39.3 C
Karnataka
Sunday, April 28, 2024

    JIVA WATER:ನೀವು ಸೇವಿಸುವ ನೀರಿನಲ್ಲಿ ಜೀವ ಇದೆಯೇ ? ನೀರಿಗೆ ಜೀವ ತುಂಬುವ ಜೀವ

    Must read

    ಬಳ್ಳಾರಿಯ ವಿಕ್ರಮ್ ಕೊಳ್ಳೆಗಾಲ ಅರುವತ್ತು ರಾಸುಗಳ  ವಾಸವಿ ಡೈರಿ ಫಾರಂನ ಒಡೆಯ. ಪ್ರತಿ ನಿತ್ಯ ಬಳ್ಳಾರಿ ಪಟ್ಟಣದ ನೂರಾರು ಮನೆಗಳಿಗೆ ಹಾಲು ಪೂರೈಸುವುದರ ಜೊತೆಗೆ ಕರ್ನಾಟಕ ಹಾಲು ಒಕ್ಕೂಟಕ್ಕೂ ಹಾಲು ಪೂರೈಕೆ ಮಾಡುತ್ತಾರೆ.ಇದೇ ಬಳ್ಳಾರಿಯಲ್ಲಿ ಜವಳಿ ಉದ್ಯಮ ನಡೆಸುತ್ತಿರುವ ಪಶುಪತಿಗೂ ವಿಕ್ರಮ್ ಗೂ  ರೌಂಡ್ ಟೇಬಲ್ ಮೂಲಕ ಗೆಳೆತನ.

    ಒಂದು ದಿನ ಹೀಗೆ ಮಾತನಾಡುತ್ತಿರುವಾಗ ಪಶುಪತಿ ತಮಗೆ ಗೊತ್ತಾದ ಒಂದು ಉಪಕರಣದ ಬಗ್ಗೆ ಹೇಳುತ್ತಾರೆ. ಅದು ಒಂದು ಸರಳ ಸಾಧನ.  ಹೆಸರು ಜೀವ-JIVA. ನೀರಿಗೆ ಶಕ್ತಿ ತುಂಬುವ ಈ ಉಪಕರಣದ ಬಗ್ಗೆ ಅವರು ಹೇಳುತ್ತಲೆ ವಿಕ್ರಮ್ ಗೂ ಆಸಕ್ತಿ ಬೆಳೆಯುತ್ತದೆ.  ಅದರ ಬಗ್ಗೆ ಹೆಚ್ಚಿನ ವಿವರ ಪಡೆಯುತ್ತಾರೆ. ತಮ್ಮ ಫಾರಮ್ ಗೂ ಅದನ್ನು ಅಳವಡಿಸಿಕೊಳ್ಳುತ್ತಾರೆ. ಕೆಲವೇ ದಿನಗಳಲ್ಲಿ ಅದರ ಫಲಿತಾಂಶವೂ ಅವರಿಗೆ ಗೊತ್ತಾಗುತ್ತದೆ. ಹಾಲಿನ ಸಂಗ್ರಹದಲ್ಲಿ 10 ರಿಂದ 15 ಪರ್ಸೆಂಟ್ ಇಂಪ್ರೂವ್ ಆಗುತ್ತದೆ. ರಾಸುಗಳು ನೀರನ್ನು ಹೆಚ್ಚು ಸೇವಿಸಲೂ ಆರಂಭಿಸುತ್ತವೆ. ಜೀವ ಮೂಲಕ ಹರಿದ ನೀರು ಕುಡಿದ ರಾಸುಗಳ ಆರೋಗ್ಯವೂ ಸುಧಾರಿಸುತ್ತದೆ.( ಈ ವಿಡಿಯೋ ನೋಡಿ)

    ಕೊಳ್ಳೆಗಾಲ ವಿಕ್ರಮ್ ಅವರ ಅನುಭವ

    ತಮಗಿಂತ ತಮ್ಮ ಫಾರಂನಲ್ಲಿ ಕೆಲಸ ಮಾಡುವ  ನೌಕರರೇ ಇದರ ಬಗ್ಗೆ ಚೆನ್ನಾಗಿ ವಿವರಿಸಬಲ್ಲರು ಎನ್ನುತ್ತಾರೆ ವಿಕ್ರಮ್ . ಈಗ ನೌಕರರು  ಜೀವ ನೀರಿನಿಂದಲೇ ಅಡುಗೆ ಮಾಡುತ್ತಿದ್ದಾರೆ. ಈ ನೀರನ್ನು ಬಳಸುವದರಿಂದ ಅಡುಗೆ ಬೇಗ ಆಗುವುದರ ಜೊತಗೆ ರುಚಿ ಮತ್ತು ಪೌಷ್ಠಿಕವಾಗಿಯೂ ಇರುತ್ತದೆಯಂತೆ.

    ಇವರ ಫಾರಂ ನಲ್ಲಿ ಕಳೆದ  ಹದಿನೈದು ದಿನದ ಹಿಂದೆ ಜೀವ ಸಾಧನ ಅಳವಡಿಸಿರುವ ಪಂಪ್ ಸೆಟ್ ಕೊಟ್ಟು ಹೋಯಿತು. ಹೀಗಾಗಿ ರಾಸುಗಳಿಗೆ ಹಿಂದಿನ ರೀತಿಯ  ಮಾಮೂಲಿ ನೀರನ್ನೇ ಬಳಸಬೇಕಾಯಿತು.   ರಾಸುಗಳು ಈಗ ಆ ನೀರನ್ನೇ ಕುಡಿಯುತ್ತಿರುವುದರಿಂದ ಹಾಲಿನ ಇಳುವರಿ ಕಡಿಮೆಯಾಗಿದೆ. ಇದು ಜೀವ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು ಎಂದು ವಿಕ್ರಮ್ ಹೇಳುತ್ತಾರೆ. ಜೀವ ನೀರಿನ ಬಳಕೆಯ ನಂತರ ಗರ್ಭಧರಿಸದ ನಾಲ್ಕೈದು ರಾಸು ಗರ್ಭ ಧರಿಸಿವೆ. ಇದಕ್ಕೆ ಜೀವ ನೀರಿನ ಬಳಕೆ ಅವುಗಳ ಆರೋಗ್ಯದ ಮೇಲೆ ಬೀರಿದ ಪರಿಣಾಮವೇ ಕಾರಣ ಎಂದು ಖಚಿತವಾಗಿ ಹೇಳುತ್ತಾರೆ ವಿಕ್ರಮ್.

