22.4 C
Karnataka
Tuesday, July 7, 2026
    Home Blog Page 47

    SBI ನಲ್ಲಿ ಕರೆಯಲಾಗಿದೆ PO ಹುದ್ದೆಗೆ ಅರ್ಜಿ; ಡಿಗ್ರಿ ಆದವರು ಅಪ್ಲೆ ಮಾಡಬಹುದು

    ಬ್ಯಾಂಕ್ ನಲ್ಲಿ ಅಧಿಕಾರಿ ಯಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಸಿಹಿ ಸುದ್ದಿ, ದೇಶದ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-state bank of India – ಪ್ರೊಬೆಷನರಿ ಆಫೀಸರ್ಗಳ (ಪಿಒ)-Probationary officer -ನೇಮಕಕ್ಕೆ online ನಲ್ಲಿ ಮಾತ್ರ ಅರ್ಜಿ ಆಹ್ವಾನಿಸಿದೆ. ಒಟ್ಟು 2056ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದ್ದು, ಪರಿಶಿಷ್ಟ ಜಾತಿಯವರಿಗೆ 324, ಪರಿಶಿಷ್ಟ ಪಂಗಡದವರಿಗೆ 162, ಹಿಂದುಳಿದ ವರ್ಗದವರಿಗೆ ,560 ಸಾಮಾನ್ಯ ವರ್ಗದವರಿಗೆ ೮೧೦ ,ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ200 ಹುದ್ದೆಗಳು ಮೀಸಲಾಗಿವೆ.

    ಶೈಕ್ಷಣಿಕ ಅರ್ಹತೆ:
    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ.

    ಪದವಿ ಅಂತಿಮ ವರ್ಷ/ಸೆಮಿಸ್ಟರ್ ನಲ್ಲಿರುವವರು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು, ಒಂದು ವೇಳೆ ಸಂದರ್ಶನಕ್ಕೆ ಕರೆ ಬಂದರೆ, ಅವರು 31 ನೇ ಡಿಸೆಂಬರ್2021 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.

    ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (ಐಡಿಡಿ) ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಐಡಿಡಿ ಉತ್ತೀರ್ಣರಾದ ದಿನಾಂಕ 31 ಡಿಸೆಂಬರ್ 2021ಅಥವಾ ಅದಕ್ಕಿಂತ ಮುಂಚೆಯೇ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು.ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್.

    ಅರ್ಜಿ ಸಲ್ಲಿಕೆ ದಿನಾಂಕ: ಅಕ್ಟೋಬರ್ 5 ರಿಂದ ಅಕ್ಟೋಬರ್ 25ರವರೆಗೆ.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ – ನವೆಂಬರ್/ ಡಿಸೆಂಬರ್ 2021

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ – ಡಿಸೆಂಬರ್ 2021

    ಮೂರನೇ ಹಂತ: ಸಂದರ್ಶನ (ಅಥವಾ ಸಂದರ್ಶನ ಮತ್ತು ಗುಂಪು ಚರ್ಚೆ) ಫೆಬ್ರವರಿ 2022 ರ 2ನೇ ಅಥವಾ 3ನೇ ವಾರ.

    ವಯೋಮಿತಿ:

    01-04-2021 ರಂತೆ, 21 ವರ್ಷಕ್ಕಿಂತ ಕಡಿಮೆ ಇರಬಾರದು. 01-04-2021 ಕ್ಕೆ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 1-04-2000 ಕ್ಕಿಂತ ಮುಂಚಿತವಾಗಿ ಮತ್ತು 2-04-1991ರ ನಂತರ ಜನಿಸಿರಬಾರದು.ಗರಿಷ್ಠ ವಯಸ್ಸಿನ ಮಿತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ 5 ವರ್ಷ, ಇತರೆ ಹಿಂದುಳಿದ ವರ್ಗಗಳಿಗೆ 3 ವರ್ಷ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
    ಅರ್ಜಿ ಶುಲ್ಕ: 750ರೂಗಳು. (ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.)

    ನೇಮಕ ಹೇಗೆ?

    ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ. ಬೆಳಗಾವಿ, ಬೆಂಗಳೂರು, ಬೀದರ್,ದಾವಣಗೆರೆ, ದಾರವಾಡ ಕಲಬುರಗಿ, ಹಾಸನ,ಹುಬ್ಬಳ್ಳಿ, ಮಂಡ್ಯ,ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ ಪರೀಕ್ಷೆ ಪರೀಕ್ಷಾ ಕೇಂದ್ರಗಳಿರಲಿವೆ.

    ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ 20 ನಿಮಿಷಗಳಂತೆ ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ನೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ ) ಇದರಲ್ಲಿ ಇಂಗ್ಲೀಷ್ ಲಾಂಗ್ವೇಜಗೆ 30, ನ್ಯೂಮರಿಕಲ್ ಎಬಿಲಿಟಿಯ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿಲ್ಲ.ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.(ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆ ಗಿಂತ10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ)

    ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರಿನಲ್ಲಿ ಮಾತ್ರ ನಡೆಯಲಿದ್ದು, ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿದೆ. ನಿಗದಿತ ದಿನದಂದು ಆನ್ ಲೈನ್ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯು ಮೂರು ಗಂಟೆ ಗಳ ಕಾಲ ನಡೆಯಲಿದ್ದು, 155 ಪ್ರಶ್ನೆಗಳನ್ನು 200 ಅಂಕಗಳಿಗೆ ಕೇಳಲಾಗುತ್ತದೆ.

    I. Reasoning & Computer Aptitude 45 ಪ್ರಶ್ನೆ 60 ಅಂಕಗಳು 60 ನಿಮಿಷಗಳು,
    II Data Analysis & Interpretation 35 ಪ್ರಶ್ನೆ 60 ಅಂಕಗಳು 45 ನಿಮಿಷಗಳು,
    III III General/ Economy/ Banking Awareness 40ಪ್ರಶ್ನೆ 40 ಅಂಕಗಳು 35 ನಿಮಿಷಗಳು,
    IV English Language 35ಪ್ರಶ್ನೆ 40ಅಂಕಗಳು 40 ನಿಮಿಷಗಳು,

    ಹೀಗೆ ಒಟ್ಟಾರೆ 155 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು ಹಾಗೂ 180 ನಿಮಿಷದ ಸಮಯ ನಿಗದಿಪಡಿಸಲಾಗಿದೆ.ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.

    ( ಮೇನ್ಸ್) ಮುಗಿಯುತ್ತಿದ್ದಂತೆಯೇ ಡಿಸ್ಸ್ಕ್ರಿಟ್ಟಿವ್ ಟೆಸ್ಟ್ ಇಂಗ್ಲೀಷ್ ಭಾಷೆಗೆ (Letter Writing & Essay- with two questions) ಸಂಬಂಧಿಸಿದಂತೆ 50 ಅಂಕಗಳಿಗೆ ನಡೆಸಲಾಗುತ್ತದೆ. ಅವಧಿ 30ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು. ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ.

    ಕೋವಿಡ್ ನಿಯಮಗಳಂತೆ ಸಾಮಾಜಿಕ ಅಂತರ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹಂತ -3ನ್ನು ಬ್ಯಾಂಕ್ ನಂತರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ.

    ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಆಗಿನ ಸಂದರ್ಭಕ್ಕೆ ಕೋವಿಡ್ -19 ಸಾಂಕ್ರಾಮಿಕ ನಿಯಮದಂತೆ, ಕೇವಲ (i) ಸಂದರ್ಶನ ಮಾತ್ರ (50ಅಂಕಗಳು) ಅಥವಾ (ii) ಸಂದರ್ಶನ (30 ಅಂಕಗಳು) ಮತ್ತು ಗುಂಪು ಚರ್ಚೆ (20 ಅಂಕಗಳು) ಯಾವುದಾದರೊಂದು ಬ್ಯಾಂಕ್ ನಡೆಸಲಿವೆ. ಸಂದರ್ಶನದ ಸಂದರ್ಭದಲ್ಲಿ ’ಒಬಿಸಿ’ ವರ್ಗದ ಅಡಿಯಲ್ಲಿ ಹಂತ -3ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ’ಕೆನೆರಹಿತ ಪದರ’(.Non-Creamy layer) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. ಒಬಿಸಿ ಎಂದು ನೋಂದಾಯಿಸಿ ಕೊಂಡಿರುವ ಆದರೆ (’‘Non-Creamy layer’)’ಕೆನೆರಹಿತ ಪದರ’ ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

