27.9 C
Karnataka
Sunday, May 24, 2026
    Home Blog Page 84

    ಸಿಇಟಿ- 2021;ಆನ್‌ಲೈನ್‌ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ


    ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ-2021 ಪರೀಕ್ಷೆ ಬರೆಯಲು  ಆನ್‌ಲೈನ್‌ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 16ರವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅರ್ಜಿ ಸಲ್ಲಿಕೆಯ ಜತೆಗೆ ಶುಲ್ಕ ಪಾವತಿಯನ್ನು ಜುಲೈ 19ರವರೆಗೂ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

    ಪೋಷಕರು ಮತ್ತು ವಿದ್ಯಾರ್ಥಿಗಳು ಮನವಿ ಮಾಡಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ವಿಶೇಷ ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಜುಲೈ 14ರಿಂದ 20ರವರೆಗೆ ಅವಕಾಶ ನೀಡಲಾಗಿದೆ. ಎನ್‌ಸಿಸಿ, ಕ್ರೀಡೆ, ರಕ್ಷಣೆ, ರಕ್ಷಣೆ (ನಿವೃತ್ತ), ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ವರ್ಗಗಳನ್ನು ಕ್ಲೇಮ್‌ ಮಾಡುವ ಅಭ್ಯರ್ಥಿಗಳು ನಿಗದಿಪಡಿಸಿರುವ ತಮಗೆ ಹತ್ತಿರವಾದ ಯಾವುದಾದರೂ ಕೇಂದ್ರಕ್ಕೆ ತೆರಳಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದಾಗಿದೆ.

    ಹೆಚ್ಚಿನ ವಿವರಗಳಿಗೆ http://kea.kar.nic.in ವೆಬ್‌ತಾಣಕ್ಕೆ ಭೇಟಿ ವಿವರ ಪಡೆಯಬಹುದು ಎಂದು ಡಿಸಿಎಂ ತಿಳಿಸಿದ್ದಾರೆ.

    ಬೋರಾಗುಂಟೆಯ ಸಾವಯವ ರೈತ ವಿಜ್ಞಾನಿ

    ಎಂ.ವಿ.ಶಂಕರಾನಂದ

    ಬೋರಾಗುಂಟೆ ಮರುಳಯ್ಯನವರು ರಸಾಯನಶಾಸ್ತ್ರದ ಉಪನ್ಯಾಸಕರಾಗಿದ್ದು ನಂತರ ತುಮಕೂರಿನ ಎಂಪ್ರೆಸ್ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದರು. ನಂತರ ಪ್ರಸಕ್ತ ತುಮಕೂರಿನ ವಿಜ್ಞಾನ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಬಳಿಯ ಬೋರಾಗುಂಟೆ ಗ್ರಾಮದಲ್ಲಿ ಅವರ ತೋಟವಿದೆ. ಹತ್ತು ಎಕರೆ ಪ್ರದೇಶದಲ್ಲಿ ಮುನ್ನೂರು ತೆಂಗು, ಎರಡು ಸಾವಿರ ಅಡಿಕೆ, ಒಂದೂವರೆ ಸಾವಿರ ಬಾಳೆ, ಒಂದು ಸಾವಿರ ಮೆಣಸು, ನೂರು ಕಾಫಿ ಗಿಡಗಳಲ್ಲದೆ ತೋಟದ ಸುತ್ತಲೂ ತೇಗ, ಹೊನ್ನೆ ಇತ್ಯಾದಿ ಮರಗಳು ಹಸಿರು ಬೇಲಿಯಿಂದ ನಳನಳಿಸುತ್ತಿವೆ. ಇದು ಅವರ ಎರಡು ದಶಕದ ಪ್ರಯತ್ನದ ಫಲ.

    ಮರುಳಯ್ಯ ಜಪಾನ್ ಕೃಷಿ ವಿಜ್ಞಾನಿ ಫುಕುವೋಕಾನಿಂದ ಸ್ಫೂರ್ತಿಗೊಂಡವರಂತೆ ಶೂನ್ಯ ಬೇಸಾಯಕ್ಕೆ ಒಲಿದರು. ಸಾಕಷ್ಟು ಪ್ರಮಾಣದಲ್ಲಿ ನೀರು ಗೊಬ್ಬರ, ಗೊಬ್ಬರ ಅಂದರೆ ಕೊಳೆಯುವ ತ್ಯಾಜ್ಯ, ಕೊಡುತ್ತಿರುವುದು ಇವರ ತೋಟಗಾರಿಕೆ ಯಶಸ್ಸಿನ ಗುಟ್ಟು. ಮೂರು ಬೋರ್‌ವೆಲ್ ಕ್ರಿಯಾಶೀಲವಾಗಿವೆ.

    ತೋಟದ ಪಕ್ಕ ಪಶ್ಚಿಮದಲ್ಲಿ ಕೆರೆ, ಪೂರ್ವದಲ್ಲಿ ಗುಡ್ಡ ಪ್ರದೇಶ. ಮಳೆಯಾಗಿ ಕೆರೆ ತುಂಬಿದಾಗ ಈ ಪ್ರದೇಶವನ್ನು ನೋಡುವುದೇ ಚೆಂದ. ಇವರನ್ನು ತುಮಕೂರಿನ ವಲಯದಲ್ಲಿ ಬೋರಾಗುಂಟೆಯ ಸಾವಯವ ರೈತ ವಿಜ್ಞಾನಿ ಎಂದೇ ಕರೆಯುತ್ತಾರೆ.

    ತೋಟಗಾರಿಕೆಯ ಖರ್ಚು ಕಳೆದು ಇವರಿಗೆ ತಿಂಗಳಿಗೆ ಸುಮಾರು ಒಂದು ಲಕ್ಷ ರೂಪಾಯಿಯ ಆದಾಯವೂ ಇದೆ. ತಾನು ದುಡಿಮೆಯ ಆದಾಯ ಕಂಡರೆ ಸಾಲದು, ನಮ್ಮ ರೈತಾಪಿ ಜನರಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಆಗಾಗ್ಗೆ ಬೇಸಾಯಕ್ಕೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು, ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಾರೆ.

    ಸಾಮಾನ್ಯವಾಗಿ ಬೇಸಾಯದ ಬಗ್ಗೆ ತಿಳಿದುಕೊಂಡೋ, ಕಾಲೇಜಿನಲ್ಲಿ ಅಧ್ಯಯನ ಮಾಡಿಯೋ ಸಂಪನ್ಮೂಲ ವ್ಯಕ್ತಿಗಳಾಗಿ ನೆರಳಲ್ಲಿ ಕುಳಿತೋ, ವೇದಿಕೆಯಲ್ಲಿ ನಿಂತೋ ಮಾತನಾಡುವ-ಭಾಷಣ ಮಾಡುವ ವ್ಯಕ್ತಿಗಳಿಗಿಂತ ವಿಷಯ ತಿಳಿದುಕೊಂಡು ತಾವೇ ಜಮೀನಿನಲ್ಲಿ ಕೆಲಸ ಮಾಡಿ ಮಾತನಾಡುವ ವ್ಯಕ್ತಿಗಳು ಶ್ರೇಷ್ಠ. ಇನ್ನು ವಿಷಯ ತಿಳಿದು, ಅನುಭವಿಸಿ ತಮ್ಮ ಪಾಡಿಗೆ ತಾವು ಬೇಸಾಯ ಮಾಡಿಕೊಂಡಿರುವವರೂ ಇದ್ದಾರೆ.