    ನಾವು ಜೀವವನ್ನು ರೈತರಿಗೆ ಕೊಡುವಾಗ ಅದರಿಂದ ಇಳುವರಿ ಹೆಚ್ಚಾಗುತ್ತದೆ.ರಾಸುಗಳು ಹೆಚ್ಚು ಹಾಲು ಕೊಡುತ್ತವೆ ಎಂದು ಹೇಳುವುದೇ ಇಲ್ಲ.  ಜೀವವನ್ನು ಅಳವಡಿಸಿಕೊಂಡು ನೀರನ್ನು ಪಡೆದು ಅದನ್ನು ಭೂಮಿಗೆ ಹಾಯಿಸಿದರೆ ಅದರ ಫಲವತ್ತತೆ ಉತ್ತಮವಾಗುತ್ತದೆ. ಹೀಗಾಗಿ ಸಹಜವಾಗಿಯೆ ಇಳುವರಿ ಹೆಚ್ಚಾಗುತ್ತದೆ.  ಜೊತೆಗೆ ಈ ನೀರನ್ನು ಸೇವಿಸುವ ರಾಸುಗಳ ಆರೋಗ್ಯ ಉತ್ತಮವಾಗಿ ಹಾಲು ಹೆಚ್ಚು ಕೊಡುತ್ತವೆ ಎನ್ನುತ್ತಾರೆ ಪಶುಪತಿ. ಪಶುಪತಿ ತಮ್ಮ ಜವಳಿ ಉದ್ಯಮದ ಜೊತೆ ಜೊತೆಗೆ ಬ್ರಾಂಡ್- ಅಂಬಾಸಿಡರ್ ಆಗಿ ಜೀವದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತಿದ್ದಾರೆ.

    ಪಶುಪತಿ ತಮ್ಮ ಮನೆಯಲ್ಲೂ ಈ ಜೀವ  ಅಳಡಿಸಿಕೊಂಡಿದ್ದಾರೆ . ಅದು ಅವರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಅವರ ಆರೋಗ್ಯ ಈಗ ಮತ್ತಷ್ಟು ಉತ್ತಮವಾಗಿದೆ.

    ಹಾಗಿದ್ದ ಮೇಲೆ ಏನಿದು ಜೀವ? ತಿಳಿಯೋಣ ಬನ್ನಿ

    ಜೀವ-JIVA- ಎನ್ನುವುದು ಒಂದು ವಿಶಿಷ್ಟ ಸರಳ ಸಾಧನ. ಅಮೆರಿಕಾದಲ್ಲಿ ನೆಲೆಸಿರುವ ನಮ್ಮ ಕೊಡಗಿನ ವಿಜ್ಞಾನಿ ಡಾ. ಕೃಷ್ಣ ಮಾದಪ್ಪ ಅವರ ಸಂಶೋಧನೆಯ ಫಲ. ನೀರನ್ನು ಹಿಡಿದಿಡದೆ ಅದನ್ನು ಸ್ವತಂತ್ರವಾಗಿ ಹರಿಯಬಿಟ್ಟಾಗ ಅದರಲ್ಲಿ ಶಕ್ತಿ ಸಂಚಯವಾಗುತ್ತದೆ ಎಂಬ ಸರಳ ಭೌತಶಾಸ್ತ್ರದ ನಿಯಮದ ಅನ್ವಯ ಸಿದ್ಧಗೊಂಡ  ಸಾಧನ. ಹಲವು ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ಜಯಿಸಿ ಇದೀಗ ವಾಣಿಜ್ಯ ಉತ್ಪಾದನೆಗೆ ಸಿದ್ಧವಾಗಿರುವ  ಜಲಕ್ಕೆ ಜೀವ ತುಂಬುವ  ಸಾಧನ.(ವಿಡಿಯೋದಲ್ಲಿ ಡಾ. ಕೃಷ್ಣ ಮಾದಪ್ಪ ಅವರೇ ವಿವರಿಸಿದ್ದಾರೆ- ನೋಡಿ)

    ಇದನ್ನು ಈಗ ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿರುವ ವಿ. ಶ್ರೀನಿವಾಸನ್ ಅವರ  ಪ್ರಕಾರ ಜಲಕ್ಕೆ ಜೀವ ತುಂಬುವ ಈ ಸಾಧನ ಒಂದು ಕ್ರಾಂತಿಕಾರಿ ಆವಿಷ್ಕಾರ. ಈ ಸಾಧನ ಕೆಲಸ ಮಾಡುವ ಬಗ್ಗೆ ಅವರು ಒಂದು ಸೊಗಸಾದ ಉದಾಹರಣೆ ಕೊಡುತ್ತಾರೆ.  ಯಾವುದೇ ಜೀವಿಯನ್ನು ಹಿಡಿದಿಟ್ಟರೆ ಅವರಲ್ಲಿರುವ ಎನರ್ಜಿ ಕಳೆದು ಹೋಗುತ್ತದೆ.  ಮನುಷ್ಯನನ್ನೇ ನೋಡಿ. ಅವನನ್ನು ಒಂದು ಕೋಣೆಯಲ್ಲಿ ಬಂದಿ ಯಾಗಿಟ್ಟರೆ ಅವನಲ್ಲಿರುವ ಶಕ್ತಿಯೆಲ್ಲಾ ಕಡಿಮೆಯಾಗಿ ಮಂಕು ಬಡಿದವನಂತೆ ಆಗಿ ಬಿಡುತ್ತಾನೆ. ನೀರು ಕೂಡ ಹಾಗೆ . ಅದನ್ನು ಹಿಡಿದಿಟ್ಟಷ್ಟು ಅದರಲ್ಲಿರವ ಜೀವ ಶಕ್ತಿ ಕುಂದುತ್ತಾ ಬರುತ್ತದೆ.

