭಾರತದ ಮುಘಲ್ ಇತಿಹಾಸದಿಂದಾಯ್ದ ಕತೆಯಿರುವ ಮುಘಲ್ ಎ ಆಜಮ್ ಆಗಿನ ಕಾಲದ ಶ್ರೀಮಂತ ಚಿತ್ರವಾಗಿದ್ದು, ಭಾರೀ ಜಯಗಳಿಸಿತ್ತು. ಉತ್ತರಾರ್ಧ ವರ್ಣದಲ್ಲಿದ್ದು ಕಪ್ಪು-ಬಿಳುಪಿನ ಈ ಚಿತ್ರ ೨೦೦೮ರಲ್ಲಿ ಕಂಪ್ಯೂಟರ್ ಸಹಾಯದಿಂದ ವರ್ಣರಂಜಿತಗೊಂಡು ಪ್ರದರ್ಶನಗೊಂಡಾಗ ಮತ್ತೆ ಆಗಿನಷ್ಟೇ ಜನಮೆಚ್ಚುಗೆಯನ್ನು ಪಡೆಯಿತು. 1961ರಲ್ಲಿ ಬಿಡುಗಡೆಯಾದ ಗಂಗಾ ಜಮುನಾ ದಿಲೀಪ್ ಕುಮಾರರ ಮೊದಲ ಪೂರ್ಣ ವರ್ಣ ಚಿತ್ರ. ಇದು ಅವರ ಸ್ವಂತ ನಿರ್ಮಾಣದ ಚಿತ್ರವೂ ಆಗಿತ್ತು. ಇದರಲ್ಲಿ ಅವರ ನಿಜ ಜೀವನದ ತಮ್ಮ ನಾಸಿರ್ ಖಾನ್ ತಮ್ಮನಾಗಿಯೇ ಅಭಿನಯಿಸಿದ್ದಾರೆ.

    1976ರವರೆಗೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ 1981 ರವರೆಗೆ ಚಿತ್ರರಂಗದಿಂದ ದೂರವಿದ್ದರು. ಆ ನಂತರ ಪೋಷಕ ಪಾತ್ರಗಳಲ್ಲಿ ಅಭಿನಯಿಸಲಾರಂಭಿಸಿದರು.  ಕ್ರಾಂತಿ (1981), ಶಕ್ತಿ (1982), ವಿಧಾತಾ (1982), ಮಶಾಲ್ (1984), ಕರ್ಮ (1986), ಸೌದಾಗರ್ (1991), ಇತ್ಯಾದಿ ಚಿತ್ರಗಳೂ ಜನಪ್ರಿಯವಾದವು. ಅವರ ಕೊನೆಯ ಚಿತ್ರ ಕಿಲಾ 1996) ಅಷ್ಟೇನೂ ಜನ ಮೆಚ್ಚುಗೆಯನ್ನು ಪಡೆಯಲಿಲ್ಲ.

    1966ರಲ್ಲಿ ಅಂದಿನ ಚಿತ್ರರಂಗದ ಸುಂದರಿ ಸಾಯಿರಾ ಬಾನುವನ್ನು ಮದುವೆಯಾದಾಗ ದಿಲೀಪ್ ಕುಮಾರರ ವಯಸ್ಸು 44 ಹಾಗೂ ಸಾಯಿರಾ ಬಾನುವಿನ ವಯಸ್ಸು22. 1980ರಲ್ಲಿ ಆಸ್ಮಾ ಜತೆ ಎರಡನೆ ಮದುವೆಯಾದರೂ ಅದು ಬಹು ಬೇಗನೇ ವಿಚ್ಛೇದನಗೊಂಡಿತು. (ಪೂರಕ ಮಾಹಿತಿ : ವಿಕಿಪಿಡಿಯಾ)

    error: Content is protected !!