    ಈ ಮೂರು ರೀತಿಯ ಜನರಲ್ಲಿ, ಮೂರೂ ರೀತಿಯವರು ಮುಖ್ಯರಾದವರೂ ಕೂಡ ಮಧ್ಯದ ವ್ಯಕ್ತಿಗಳು ಅತಿಮುಖ್ಯರಾಗಲು ಕಾರಣ ಅವರು ಮಾತು ಮತ್ತು ಕೃತಿಯ ಮಧ್ಯೆ ಸಮನ್ವಯತೆ ಸಾಧಿಸಬೇಕಾಗುತ್ತದೆ. ಅದು ಕಷ್ಟದ ಕೆಲಸವೂ ಹೌದು. ಸಂವಹನ ಕೌಶಲ್ಯವೂ ಹೌದು. ಮಾತಾಡಿಕೊಂಡೇ ಇರಬಹುದು, ಕೆಲಸ ಮಾಡಿಕೊಂಡೇ ಇರಬಹುದು. ಎರಡಕ್ಕೂ ಚ್ಯುತಿ ಬಾರದೇ ನಡೆಯುವವರ ಹೇಗೆ ಬಣ್ಣಿಸಲು ಸಾಧ್ಯ? ಅಂಥ ಅಪರೂಪದವರ ಸಾಲಿನಲ್ಲಿ ಮರುಳಯ್ಯನವರೂ ಒಬ್ಬರು.

    ಮರುಳಯ್ಯನವರು ನನಗೆ ಮೊದಲು ಪರಿಚಯವಾದದ್ದು 2010ರಲ್ಲಿ ಅವರು ಎಂಪ್ರೆಸ್ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾಗ. ಆ ಸಮಯದಲ್ಲಿ ಮಿತ್ರರಾದ ಡಾ.ಸಿದ್ಧಗಂಗಯ್ಯನವರು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದರು. ಅವರು ಡಾ. ಚಂದ್ರಶೇಖರ ಕಂಬಾರರ `ಸಿರಿಸಂಪಿಗೆ’ ನಾಟಕವನ್ನು ಪ್ರದರ್ಶಿಸುವ ಉದ್ದೇಶದಿಂದ ಪೂರ್ವಬಾವಿ ತಯಾರಿಯಾಗಿ ಪ್ರಾಕ್ಟೀಸ್ ಮಾಡಲು ಎಂಪ್ರೆಸ್ ಕಾಲೇಜಿನಲ್ಲಿ ಸಂಜೆ ವೇಳೆ ಜಾಗಕ್ಕೆ ಅನುಮತಿಗಾಗಿ ಮರುಳಯ್ಯ ನವರು ಭೇಟಿ ಮಾಡಿದ್ದರು. ಆ ಭೇಟಿ ಮಾಡಿದಾಗ ನಾನೂ ಜೊತೆಯಲ್ಲಿದ್ದೆ.


    ಒಂದು ಸಾವಿರಕ್ಕೂ ಅಧಿಕವಿರುವ ವಿದ್ಯಾರ್ಥಿನಿಯರ ಕಾಲೇಜಿನಲ್ಲಿ ಉತ್ತಮವಾದ ಶಿಸ್ತು ಕಾಪಾಡಿಕೊಂಡು, ಪಾಠ ಪ್ರವಚನಗಳನ್ನು ನಡೆಸುತ್ತಾ, ಕ್ಯಾಂಪಸ್ಸನ್ನೂ ಸುಂದರವಾಗಿಟ್ಟುಕೊಂಡಿದ್ದನ್ನು ನೋಡಿದ್ದೆ. ಅವರ ತೋಟಗಾರಿಕೆ ಬಗ್ಗೆ ತಿಳಿದಿರಲಿಲ್ಲ. ಅವರು ನಿವೃತ್ತರಾದಾಗ ಅವರಿಗೊಂದು ಅಭಿನಂದನಾ ಕಾರ್ಯಕ್ರಮವನ್ನು ಅಭಿಮಾನಿಗಳು, ಸ್ನೇಹಿತರು ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ತೋವಿನಕೆರೆ ಸಮೀಪ ಹತ್ತು ಎಕರೆಯಲ್ಲಿ ತೋಟ ಬೆಳೆಸಿದ್ದಾರೆಂದು ಕೇಳಿದ್ದೆ. ಈಗ ನೋಡಿದರೆ, ತೋಟ ಬೆಳೆಸಿರುವುದು ಮಾತ್ರವಲ್ಲದೆ, ಸ್ಥಳೀಯ ರೈತರಿಗೆ ಅನುಕೂಲವಾಗುವಂತೆ ಪಾಠವನ್ನು ಆರಂಭಿಸಿದ್ದಾರೆ.

    ಪ್ರಸ್ತುತ ಮರುಳಯ್ಯನವರು ತಮ್ಮ ತೋಟದ ಮನೆಯ ಎದುರಿಗೆ ಪೂರ್ವದಿಕ್ಕಿನಲ್ಲಿ ದಕ್ಷಿಣ-ಉತ್ತರ ಸುಮಾರು ಹತ್ತು ಕಿ.ಮೀ ಹಬ್ಬಿರುವ ಎ.ಎಂ. (ಅಮೃತ್‌ಮಹಲ್) ಕಾವಲ್ ಕರೇಕಲ್ ಗುಡ್ಡಪ್ರದೇಶದಲ್ಲಿ (ಸುಮಾರು ಆರು ಸಾವಿರದ ನಾಲ್ಕು ನೂರು ಎಕರೆಯಲ್ಲಿ) ಜಲ ಸಂವರ್ಧನೆ ಮತ್ತು ಬೀಜಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳುವ ತಯಾರಿಯಲ್ಲಿದ್ದಾರೆ. ಇಂಥ ಮಹದಾಶಯದ ಯೋಜನೆಯ ಹಿಂದಿನ ಪರಿಸರ ಪ್ರಜ್ಞೆಗೆ, ಪ್ರತಿಭೆಗೆ ಶರಣೆನ್ನಬೇಕು.

    ಮರುಳಯ್ಯನವರ ತೋಟಕ್ಕೆ ಹೋದರೆ ಅಲ್ಲಿನ ಬಾಳೆಗೊನೆಗಳು ಎಲ್ಲರ ಗಮನ ಸೆಳೆಯುತ್ತವೆ. ಹಣ್ಣಿನ ರುಚಿ, ಸ್ವಾದ ಅತ್ಯದ್ಭುತ. ಇಷ್ಟು ಸೊಂಪಾಗಿ ಗೊನೆ ತೂಗುತ್ತಿರುವ ಗುಟ್ಟೇನು ಸಾರ್? ನೀವು ಸೀಮೆಗೊಬ್ಬರ ಬೇರೆ ಹಾಕುವುದಿಲ್ಲ'’ ಎಂದು ಕೇಳಿದ್ದಕ್ಕೆ ಅವರ ಉತ್ತರ ಅದ್ಭುತವಾಗಿತ್ತು! ನೋಡಿ, ಸಾಮಾನ್ಯವಾಗಿ ನಮ್ಮ ರೈತರು ಹತ್ತು ಅಡಿ ಉದ್ದ, ಹತ್ತು ಅಡಿ ಅಗಲದ ಜಾಗದಲ್ಲಿ ತಿಪ್ಪೆ ಮಾಡಿಕೊಂಡಿರುತ್ತಾರೆ. ನಾವು ಇಡೀ ತೋಟವನ್ನೇ ತಿಪ್ಪೆ ಮಾಡಿದ್ದೇವೆ. ಬೇಸಿಗೆಯಲ್ಲಿ ತಿಪ್ಪೆಯ ಜಾಗದಲ್ಲಿ, ಬಚ್ಚಲ ಸಮೀಪ ಬಾಳೆ ವೇಗವಾಗಿ ಬೆಳೆಯುವುದನ್ನು ನೋಡಿದ್ದೀರಲ್ಲವೇ? ಇದೂ ಅಷ್ಟೇ. ತೋಟದ, ಹೊಲದ ತುಂಬ ತಿಪ್ಪೇ ಮಾಡಲು ಕಾಲಾವಕಾಶ ಬೇಕು. ಏಳೆಂಟು ವರ್ಷಗಳಷ್ಟು! ತಿಪ್ಪೆ ಎಂದರೆ ಬರಿ ಪ್ರಾಣಿಗಳ ಗೊಬ್ಬರವಲ್ಲ. ಸೊಪ್ಪು, ಸೆದೆ ಎಲ್ಲ ಜೈವಿಕ ಕರಗುವ ವಸ್ತುಗಳು ಸೇರುತ್ತವೆ. ಭೂಮಿ ಹದಗೊಳ್ಳುತ್ತದೆ’’.

