ಬೆಂಗಳೂರಿನ 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಇದೇ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವದ ವಿಷಯ ಮಹಿಳಾ ಸಬಲೀಕರಣ'. ಈ ಉತ್ಸವವು ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರಸ್ತ್ರೀ ಎಂದರೆ ಅಷ್ಟೇ ಸಾಕೆ..’ ಎಂಬ ಪ್ರಸಿದ್ಧ ಕವಿತೆಯಿಂದ ಪ್ರೇರಿತವಾದ ಮಾರ್ಗದರ್ಶಿ ವಿಷಯವನ್ನು ಅಳವಡಿಸಿಕೊಂಡಿದೆ. ಬೆಂಗಳೂರಿನ ರಾಜಾಜಿನಗರದ ಲುಲುಮಾಲ್‌ನಲ್ಲಿರುವ ಸಿನಿ ಪೊಲಿಸ್‌ನ 11 ಸ್ಕ್ರೀನ್‌ಗಳಲ್ಲಿ ಈ ಬಾರಿಯ ಚಿತ್ರೋತ್ಸವದ ಸಿನಿಮಾಗಳ ಪ್ರದರ್ಶನವಾಗಲಿದೆ. ಇದಲ್ಲದೇ
ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಡಾ. ರಾಜ್ ಕುಮಾರ್ ಭವನ' ದಲ್ಲೂ ಹಾಗೂ ಬನಶಂಕರಿಯಲ್ಲಿರುವಸುಚಿತ್ರ ಫಿಲಂ ಸೊಸೈಟಿ’ಯಲ್ಲಿ ಈ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಿನಿಮಾಗಳು ಪ್ರದರ್ಶನವಾಗಲಿವೆ. ಕರ್ನಾಟಕ ಸರ್ಕಾರವು ಈ ಚಿತ್ರೋತ್ಸವಕ್ಕೆ ಹೆಚ್ಚಿನ ಆಸ್ಥೆ ವಹಿಸಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆಯು ಆಯೋಜಿಸುತ್ತಿದೆ.

ಚಲನಚಿತ್ರೋತ್ಸವವು ವಿವಿಧ ಅಂಶಗಳ ಕುರಿತು ಶೈಕ್ಷಣಿಕ ಸಂವಾದ, ಸೆಮಿನಾರ್‌ಗಳು, ಕಾರ್ಯಾಗಾರಗಳು ಇತ್ಯಾದಿಗಳು ಇಲ್ಲಿವೆ. ಈ ಉತ್ಸವದಲ್ಲಿ ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ ಸ್ಮರಣೀಯ ಸಿನಿಮೀಯ ಅನುಭವ ಪಡೆಯಬಹುದಾಗಿದೆ. ವಿಜೇತರಿಗೆ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನಗಳನ್ನು ನೀಡಲಾಗುತ್ತದೆ.ಭಾರತೀಯ ಚಿತ್ರಗಳಲ್ಲದೇ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳು, 4೦೦ಕ್ಕೂ ಹೆಚ್ಚು ಪ್ರದರ್ಶನಗೊಳ್ಳಲಿವೆ.

ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡ, ಅಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ ಹಾಗೂ ಜನಮನ್ನಣೆಗಳಿಸಿದ ಚಿತ್ರಗಳು ಇಲ್ಲಿ ಪ್ರದರ್ಶನವಾಗಲಿವೆ.ಅಲ್ಲದೇ ವಿಶೇಷ ಆಕರ್ಷಣೆಯಾಗಿ ಈ ಬಾರಿಯ ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದ ಚಲನಚಿತ್ರಗಳನ್ನೂ ನಮ್ಮೂರಲ್ಲೇ ಕೂತು ನೋಡಬಹುದಾಗಿದೆ.
ನೆದರ್ ಲ್ಯಾಂಡ್, ದಕ್ಷಿಣ ಕೂರಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜೆಕ್ ರಿಪಬ್ಲಿಕ್ ಹಾಗೂ ಸಿಟ್ಟರ್ಲೆಂಡ್ಗಳಲ್ಲಿನ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ನಾವು ಕಣ್ತುಂಬಿಕೊಳ್ಳಬಹುದು.


