AI ಯುಗದಲ್ಲಿ ಲಾಭ ಬಂದಾಗ ಮಾರಿಕೊಳ್ಳುವವನೆ ಜಾಣ

0
571

ಷೇರುಪೇಟೆಯಲ್ಲಿ ಹೆಚ್ಚಿನ ಏರಿಳಿತಗಳುಂಟಾಗಿ ಹೂಡಿಕೆಯನ್ನಾಗಿ ಯಾವ ಕಂಪನಿಯನ್ನ ಆರಿಸಿಕೊಳ್ಳಬೇಕು, ವ್ಯವಹಾರಿಕತೆ ದೃಷ್ಠಿಯಿಂದ ಯಾವ ಕಂಪನಿ ಆಯ್ಕೆಮಾಡಿಕೊಳ್ಳಬೇಕು ಎಂಬ ಗೊಂದಲವನ್ನು ಸೃಷ್ಟಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಪೇಟೆಯಲ್ಲಿ ಸುಲಭವಾಗಿ ಚಟುವಟಿಕೆ ನಡೆಸಬಹುದೆಂಬ ಚಿಂತನೆಯೊಂದಿಗೆ ಸರಳವಾಗಿ ಹಣ ಸಂಪಾದಿಸಲು ಸಾಧ್ಯ ಎಂಬ ನಂಬಿಕೆಯಾಗಿದೆ.

ಭಾರತದಲ್ಲಿ ಹೆಚ್ಚು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಆರ್ಥಿಕ ಶಿಕ್ಷಣವನ್ನು ಕಡೆಗಣಿಸಿದ್ದೇವೆ.  ಈ ರೀತಿಯ ನಿರ್ಲಕ್ಷಕ್ಕೆ ತಾಂತ್ರಿಕತೆಯು ಪೂರಕ ಕೊಡುಗೆ ನೀಡಿದೆ.  ಸಣ್ಣ ಹೂಡಿಕೆದಾರರು ಹೆಚ್ಚಾಗಿ ಪ್ರಚಾರಾತ್ಮಕ, ಅಲಂಕಾರಿಕ ವಿಚಾರಗಳೊಂದಿಗೆ ಜಾಹಿರಾತುಗಳಲ್ಲಿ ಪಾಲ್ಗೊಂಡ ಬ್ರಾಂಡ್‌ ಅಂಬಾಸಡರ್‌ ಗಳನ್ನಾಧರಿಸಿ ಚಟುವಟಿಕೆ ನಡೆಸಲು ಮುಂದಾಗುವುದಕ್ಕೂ ಮುಂಚೆ ಹೂಡಿಕೆ ಮಾಡುವ ಮುನ್ನ ಆ ಕಂಪನಿಗಳ ಮೂಲಭೂತಾಂಶಗಳನ್ನು ಪರಿಶೀಲಿಸುವುದು ಅಗತ್ಯವೆಂಬ ಅಂಶವನ್ನು ಕಡೆಗಣಿಸುವುದು ಸರಿಯಲ್ಲ.  ಈಗಿನ ಷೇರುಪೇಟೆ ಹೂಡಿಕೆಯಲ್ಲಿ ಪಾಲ್ಗೊಂಡ ಅನೇಕ ಹೂಡಿಕೆದಾರರು ಹೂಡಿಕೆಗೆ ಆಯ್ಕೆಗೂ ಮುನ್ನ ಷೇರಿನ ಮುಖಬೆಲೆಯನ್ನು ಪರಿಗಣಿಸಬೇಕೆಂಬ ಅಂಶದ ಅರಿವೇ ಇಲ್ಲ.  ಷೇರುಗಳಲ್ಲಿ ಹೂಡಿಕೆಯಿಂದ ಕೇವಲ ಖರೀದಿಸಿದ ಷೇರಿನ ಬೆಲೆಗಳ ಏರಿಕೆಯತ್ತ ಮಾತ್ರ ಗಮನಿಸುತ್ತಾರೆ. ಆ ಕಂಪನಿಯ ಷೇರಿನ ಏರಿಕೆ ನಿರೀಕ್ಷೆಗೆ ಮುನ್ನ  ಹೂಡಿಕೆಯ ಸುರಕ್ಷತೆಗೂ ಆದ್ಯತೆ ನೀಡಿ ಆ ಕಂಪನಿಯ ಆಂತರಿಕ ಸಾಮರ್ಥ್ಯವನ್ನು ಮುಖ್ಯವಾಗಿ ಅರಿತಿರಲೇಬೇಕು.