    EWS ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು 20-2021ರ ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. EWS ಎಂದು ನೋಂದಾಯಿಸಿಕೊಂಡ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅಂತವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

    ಆಯ್ಕೆ ಪಟ್ಟಿ:

    ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ- II ಮತ್ತು ಹಂತ- III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು.ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು (ಹಂತ- 2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ -3 ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ -1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ. ಹಂತ -2 ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು (250 ಅಂಕಗಳಲ್ಲಿ) ಅದರ 75ಅಂಕಗಳು ಮತ್ತು ಅಭ್ಯರ್ಥಿಗಳ ಹಂತ -3 ರಲ್ಲಿ ಪಡೆದ ಅಂಕಗಳನ್ನು (50 ಅಂಕಗಳಲ್ಲಿ) ಅದರ 25 ಅಂಕಗಳನ್ನು ಸೇರಿಸಿ(100 ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ.

    ಹಂತ- 2 ಮತ್ತು ಹಂತ- 3 ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಪ್ರತಿ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲಾಗುವುದು.
    (ಮುಖ್ಯ ಪರೀಕ್ಷೆ ಮತ್ತು ಗುಂಪು ಚರ್ಚೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲಷ್ಟೇ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.)

    ಅರ್ಜಿ ಸಲ್ಲಿಸಲು ವೆಬ್


    ನೋಂದಣಿ ಮಾಡಬೇಕಾದ ಲಿಂಕ್: https://bank.sbi/careers

    https://www.sbi.co.in/careers

    DASARA :ಡಾ. ಲತಾ ಹರ್ಷಾ ಮತ್ತು ಸ್ವಾತಿ ಶ್ರೀಧರ್ ಅವರ ಮನೆಯ ಗೊಂಬೆ ಪ್ರದರ್ಶನದ ನೋಟ

    ಬೆಂಗಳೂರು ಅರಕೆರೆಯ ಡಾ. ಲತಾ ಹರ್ಷಾ ಅವರು ದಸರಾ ಗೊಂಬೆ ಗಳನ್ನು ಆಕರ್ಷಕವಾಗಿ ಜೋಡಿಸಿದ್ದಾರೆ. ಅದರ ಸ್ಲೈಡ್ ಶೋ ಇಲ್ಲಿದೆ.

    ಬನಶಂಕರಿ ಮೂರನೇ ಹಂತದ ಸ್ವಾತಿ ಶ್ರೀಧರ್ ಅವರ ದಸರಾ ಗೊಂಬೆಗಳನ್ನು ನೋಡುವುದೇ ಸೊಗಸು. ಅವರ ಮನೆಯಲ್ಲಿ ಜೋಡಿಸಿರುವ ದಸರಾ ಗೊಂಬೆಗಳ ಆಕರ್ಷಕ ನೋಟ ಇಲ್ಲಿದೆ.