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಕೃಷಿಗೆ ಹಾಗೂ ಕೆರೆಗೆ ಸಂಸ್ಕರಿಸಿದ ವೃಷಭಾವತಿ ನೀರು

    ವೃಷಭಾವತಿ ನದಿಯ ಕೊಳಚೆ ನೀರನ್ನು ಮುಂದಿನ 5 ವರ್ಷಗಳಲ್ಲಿ ರೂ.1500.00 ಕೋಟಿಗಳ ವೆಚ್ಚದಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಕೃಷಿಗೆ ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಟಾನಗೊಳಿಸುವುದಾಗಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ಅವರು ಬಿಡದಿಯ ಈಗಲ್ಟನ್‍ ರೆಸಾರ್ಟನಲ್ಲಿ ನಡೆದ ಮಾಧ್ಯಮ ಗೋಷ್ಟಿಯಲ್ಲಿ ಪ್ರಕಟಿಸಿದ್ದಾರೆ.

    ಸಚಿವರು ಇಂದು ಬೆಳಿಗ್ಗೆ ಬೆಂಗಳೂರಿನ ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ದೇವಾಲಯದಿಂದ ಬಿಡದಿಯ ಬೈರಮಂಗಲ ಕೆರೆಯವರೆಗೂ ವೃಷಬಾವತಿ ನದಿಯನ್ನು ಪರಿಶೀಲಿಸಿದರು. ಬೆಂಗಳೂರು ಜಲ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್‍ ಬೆಂಗಳೂರು ಮಹಾನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

    ಬೆಂಗಳೂರು ನಗರದ ಶೇ.40 ರಷ್ಟು ತ್ಯಾಜ್ಯ ನೀರು ವೃಷಬಾವತಿ ನದಿ ಮೂಲಕ ಬಿಡದಿಯ ಬೈರಮಂಗಲ ಕೆರೆಗೆ ಸೇರುತ್ತಿದೆ. ಪ್ರಸಕ್ತ ಕೇವಲ ಎರಡು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದ್ದು, ಈ ನೀರು ಕೃಷಿ ಸೇರಿದಂತೆ ಯಾವುದಕ್ಕೂ ಬಳಸಲು ಸಾಧ್ಯವಿಲ್ಲ. ಇನ್ನೊಂದೆಡೆ ಸಂಸ್ಕರಣೆ ಮಾಡಿದ ನೀರನ್ನು ಚರಂಡಿಗಳಿಗೆ ಹರಿಸುತ್ತಿದ್ದು, ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ.

    ಬೆಂಗಳೂರು ನಗರದ ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ ಹರಿಯುವ 1500 ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಿ, ಕೆರೆಗಳನ್ನು ತುಂಬಿಸುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವುದು ನಮ್ಮ ಉದ್ದೇಶವಾಗಿದೆ. ಒಂದು ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಲು ರೂ.1.00 ಕೋಟಿ ವೆಚ್ಚವಾಗುತ್ತದೆ. 1500 ಎಂ.ಎಲ್‍.ಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ರೂ.1500.00 ಕೋಟಿ ವೆಚ್ಚವಾಗಲಿದ್ದು, 3-5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಆನಂತರ ಕುಡಿಯುವುದಕ್ಕೆ ಹೊರತುಪಡಿಸಿ, ಬೇರೆ ಎಲ್ಲಾ ಚಟುವಟಿಕೆಗಳಿಗೆ ಈ ಶುದ್ಧ ನೀರನ್ನು ಬಳಸಬಹುದಾಗಿದೆ ಎಂದು ಸಚಿವರು ಇದೇ ವೇಳೆ ವಿವರಿಸಿದ್ದಾರೆ.

    ಬಸವನಗುಡಿಯಲ್ಲಿ ಹುಟ್ಟುವ ವೃಷಬಾವತಿ ನದಿ ಬಿಡದಿಯ ಬೈರಮಂಗಲ ಕೆರೆಗೆ ತಲುಪುತ್ತದೆ. ನಾಯಂಡನಹಳ್ಳಿ ಹಾಗೂ ಮೈಲಸಂದ್ರದಲ್ಲಿ ಇದಿಗ ಎರಡು ಹಂತಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ 600 ಪ್ರದೇಶದಲ್ಲಿದ್ದು, ಅಲ್ಲಿಯೂ ಸಹ ಒಂದು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‍ ಸದಸ್ಯರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸಿಂಡಿಕೇಟ್‍ ಸದಸ್ಯರಿಗೆ ಈ ಯೋಜನೆಯ ಮಹತ್ವವನ್ನು ವಿವರಿಸಿ, ಅಲ್ಲಿಯೂ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ರಾಜ್ಯ ಸರ್ಕಾರದ ವತಿಯಿಂದ ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು.

    ವೃಷಬಾವತಿ ನದಿಯಲ್ಲಿ ಹರಿಯುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಬಗ್ಗೆ ಕಾರ್ಖಾನೆಗಳು, ಜನವಸತಿ ಪ್ರದೇಶಗಳು ಹಾಗೂ ಅಪಾರ್ಟಮೆಂಟ್‍ಗಳಿಂದ ಸಂಸ್ಕರಣೆ ಮಾಡದೇ ನದಿಗೆ ನೇರವಾಗಿ ತ್ಯಾಜ್ಯ ನೀರು ಹರಿಸುತ್ತಿರುವುದರ ವಿರುದ್ಧ ಹಾಗೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇನೆ. ಮುಂದಿನ ವಾರದಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದು ಒಂದು ದೃಢ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ವೃಷಬಾವತಿ ಹುಟ್ಟುವ ಪ್ರದೇಶದಿಂದ ಅರ್ಕಾವತಿ ನದಿ ತಲುಪುವರೆಗೆ ಸಮಿಕ್ಷೆ ಮಾಡಿ ವರದಿ ಸಲ್ಲಿಸಿ ಎಂದು ಹೈಕೋರ್ಟ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯೋ‍ನ್ಮುಖವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

    ವೃಷಬಾವತಿ ನಿಧಿ ಪ್ರದೇಶದಲ್ಲಿ 3304 ಕೈಗಾರಿಕೆಗಳಿದ್ದು, 1396 ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡಿ, ನದಿಗೆ ನೇರವಾಗಿ ತ್ಯಾಜ್ಯ ನೀರನ್ನು ಹರಿಸುತ್ತಿವೆ. 1476 ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, 77 ಕಾರ್ಖಾನೆಗಳ ಮೇಲೆ ಕ್ರಿಮಿನಲ್‍ ಮೊಕದ್ದಮೆ ಹೂಡಲಾಗಿದೆ. 275 ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ ಎಂದು ಇದೇ ವೇಳೆ ಸಚಿವರು ವಿವರಿಸಿದರು. ಕೇವಲ ಉದ್ಯಮಿಗಳ ಮೇಲಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಸಹ ದೂರು ದಾಖಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಆದೇಶಿಸಿದರು.

    ಬೈರಮಂಗಲ ಕೆರೆ :

    ರೂ.250.00 ಕೋಟಿಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯನ್ನು ಏತ ನೀರಾವರಿ ಯೋಜನೆಯನ್ನು ಅನುಷ್ಟಾನಗೊಳಿಸಲು ಟೆಂಡರ್‍ ಕರೆಯಲಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಿಂದ ಹಾಗೂ ಬೆಂಗಳೂರಿನ ವೃಷಬಾವತಿ ನದಿಯಲ್ಲಿ ಹರಿದು ಬರುವ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿ ಬೈರಮಂಗಲ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದ ಶೇ.40 ರಷ್ಟು ನೀರು ಈ ಕೆರೆಗೆ ಬರುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಜೊತೆಯಲ್ಲಿ ಮಾತನಾಡಿ ಮಳೆ ನೀರು ಹಾಗೂ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೇರ್ಪಡಿಸಿ, ಸುತ್ತ-ಮುತ್ತ ಹಳ್ಳಿಗಳಲ್ಲಿರುವ 142 ಕೆರೆಗಳಿಗೆ ನೀರನ್ನು ಹರಿಸಲಾಗುವುದು. ಮುಂದಿನ 1-2 ವರ್ಷಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಾಗಿ ಬೈರಮಂಗಲ ಕೆರೆಯನ್ನು ವೀಕ್ಷಿಸಿದ ನಂತರ ಸಚಿವರು ಹೇಳಿದರು.