ಅಸಹಜ ಆಸೆಗಳ ಸುಳಿಗೆ ಸಿಗಬೇಡಿ :ಇತ್ತೀಚೆಗೆ ಆರಂಭಿಕ ಷೇರು ವಿತರಣೆ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿರುವ ಅನೇಕ ಕಂಪನಿಗಳು ಅಭೂತಪೂರ್ವವಾದ ಸ್ಪಂದನವನ್ನು ಪಡೆಯುತ್ತಿವೆ.  ಈ ಜಾಗೃತಿ ಸ್ವಾಗತಾರ್ಹ.  ನಾವುಗಳು ದಿನಸಿ ಖರೀದಿಯ ಸಮಯದಲ್ಲಾಗಲಿ, ತರಕಾರಿ ಖರೀದಿಯ ಸಮಯದಲ್ಲಾಗಲಿ ಬಳಸುವ ಗುಣಮಟ್ಟ ಪರಿಶೀಲನಾ ಕ್ರಮಗಳಂತೆಯೇ ಕಷ್ಟಪಟ್ಟು ಸಂಪಾದಿಸಿದ ಸಂಪನ್ಮೂಲವನ್ನು ಅಸಹಜ ಆಸೆಗಳ ಸುಳಿಯಲ್ಲಿ ಸಿಲುಕಿ  ಸಂಪತ್ತನ್ನು ಕರಗಿಸಿಕೊಳ್ಳುವುದು ನಮ್ಮ ಆರ್ಥಿಕ ಸಾಕ್ಷರತಾ ಚಿಂತನೆಗಳ ಕೊರತೆಯ ಕಾರಣ ಹೆಚ್ಚಾಗಿದೆ.  ಕೆಲವು ಆರಂಭಿಕ ಷೇರು ವಿತರಣೆ ಮಾಡುತ್ತಿರುವ ಕಂಪನಿಗಳು ಆಂತರಿಕವಾಗಿ ಹಾನಿಗೊಳಗಾಗಿದ್ದರೂ,  ಕೆಲವು ವಿತ್ತೀಯ ಸಂಸ್ಥೆಗಳು ನೀಡುವ ಭವಿಷ್ಯದ ಆಶಾಭಾವನೆಯ ವಿಶ್ಲೇಷಣೆಗಳನ್ನು ತುಲನೆ ಮಾಡದೆ ಅನುಸರಿಸುವುದು ಮೊದಲು ಬಿಡಬೇಕು.  ಮೂಲಭೂತವಾಗಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ಕಂಪನಿಯ ಷೇರಿನ ಬೆಲೆ ಅರಿಯಬೇಕು, ಅದು ತನ್ನ ಚಟುವಟಿಕೆಗಳಿಂದ ಲಾಭಗಳಿಸಿ, ಗಳಿಸಿದ ಲಾಭದಲ್ಲಿ ಷೇರುದಾರರಿಗೆ ಯಾವ ರೀತಿಯ ಕಾರ್ಪೊರೇಟ್‌ ಫಲಗಳನ್ನು ಅಂದರೆ ಲಾಭಾಂಶ, ಬೋನಸ್‌ ಷೇರು ಮುಂತಾದವುಗಳನ್ನು ಸೂಕ್ತವಾಗಿ ವಿತರಿಸುತ್ತಿದೆಯೇ ಎಂಬ ವಿಚಾರವನ್ನು ಅರಿತು ನಿರ್ಧರಿಸಬೇಕು.  ಖರೀದಿಗೂ  ಮುನ್ನ ಷೇರಿನ ಪೇಟೆಯ ದರವು ಕನಿಷ್ಠದಲ್ಲಿದೆಯೇ ಅಥವಾ ಗರಿಷ್ಠದಲ್ಲಿದೆಯೇ ಎಂಬ ಅಂಶವನ್ನಾಧರಿಸಿ ನಿರ್ಧರಿಸಬೇಕು.  ದೀರ್ಘಕಾಲೀನ ಹೂಡಿಕೆ ಎಂಬ ಭ್ರಮೆಯಲ್ಲಿ ಲಭ್ಯವಾದ ಅವಕಾಶಗಳನ್ನು ಕೈಜಾರುವಂತೆ ಮಾಡಿಕೊಳ್ಳದಿದಲ್ಲಿ ಮಾತ್ರ ಹೂಡಿಕೆ ಸ್ವಲ್ಪಮಟ್ಟಿಗೆ ಸುರಕ್ಷತೆ ಕಾಣಲು ಸಾಧ್ಯ. 

ಮತ್ತೊಂದು ಪ್ರಮುಖ ಅಂಶ ಎಂದರೆ ಪೇಟೆಯ ಚಟುವಟಿಕೆ ಮೂಲಕ ಸುಲಭವಾಗಿ ಸಂಪನ್ಮೂಲ ವೃದ್ಧಿಯಾಗುವುದು ಎಂಬ ಚಿಂತನೆಗಳಿಂದ ಅನೇಕ ಖಾಸಗೀ ವಲಯದ ಕಾರ್ಪೊರೇಟ್‌ ಸಂಸ್ಥೆಗಳು ಹಣದ ಹೊಳೆ ಹರಿಸುತ್ತಿವೆ.  ಈ ಕಾರಣ ದಿನನಿತ್ಯ ಭಾರೀ ಪ್ರಮಾಣದ ಏರಿಳಿತಗಳನ್ನು ಕಾಣುತ್ತೇವೆ.  ಕೋಟಿಗಟ್ಟಲೆ ಷೇರುಗಳು ವಹಿವಾಟಾದರೂ ವಿಲೇವಾರಿಯಾದ ಷೇರುಗಳ ಸಂಖ್ಯೆ ಮಾತ್ರ ಅನೇಕಬಾರಿ ಶೇಕಡಾ ಒಂದಂಕಿಯಾಗಿರುತ್ತದೆ. ಅಂದರೆ ಚಟುವಟಿಕೆಯ ಬಹುಭಾಗ ದೈನಂದಿನ ಚಟುವಟಿಕೆಯಲ್ಲಿ (INTRADAY) ಚುಕ್ತಾ ಅಗಿರುವುದು ಹೆಚ್ಚಾಗಿದೆ. 