    ಗೆಲವು ಸೋಲುಗಳು ಕತ್ತಲು ಬೆಳಕಿನಾಟವೇ ಸರಿ

    ಸುಮಾ ವೀಣಾ

    ನಡೆವರೆಡಹದೆ ಕುಳಿತವರೆಡಹುವರೆ -ಹರಿಶ್ಚಂದ್ರಕಾವ್ಯದ -harishchandra kaavya-ಕಥಾರಂಭದಲ್ಲಿಯೇ  ಈ ಸಾಲನ್ನು ಕವಿ ರಾಘವಾಂಕ-Raghavanka- ಉಲ್ಲೇಖಿಸುತ್ತಾನೆ.  ನಡೆಯುವ ಕಾಲುಗಳು ಎಡವುದು ಸಹಜ  ಎಡವಿದಾಗ ಸರಿ ಹೆಜ್ಜೆಗಳನ್ನು ಹಾಕುವ ಪ್ರಯತ್ನವನ್ನು ನಾವು ಮಾಡುತ್ತೇವೆ. ನಡವಳಿಕೆ ತಪ್ಪಿದಾಗ ತಿಳಿ ಹೇಳುವವರು ಇರುತ್ತಾರೆ  ಆಗ ನಡವಳಿಕೆಯನ್ನು ತಿದ್ದಿಕೊಳ್ಳಲು ಅನುವಾಗುತ್ತದೆ. ವಿದ್ಯೆಕಲಿಯುವಾಗಲೂ ಅಷ್ಟೇ  ತಪ್ಪುಗಳು ಆಗುತ್ತವೆ  ಆ ತಪ್ಪುಗಳನ್ನು ಶಿಕ್ಷಕರು ಸಮರ್ಥವಾಗಿ ತಿದ್ದಿದ್ದೆ ಆದರೆ ಆ ವಿದ್ಯಾರ್ಥಿಯ ಬದುಕು ಹಸನಾಗುತ್ತದೆ.

    ಅಕ್ಷರ ಕಲಿಯುವಿಕೆ  ವಿದ್ಯಾರ್ಥಿಯ ಶ್ರಮವನ್ನು, ಜೀವನ ಪಾಠ ತಾಳುವಿಕೆಯನ್ನು   ಬಯಸುತ್ತದೆ. ತಪ್ಪುಗಳಾದಾಗ   ಆಗುವ ಅನುಭವಗಳು ಪಕ್ವತೆಯನ್ನು ಕಲಿಸುತ್ತವೆ,  ಇಲ್ಲಿ ‘ನಡೆವರೆಡಹದೆ ಕುಳಿತವರೆಡಹುವರೆ’ ಎಂಬ ಮಾತು  ಸಾರ್ವಕಾಲಿಕವಾದದ್ದು. 

    ಕುಳಿತಲ್ಲೆ ಕುಳಿತರೆ ಯಾವ ಕೆಲಸವೂ  ಸಾಗುವುದಿಲ್ಲ.   ಅಂದು ಕೊಂಡ ಕೆಲಸವನ್ನು ಮಾಡಲು ಪ್ರಯತ್ನ ಪಡಬೇಕು ಪ್ರಯತ್ನದ ಹಾದಿಯಲ್ಲಿ ಎಡರು ತೊಡರುಗಳು ಖಂಡಿತವಾಗಿ ಆಗುತ್ತವೆ.  ಉದಾಹರಣೆಗೆ ನಾಟಕವೊಂದನ್ನು ರಂಗದ ಮೇಲೆ ಆಡಲು  ತಾಲೀಮು ಬೇಕೇ ಬೇಕು ಆ  ತಾಲೀಮು ನಟರನ್ನು ಅವರ ಸಂಭಾಷಣೆಯನ್ನು ಹೇಳುವ ಶೈಲಿಯನ್ನು ಪಕ್ವವಾಗಿಸುತ್ತದೆ ಕಡೆಗೊಮ್ಮೆ ಪ್ರೇಕ್ಷಕ ನೋಡಿದಾಗ ಅದಕ್ಕೆ ಮೆಚ್ಚುಗೆ ಲಭ್ಯವಾಗುತ್ತದೆ.