    ಪದವಿ ಕಾಲೇಜುಗಳ ಆರಂಭದ ದಿನಾಂಕ ಇನ್ನೂ ತೀರ್ಮಾನ ಆಗಿಲ್ಲ: ಡಿಸಿಎಂ ಸ್ಪಷ್ಟನೆ


    ಪದವಿ ಕಾಲೇಜುಗಳ ಭೌತಿಕ ತರಗತಿಗಳ ಆರಂಭದ ಬಗ್ಗೆ ಸರಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

    ಈ ಬಗ್ಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಅವರು, “ಸದ್ಯಕ್ಕೆ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರ ಸರಕಾರದ ಆದ್ಯತೆ. ಅದರ ಹೊರತಾಗಿ ಕಾಲೇಜುಗಳನ್ನು ಆರಂಭಿಸುವುದಲ್ಲ. ಕೋವಿಡ್‌ ಸೋಂಕು ಇನ್ನೂ ಪೂರ್ಣವಾಗಿ ನಿವಾರಣೆ ಆಗದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನ ಮಾಡಲಾಗಿಲ್ಲ” ಎಂದರು.

    ಕೆ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ

    ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದು ನಂತರ ಸರಕಾರಿ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಕೆ. ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

    ತಮಿಳುನಾಡು ಬಿಜೆಪಿ ರಾಜ್ಯಘಟಕದ ಅಧ್ಯಕ್ಷರಾಗಿದ್ದ ಎಲ್ ಮುರಗನ್ ನಿನ್ನೆ ಪುನಾರಚನೆಗೊಂಡ ಕೇಂದ್ರ ಸಚಿವ ಸಂಪುಟ ಸೇರಿದ್ದರು.

    ಶೇ 65.14ರಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ

    ವಿದ್ಯಾರ್ಥಿಗಳ ಲಸಿಕೀಕರಣಕ್ಕೆ ಇಂದಿನಿಂದಲೇ ಮತ್ತಷ್ಟು ಚುರುಕು ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲೇ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುವುದಲ್ಲದೆ, ಇದುವರೆಗೂ ಸರಕಾರಿ- ಅನುದಾನಿತ ಪದವಿ ಕಾಲೇಜುಗಳ ಶೇ 65.14ರಷ್ಟು ವಿದ್ಯಾರ್ಥಿ- ಸಿಬ್ಬಂದಿಗೆ  ಲಸಿಕೆ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಡಾ. ಸಿ.ಎನ್. ಅಶ್ವತ್ಥನಾರಾಯಣ ಫೌಂಡೇಷನ್ ಹಾಗೂ ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್‌ ವತಿಯಿಂದ ಮಲ್ಲೇಶ್ವರ ಕ್ಷೇತ್ರದ ಮತ್ತಿಕೆರೆಯ 3ನೇ ಮುಖ್ಯರಸ್ತೆಯಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

    ಪದವಿ ವಿದ್ಯಾರ್ಥಿಗಳಿಗೆ ಲಸಿಕೀಕರಣವನ್ನು ರಾಜ್ಯಾದ್ಯಂತ ಚುರುಕುಗೊಳಿಸಲು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್‌ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಅವರು ಇಂದು ಎಲ್ಲ ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಸರಕಾರ ಈ ಬಗ್ಗೆ ವಿಶೇಷ ಒತ್ತು ನೀಡಿ ಆದ್ಯತಾ ಗುಂಪಿನಡಿಯಲ್ಲಿ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಕೊಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಖಾಸಗಿ ಕಾಲೇಜುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂಬ ಬಗ್ಗೆ ಅಂಕಿ-ಅಂಶ ಪಡೆದುಕೊಳ್ಳುತ್ತಿದ್ದೇವೆ. ಆ ಮಾಹಿತಿ ಸಿಕ್ಕಿದ ಕೂಡಲೇ ಉಳಿದ ಎಷ್ಟು ವಿದ್ಯಾರ್ಥಿಗಳಿಗೆ ಇನ್ನೆಷ್ಟು ದಿನದಲ್ಲಿ ಲಸಿಕೆ ನೀಡಲಾಗುವುದು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಲಾಗುವುದು ಎಂದು ಡಿಸಿಎಂ ಹೇಳಿದರು.

    ವಿದ್ಯಾರ್ಥಿಗಳಿಗೆ ಲಸಿಕೆ ಅಂಕಿ-ಅಂಶ

    ಇದೇ ವೇಳೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಈ ತಿಂಗಳ 7ರವರೆಗೆ ನೀಡಲಾಗಿರುವ ಲಸಿಕೆಯ ಅಂಶಗಳ ಮಾಹಿತಿಯನ್ನೂ ನೀಡಿದರು.

    ರಾಜ್ಯದ ಆರು ಶೈಕ್ಷಣಿಕ ವಲಯಗಳ ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ 4,90,799 ವಿದ್ಯಾರ್ಥಿಗಳಿದ್ದು, ಈವರೆಗೆ 3,13,898 ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್‌ ಕೊಡಲಾಗಿದ್ದು,  63.96% ಗುರಿ ತಲುಪಲಾಗಿದೆ. ಅದೇ ರೀತಿ ಒಟ್ಟು 29,241 ಸಿಬ್ಬಂದಿ ಇದ್ದು, ಈ ಪೈಕಿಗೆ 24,875 ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, 85.07% ಗುರಿ ಸಾಧಿಸಲಾಗಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 65.14% ಗುರಿ ತಲುಪಲಾಗಿದೆ ಎಂದು ಅವರು ವಿವರ ನೀಡಿದರು.

    ತರಾ ತುರಿಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತರದಂತೆ ಸಿದ್ಧರಾಮಯ್ಯ ಒತ್ತಾಯ

    ಕೊರೋನಾ ಸಾಂಕ್ರಾಮಿಕ ಕಾರಣಕ್ಕೆ ಶೈಕ್ಷಣಿಕ ಚಟುವಟಿಕೆಗಳು ಸೇರಿ ಆಡಳಿತ ವ್ಯವಸ್ಥೆಯೇ ಸ್ಥಗಿತಗೊಂಡಿರುವ ಹೊತ್ತಿನಲ್ಲಿ ಸರ್ಕಾರ ತರಾತುರಿಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಅನುಷ್ಠಾನಗೊಳಿಸಬಾರದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

    ಪ್ರಜ್ಞಾವಂತರ, ಪೋಷಕರ, ಸಾರ್ವಜನಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಣ ತಜ್ಞರ, ವಿದ್ಯಾರ್ಥಿ ಸಂಘಟನೆಗಳ, ಬೋಧಕ ಮತ್ತು ಲೇಖಕ-ಬರಹಗಾರರ ವಲಯದಲ್ಲಿ ಚರ್ಚೆ ಆಗದ ಎನ್‍ಇಪಿ-2020 ನ್ನು ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವುದೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಎನ್‍ಇಪಿ-2020 ಅನ್ನು ಇದುವರೆಗೂ ಸಂಸತ್ತಿನಲ್ಲಿ ಮಂಡಿಸಿಲ್ಲ, ಚರ್ಚೆಯೂ ಆಗಿಲ್ಲ. ಅದೇ ರೀತಿ ರಾಜ್ಯದಲ್ಲೂ ಕರಡು ಅಧಿಸೂಚನೆ ಹೊರಡಿಸಿಲ್ಲ. ವಿಧಾನಸಭೆ / ಪರಿಷತ್‍ನಲ್ಲಿ ಚರ್ಚೆಯಾಗಿಲ್ಲ. ಸಂವಿಧಾನದ ಪರಿಚ್ಛೇದ 7ರ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಅಂದರೆ ಶಿಕ್ಷಣದ ವಿಚಾರದಲ್ಲಿ ರಾಜ್ಯಗಳಿಗೂ ಇರುವ ಸಮಾನ ಹಕ್ಕನ್ನು ಕಿತ್ತುಕೊಂಡು ಕೇಂದ್ರ ಬಲವಂತದಿಂದ ರಾಜ್ಯಗಳಲ್ಲಿ ಜಾರಿ ಮಾಡಲು ಹೊರಟಿದೆ. ಮೇಲು ನೋಟಕ್ಕೆ ಇದರಲ್ಲಿ ಹಲವು ಅಪಾಯಕಾರಿಯಾದ ಶಿಫಾರಸ್ಸುಗಳು ಇರುವುದು ಗೋಚರಿಸುತ್ತಿವೆ.