ಉದಾಹರಣೆಗೆ :  2007 ರಿಂದಲೂ ಲೀಸ್ಟಿಂಗ್‌ ಆಗಿರುವ ರಿಫೆಕ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿಯ ಆವರಣದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ಸುದ್ಧಿಯ ಕಾರಣ 12ನೇ ಡಿಸೆಂಬರ್‌ ಭಾರಿ ಕುಸಿತ ಕಂಡಿದ್ದ ಷೇರು, 15 ರಂದು ಆರಂಭದ ಹಂತದಲ್ಲಿ ರೂ.215 ರಿಂದ ಆರಂಭವಾಗಿ  ರೂ.303 ರವರೆಗೂ ಅಂದೇ ಜಿಗಿತ ಕಂಡಿತು.  ಅಂತಿಮವಾಗಿ ಷೇರಿನ ಬೆಲೆ ರೂ.299 ರ ಸಮೀಪ ಕೊನೆಗೊಂಡಿತು.  ಮೇಲ್ನೋಟಕ್ಕೆ ಸಹಜ ಚಟುವಟಿಕೆ ಎಂದೆನಿಸಿದರೂ,  ಅಂದಿನ ಚಟುವಟಿಕೆಯಲ್ಲಿ ಅಂತಿಮವಾಗಿ ವಿಲೇವಾರಿಯಾದ ಷೇರುಗಳ ಪ್ರಮಾಣವು ಕೇವಲ 7.88% ಮಾತ್ರ.  ಉಳಿದ ಭಾಗವು ದೈನಂದಿನ ಚಟುವಟಿಕೆಯಲ್ಲಿ ಕೊನೆಗೊಂಡಿದೆ.  ಅಂದರೆ ಹೆಚ್ಚಿನ ಭಾಗ ವ್ಯವಹಾರಿಕ ಚಟುವಟಿಕೆಯಾಗಿ ಕೊನೆಗೊಂಡಿದೆ. ಸಣ್ಣ ಹೂಡಿಕೆದಾರರು ಮಾತ್ರ ದೀರ್ಘಕಾಲೀನ ಹೂಡಿಕೆ ಎಂಬ ಭ್ರಮೆಗೊಳಗಾಗಿ ಗೊಂದಲದ ಪರಿಸ್ಥಿತಿ ಎದುರಿಸುವಂತಾಗುವುದು.

ಈ ಪ್ರಮಾಣದ ವಿಲೇವಾರಿಯಾದ ಷೇರುಗಳ ಸಂಖ್ಯೆಯನ್ನು ಅರಿತಾಗ ಪೇಟೆಯಲ್ಲಿ ಹೂಡಿಕೆ ಬದಲು ವ್ಯವಹಾರಕ್ಕೆ ಹೆಚ್ಚು ಆದ್ಯತೆ ಇದೆ.  ಮತ್ತು ಪೇಟೆಗಳು ಗರಿಷ್ಠ ಹಂತದಲ್ಲಿರುವಾಗ ನಮ್ಮ ಹೂಡಿಕೆ ಹಣದ ಸುರಕ್ಷತೆಗೆ ಹೆಚ್ಚು ಗಮನ ನೀಡಬೇಕು ಎಂಬುದು ಮನದಟ್ಟಾಗುವುದು. ಷೇರುಪೇಟೆಯಲ್ಲಿ ವಹಿವಾಟಾದ ಎಲ್ಲಾ ಷೇರುಗಳೂ ವಿಲೇವಾರಿಯಾಗಬೇಕೆಂಬ ನಿಯಮವಿಲ್ಲ.  ಕೆಲವು  ಕಂಪನಿಗಳನ್ನು ಹೊರತುಪಡಿಸಿ ದೈನಂದಿನ ಚಟುವಟಿಕೆಯಲ್ಲಿ ಚುಕ್ತಾ ಮಾಡಿಕೊಳ್ಳುವ ಅವಕಾಶಗಳೂ ಇವೆ, ಅದೇ ಡೇ ಟ್ರೇಡಿಂಗ್‌ ಅಥವಾ ಇಂಟ್ರಾಡೇ ಟ್ರೇಡಿಂಗ್‌ ಆಗಿದೆ.  ಹಲವು ಬಾರಿ ಚಟುವಟಿಕೆಯಲ್ಲಿ ಭಾಗಿಯಾದ ಷೇರುಗಳ ಸಂಖ್ಯೆ ಮತ್ತು ಏರಿಕೆಯ ವೇಗವು ಗರಿಷ್ಟ ಹಂತದಲ್ಲಿ ಚಟುವಟಿಕೆಗೆ ಪ್ರೇರಣೆಯೂ ಅಗಬಹದು. ಇಂತಹ ಪ್ರೇರಣೆಗಳಿಗೊಳಗಾಗಿ ಚಟುವಟಿಕೆ ನಡೆಸಿದಲ್ಲಿ, ಈ A I ಯುಗದಲ್ಲಿ ತೊಂದರೆಗಳೇ ಹೆಚ್ಚು.  ಅಸಹಜತೆಯಿಂದ ಕೂಡಿದ ಚಟುವಟಿಕೆ ಆದ್ಯತೆ ಪಡೆದುಕೊಳ್ಳುತ್ತದೆ.  