    ನಾವೀಗ ನೀರನ್ನು ಅಣೆಕಟ್ಟುಗಳಲ್ಲಿ, ಮನೆಯ ಮೇಲಿನ ಓವರ್ ಹೆಡ್ ಟ್ಯಾಂಕುಗಳಲ್ಲಿ,  ದೊಡ್ಡದಾದ ಜಲ ಸಂಗ್ರಹಾರದಲ್ಲಿ ಶೇಖರಿಸಿ ಇಡುತ್ತಿದ್ದೇವೆ. ಹೀಗಾಗಿ ನೀರಿನ ಸ್ವಾಭಾವಿಕ ಶಕ್ತಿ ಕುಂದುತ್ತಾ ಬರುತ್ತದೆ.  ಈ ನೀರಿಗೆ ಒಂದಷ್ಟು ಶಕ್ತಿ ತುಂಬಿದರೆ ಅದು ಪವಾಡಗಳನ್ನು ಮಾಡಬಹಲ್ಲದು. ಹರಿವ ನದಿಯಲ್ಲಿ ಇರುವ ನೀರಿಗೆ ಇರುವ ಶಕ್ತಿ ಜಲಾಶಯದಲ್ಲಿ ಸಂಗ್ರಹಿಸಿಟ್ಟ ನೀರಿಗೆ ಇರುವುದಿಲ್ಲ. ಜೀವದಲ್ಲಿ ಹಾದು ಬಂದ ನೀರು ನದಿಯ ನೀರಿನ ಶಕ್ತಿ ಪಡೆಯುತ್ತದೆ ಎಂದು ಹೇಳುತ್ತಾರೆ ಶ್ರೀನಿವಾಸ್.

    ಮೂರು ಹಂತದಲ್ಲಿ ನೀರಿಗೆ ಜೀವ

    ಜೀವ ಸಾಧನ ಮೂರು ಹಂತದಲ್ಲಿ ಕೆಲಸ ಮಾಡುತ್ತದೆ. ವಿಡಿಯೋದಲ್ಲಿ ನೀವು ನೋಡುತ್ತಿರುವ ಹಾಗೆ ಇದೆಂದು ಸರಳ ಪೈಪಿನ ರೀತಿ ಕಾಣುತ್ತದೆ. ಸ್ಟೈನ್ ಲೆಸ್ ಸ್ಟೀಲ್ ನಿಂದ ತಯಾರಿಸಲಾಗಿದೆ. ಆದರೆ ಅದರಲ್ಲಿ ವಿಜ್ಞಾನಿ ಕೃಷ್ಣ ಅವರು ರೂಪಿಸಿರುವ ಭೌತಿಕ ಸಂರಚನೆ ಇದೆ.  ಮೊದಲು ಶಕ್ತಿ ಕಳೆದುಕೊಂಡು ಅಘಾತಕ್ಕೆ ಒಳಗಾಗಿರುವ  ನೀರು ಬಯೋ ಸೆನ್ಸರ್ ಮೂಲಕ ಈ ಕೊಳವೆ ರೀತಿಯ ಉಪಕರಣದಲ್ಲಿ ಹರಿಯುತ್ತದೆ.  2ನೇ ಹಂತದಲ್ಲಿ ನೀರಿಗೆ ಶಕ್ತಿ ತುಂಬುವ ಎಲೆಕ್ಟ್ರಾನ್ ಗಳನ್ನು ಸಕ್ರಿಯಗೊಳಿಸಲಾಗುತ್ತದೆ.  ಇಲ್ಲಿಂದ  ಮುಂದಕ್ಕೆ ಧಾವಿಸುವ   ನೀರು ತನ್ನ ಮೂಲ  ಶಕ್ತಿಯನ್ನು ಪುನಃ ಗಳಿಸಿಕೊಂಡು ಮುಂದುವರಿಯುತ್ತದೆ.ಯಾವುದೇ ರಸಾಯನಿಕವೂ ಇಲ್ಲ. ವಿದ್ಯುತ್ ಸಂಪರ್ಕವೂ ಬೇಕಾಗಿಲ್ಲ. ಭೌತ ಶಾಸ್ತ್ರದ ಸರಳ ಲೆಕ್ಕಾಚಾರದ ಮೇಲೆ ಇದು ಕೆಲಸ ಮಾಡುತ್ತದೆ.

    ರಾಸಾಯನಿಕಗಳಿಂದ ಬರಡಾದ ಭೂಮಿಗೆ ಜೀವ ಸಂಚಯ

    ನಾವು ಬೇಕೋ ಬೇಡವೋ ಎಲ್ಲ ಕಡೆ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಭೂಮಿಗಂತೂ ಅದೆಷ್ಟೋ ರಾಸಾಯನಿಕ ತುಂಬಿದ್ದೀವೋ ಗೊತ್ತಿಲ್ಲ. ಮೊದಲು ಆ ಭೂಮಿ ಸಹಜವಾಗಿ ಫಲವತ್ತವಾಗಬೇಕು. ಅದಕ್ಕೆ ಶಕ್ತಿ ತುಂಬಿದ ನೀರು ಬೇಕು. ಆ ಕೆಲಸ ಇಲ್ಲಿ ಆಗುತ್ತಿದೆ ಎನ್ನುತ್ತಾರೆ  ಶ್ರೀನಿವಾಸ್.

    ಹಾಗೆ ನೋಡಿದರೆ ಇದೇನು ಮಿರಾಕಲ್ ಅಲ್ಲ. ಸಹಜ ವಿಜ್ಞಾನ. ನಾವು ರೈತರಿಗೂ ಅದನ್ನೇ ಹೇಳುತ್ತೇವೆ.  ಜೀವ ಜಲ ಹಾಯಿಸಿದ ಕೂಡಲೇ ಇಳುವರಿಯ ಲೆಕ್ಕ ಹಾಕಬೇಡಿ.  ಈ ನೀರಿನಿಂದ ಮೊದಲು ನಿಮ್ಮ ಭೂಮಿಯನ್ನು ಸಹಜವಾಗಿ ಫಲವತ್ತವಾಗಿ ಮಾಡಿ. ಮುಂದಿನ ದಿನಗಳ್ಲಿ  ಅದರ ಲಾಭ  ನಿಮಗೇ  ಗೊತ್ತಾಗುತ್ತದೆ ಎನ್ನುತ್ತಾರೆ  ಶ್ರೀನಿವಾಸ್. ಮೊದಲು ಹೇಳಿದ ಡೈರಿ ಫಾರಂ ನಲ್ಲೂ ಇದೇ ತತ್ವ ಅಳವಡಿಸಲಾಗಿದೆ. ಅಲ್ಲಿ ಈ ನೀರಿನಿಂದ ರಾಸುಗಳ ಆರೋಗ್ಯ ಸುಧಾರಿಸಿತು.  ಆರೋಗ್ಯವಂತ  ರಾಸು ಸಮೃದ್ಧ ಹಾಲು ನೀಡಿತು.