    ತಪ್ಪುಗಳಾದಾದ ಅದು ಅವಮಾನ ಎಂದು ತಿಳಿಯದೆ  ತಪ್ಪುಗಳಿಂದ  ಹೊರಗುಳಿಯುವ ಮನಸ್ಥಿತಿ  ಯಾವಾಗಲೂ ಆಶಾದಾಯಕವಾದದ್ದು. ಈ ಮಾತನ್ನು ಅನುಸಂಧಾನಿಸಬೆಕಾದರೆ ನಾವು ಆಗತಾನೆ ನಡೆಯಲು ಕಲಿಯುತ್ತಿರುವ ಪುಟ್ಟ ಮಕ್ಕಳ ಉದಾಹರಣೆಯನ್ನು ಇಲ್ಲಿ ತೆಗೆದುಕೊಳ್ಳಬಹುದು.  ಬಿದ್ದರೂ ಎದ್ದೆದ್ದು ನಡಿಗೆಯನ್ನು  ಕಲಿಯಲು ತೊಡಗುತ್ತವೆ ಇದುವೆ ಜೀವನೋತ್ಸಾಹ . ಗೆಲವು ಸೋಲುಗಳು ಕತ್ತಲು ಬೆಳಕಿನಾಟವೇ ಸರಿ . ಕತ್ತಲು ಸರಿದ ಮೇಲೆ ಬೆಳಕು ಆವರಿಸುವಂತೆ  ಗೆಲುವಿನ ಮೂಲ ತಪ್ಪುಗಳೆ ಆಗಿರುತ್ತವೆ ಹಲವು ಎಡರುತೊಡರುಗಳ ಪ್ರತಿಫಲವಾಗಿರುತ್ತದೆ. ಹಾಗಾಗಿ ಸೋಲಿಗೆ ತಲೆಕಡಿಸಿಕೊಳ್ಳದೆ ‘ಸೋಲೆ  ಗೆಲುವಿನ ಸೋಪಾನ’  ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

     

    INDIAN STOCK MARKET:ಹೂಡಿಕೆದಾರಲ್ಲಿನ ಗೊಂದಲಕ್ಕೆ ಇಲ್ಲಿದೆ ಸಾಂತ್ವನ

    ಸಾಮಾನ್ಯವಾಗಿ ಹೂಡಿಕೆದಾರರು ಒಂದು ಕಂಪನಿಯ ಷೇರಿನ ಬೆಲೆ ಗಗನಕ್ಕೆ ಚಿಮ್ಮಿದಾಗ, ಇನ್ನಷ್ಟು ಏರಿಕೆ ಕಾಣಬಹುದೆಂಬ ನಿರೀಕ್ಷೆಯಿಂದ, ಆಶಾಭಾವನೆಯಿಂದ ಪ್ರೇರಿತರಾಗಿ ಖರೀದಿಸಲು ಮುಂದಾಗುತ್ತಾರೆ. ಇಂತಹ ನಿರ್ಧಾರಗಳಲ್ಲಿ ಹೆಚ್ಚಿನವರು ನಿರಾಶೆಗೊಳಗಾಗುವ ಪರಿಸ್ಥಿತಿಯೇ ಅಧಿಕ. ಕಾರಣ ಒಂದು ಷೇರಿನ ಬೆಲೆ ಗರಿಷ್ಠಮಟ್ಟಕ್ಕೆ ಏರಿಕೆ ಕಂಡಾಗ ಅದನ್ನು ಲಾಭದ ನಗದೀಕರಣಕ್ಕೆ ಬಳಸಿಕೊಳ್ಳುವ ಮೂಲಕ ಬಂಡವಾಳವನ್ನು ಸುರಕ್ಷಿತಗೊಳಿಸಿಕೊಂಡು ಬೆಳೆಸುವ ಹವ್ಯಾಸ ಅಳವಡಿಸಿಕೊಳ್ಳಬೇಕು.

    ಈಚಿನ ದಿನಗಳಲ್ಲಿ ಪೇಟೆಗಳು ಗರಿಷ್ಠದಲ್ಲಿದ್ದು, ಷೇರಿನ ಬೆಲೆಗಳು ಗಗನಕ್ಕೆ ಏರಿಕೆಯಾದ ಕಾರಣ, ಈ ಅಲ್ಪ ಬಡ್ಡಿಯುಗದಲ್ಲಿ ಅನಿರೀಕ್ಷಿತ ಮಟ್ಟದ ಲಾಭ ಗಳಿಕೆಯು ಮಾರಾಟಕ್ಕೆ ಪ್ರೇರಣೆಯಾಗಿದೆ. ಈ ರಭಸದ ಏರಿಳಿತಗಳು ಯಾವ ಮಟ್ಟದಲ್ಲಿರುತ್ತದೆ ಎಂದರೆ ಕೇವಲ ಕೆಲವೇ ತಿಂಗಳುಗಳಲ್ಲಿ ಹಣ ದುಪ್ಪಟ್ಟು, ಮೂರು ಪಟ್ಟು ಹೆಚ್ಚಾದರೂ ಮಾರಾಟಕ್ಕೆ ಮನಸಾಗದು. ಇನ್ನೂ ಹೆಚ್ಚು ಏರಿಕೆಯಾಗಬಹುದು ಎಂಬ ಅಪೇಕ್ಷೆ- ನಿರೀಕ್ಷೆ, ನಂತರ ನಿರಾಶೆ.