ಶೂನ್ಯ ಮಾರಾಟ ಅಥವಾ ಶಾರ್ಟ್‌ ಸೆಲ್ಲಿಂಗ್‌ :ಕೆಲವೊಮ್ಮೆ ವಹಿವಾಟಿನ ಗಾತ್ರ ಹೆಚ್ಚಿದ್ದಾಗ ಕೆಲವು ವಹಿವಾಟುದಾರರು ಕೈಲಿ ಷೇರುಗಳಿಲ್ಲದಿದ್ದರೂ ಮಾರಾಟಮಾಡಿ ಕಡಿಮೆಯಾದಲ್ಲಿ ಖರೀದಿ ಮಾಡಿ ಚುಕ್ತಾ ಮಾಡುವ ಪ್ರಕ್ರಿಯೆಗೆ ತೊಡಗಿಸಿಕೊಳ್ಳುತ್ತಾರೆ, ಇದನ್ನು ಶೂನ್ಯ ಮಾರಾಟ ಅಥವಾ ಶಾರ್ಟ್‌ ಸೆಲ್ಲಿಂಗ್‌ ಎನ್ನುವರು.   ಈ ರೀತಿಯ ಶೂನ್ಯ ಮಾರಾಟ ಪ್ರಕ್ರಿಯೆಗಳೂ ಕೆಲವಾರು ಬಾರಿ ಷೇರುಪೇಟೆಯಲ್ಲಿ ಷೇರಿನಬೆಲೆಗಳನ್ನು ತಾಂಡವವಾಡುವಂತೆ ಮಾಡುತ್ತವೆ.  ಶಾರ್ಟ್‌ ಸೆಲ್ಲಿಂಗ್‌ ನಲ್ಲಿ ಚುಕ್ತಾ ಆಗದೆ ಇರುವ ವಹಿವಾಟುಗಳಲ್ಲಿ ಮಾರಾಟಮಾಡಿದವರು ವಿಲೇವಾರಿ ಮಾಡಲು ಸೂಕ್ತ ಸಮಯದಲ್ಲಿ ಡಿ ಮ್ಯಾಟ್‌ ಖಾತೆಯಲ್ಲಿ ಷೇರುಗಳು ಲಭ್ಯವಿಲ್ಲದಿದ್ದರೆ ಆ ಷೇರುಗಳನ್ನು ಹರಾಜು ಪ್ರಕ್ರಿಯೆಯ ಮೂಲಕ  ಖರೀದಿ ಮಾಡಲಾಗುವುದು, ಖರೀದಿಯ ಪ್ರಕ್ರಿಯೆಯಲ್ಲಿ ಪಾವತಿಸಬೇಕಾದ ಹೆಚ್ಚುವರಿ ಹಣವನ್ನು ಮಾರಾಟಗಾರರಿಂದ ಪಡೆಯಲಾಗುವುದು.  ಈ ಪ್ರಸಂಗಗಳು ಇತ್ತೀಚೆಗೆ ಆರಂಭಿಕ ಷೇರು ವಿತರಣೆ ಮಾಡಿದ ನಂತರ ಲೀಸ್ಟಿಂಗ್‌ ಆಗುವ ಕಂಪನಿಗಳಲ್ಲಿ ಹೆಚ್ಚಾಗಿರುತ್ತದೆ.   ಇಂತಹ ಕಾರಣಕ್ಕಾಗಿ 18 ರಂದು ಮೀಶೊ ಕಂಪನಿಯ ಷೇರು ಸುಮಾರು ಒಂದು ಕೋಟಿ ಷೇರುಗಳು ಹರಾಜಿಗೆ ಬಂದ ಕಾರಣ ಅಂದು ಷೇರಿನ ಬೆಲೆ ಅತ್ಯಂತ ಗರಿಷ್ಠ ಬೆಲೆಗೆ ಜೀಕುತ್ತಾ ಹರಾಜು ಪ್ರಕ್ರಿಯೆ ಮುಗಿದ ನಂತರ ಹಿಂದಿರುಗಿತು.  ಚಟುವಟಿಕೆಯ ಕ್ಷಣಕ್ಷಣದ ವಿವರ ಇಂತಿದೆ 

MEESHO Ltd  ವಹಿವಾಟು BSE ಯಲ್ಲಿನ ವಿವರ ಇಂತಿದೆ

Morning session
SL No.TimeQuantity in lacsRATE in Rs.