    1 ರಿಂದ 8 ವಯಸ್ಸಿನ ಬುನಾದಿ ಹಂತದ ಶಿಕ್ಷಣಕ್ಕೆ ಕೇಂದ್ರೀಕೃತ NCERT ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಈ ಕ್ರಮವು ಕನ್ನಡದಂತಹ ಸಂಸ್ಕೃತಿಗಳ ವಿರುದ್ಧವಾಗಿದೆ. ಈಗಾಗಲೇ ಬಹುತೇಕ ಚರಿತ್ರೆಯ ಪುಸ್ತಕಗಳಲ್ಲಿ ಕನ್ನಡದ, ಕರ್ನಾಟಕದ ಸಂಸ್ಕೃತಿ, ಆಡಳಿತ, ವಾಣಿಜ್ಯ, ಸಮಾಜಗಳ ಚಿಂತನೆಗಳೇ ಇಲ್ಲವಾಗಿದೆ ಎಂದು ಸಿದ್ಧರಾಮಯ್ಯ ವಾದಿಸಿದ್ದಾರೆ.

    ನಮ್ಮ ಮಕ್ಕಳು, ಕನ್ನಡ, ತೆಲುಗು, ತಮಿಳು, ಮಲೆಯಳಂ, ಕೊಡವ, ಕೊಂಕಣಿ, ತುಳು, ಮರಾಠಿ, ಒರಿಯಾ, ಬಂಗಾಳಿ, ಗುಜರಾತಿ ಮುಂತಾದ ಸಂಸ್ಕೃತಿಗಳ ಮೂಲಕ ಕಲಿಯಬೇಕು ಮತ್ತು ಯೋಚಿಸಬೇಕು. ಅದಕ್ಕಾಗಿ ಆಯಾ ರಾಜ್ಯ ಪಠ್ಯಕ್ರಮವನ್ನು ಅಳವಡಿಸಿಕೊಂಡು ಈ ನೆಲದ, ಮಣ್ಣಿನ ಸಂಗತಿಗಳನ್ನು ಪಾಠಗಳಲ್ಲಿ ಮಕ್ಕಳು ಕಲಿಯುವಂತಿರಬೇಕು. ಇದಕ್ಕೆ ಅವಕಾಶ ಕಲ್ಪಿಸಿಲ್ಲ.

    ತ್ರ್ರಿ ಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿರುವುದು ಅದರಲ್ಲಿ ಇಂಗ್ಲಿಷ್ ಮತ್ತು ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿರುವುದು ಭಾಷಾ ಹೇರಿಕೆ ಮಾತ್ರವಲ್ಲದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದಾಗಿದೆ.
    ಜತೆಗೆ ಸಂಸ್ಕೃತ ಭಾಷಾ ಕಲಿಕೆಗೆ ವಿಶೇಷ ಮಹತ್ವ ಕೊಡಬೇಕೆಂದು ಹೇಳಿರುವುದು, ಸಾಧ್ಯವಾದರೆ ಅದನ್ನು ಕಡ್ಡಾಯಗೊಳಿಸಬಹುದೆ ಎನ್ನುವಂತಹ ಮಾತುಗಳನ್ನೂ ಹೇಳಿರುವುದು ಅಸಾಂಗತ್ಯದ ಸೂಚನೆಯಾಗಿದೆ ಎಂದೂ ಸಿದ್ಧರಾಮಯ್ಯ ಹೇಳಿದ್ದಾರೆ.

    ಹಾಗೆಯೆ ರಾಜ್ಯ ಸರ್ಕಾರ ಬಿ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ, ‘ಉನ್ನತ ಶಿಕ್ಷಣದಲ್ಲಿ ಪಠ್ಯಕ್ರಮದ ಸುಧಾರಣೆಗಾಗಿ ಟಾಸ್ಕ್‍ಫೋರ್ಸ್ ಉಪಸಮಿತಿ’ಯನ್ನು ರಚಿಸಿದೆ. ಈ ಸಮಿತಿಯಲ್ಲಿ ಇಂದುಪ್ರಕಾಶ್, ಮಾನಸ ನಾಗಭೂಷಣ್, ಪದ್ಮಾವತಿ ಸದಸ್ಯರಾಗಿದ್ದಾರೆ.
    ಈ ನಾಲ್ಕು ಜನ ಅಧ್ಯಕ್ಷರು ಮತ್ತು ಸದಸ್ಯರು ಏಕಪಕ್ಷೀಯವಾಗಿ ಕರ್ನಾಟಕದ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುವುದು ಸರಿಯೇ ? ಈ ಟಾಸ್ಕ್ ಫೋರ್ಸ್ ಸಿಬಿಸಿಎಸ್ ಪಠ್ಯಕ್ರಮದ ಸ್ವರೂಪವನ್ನು ರಚಿಸಲು ಯಾರೊಂದಿಗೆ ಸಮಾಲೋಚನೆ ನಡೆಸಿದೆ? ಯಾವ ಮಾದರಿಗಳನ್ನು ಬಳಸಿದೆ ಎನ್ನುವ ವಿವರಗಳಿಲ್ಲ.

    ಎನ್‍ಇಪಿ-2020 ಕ್ಕೆ ಹಲವರು ತಮ್ಮ ಪ್ರತಿಕ್ರಿಯೆ ಮತ್ತು ತಕರಾರುಗಳನ್ನು ಕಳುಹಿಸಿದ್ದಾರೆ. ಸರ್ಕಾರ ಈ ಪ್ರತಿಕ್ರಿಯೆ ಮತ್ತು ತಕರಾರುಗಳನ್ನು ಸಾರ್ವಜನಿಕರ ಅವಗಾಹನೆಗೆ ಬಹಿರಂಗಗೊಳಿಸಿಲ್ಲ.
    ಈಗಾಗಲೇ ಪದವಿ ತರಗತಿಗಳಿಗೆ ಕನ್ನಡದಂತಹ ಭಾಷಾ ವಿಷಯಗಳನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಬಹುದಾಗಿದೆ ಎಂದು ಈ ತಿಮ್ಮೇಗೌಡರ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿತ್ತು. ವಿವಿಧ ವಲಯಗಳ ಗಣ್ಯರು ಪ್ರತಿಪಕ್ಷಗಳ ಮುಖಂಡರು ವಿರೋಧ ಮಾಡಿದ ಮೇಲೆ ಉನ್ನತ ಶೀಕ್ಷಣ ಸಚಿವರು ಎರಡು ವರ್ಷಗಳಿಗೆ ಮುಂದುವರೆಸಲಾಗುತ್ತದೆ ಎಂದು ಹೇಳಿದ್ದಾರೆ. ಪದವಿ ತರಗತಿಗಳನ್ನು 4 ವರ್ಷಗಳಿಗೆ ವಿಸ್ತರಿಸಿದರೆ 3 ವರ್ಷಗಳ ಕಾಲ ಕನ್ನಡ ವಿಷಯವನ್ನು ಮುಖ್ಯ ಪಠ್ಯಕ್ರಮವೆಂದು ಕಲಿಸಬೇಕು.

