ಬೆಂಗಳೂರು:ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ಬೆಂಗಳೂರುದಲ್ಲಿ ನಡೆದ 76ನೇ ಅಖಿಲ ಭಾರತ ವಾಣಿಜ್ಯ ಸಂಘಟಣೆಯ 76ನೇ ವಾರ್ಷಿಕ ಸಮ್ಮೇಳನದಲ್ಲಿ ಖ್ಯಾತ ವಾಣಿಜ್ಯ ಪಂಡಿತರೂ ಹಾಗೂ ಹಿರಿಯ ಉನ್ನತ ಶಿಕ್ಷಣ ಆಡಳಿತಗಾರರಾದ ಪ್ರೊ. ಎಂ. ಜಯಪ್ಪ ಅವರನ್ನು ಭಾರತ ವಾಣಿಜ್ಯ ಸಂಘಟಣೆಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಈ ಆಯ್ಕೆಯೊಂದಿಗೆ ಪ್ರೊ. ಎಂ. ಜಯಪ್ಪ ಅವರು 77ನೇ ಭಾರತ ವಾಣಿಜ್ಯ ಸಂಘಟಣೆಯ ಸಮ್ಮೇಳನದವರೆಗೆ ಸಂಘಟಣೆಯ ನೇತೃತ್ವ ವಹಿಸಲಿದ್ದು, ಹಾಗೂ ಶೈಕ್ಷಣಿಕ, ಸಂಶೋಧನಾ ಮತ್ತು ವೃತ್ತಿಪರ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಅವರ ನಾಯಕತ್ವದ ಮೇಲೆ ದೇಶದ ವಾಣಿಜ್ಯ ಅಧ್ಯಾಪಕರು ಮತ್ತು ಸಂಶೋಧಕರು ಅಪಾರ ನಂಬಿಕೆಯನ್ನು ಹೊಂದಿದ್ದಾರೆ.
ಪ್ರೊ. ಎಂ. ಜಯಪ್ಪ ಅವರು ಈ ಹಿಂದೆ ಭಾರತ ವಾಣಿಜ್ಯ ಸಂಘಟಣೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿಯೂ,ಹಾಗೂ ದಕ್ಷಿಣ ವಲಯ ಕಾರ್ಯಕಾರಿ ಸಮಿತಿಗೆ ನಾಲ್ಕು ಬಾರಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನೀತಿ ಚರ್ಚೆಗಳು, ಶೈಕ್ಷಣಿಕ ಸಂಯೋಜನೆ ಮತ್ತು ವಾಣಿಜ್ಯ ಸಂಶೋಧಕರ ನಡುವಿನ ಸಹಕಾರವನ್ನು ಬಲಪಡಿಸುವಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರೊ. ಎಂ. ಜಯಪ್ಪ ಅವರು ವಾಣಿಜ್ಯ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರು ಭಾರತ ವಾಣಿಜ್ಯ ಸಂಘಟಣೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದರ ಜೊತೆಗೆ, ದಕ್ಷಿಣ ವಲಯ ಕಾರ್ಯಕಾರಿ ಸಮಿತಿಗೆ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಪ್ರಾಂಶುಪಾಲರ ಸಂಘದ ಅಧ್ಯಕ್ಷರು, ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಸಂಘದ ಕಾರ್ಯದರ್ಶಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಜೊತೆಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ . ಅಲ್ಲದೆ, ಬೆಂಗಳೂರು ನಗರದ RBANMS ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿಯೂ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಗೋಳ್ಳಿ ರಾಯಣ್ಣ ಮಹಾ ವಿದ್ಯಾಲಯದ ಘಟಕ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ–2020 (NEP) ಜಾರಿಗೆ ವಾಣಿಜ್ಯ ಮತ್ತು ನಿರ್ವಹಣಾ ಸಮಿತಿಯ ರಾಜ್ಯ ಸಂಯೋಜಕರಾಗಿ ಅವರು ಪಠ್ಯಕ್ರಮ ಸುಧಾರಣೆ ಮತ್ತು ನೀತಿ ಅನುಷ್ಠಾನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅನೇಕ ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವರು ಯಶಸ್ವಿಯಾಗಿ ಆಯೋಜಿಸಿದ್ದಾರೆ.
ವಾಣಿಜ್ಯ ಶಿಕ್ಷಣ ಮತ್ತು ಸಂಶೋಧನೆಗೆ ನೀಡಿದ ಮಹತ್ವದ ಸೇವೆಗಾಗಿ ಪ್ರೊ. ಎಂ. ಜಯಪ್ಪ ಅವರಿಗೆ ಭಾರತೀಯ ಲೆಕ್ಕಪತ್ರ ಸಂಘಟನೆ ಮತ್ತು ಭಾರತ ವಾಣಿಜ್ಯ ಸಂಘಟಣೆಯಿಂದ ಫೆಲೋಶಿಪ್ ಗೌರವಗಳು ಲಭಿಸಿವೆ. ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಸ್ಥೆಗಳ ಶೈಕ್ಷಣಿಕ ಹಾಗೂ ಆಡಳಿತ ಮಂಡಳಿಗಳಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ.
ಭಾರತ ವಾಣಿಜ್ಯ ಸಂಘಟಣೆಯ ಅಧ್ಯಕ್ಷರಾಗಿ ಪ್ರೊ. ಎಂ. ಜಯಪ್ಪ ಅವರ ನೇತೃತ್ವವು ದೇಶದ ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣಕ್ಕೆ ಹೊಸ ದಿಕ್ಕು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಎಂದು ಸಂಘಟನಾ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