    ಇದನ್ನು ಕಂಡು ಹಿಡಿದಿರುವ ಕೃಷ್ಣ ಅವರೂ ಇದನ್ನೇ ಹೇಳುತ್ತಾರೆ.  ಶುದ್ಧ ಶಕ್ತಿ ತುಂಬಿದ ನೀರಿನಿಂದ   ಭೂಮಿಗೆ ಜೀವ ಬಂದರೆ ಭೂ ತಾಯಿ ರೈತರನ್ನು ಖಂಡಿತಾ ಕೈ ಬಿಡುವುದಿಲ್ಲ. ವಾಸನೆ ಇಲ್ಲದ. ಬಣ್ಣವಿಲ್ಲದ  ಆಕಾರವಿಲ್ಲದ ನೀರು ಶುದ್ಧವೇನೋ ಹೌದು ಅದರಲ್ಲಿ ಶಕ್ತಿ ಇದೆಯೇ ಎಂಬುದು ಮುಖ್ಯ. ಜೀವ ಶುದ್ಧ ನೀರಿಗೆ ಜೀವ ತುಂಬುತ್ತದೆ.

    ಜಾಗತಿಕ ವಿಜ್ಞಾನಿ ಕೃಷ್ಣ

    ಡಾ.ಕೃಷ್ಣ ಮಾದಪ್ಪ ಜಾಗತಿಕ ನೀರಿನ ಕ್ಷೇತ್ರದಲ್ಲಿ ಪ್ರಖ್ಯಾತ ಹೆಸರಾಗಿದ್ದು ಹಲವಾರು ದಶಕಗಳಿಂದ ನೀರಿನ ವರ್ತನೆಯನ್ನು ಸಂಶೋಧಿಸುತ್ತಾ ಬಂದಿದ್ದಾರೆ. 25 ವರ್ಷಗಳಿಗೂ ಮೀರಿದ ಅವರ ಸಂಶೋಧನೆಯಲ್ಲಿ ನೀರಿಗೆ ಜೀವವಿದೆ. ಅದು ಮಾನವರ ದುರ್ಬಳಕೆಯಿಂದ ಮತ್ತು ಕಾಲದ ಬದಲಾವಣೆಗಳಿಂದ ಹಾನಿಗೊಳಗಾಗಿದೆ ಮತ್ತು ಕ್ಷೀಣಿಸಿದೆ ಎಂದು ವೈಜ್ಞಾನಿಕವಾಗಿ ತೋರಿಸಿದ್ದಾರೆ.

    ಅವರ ಸಂಶೋಧನೆಯ ಫಲಿತಾಂಶವೇ ‘ಜೀವ’.ಇದು ಕ್ರಾಂತಿಕಾರಕ ನೀರಿನ ರಚನೆಯ ಡಿವೈಸ್ ಆಗಿದ್ದು ಅದು ನಾವು ಬಳಸುವ ನೀರಿಗೆ ಜೀವದ ಶಕ್ತಿಗಳನ್ನು ಮರಳಿ ತರುತ್ತದೆ. ನಮ್ಮ ಕೊಡಗಿನವರೇ  ಆದ  ಡಾ.ಕೃಷ್ಣ ಮಾದಪ್ಪ ಅವರು ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್  ಎಂಜಿನಿಯರ್ . ನಿಸರ್ಗದ ಥರ್ಮೋಡೈನಮಿಕ್ಸ್ ಮತ್ತು ಕ್ವಾಂಟಂ ಆಯಾಮದಿಂದ ಸ್ಫೂರ್ತಿ ಪಡೆದ ಅವರು ಕಳೆದ 25 ವರ್ಷಗಳಿಗೂ ಮೇಲ್ಪಟ್ಟು ಜೈವಿಕ-ಶಕ್ತಿಯ ವಿಜ್ಞಾನಗಳನ್ನು ಆವಿಷ್ಕರಿಸುತ್ತಿದ್ದಾರೆ. ಇದರಿಂದ ಅವರು ನೀರಿನ ಸಮೀಕರಣಗಳಿಗೆ ಹೊರತಾದ ವರ್ತನೆಯನ್ನು ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಆಧಾರದ ಮೇಲೆ ಕಂಡುಕೊಂಡಿದ್ದಾರೆ. ನಮ್ಮ ವೇದಗಳಲ್ಲಿ ಅಡಕವಾಗಿರುವ  ಜಲ ಶಕ್ತಿಯ ಮಹತ್ವನ್ನು ಅವರು ಅರಿತಿದ್ದಾರೆ.  ಬೆಡೋಯಿನ್ ಆದಿವಾಸಿಗಳೊಂದಿಗೂ ಜೀವಿಸಿ ನೀರಿನ  ಅಂತಃ ಶಕ್ತಿಯನ್ನು ಅರಿತಿದ್ದಾರೆ.

    ಕೃಷ್ಣ ಅವರು ಯುಎಸ್‌ಎಯ ಎಸೆನ್ಸ್ ಆಫ್ ಲೈಫ್‌ನ ಸಂಸ್ಥಾಪಕ ಮತ್ತು ಸಿಇಒ ಕೂಡಾ ಆಗಿದ್ದಾರೆ ಹಾಗೂ ಯುಎಸ್‌ಎಯ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸ್ಪಿರಿಚುಯಾಲಿಟಿ ಅಂಡ್ ಸಸ್ಟೇನಬಿಲಿಟಿಯ  ಅಧ್ಯಕ್ಷ ಹಾಗೂ ಸಹ-ಸಂಸ್ಥಾಪಕರೂ ಆಗಿದ್ದಾರೆ. ಅವರು ಸೈಕೊನ್ಯೂರೊಬಿಕ್ಸ್ ಅಥವಾ ‘ಬೆಳಕಿನ ವಿಜ್ಞಾನ’ ಮತ್ತು ಯೋಗದಲ್ಲಿ ಪಿಎಚ್.ಡಿ ಹೊಂದಿದ್ದಾರೆ. ಡಾ.ಕೃಷ್ಣ ಮಾದಪ್ಪ ಅವರಿಗೆ ಅರ್ಜೆಂಟೀನಾದ ರೋರಿಕ್  ಟ್ರೀಟಿಯು ಗ್ಲೋಬಲ್ ಅಂಬಾಸಡರ್ ಆಫ್ ಪೀಸ್ ಪುರಸ್ಕಾರ ನೀಡಿ ಗೌರವಿಸಿದೆ.