19.15 AM12,15,912228.95
29.16 AM5,61,463232.25
39.17 AM5,34,701228.05
49.18 AM3,97,813227.55
59.19 AM1,97,516229.65
69.20 AM3,43,650225.85
79.22 AM2,71,156224.6
89.23 AM2,77,951222.45
99.29 AM1,40,742226.1
109.32 AM1,10,981222.55
Afternoon
113.351,30,556216.8
213.361,27,850218.15
313.371,00,944216.8
413.511,21,340219.1
513.551,12,213220.65
613.581,24,799221.55
713.591,45,584222.35
8141,61,721220.2
914.011,07,797220.45
1014.021,11,385219.05
1114.061,22,273223.15
1214.071,18,745223.65
1314.081,31,673223.25
1414.091,46,231222.25
1514.11,22,694223.2
1614.111,40,837224
1714.181,79,140226.6
1814.191,76,655226.8
1914.211,96,095229
2014.222,60,971229.45
2114.232,13,065228.5
2214.242,52,595226.4
2314.252,41,390228
2414.262,15,252228
2514.31,30,225229.25
2614.321,13,663229.3
2714.352,50,765224.3
2814.362,32,135224.05
2914.372,33,514225.5
3014.381,61,263223.15
3114.391,87,820227.5
3214.421,45,739227.2
3314.461,19,754224.54
3414.471,01,931226
3514.521,70,177225.05
36153,20,416228.25
3715.011,43,159226
3815.021,53,932225.3
3915.031,40,619227.85
4015.043,22,507230.05
4115.053,33,284232.55
4215.066,51,816236.65
4315.076,73,494239.1
4415.083,49,614237.9