    ಹೀಗಾಗಿ ಎನ್‍ಇಪಿ-2020 ಜಾರಿ ಮಾಡುತ್ತಿರುವ ರೀತಿ ಪಾರದರ್ಶಕವಾಗಿಲ್ಲ ಮತ್ತು ಪ್ರಜಾತಾಂತ್ರಿಕವಾಗಿಲ್ಲ.
    ಹಾಗೆಯೇ ವಿಧಾನಸಭೆ-ವಿಧಾನ ಪರಿಷತ್‍ನ ಅಧಿವೇಶನಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಮತ್ತು ಪ್ರಜ್ಞಾವಂತರು, ಪೋಷಕರ ವಲಯಗಳ ನಡುವೆ ಸಮಗ್ರ ಚರ್ಚೆಯ ನಂತರವಷ್ಟೇ ‘ಎನ್‍ಇಪಿ-2020’ ನ್ನು ಜಾರಿ ಮಾಡುವ ಕುರಿತು ಯೋಚಿಸಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

    721 ಕೋಟಿ ರೂಪಾಯಿ ಬೆಂಬಲ ಬೆಲೆ ಮೊತ್ತ ಬಿಡುಗಡೆ; 2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರ ಜಮಾ

    ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 4-5 ತಿಂಗಳ ಹಿಂದೆ ಖರೀದಿ ಮಾಡಲಾಗಿದ್ದ ರಾಗಿ, ಭತ್ತ ಹಾಗೂ ಗೋಧಿಗೆ ಬಾಕಿ ಹಣವು ಸುಮಾರು 721 ಕೋಟಿ ರೂಪಾಯಿಯಷ್ಟಿದ್ದು, ಇದನ್ನು ಇನ್ನು 2-3 ದಿನಗಳಲ್ಲಿ ಪಾವತಿಸುವುದಾಗಿ ಎಂದು ಸಹಕಾರ ಸಚಿವರು ಹಾಗೂ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.

    ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಸೋಮಶೇಖರ್ ಅವರು, ನಾಲ್ಕೈದು ತಿಂಗಳ ಹಿಂದೆಯೇ ರಾಗಿ, ಭತ್ತ ಹಾಗೂ ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಲಾಗಿತ್ತು. ಆದರೆ, ಬೆಂಬಲ ಬೆಲೆ ಹಣ ಬಿಡುಗಡೆಯಾಗದೆ ಸಮಸ್ಯೆಯಾಗುತ್ತಿದೆ. ಕೂಡಲೇ ಬಾಕಿ ಹಣವನ್ನು ಪಾವತಿಸುವಂತೆ ಒತ್ತಡಗಳು ಬರುತ್ತಿದ್ದವು. ಇದೀಗ ಬಾಕಿ 721 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲು ಆದೇಶ ನೀಡಿದ್ದು, ಇನ್ನು 2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

    ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ , ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಪ್ರಕ್ರಿಯೆ ಮತ್ತು ರೈತರಿಗೆ ಹಣ ಪಾವತಿಸುವ ಸಂಬಂಧ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳು ಸಾಕಷ್ಟಿದ್ದು, ಅವುಗಳ ಸಂಬಂಧ ಚರ್ಚೆ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಮುಂದಿನ ಸಾಲಿನಲ್ಲಿ ಅಂದರೆ 2021-22ರ ಸಾಲಿನಲ್ಲಿ ಇಂತಹ ಸಮಸ್ಯೆಗಳು ತಲೆದೋರದಿರುವಂತೆ ಮಾಡಲು ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಏನು ಮಾಡಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಜುಲೈ 29ರಂದು ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ಕರೆಯಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಯಾವ ರೀತಿಯಾಗಿ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    “ಬೆಂಬಲ ಬೆಲೆ” ಪ್ರಥಮ ಸಭೆ

    ರೈತರಿಗೆ ಬೆಂಬಲ ಬೆಲೆ ನೀಡುವ ಸಂಬಂಧ ಇಂದು ಪ್ರಥಮ ಸಭೆಯನ್ನು ನಡೆಸಲಾಯಿತು. ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಉಮೇಶ್ ಕತ್ತಿ ಅವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಅವರು, ಪೌರಾಡಳಿತ ಮತ್ತು ಸಕ್ಕರೆ ಸಚಿವರಾದ ಶಂಕರ್ ಅವರು, ಪಶುಸಂಗೋಪನೆ ಸಚಿವರಾದ ಪ್ರಭು ಚೌವ್ಹಾಣ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ರೈತರಿಗಾಗುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಬೇಕಿರುವ ಪರಿಹಾರಗಳ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ಅಪರ ಮುಖ್ಯ ಕಾರ್ಯದರ್ಶಿಯವರಾದ ವಂದಿತಾ ಶರ್ಮ, ಅನಿಲ್ ಕುಮಾರ್ ಅವರು, ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನುಮನಗೌಡ ಅವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಾದ ತುಷಾರ್ ಗಿರಿನಾಥ್ ಅವರು, ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಾದ ಜಾಫರ್ ಅವರು, ಎಪಿಎಂಸಿ ನಿರ್ದೇಶಕರಾದ ಕರೀಗೌಡ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

    ಕೇಂದ್ರದಲ್ಲಿ ಸಹಕಾರ ಸಚಿವಾಲಯ; ಎಸ್ ಟಿ ಎಸ್ ಅಭಿನಂದನೆ

    ಸಹಕಾರ ಕ್ಷೇತ್ರ ಎಂದರೆ ಕೃಷಿಗೆ ಪೂರಕವಾಗಿರುವ ಕ್ಷೇತ್ರವಾಗಿದೆ. ಕೃಷಿ ಚಟುವಟಿಕೆಗೆ ನೇರ ಸಂಬಂಧವನ್ನು ಹೊಂದಿರುವ ಸಹಕಾರ ಕ್ಷೇತ್ರಕ್ಕೆ ಕೃಷಿ ಇಲಾಖೆಯಷ್ಟು ಮಹತ್ವವಾಗಲೀ, ಸಮಯವಾಗಲೀ ಸಿಗುತ್ತಿರಲಿಲ್ಲ. ಈಗ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಿಂದ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಪ್ರತ್ಯೇಕವಾಗಿ ಸಹಕಾರ ಸಚಿವಾಲಯ ಹಾಗೂ ಸಚಿವರನ್ನು ನೇಮಿಸುವ ಮೂಲಕ ದಿಟ್ಟ ಹೆಜ್ಜೆಯನ್ನು ಇಡಲಾಗಿದೆ. ಇದಕ್ಕೆ ಪ್ರಧಾನಿಗಳಿಗೆ ನನ್ನ ಅಭಿನಂದನೆಗಳು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ಈಗ ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ನಮಗೆ ಯಾವುದಾದರೂ ಸಮಸ್ಯೆ ತಲೆದೋರಿದರೆ ನೇರವಾಗಿ ಕೇಂದ್ರದಲ್ಲಿ ಸಹಕಾರ ಸಚಿವರನ್ನು ಭೇಟಿ ಮಾಡಬಹುದಾಗಿದೆ. ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.

    ರಾಜೀವ್ ಚಂದ್ರಶೇಖರ್ ಗೆ ಐಟಿ, ಶೋಭಾ ಕರಂದ್ಲಾಜೆ ಗೆ ಕೃಷಿ ಖಾತೆ

    ಪ್ರಧಾನ ಮಂತ್ರಿ ಅವರ ಸಲಹೆಯ ಮೇರೆಗೆ ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.