    ಕೃಷ್ಣರಿಗೆ ಜೊತೆಯಾದ ಶ್ರೀನಿವಾಸ

    ಸಂಶೋಧನೆಯೊಂದರ ಫಲ ಜನಸಾಮಾನ್ಯರಿಗೆ ತಲುಪಿದಗಾಲೇ ಅದಕ್ಕೆ ಯಶಸ್ಸು ಮತ್ತು ಸಾರ್ಥಕತೆ. ಈ ಸಮಯದಲ್ಲಿ ಕೃಷ್ಣ ಅವರಿಗೆ ಶ್ರೀನಿವಾಸ್ ಜೊತೆಯಾದರು. ಹಾಗೆ ನೋಡಿದರೆ ಕೃಷ್ಣ ಅವರಿಗೂ ಶ್ರೀನಿವಾಸ್ ಅವರಿಗೂ ಅಂಥ ಪರಿಚಯವೇನು ಇರಲಿಲ್ಲ. ಸಮಾರಂಭವೊಂದರಲ್ಲಿ ಕೃಷ್ಣ ಅವರನ್ನು ಭೇಟಿಯಾದ ಶ್ರೀನಿವಾಸ್ ಅವರ ಸಂಶೋಧನೆ ವಿವರ ಕೇಳಿದ ಕೂಡಲೇ ಪ್ರಭಾವಿತರಾದರು. ಹೌದಲ್ಲ ನಾವು ನೀರನ್ನು ಎಷ್ಟೊಂದು ವೀಕ್ ಮಾಡಿ ಬಿಟ್ಟಿದ್ದೀವಲ್ಲ  ಎಂದು ಅವರಿಗೂ ಅನ್ನಿಸುತು .ಇದು ಸಾಮಾನ್ಯರಲ್ಲಿ ಸಾಮಾನ್ಯರಿಗೆ ತಲುಪಿದಾಗಲೆ ಅದಕ್ಕೊಂದು ಅರ್ಥ ಎಂಬುದನ್ನು ಮನಗಂಡರು.  ಉದ್ಯಮಿಯಾಗಿದ್ದ ಅವರಿಗೆ ಇದನ್ನು ಎಲ್ಲರಿಗೂ ತಲುಪಿಸುವ ಕನಸು ಚಿಗರೊಡೆಯಿತು . ಇದರ  ಫಲವೇ   ಫೋರ್ಥ್ ಫೇಸ್ ವಾಟರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಉದಯ.

    ಶ್ರೀನಿವಾಸನ್ ಕೈಗಾರಿಕೋದ್ಯಮಿ, ಸಲಹೆಗಾರ, ಮಾರ್ಗದರ್ಶಿ ಮತ್ತು ಹಲವು ಸ್ಟಾರ್ಟಪ್‌ಗಳ ಹೂಡಿಕೆದಾರರಾಗಿ 30 ವರ್ಷಗಳ ಅನುಭವ ಹೊಂದಿದ್ದಾರೆ.ಅವರು ಒಇಎಂಗಳಿಗೆ ಆಟೊಮೊಟಿವ್ ಡಯಲ್‌ಗಳನ್ನು ಉತ್ಪಾದಿಸುವ ಜಾಗತಿಕ ಉದ್ಯಮ ಎಸ್‌ಜೆಎಸ್ ಸಂಸ್ಥಾಪಕ ನಿರ್ದೇಶಕರಾಗಿ ತಮ್ಮ ವೃತ್ತಿ  ಪ್ರಯಾಣ ಪ್ರಾರಂಭಿಸಿದವರು. ಈ ಕಂಪನಿ ಇತ್ತೀಚೆಗೆ ಭಾರತದ ಷೇರುಪೇಟೆಯಲ್ಲಿ ಲಿಸ್ಟ್ ಕೂಡ ಆಗಿದೆ.ಭಾರತದ ಹಲವು ಸ್ಟಾರ್ಟಪ್‌ಗಳು ಜಾಗತಿಕವಾಗಿ ದೊಡ್ಡ ಸಾಧನೆ ಮಾಡುವಲ್ಲಿ ಇವರ ಪಾತ್ರ ಹಿರಿದು.

    ಇದೀಗ ತಮ್ಮ ಅನುಭದ ಆಧಾರದ ಮೇಲೆ ಜೀವವನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಗುರಿ ಹೊಂದಿರುವ ಶ್ರೀನಿವಾಸ್ ಜೀವ ಜಲವನ್ನು ಹಲವು ಪರೀಕ್ಷೆಗಳಿಗೂ ಒಡ್ಡಿದ್ದಾರೆ. ಮಾಮೂಲಿ ಬಾಟಲ್ ನೀರಿಗೂ ಜೀವ ತುಂಬಿದ ನೀರಿಗೂ ಇರುವ ವ್ಯತ್ಯಾಸ ಕಂಡುಕೊಂಡಿದ್ದಾರೆ.

    ನಾವು ಭೂಮಿಯನ್ನು ಸಾಕಷ್ಟು ಹಾಳು ಮಾಡಿ ಈಗ ಸಾವಯವದ ಮಂತ್ರ ಜಪಿಸುತ್ತಿದ್ದೇವೆ. ಭೂಮಿ ಫಲವತ್ತಾದರೆ ತಾನೆ ಸಾವಯವ ಕೃಷಿಯ ಫಲ ಎನ್ನುವ ಶ್ರೀನಿವಾಸ್ ಮೊದಲು ಭೂಮಿಗೆ ಶಕ್ತಿ ತುಂಬಿ ಎನ್ನುತ್ತಾರೆ. ಇದು ಸಾಧ್ಯವಾಗಬೇಕಾದರೆ ಭೂ ತಾಯಿಗೆ ಜೀವ ಇರುವ ನೀರು ಬೇಕು ಎನ್ನುತ್ತಾರೆ.