    ಐ ಆರ್‌ ಸಿ ಟಿ ಸಿ ಲಿಮಿಟೆಡ್:‌IRCTC

    ಈ ಕಂಪನಿಯ ಷೇರಿನ ಬೆಲೆಯು ಕಳೆದ ಒಂದು ತಿಂಗಳಿನಲ್ಲಿ ರೂ.2,800 ರ ಸಮೀಪದಿಂದ ರೂ.4,900 ರ ವರೆಗೂ ಏರಿಕೆ ಕಂಡಿದೆ. ಆದರೆ ಈಗಲೂ ಅನೇಕ ಹೂಡಿಕೆದಾರರಿಗೆ ಮಾರಾಟ ಮಾಡುವ ಮನಸ್ಸಿಲ್ಲ. ಕಾರಣ ಈ ಷೇರು ಈ ಮಾಸಾಂತ್ಯದ 29 ರಂದು ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲು ನಿಗದಿತ ದಿನವನ್ನಾಗಿಸಿದೆ. ಏನಿದು ಮುಖಬೆಲೆ ಸೀಳಿಕೆ ಎಂದರೆ ಅದು ಹತ್ತು ರೂಪಾಯಿ ನೋಟನ್ನು ಚಿಲ್ಲರೆ ಮಾಡಿಸಿದ ಹಾಗೆ. ಅಂದರೆ ಹರಿದಾಡಬಹುದಾದ ಚಿಲ್ಲರೆ ಹೆಚ್ಚಾಗಿದ್ದರೂ, ಎಲ್ಲಾ ನಾಣ್ಯಗಳ ಮೊತ್ತವು ರೂ.10 ರ ನೋಟಿಗೆ ಸಮನಾಗಿರುತ್ತದೆ. ಅಂತರ್ಗತವಾಗಿ ಅಡಕವಾಗಿರುವ ಮೌಲ್ಯದಲ್ಲಿ ಬದಲಾವಣೆ ಇಲ್ಲದಿದ್ದರೂ, ಪೇಟೆಯಲ್ಲಿ ವಹಿವಾಟುದಾರರು ನೋಡುವ ದೃಷ್ಠಿಕೋನ ಬೇರೆಯಾಗಿದೆ.

    ಈ ರೀತಿಯ ಏರಿಕೆಗೆ ಮೂಲ ಕಾರಣ ಈ ಷೇರನ್ನು ಕಳೆದ ಮಾರ್ಚ್‌ ನಿಂದ ಮೂಲಾಧಾರಿತ ಪೇಟೆಯ ಪಟ್ಟಿಯಲ್ಲಿ( F & O) ಸೇರಿಸಿದ್ದಾಗಿದೆ. ಈ ವರ್ಷದ ಜನವರಿಯಲ್ಲಿ ರೂ.1,420 ರಲ್ಲಿದ್ದ ಷೇರು, ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ರೂ.1,290 ರಲ್ಲಿತ್ತು. ಜನವರಿಯಲ್ಲಿ ಈ ಕಂಪನಿಯನ್ನು ಇತರೆ ಕಂಪನಿಗಳಾದ ಆಲ್ಕೆಮ್‌ ಲ್ಯಾಬೋರೇಟೆರೀಸ್‌, ದೀಪಕ್‌ ಫರ್ಟಿಲೈಸರ್ಸ್‌, ನಿಪ್ಪಾನ್‌ ಲೈಫ್‌ ಇಂಡಿಯಾ ಅಸೆಟ್‌ ಮ್ಯಾನೇಜ್‌ ಮೆಂಟ್‌, ಎ ಯು ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಗಳೊಂದಿಗೆ ಮೂಲಾಧಾರಿತ ಪೇಟೆಗೆ ಸೇರ್ಪಡೆಯಾಗುವ ಪ್ರಕಟಣೆ ಹೊರಬಂದಾಗ ಷೇರಿನ ಬೆಲೆ ರೂ.1,450 ರಲ್ಲಿದ್ದು ಕೇವಲ 9 / 10 ತಿಂಗಳುಗಳಲ್ಲಿ ಸುಮಾರು ಮೂರು ಪಟ್ಟು ಏರಿಕೆ ಕಂಡಿದೆ.