    ಹೊಸದಾಗಿ ಸೃಷ್ಟಿಯಾದ ಸಹಕಾರಿ ಖಾತೆಯನ್ನು ಗೃಹ ಖಾತೆಯ ಜೊತೆಗೆ ಅಮಿತ್ ಶಾ ಅವರಿಗೆ ವಹಿಸಲಾಗಿದೆ. ಸದಾನಂದ ಗೌಡರು ನಿರ್ವಹಿಸುತ್ತಿದ್ದ ರಸಗೊಬ್ಬರ ಖಾತೆಯನ್ನು ಮನಸುಖ್ ಮಂಡಾವೀಯ ಅವರು ನಿರ್ವಹಿಸಲಿದ್ದಾರೆ . ಆರೋಗ್ಯ ಖಾತೆಯೂ ಅವರಿಗೇ ದಕ್ಕಿದೆ. ಜ್ಯೋತಿರಾಧಿತ್ಯ ಸಿಂಧಿಯಾ ನಾಗರಿಕ ವಿಮಾನಯಾನ ಖಾತೆ ನಿರ್ವಹಿಸಲಿದ್ದಾರೆ.

    ಸ್ಟೇಟ್ ದರ್ಜೆಯ ಸಚಿವರುಗಳಾದ ರಾಜೀವ್ ಚಂದ್ರಶೇಖರ್ ಅವರಿಗೆ ಐಟಿ ಖಾತೆಯ ಜೊತೆ ಸ್ಕಿಲ್ ಡೆವಲಪ್ ಮೆಂಟ್ ಖಾತೆ ನೀಡಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣ, ನಾರಾಯಣ ಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಭಗವಂತ ಖೂಬಾ ಅವರಿಗೆ ರಸಗೊಬ್ಬರ ಖಾತೆ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ.

    Shri Narendra ModiPrime Minister and also in-charge of:Ministry of Personnel, Public Grievances and Pensions;Department of Atomic Energy;Department of Space;All important policy issues; andAll other portfolios not allocated to any Minister

    CABINET MINISTERS

    1.Shri Raj Nath SinghMinister of Defence
    2.Shri Amit ShahMinister of Home Affairs; and Minister of Cooperation
    3.Shri Nitin Jairam GadkariMinister of Road Transport and Highways
    4.Smt. Nirmala SitharamanMinister of Finance; andMinister of Corporate Affairs
    5.Shri Narendra Singh TomarMinister of Agriculture and Farmers Welfare
    6.Dr. Subrahmanyam JaishankarMinister of External Affairs
    7.Shri Arjun MundaMinister of Tribal Affairs
    8.Smt. Smriti Zubin IraniMinister of Women and Child Development

    9.Shri Piyush GoyalMinister of Commerce and Industry;Minister of Consumer Affairs, Food and Public Distribution; andMinister of Textiles
    10.Shri Dharmendra PradhanMinister of Education; andMinister of Skill Development and Entrepreneurship
    11.Shri Pralhad JoshiMinister of

    Parliamentary Affairs;Minister of Coal; andMinister of Mines
    12.Shri Narayan Tatu RaneMinister of Micro, Small and Medium Enterprises
    13.Shri Sarbananda SonowalMinister of Ports, Shipping and Waterways; andMinister of AYUSH
    14.Shri Mukhtar Abbas NaqviMinister of Minority Affairs
    15.Dr. Virendra KumarMinister of Social Justice and Empowerment
    16.Shri Giriraj SinghMinister of Rural Development; andMinister of Panchayati Raj
    17.Shri Jyotiraditya M. ScindiaMinister of Civil Aviation
    18.Shri Ramchandra Prasad SinghMinister of Steel
    19.Shri Ashwini VaishnawMinister of Railways;Minister of Communications; andMinister of Electronics and Information Technology

    CABINET MINISTERS (CONTD.)

    20.Shri Pashu Pati Kumar ParasMinister of Food Processing Industries
    21.Shri Gajendra Singh ShekhawatMinister of Jal Shakti
     22.Shri Kiren RijijuMinister of Law and Justice
    23.Shri Raj Kumar SinghMinister of Power; andMinister of New and Renewable Energy
    24.Shri Hardeep Singh PuriMinister of Petroleum and Natural Gas; andMinister of Housing and Urban Affairs
    25.Shri Mansukh MandaviyaMinister of Health and Family Welfare; andMinister of Chemicals and Fertilizers
    26.Shri Bhupender YadavMinister of Environment, Forest and Climate Change; andMinister of Labour and Employment
    27.Dr. Mahendra Nath PandeyMinister of Heavy Industries
    28.Shri Parshottam RupalaMinister of Fisheries, Animal Husbandry and Dairying
    29.Shri G. Kishan ReddyMinister of Culture;Minister of Tourism; andMinister of Development of North Eastern Region
    30.Shri Anurag Singh ThakurMinister of Information and Broadcasting; andMinister of Youth Affairs and Sports

    MINISTERS OF STATE (INDEPENDENT CHARGE)

    1.Rao Inderjit SinghMinister of State (Independent Charge) of the Ministry of Statistics and Programme Implementation;Minister of State (Independent Charge) of the Ministry of Planning; andMinister of State in the Ministry of Corporate Affairs
    2.Dr. Jitendra SinghMinister of State (Independent Charge) of the Ministry of Science and Technology;Minister of State (Independent Charge) of the Ministry of Earth Sciences;Minister of State in the Prime Minister’s Office;Minister of State in the Ministry of Personnel, Public Grievances and Pensions;Minister of State in the Department of Atomic Energy; andMinister of State in the Department of Space

    MINISTERS OF STATE

    1.Shri Shripad Yesso NaikMinister of State in the Ministry of Ports, Shipping and Waterways; andMinister of State in the Ministry of Tourism
    2.Shri Faggansingh KulasteMinister of State in the Ministry of Steel; andMinister of State in the Ministry of Rural Development

    MINISTERS OF STATE (CONTD.)

    3.Shri Prahalad Singh PatelMinister of State in the Ministry of Jal Shakti; andMinister of State in the Ministry of Food Processing Industries
    4.Shri Ashwini Kumar ChoubeyMinister of State in the Ministry of Consumer Affairs, Food and Public Distribution; andMinister of State in the Ministry of Environment, Forest and Climate Change
    5.Shri Arjun Ram MeghwalMinister of State in the Ministry of Parliamentary Affairs; andMinister of State in the Ministry of Culture
    6.General (Retd.) V. K. SinghMinister of State in the Ministry of Road Transport and Highways; andMinister of State in the Ministry of Civil Aviation
    7.Shri Krishan PalMinister of State in the Ministry of Power; andMinister of State in the Ministry of Heavy Industries
    8.Shri Danve Raosaheb DadaraoMinister of State in the Ministry of Railways;Minister of State in the Ministry of Coal; andMinister of State in the Ministry of Mines
    9.Shri Ramdas AthawaleMinister of State in the Ministry of Social Justice and Empowerment
    10.Sadhvi Niranjan JyotiMinister of State in the Ministry of Consumer Affairs, Food and Public Distribution; andMinister of State in the Ministry of Rural Development
    11.Dr. Sanjeev Kumar BalyanMinister of State in the Ministry of Fisheries, Animal Husbandry and Dairying

    MINISTERS OF STATE (CONTD.)

    12.Shri Nityanand RaiMinister of State in the Ministry of Home Affairs
    13.Shri Pankaj ChaowdharyMinister of State in the Ministry of Finance
    14.Smt. Anupriya Singh PatelMinister of State in the Ministry of Commerce and Industry
    15.Prof. S. P. Singh BaghelMinister of State in the Ministry of Law and Justice
    16.Shri Rajeev ChandrasekharMinister of State in the Ministry of Skill Development and Entrepreneurship; andMinister of State in the Ministry of Electronics and Information Technology
    17.Sushri Shobha KarandlajeMinister of State in the Ministry of Agriculture and Farmers Welfare
    18.Shri Bhanu Pratap Singh VermaMinister of State in the Ministry of Micro, Small and Medium Enterprises
    19.Smt. Darshana Vikram JardoshMinister of State in the Ministry of Textiles; andMinister of State in the Ministry of Railways
    20.Shri V. MuraleedharanMinister of State in the Ministry of External Affairs; andMinister of State in the Ministry of Parliamentary Affairs
    21.Smt. Meenakashi LekhiMinister of State in the Ministry of External Affairs; andMinister of State in the Ministry of Culture
    22.Shri Som ParkashMinister of State in the Ministry of Commerce and Industry

    MINISTERS OF STATE (CONTD.)