    ಜೀವ ನೀರಿನಿಂದ ಗಟ್ಟಿಯಾದ ಬೇರುಗಳು

    ಈಗಾಗಲೇ ಕರ್ನಾಟಕ, ಆಂಧ್ರ, ತಮಿಳು ನಾಡಿನಲ್ಲಿ ಜೀವ ಜಲ ದ ಪ್ರಯೋಗ ನಡೆದಿದೆ. ಉತ್ತಮ ಫಲಿತಾಂಶವೂ ವ್ಯಕ್ತವಾಗುತ್ತಿದೆ. ಈ  ಮೇಲಿನ ಚಿತ್ರ ಗಮನಿಸಿದರೆ  ಜೀವ  ನೀರನ್ನು ಉಪಯೋಗಿಸಿದ ಭೂಮಿಯಲ್ಲಿ ಬೆಳದ ಸಸ್ಯದ ಬೇರುಗಳು ಗಟ್ಟಿಯಾಗಿರುವುದನ್ನು ಗಮನಿಸಬಹುದಾಗಿದೆ.

    ಯಾಮಿ-ವಿಪಾಸ – ಜಾಹ್ನವಿ- ದಿಹಂಗ

    ನಾಲ್ಕುವಿಧದಲ್ಲಿ ಜೀವ ಸಾಧನವನ್ನು ಸಿದ್ಧಪಡಿಸಲಾಗಿದೆ. ಇವುಗಳಿಗೆ ಭಾರತದ ಪುರಾತನ ನದಿಗಳ ಹೆಸರನ್ನೇ ಇಟ್ಟಿರುವುದು ಮತ್ತೊಂದು ವಿಶೇಷ.

    ಯಾಮಿ ಹೆಸರಿನ ಸಾಧನ ಗೃಹ ಬಳಕೆಗೆ ಬಳಸಬಹುದಾಗಿದೆ.ಮನೆಯಲ್ಲೇ ಇರುವ ತೋಟ, ಮನೆಯ ಓವರ್ ಹೆಡ್ ಟ್ಯಾಂಕಿಗೆ ಇದನ್ನು ಅಳವಡಿಸಬಹದು. ಈ ವಿಡಿಯೋ ನೋಡಿ.

    ವಿಪಾಸ ಗಂಟೆಗೆ 9000 ಲೀಟರ್ ನೀರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಪುಟ್ಟ ಫಾರಂಗಳು, ಪೌಲ್ಟ್ರಿ, ಡೇರಿಗೆಳಿಗೆ ಬಳಸಬಹದು.

    ಜಾಹ್ನವಿ ಹೆಸರಿನ ಸಾಧನ ಗಂಟೆಗೆ 30 000 ಲೀಟರ್ ನೀರು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು ದೊಡ್ಡ ತೋಟಗಳಿೆಗೆ ಅನುಕೂಲ .

    ದಿಹಂಗಾ ಹೆವಿ ಡ್ಯೂಟಿ ವಾಟರ್ ಸ್ಟ್ರಕ್ಚರಿಂಗ್ ಸಾಧನವಾಗಿದ್ದ 50000 ಲೀಟರ್ ನೀರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚು ನೀರು ಅಗತ್ಯ ಇರುವ ಭೂಮಿಗೆ ಬಳಸ ಬಹುದಾಗಿದೆ.

    ಬಳ್ಳಾರಿಯಲ್ಲಿ ಕಂಡ ಯಶಸ್ಸಿನ ಕಥೆ

    ಕರ್ನಾಟಕದ ಬಳ್ಳಾರಿಯಲ್ಲಿ40 ಸಾಧನಗಳನ್ನು ಕಳೆದ ಹಲವು ತಿಂಗಳಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಶೇಕಡ 75ರಷ್ಟು ಕೃಷಿ ಭೂಮಿಗಳಿಗೆ ಅಳವಡಿಸಲಾಗಿದೆ.ಶೇ.23ರಷ್ಟು ಮನೆಗಳಲ್ಲಿ(ತಾರಸಿ ಮತ್ತು ಹರ್ಬ್ ಗಾರ್ಡನ್‌ಗಳು) ಮತ್ತು ಶೇ.2ರಷ್ಟು ಡೈರಿ ಫಾರ್ಮ್‌ಗಳಲ್ಲಿ ಅಳವಡಿಸಲಾಗಿದೆ.ಈ ವಿಡಿಯೋದಲ್ಲಿ ಶ್ರೀನಿವಾಸ್ ಅಲ್ಲಿನ ಸಾಧನೆ ಬಣ್ಣಿಸಿದ್ದಾರೆ.

    ನಾಲ್ಕು ಎಕರೆಗಳಷ್ಟು ಭತ್ತದ ಗದ್ದೆಯಿಂದ ಈ ವರ್ಷ 185 ಚೀಲಗಳಷ್ಟು ಭತ್ತ ದೊರೆತಿದ್ದು ಕಳೆದ ವರ್ಷ 160 ಚೀಲಗಳು ಮಾತ್ರ ದೊರೆತಿತ್ತು. ಭತ್ತದ ಮೊಳಕೆಯಲ್ಲಿ ಶೇ.60ರಷ್ಟು ಹೆಚ್ಚಳ ದೊರೆತಿದೆ ಎಂದು ಹೇಳುತ್ತಾರೆ ಶ್ರೀನಿವಾಸ್.

    ಜೀವ ಪೋಷಕಾಂಶ ಪಡೆದ ಟೊಮ್ಯಾಟೊಗಳ ಪೌಷ್ಠಿಕತೆಯ ಅಂಶ ಬ್ರಿಕ್ಸ್ ಮೌಲ್ಯ· 3.5-5ರಿಂದ 9-13ಕ್ಕೆ ಹೆಚ್ಚಾಗಿದೆ. ಈ ವರ್ಷ ಅಸಹಜ ಮಳೆ ಮತ್ತು ಪ್ರವಾಹ ಬಂದಿದ್ದರೂ ಜೀವ ನೀರು ಪಡೆದ ಬೆಳೆಗಳು ಗಟ್ಟಿ ಬೇರುಗಳನ್ನು ಹೊಂದಿದ್ದು ಪೂರ್ಣ ಹಾಳಾಗುವುದನ್ನು ತಡೆದಿವೆ. ಡೈರಿ ಫಾರ್ಮ್ ಗಳು- ಹಿಂದೆ 6 ಲೀಟರ್ ಹಾಲು ಕೊಡುತ್ತಿದ್ದ ಎಮ್ಮೆಗಳು ಜೀವ· ನೀರು ನೀಡಿದ ನಂತರ ಎಲ್ಲ ಮೇವು ಇತ್ಯಾದಿ ಅದೇ ರೀತಿಯಲ್ಲಿದ್ದರೂ 7ಲೀಟರ್ ಹಾಲು ನೀಡಿವೆ. ಅವುಗಳ ಗರ್ಭ ಕಟ್ಟುವಿಕೆಯೂ ಸುಧಾರಿಸಿದೆ