4515.095,27,373254.65
4615.14,93,357237.65
4715.111,97,104239.8
4815.121,26,619237.7
4915.131,03,656236.7
5015.151,57,553232.71
5115.161,74,273234.7

ವ್ಯವಹಾರಿಕ ಶೈಲಿಯ ಈಗಿನ ವಹಿವಾಟುಗಳಲ್ಲಿ ಸಂಪನ್ಮೂಲ ಕರಗಿಸಿಕೊಳ್ಳುವ ಅನೇಕ ಪ್ರಕ್ರಿಯೆಗಳಿವೆ. ಅದರಲ್ಲಿ ಈ ಆಕ್ಷನ್‌ ಪೇಟೆಯೂ ಒಂದು.  ಅಂತೆಯೇ ಇತ್ತೀಚೆಗೆ ಗ್ರೋ ಕಂಪನಿ ಷೇರುಗಳಲ್ಲಿ ಸುಮಾರು 30 ಲಕ್ಷ ಷೇರುಗಳು ಹರಾಜು ಪೇಟೆಯಲ್ಲಿ ಹರಾಜಾಗಿದೆ.  ಒಂದು ಪ್ರಮುಖ ಕಿವಿಮಾತು ಎಂದರೆ ಷೇರುಗಳನ್ನು ಖರೀದಿ ಮಾಡಿ ಮಾರಾಟಮಾಡುವವರಿಗೆ ಅಪಾಯದ ಮಟ್ಟ ಎಂದರೆ ಅವರು ಹೂಡಿಕೆ ಮಾಡಿದ ಹಣ ಮಾತ್ರ ಆದರೆ ಷೇರುಗಳಿಲ್ಲದೆ ಮಾರಾಟ ಮಾಡಿದವರು ಎದುರಿಸಬೇಕಾದ ಅಪಾಯದ ಮಟ್ಟ ಕೊನೆ ಇಲ್ಲದ್ದು.  ಕಾರಣ ಷೇರಿನ ಬೆಲೆ ಏರಿಕೆ ಕಂಡಷ್ಟೂ ಮಾರಾಟಗಾರರಿಗೆ ಅಪಾಯ ಹೆಚ್ಚು.  ಈಗಿನ ವ್ಯವಹಾರಿಕ ಚಿಂತನೆಗಳು ಈ ಶಾರ್ಟ್‌ ಸೆಲ್ಲಿಂಗ್‌ ವಹಿವಾಟು ಅತ್ಯಂತ ಅಪಾಯಕಾರಿ.  ಆದರೂ ಈ ಶೈಲಿಯ ಚಟುವಟಿಕೆಗೆ ಕೆಲವರು ಹವ್ಯಾಸದ ಕಾರಣ ಅಂಟಿಕೊಂಡಿರುತ್ತಾರೆ. ಶಾರ್ಟ್‌ ಸೆಲ್ಲಿಂಗ್‌ ರುಚಿಕಂಡಿರುವವರಿಗೆ ಪುಷ್ಪದ ಪರಿಮಳವ ದುಂಬಿ ಬಲ್ಲುದೇ ಹೊರತು ನೆರೆಯಲಿದ್ದಾಡುವ ನೊರಜು ಬಲ್ಲುದೇ ಎಂಬ ಅಕ್ಕಮಹಾದೇವಿಯವರ ವಚನವು ಇಂತಹವರಿಗೆ ಸೂಕ್ತವೆನಿಸುತ್ತದೆ.

ಷೇರಪೇಟೆಯ ವಹಿವಾಟಿನಲ್ಲಿ ಬೆಲೆಗಳಲ್ಲಿ ಏರಿಳಿತಗಳನ್ನು ಕಾಣಲು  ಕಾರಣಗಳು ಅನೇಕ ಮತ್ತು ವೈವಿಧ್ಯಮಯ.  ಕೆಲವಾರು ಆಂತರಿಕ ವಿಚಾರಗಳು, ಕಂಪನಿಯ ಚಟುವಟಿಕೆಗೆ ಸಂಬಂಧಿಸಿದವಾದರೆ ಹೆಚ್ಚಿನವು ಭಾಹ್ಯ ಕಾರಣಗಳಾಗಿರುತ್ತವೆ.  ಇತ್ತೀಚೆಗಿನ ಟ್ರೆಂಡ್‌ ಅಂದರೆ ವಿತ್ತೀಯ ಸಂಸ್ಥೆಗಳು, ವಿದೇಶಿ ವಿತ್ತೀಯ ಸಂಸ್ಥೆಗಳು ನೀಡುವ ರೇಟಿಂಗ್‌, ಗ್ರೇಡಿಂಗ್‌, ಟಾರ್ಗೆಟ್‌ ಗಳಲ್ಲಿ ದರ್ಜೆಯ ಉನ್ನತೀಕರಣ ಮತ್ತು ಅಪ-ಉನ್ನತೀಕರಣಗಳು ಹೆಚ್ಚು ಪ್ರಭಾವಿಯಾಗಿವೆ.  