    23.Smt. Renuka Singh SarutaMinister of State in the Ministry of Tribal Affairs
    24.Shri Rameswar TeliMinister of State in the Ministry of Petroleum and Natural Gas; andMinister of State in the Ministry of Labour and Employment
    25.Shri Kailash ChoudharyMinister of State in the Ministry of Agriculture and Farmers Welfare
    26.Smt. Annpurna DeviMinister of State in the Ministry of Education
    27.Shri A. NarayanaswamyMinister of State in the Ministry of Social Justice and Empowerment
    28.Shri Kaushal KishoreMinister of State in the Ministry of Housing and Urban Affairs
    29.Shri Ajay BhattMinister of State in the Ministry of Defence; andMinister of State in the Ministry of Tourism
    30.Shri B. L. VermaMinister of State in the Ministry of Development of North Eastern Region; andMinister of State in the Ministry of Cooperation
    31.Shri Ajay KumarMinister of State in the Ministry of Home Affairs
    32.Shri Devusinh ChauhanMinister of State in the Ministry of Communications

    MINISTERS OF STATE (CONTD.)

    33.Shri Bhagwanth KhubaMinister of State in the Ministry of New and Renewable Energy; andMinister of State in the Ministry of Chemicals and Fertilizers
    34.Shri Kapil Moreshwar PatilMinister of State in the Ministry of Panchayati Raj
    35.Sushri Pratima BhoumikMinister of State in the Ministry of Social Justice and Empowerment
    36.Dr. Subhas SarkarMinister of State in the Ministry of Education
    37.Dr. Bhagwat Kishanrao KaradMinister of State in the Ministry of Finance
    38.Dr. Rajkumar Ranjan SinghMinister of State in the Ministry of External Affairs; andMinister of State in the Ministry of Education
    39.Dr. Bharati Pravin PawarMinister of State in the Ministry of Health and Family Welfare
    40.Shri Bishweswar TuduMinister of State in the Ministry of Tribal Affairs; andMinister of State in the Ministry of Jal Shakti
    41.Shri Shantanu ThakurMinister of State in the Ministry of Ports, Shipping and Waterways
    42.Dr. Munjapara MahendrabhaiMinister of State in the Ministry of Women and Child Development; andMinister of State in the Ministry of AYUSH
    43.Shri John BarlaMinister of State in the Ministry of Minority Affairs

    MINISTERS OF STATE (CONTD.)

    44.Dr. L. MuruganMinister of State in the Ministry of Fisheries, Animal Husbandry and Dairying; andMinister of State in the Ministry of Information and Broadcasting
    45.Shri Nisith PramanikMinister of State in the Ministry of Home Affairs; andMinister of State in the Ministry of Youth Affairs and Sports

    *****

    ಕೋವಿಡ್‌ ಸಂತ್ರಸ್ತ ಸಾವಿರ ಪದವಿ ವಿದ್ಯಾರ್ಥಿಗಳಿಗೆ ಜೈನ್‌ ಸಂಸ್ಥೆಯಿಂದ ಉಚಿತ ಆನ್‌ಲೈನ್‌ ಶಿಕ್ಷಣ

    ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಒಂದು ಸಾವಿರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್‌ ಶಿಕ್ಷಣ ನೀಡಲು ಮುಂದೆ ಬಂದಿರುವ ಜೈನ್‌ ವಿಶ್ವವಿದ್ಯಾಲಯವು, ಈ ಕುರಿತ ಒಪ್ಪಿಗೆ ಪತ್ರವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ನೀಡಿತು.

    ಜೈನ್ ಸಂಸ್ಥೆಯ 30ನೇ ವಾರ್ಷಿಕೋತ್ಸವದ ನಿಮಿತ್ತ ಶೇಷಾದ್ರಿಪುರದ ಕಾಲೇಜು ಕ್ಯಾಂಪಸ್ ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಚೆನ್‌ರಾಜ್‌ ರಾಯ್‌ಚಂದ್‌ ಅವರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ, ಅದನ್ನು ಡಿಸಿಎಂಗೆ ಹಸ್ತಾಂತರ ಮಾಡಿದರು.

    ಈ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಅತ್ಯುತ್ತಮ ಶಿಕ್ಷಣ ನೀಡಲಾಗುವುದು. ಜತೆಗೆ, ಅವರಿಗೆ ಅಗತ್ಯವಾದ ಎಲ್ಲ ಶೈಕ್ಷಣಿಕ ಅಗತ್ಯಗಳನ್ನೂ, ಪರಿಕರಗಳನ್ನೂ ಒದಗಿಸಲಾಗುವುದು ಎಂದು ಜೈನ್‌ ಸಂಸ್ಥೆ ತಿಳಿಸಿದೆ. ಇಂಥ ವಿದ್ಯಾರ್ಥಿಗಳಿಗೆ 100% ಸ್ಕಾಲರ್‌ಶಿಪ್‌ ಅನ್ನೂ ಸಂಸ್ಥೆ ಘೋಷಣೆ ಮಾಡಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಸಂಕಷ್ಟಕ್ಕೆ ಸಿಲುಕಿರುವ ಪ್ರತಿ ವಿದ್ಯಾರ್ಥಿಯನ್ನೂ ವಿಶೇಷವಾಗಿ ಗಮನಿಸಲಾಗುವುದು. ಅವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಜೈನ್‌ ಸಂಸ್ಥೆ ನೀಡಿದ ಭರವಸೆಗೆ ಡಿಸಿಎಂ ಸಂತಸ ವ್ಯಕ್ತಪಡಿಸಿದರು.

    ಪಾರಂಪರಿಕ ಕಾಲೇಜು ಕಟ್ಟಡಗಳ ಅಭಿವೃದ್ಧಿ:

    ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಸರಕಾರಿ ಶಾಲೆಯ ಪಾರಂಪರಿಕ ಕಲ್ಲು ಕಟ್ಟಡ ಹಾಗೂ ರೆಸ್‌ಕೋರ್ಸ್‌ ರಸ್ತೆಯಲ್ಲಿ ಪಾರಂಪರಿಕ ಆರ್.ಸಿ.ಕಾಲೇಜಿನ ಕಲ್ಲು ಕಟ್ಟಡಗಳನ್ನು ಸಂರಕ್ಷಿಸಿ ನವೀಕರಣ ಮಾಡುವುದಕ್ಕೂ ಜೈನ್‌ ಶಿಕ್ಷಣ ಸಂಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

    ಈ ಬಗ್ಗೆ ಉಪ ಮುಖ್ಯಮಂತ್ರಿಗಳು ಇಟ್ಟ ಪ್ರಸ್ತಾವನೆಗೆ ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಸಿದ ಡಾ.ಚೆನ್‌ರಾಜ್‌ ರಾಯ್‌ಚಂದ್‌, ಆದಷ್ಟು ಬೇಗ ನಮ್ಮ ಪರಿಶೀಲನಾ ತಂಡವನ್ನು ಎರಡೂ ಕಟ್ಟಡಗಳನ್ನು ವೀಕ್ಷಿಸಲು ಕಳಿಸಲಾಗುವುದು ಎಂದು ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಕುಲಪತಿ, ಪ್ರಾಧ್ಯಾಪಕರು, ಸಿಬ್ಬಂದಿ ಇನ್ನಿತರರು ಹಾಜರಿದ್ದರು. ಇದೇ ವೇಳೆ 30ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬೃಹತ್‌ ಕೇಕ್‌ ಅನ್ನು ಕೂಡ ಕತ್ತರಿಸಿ ಸಂಭ್ರಮಿಸಲಾಯಿತು.

    error: Content is protected !!