    ಜೀವ ಜಲ

    ಕೃಷ್ಣ ಮಾದಪ್ಪ ಅವರ ಸಂಶೋದನೆ ಜೀವ ಜಲಕ್ಕೆ ನಿಜವಾಗಿಯೂ ಜೀವ ತುಂಬುತ್ತಿರುವುದು ಗೊತ್ತಾಗುತ್ತಿದೆ. ಹೆಚ್ಚು ಹೆಚ್ಚು ಜನರನ್ನು ಇದು ತಲುಪಬೇಕು ಎಂಬ ನಿಟ್ಟಿನಲ್ಲಿ ಅವರು ಮತ್ತು ಶ್ರೀನಿವಾಸ್ ಈಗ ಕಾರ್ಯ ತತ್ಪರರಾಗಿದ್ದಾರೆ. ಬಳಕೆ ಹೆಚ್ಚಿದಷ್ಟು ಇದರ ಫಲಿತಾಂಶ ಮತ್ತಷ್ಟು ನಿಖರವಾಗುತ್ತದೆ.

    ಜೀವ ಎಲ್ಲಿ ಸಿಗುತ್ತದೆ, ಬಳಕೆ ಹೇಗೆ ಇತ್ಯಾದಿ ಮಾಹಿತಿ ಅಗತ್ಯ ವಿದ್ದಲ್ಲಿ 9945949043 ಈ ನಂಬರಿಗೆ ವಾಟ್ಸಾಪ್ ಮಾಡುವ ಮೂಲಕ ಪಡೆಯಬಹುದು ಎಂದು ಜೀವ ವಕ್ತಾರರು ತಿಳಿಸಿದ್ದಾರೆ.

    .

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    27 COMMENTS

    1. ಜೀವ ಜಲಕ್ಕೆ ಜೀವದ ಕಾಯ ಕಲ್ಪ ಕೊಟ್ಟ ಕೊಡಗಿನ ಡಾ. ಕೃಷ್ಣ ಮಾದಪ್ಪ ಅವರ ಯೋಚನೆ, ಸಾಧನೆ ರೋಮಾಂಚನಕಾರಿ ಆಗಿದೆ. ಹಿಡಿದಿಟ್ಟದ್ದು ಯಾವುದೂ ಜಗತ್ತಿನಲ್ಲಿ ಪರಿಣಾಮಕಾರಿಯಲ್ಲ ಅನ್ನೋ ಸತ್ಯವನ್ನ ತಳಹದಿಯಾಗಿಸಿ ಕಂಡುಕೊಂಡ- ಜೀವ- ನಿಜಕ್ಕೂ ಅದ್ಭುತ!!
      ಒಳ್ಳೆಯ ಲೇಖನ ಕೊಟ್ಟ ಗೆಳೆಯ ವತ್ಸನಿಗೆ ವಂದನೆಗಳು. ಹಾಗೆಯೇ ಇದು ದೊರಕುವ ಜಾಗ, ಅಂದಾಜು ಬೆಲೆ ತಿಳಿಸಿದ್ದರೆ ಚೆನ್ನಾಗಿತ್ತು.

      • ‘ ಜೀವ ‘ ದ ಬಗ್ಗೆ ನಿಮ್ಮ ಆಸಕ್ತಿ ಮತ್ತು ನೀರಿನ ಸತ್ಯ ಮತ್ತು ಸತ್ವದ ಬಗ್ಗೆ ನಿಮ್ಮ ಆಸಕ್ತಿ ನೋಡಿ ಸಂತೋಷವಾಯಿತು. http://WWW.jivawaters.com website ಅಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ ಮತ್ತೆ ಮೇಲಿನ article nalli ಇರುವ ಮೊಬೈಲ್ ಸಂಖ್ಯೆಗೆ whatsapp ಮಾಡಿದರೆ ಇನ್ನಷ್ಟು ಮಾಹಿತಿ ಪಡೆಯಬಹುದು.

    2. ಡಾ.ಕೃಷ್ಣ ಮಾದಪ್ಪ ‌ಅವರಿಗೆ ಅಭಿನಂದನೆ.ಅವರ ಸಂಶೋಧನೆಯ ಫಲ‌ ಎಲ್ಲರಿಗೂ ಸಿಗಲಿ.

    3. ಡಾ.ಕೃಷ್ಣ ಮಾದಪ್ಪ ಅವರ ಸಂಶೋಧನಾ ಸಾಧನೆ ಅತಿ ಉಪಯುಕ್ತ ವಾಗಿದೆ.ಇಂತಹ ಉಪಯುಕ್ತ ಮಾಹಿತಿ ತಿಳುಹಿಸಿ ರುವ ಶ್ರೀಯುತ ವತ್ಸ ನಾಡಿಗ್ ಅವರಿಗೂ, ಡಾ.ಕೃಷ್ಣ ಮಾದಪ್ಪನವರಿಗೂ 🙏🙏🙏🙏

    4. ಹೊಸ ಉದ್ಯಮಗಳ ಬಗ್ಗೆ ಶ್ರೀನಿವಾಸ್ ಅವರ ಆಸಕ್ತಿ ಅಭಿನಂದನೀಯ. ಜೀವ ಸಾಧನ ಪಡೆಯಲು ಯಾರನ್ನು ಸಂಪರ್ಕಿಸ ಬೇಕು. ವಿವರ ನೀಡಲು ವಿನಂತಿ.

    5. ತುಂಬಾ ಆಸಕ್ತಿದಾಯಕ ವಿಚಾರ.ನೀರಿಗೂ ಜೀವ ತುಂಬ ಬಹುದು ಎಂದು ನನಗೆ ತಿಳಿದಿರಲಿಲ್ಲ.

    6. ಅದ್ಭುತ…ಬೇಗ ಮಾರುಕಟ್ಟೆಯಲ್ಲಿ ಸರಳವಾಗಿ ಎಲ್ಲರಿಗೂ ದೊರೆಯುವಂತಾಗಲಿ. ಉಪಯುಕ್ತವಾದ ಮಾಹಿತಿಯನ್ನು ಒದಗಿಸಿದ ಟೀಮ್ ಕನ್ನಡ ಪ್ರೆಸ್ ಗೆ ಧನ್ಯವಾದಗಳು.