ಷೇರುಪೇಟೆಯ ಪ್ರಮುಖ ಗುಣ ಎಂದರೆ ʼ ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ ಅದಕ್ಕೆ ಮೌಲೀಕರಣ ಮಾಡುವ ತಾಣ ಎಂಬಂತಾಗಿದೆ.   ಹಿಂದಿನ ವರ್ಷ ಅನೇಕ ರೇಲ್ವೆ ವಲಯದ ಕಂಪನಿಗಳ ಷೇರುಗಳು ಪಡೆದಂತಹ ಆರ್ಡರ್‌ ಗಳ ಪ್ರಭಾವದಿಂದ  ಏಕಮುಖವಾಗಿ ಏರಿಕೆ ಕಂಡವು.  ಅದರಲ್ಲಿ ಮುಖ್ಯವಾಗಿ ರೇಲ್‌ ವಿಕಾಸ್‌ ನಿಗಮ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ಜನವರಿ 2024 ರಲ್ಲಿ ರೂ.180 ರಲ್ಲಿದ್ದು ಜುಲೈ 2024 ರಲ್ಲಿ ರೂ.645 ರವರೆಗೂ ಏರಿಕೆ ಕಂಢು ವಿಜೃಂಬಿಸಿತು.  ಆದರೆ ಅಲ್ಲಿ ಸ್ಥಿರತೆ ಕಾಣಲು ಸಾಧ್ಯವಾಗಲಿಲ್ಲ.  ಅಲ್ಲಿಂದ ಜಾರುತ್ತಾ ಏಪ್ರಿಲ್‌ 2025 ರಲ್ಲಿ ರೂ.295 ರವರೆಗೂ ಕುಸಿಯಿತು.   ಮತ್ತೆ ಡಿಸೆಂಬರ್‌ ಅಂತ್ಯಕ್ಕೆ ರೂ.385 ರ ಹಂತಕ್ಕೆ ತಲುಪಿದೆ.  ಇದೇ ರೀತಿಯ ಅನೇಕ ಉದಾಹರಣೆಗಳಿವೆ.   ತಾಂತ್ರಿಕತೆಯು ಒದಗಿಸಿದ ಸವಲತ್ತುಗಳ ಕಾರಣ ಸಣ್ಣ ಹೂಡಿಕೆದಾರರಿಗೆ ಷೇರುಪೇಟೆಯಲ್ಲಿ ಯಶಸ್ಸು ಕಾಣಬೇಕಾದರೆ ಕಂಪನಿಗಳ ಮೂಲಭೂತಗಳು ಸುಭದ್ರವಾಗಿರುವ, ಉತ್ತಮ ಸಾಧನೆಯೊಂದಿಗೆ ಸೂಕ್ತ ಕಾರ್ಪೊರೇಟ್‌ ಫಲಗಳನ್ನು ವಿತರಿಸುವ ಷೇರಿನ ಬೆಲೆ ಕುಸಿತ ಕಂಡಾಗ ಆಯ್ಕೆ ಮಾಡಿಕೊಳ್ಳಬೇಕು, ಅನಿರೀಕ್ಷಿತ ಏರಿಕೆ ಕಂಡಾಗ ಪೂರ್ಣವಾಗಿಯಲ್ಲದಿದ್ದರೂ ಭಾಗಶ: ವಾದರೂ ಲಾಭದ ನಗದೀಕರಣದಿಂದ ಸುರಕ್ಷತೆಗೆ ಆದ್ಯತೆ ನೀಡುವ ENTRY ON FUNDAMENTALS- EXIT FOR PROFIT, without time limit. ಸರಳ ಸಮೀಕರಣ ಈಗಿನ ಸಂದರ್ಭಕ್ಕೆ ಸರಿಯಾಗಿದೆ.

LEAVE A REPLY

Please enter your comment!
Please enter your name here