    7. ಡಾ.ಕೃಷ್ಣ ಮಾದಪ್ಪ ಅವರಿಗೆ ಅಭಿನಂದನೆಗಳು.ಹಾಗೆಯೇ ಶ್ರೀನಿವಾಸ್ ಅವರಿಗೂ ಕೂಡ.ಎಷ್ಟೊಂದು ಗೊತ್ತಿರದ ವಿಚಾರಗಳಿವೆ.ಆದರೆ ಇದು ಎಲ್ಲರಿಗೂ ಸಿಗುವಂತಾಗಬೇಕು. ಆಗ ಅವರ ಶ್ರಮಕ್ಕೆ ತಕ್ಕ ಗೌರವ

    8. JEEVA as the name means LIFE. The revolutionary concept of invention and implementation of rejenevating life in still water in storage in any form be it be dam, tank where Dr.Krishna Madappa has done extensive research in usage water which is recharged with life to plant, animals and humans. In nutshell it improves the quality of life for humanity. Mr.Srinivas who is young entrepreneur has joined hands with Dr.Krishna Madappa in distribution of the unique product. Impressed by the product will consider one to our personal usage and worth having one.

      • ‘ ಜೀವ ‘ ದ ಬಗ್ಗೆ ನಿಮ್ಮ ಆಸಕ್ತಿ ಮತ್ತು ನೀರಿನ ಸತ್ಯ ಮತ್ತು ಸತ್ವದ ಬಗ್ಗೆ ನಿಮ್ಮ ಆಸಕ್ತಿ ನೋಡಿ ಸಂತೋಷವಾಯಿತು. http://WWW.jivawaters.com website ಅಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ ಮತ್ತೆ ಮೇಲಿನ article nalli ಇರುವ ಮೊಬೈಲ್ ಸಂಖ್ಯೆಗೆ whatsapp ಮಾಡಿದರೆ ಇನ್ನಷ್ಟು ಮಾಹಿತಿ ಪಡೆಯಬಹುದು.

    9. ಎಷ್ಟೋ ಗೊತ್ತಿರದ ವಿಷಯಗಳನ್ನು ತಿಳಿಸಿದ್ದಾರೆ. ಬಹಳ ಉಪಯುಕ್ತ ಹಾಗೂ ಎಲ್ಲರೂ ಯೋಚಿಸಬೇಕು ಅನ್ನುವ ವಿಷಯ.

    10. ಬಹಳ ಉಪಯುಕ್ತ ಹಾಗೂ ಎಲ್ಲರೂ ಯೋಚಿಸಬೇಕು ಅನ್ನುವ ವಿಷಯ.

    11. ಬಹಳ ಆಸಕ್ತಿಕರ ವಿಷಯ ವಿಜ್ಞಾನ ದ ತಳಹದಿಯ ಸಂಶೋಧನೆ ಎಲ್ಲರಿಗೂ ದೊರಕುವಂತಾಗಲಿ.

      ಸಿ ಜಿ ವೆಂಕಟೇಶ್ವರ
      ತುಮಕೂರು

    12. ಇದು ಬಹಳ ಆಸಕ್ತಿಕರವಾದ ಆವಿಷ್ಕಾರ. ನಾನೂ ಬಳಸುವೆ

      • Naanu ಬಳಸುವೆ ಎಂದು ಕೇಳಿ ಸಂತೋಷ ಆಯಿತು ನಿಮ್ಮ ಆರೋಗ್ಯದ ಬಗ್ಗೆ ಅಕ್ಕರೆ ಇದೆ ಎಂದು ಖುಷಿಬಾಯಿತು ದಯವಿಟ್ಟು
        WWW. jivawaters.com ಈ website ನಲ್ಲಿ ಪೂರ್ಣ ಮಾಹಿತಿ ಪಡೆದು ಆರ್ಡರ್ ಮಾಡಬಹುದು

    13. Very impressive… Very useful invention sir… Waiting to see our farmers getting benefitted from this great invention… Want to know more about it like cost and maintenance ? Hat’s off to Dr.Krishna Madappa sir…. Wish to see more such invention to help the backbone of our country..

    14. “ಆವಿಷ್ಕಾರ”ವೆನ್ನುವುದು ಸಣ್ಣ ವಿಷಯವಲ್ಲ…. ಅದರಲ್ಲೂ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಉಳಿವಿಗೆ ತಾಜಾ ನೀರು ಅವಶ್ಯಕ ಹೌದು.. ಪ್ರಸ್ತುತ ಎಷ್ಟರ ಮಟ್ಟಿಗೆ ತಾಜಾ ನೀರು ದೊರಕುತ್ತಿದೆ ಎಂದು ನಮಗೆ ತಿಳಿದಿದೆ… ಹಾಗಾಗಿ ಭೂತಾಯಿಗೆ “ಜೀವ ನೀರನ್ನು” ಬಳಸಿದರೆ ಅದು ಆಕೆಯ ಮರುಹುಟ್ಟು ಎಂದರೆ ತಪ್ಪಾಗಲಾರದೇನೋ..! ಹಾಗೆಯೇ ನಮ್ಮ ಭಾರತದ ಪುರಾತನ ಹೆಸರುಗಳನ್ನು ನೆನಪಿಸಿದ್ದಕ್ಕೆ ಧನ್ಯವಾದ… ಶುಭವಾಗಲಿ..☺️

    15. Very interesting topic. ನಾನು ಇದರ ಬಗ್ಗೆ ಮೊದಲ ಬಾರಿಗೆ ಕಲಿಯುತಿದ್ದನೇ. ಆದರೆ ಇದು ತುಂಬ ಸರಳ ಹಾಗು ಉಪಯೋಗಕಾರಿ ಮಾಹಿತಿ . ಇದನ್ನ ಹೆಚ್ಚು ಹಚ್ಚು ಜನರಿಗೆ ಪರಿಚಯಿಸಬೇಕು ಹಾಗು ಇದರ ಉಪಯುಕ್ತತೆಯನ್ನು ಇನ್ನೂ ಹಚ್ಚಿಸಬೇಕು . ಧನ್ಯವಾದಗಳು

    16. Amazing invention! Didn’t know water molecules could be restructured this way to enhance its vitality.

    LEAVE A REPLY

    Please enter your comment!
    Please enter your name here

    Latest article

    error: Content is protected !!