    ವಿಸ್ಮಯಕಾರಿ ಸಂಗತಿ ಎಂದರೆ ಏಪ್ರಿಲ್‌, ಮೇ, ಜೂನ್‌ ತಿಂಗಳುಗಳಲ್ಲಿ ಶೇ.35 ರಿಂದ 37 ರ ಪ್ರಮಾಣದಷ್ಠು ಹೊರತುಪಡಿಸಿದರೆ, ಉಳಿದೆಲ್ಲಾ ತಿಂಗಳುಗಳಲ್ಲಿ ವಿಲೇವಾರಿಯಾದ ಷೇರುಗಳ ಪ್ರಮಾಣವು ಕೇವಲ ಶೇ.22 ರಿಂದ 27 ಮಾತ್ರ. ಅಂದರೆ ಈ ಷೇರಿನಲ್ಲಿ ನಡೆಯುತ್ತಿರುವ ಸ್ಪೆಕ್ಯುಲೇಟಿವ್‌ ವಹಿವಾಟಿನ ಬಗ್ಗೆ ಅರಿವಾಗುತ್ತದೆ.

    ಮುಖಬೆಲೆ ಸೀಳಿಕೆಯ ನಂತರದ ಪರಿಸ್ಥಿತಿ ಹೇಗಿರಬಹುದು?

    ಈಗಿನ ಬೆಲೆಯಲ್ಲಿ ಮುಖಬೆಲೆ ಸೀಳಿಕೆಯ ನಂತರ ರೂ.970 ರ ಸಮೀಪದ ಬೆಲೆಯಾಗುತ್ತದೆ. 2020 ರ ಜನವರಿಯಲ್ಲಿ ಈ ಷೇರಿನ ಬೆಲೆ ರೂ.888 ರ ಕನಿಷ್ಠ ಬೆಲೆಯಲ್ಲಿತ್ತು. ಅದೇ ಮಾರ್ಚ್‌ ತಿಂಗಳ ಕೊರೋನಾ ಮೊದಲ ಅಲೆಯ ಸಮಯದಲ್ಲಿ ರೂ.780 ರಲ್ಲಿತ್ತು. ಈಗ ಅದು ಸುಮಾರು 6 ಪಟ್ಟು ಹೆಚ್ಚಿದೆ. ಹೂಡಿಕೆಗೆ ಇದಕ್ಕಿಂತ ಎಂತಹ ಲಾಭದ ಇಳುವರಿ ಬೇಕಾಗಿದೆ. ಟೈಡ್‌ ವಾಟರ್‌ ಹೌಸ್‌ ಎಂಬ ಜುಲೈನಲ್ಲಿ 1:1 ರ ಬೋನಸ್‌ ಮತ್ತು ರೂ.5 ರಿಂದ ರೂ.2 ಕ್ಕೆ ಸೀಳಿದ ಮೇಲೆ ರೂ.3,500 ರ ಸಮೀಪದಿಂದ ಆರಂಭವಾಗಿ ರೂ.1,765 ರವರೆಗೂ ತಲುಪಿ ಈಗ ರೂ.1,840 ರ ಸಮೀಪ ವಹಿವಾಟಾಗುತ್ತಿದೆ. ಅಂದರೆ ಮುಖಬೆಲೆ ಸೀಳಿಕೆ ನಂತರ ತಿರಸ್ಕರಿಸಲ್ಪಟ್ಟ ಪರಿಸ್ಥಿತಿಗೆ ತಲುಪಿದೆ. ಇದೇ ಪ್ರವೃತ್ತಿ ಎಲ್ಲಾ ಸಮಯದಲ್ಲೂ ಸಾಧ್ಯವೆಂದಲ್ಲವಾದರೂ, ಸ್ವಯಂ ರಕ್ಷಣೆ ಉತ್ತಮವಲ್ಲವೇ? ಕಂಪನಿಯ ಆಂತರಿಕ ಸಾಧನೆಯು ಉತ್ತಮವಾದಲ್ಲಿ ಆ ಷೇರಿನ ಬೆಲೆ ಪುಟಿದೇಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಒಂದು ಕಂಪನಿಗೆ ಅನ್ವಯಿಸುವ ಶೈಲಿಯೇ ಮತ್ತೊಂದು ಕಂಪನಿಗೆ ಅನ್ವಯಿಸುವುದು ಎಂದೇನಿಲ್ಲ. ಹಾಗಾಗಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲೇಬೇಕು ಆಗಲೇ ಹೂಡಿಕೆಯು ಯಶಸ್ಸು ಕಾಣಲು ಸಾಧ್ಯ.

    ಷೇರುಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಕೇವಲ ಪೇಟೆಯಲ್ಲಿ ಹೆಚ್ಚು ವಹಿವಾಟಿನಿಂದ ಏರಿಳಿತ ಪ್ರದರ್ಶಿಸುತ್ತಿರುವ ಕಂಪನಿಗಳನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಕಂಪನಿಗಳ ಆಂತರಿಕ ಅಂಶಗಳನ್ನು, ಷೇರಿನ ಮುಖಬೆಲೆ, ಕಂಪನಿಯ ಬಂಡವಾಳ, ಡಿವಿಡೆಂಡ್‌ ಪ್ರಮಾಣ ಮತ್ತು ಷೇರಿನ ದರಗಳನ್ನು ಪರಿಶೀಲಿಸಿ ನಿರ್ಧರಿಸುವುದು ಸೂಕ್ತ.

    ಕಲ್ಯಾಣ್‌ ಜುವೆಲ್ಲರ್ಸ್‌ ಇಂಡಿಯಾ ಲಿಮಿಟೆಡ್: KALYAN JEWELLERS

    ಕಲ್ಯಾಣ್‌ ಜುವೆಲ್ಲರ್ಸ್‌ ಷೇರಿನಲ್ಲಿ ಹೂಡಿಕೆ ಮಾಡಬಹುದೇ ಎಂಬುದು ಓದುಗರ ಪ್ರಶ್ನೆಯಾಗಿದೆ. ಕಳೆದ ಮಾರ್ಚ್‌ ನಲ್ಲಿ ಪ್ರತಿ ಷೇರಿಗೆ ರೂ.87 ರಂತೆ ಐಪಿಒ ಮೂಲಕ ವಿತರಿಸಿದ ಈ ಕಂಪನಿ ಲಿಸ್ಟಿಂಗ್‌ ಆದ ನಂತರ ರೂ.56 ರ ಸಮೀಪಕ್ಕೆ ಕುಸಿದು ನಂತರ ಚೇತರಿಕೆಯಿಂದ ರೂ.89 ನ್ನು ತಲುಪಿ ಮತ್ತೆ ಇಳಿಕೆಗೊಳಪಟ್ಟು, ಕಳೆದ ಒಂದು ತಿಂಗಳಿನಿಂದ ರೂ.66 ರಿಂದ ರೂ.81 ನ್ನು ತಲುಪಿ ಸಧ್ಯ ರೂ.78 ರ ಸಮೀಪವಿದೆ. ಈ ಕಂಪನಿಯ ಷೇರಿನ ಮುಖಬೆಲೆ ರೂ.10 ಇದ್ದು, ಶೇ.60.54 ರಷ್ಠು ಪ್ರವರ್ತಕರು ಹೊಂದಿದ್ದಾರೆ. ಕಳೆದ ಜೂನ್‌ ತ್ರೈಮಾಸಿಕದಲ್ಲಿ ರೂ.42 ಕೋಟಿಯ ಹಾನಿ ಅನುಭವಿಸಿದರೂ, ಕಂಪನಿಯ ಸೇಲ್ಸ್‌ ಗಾತ್ರವು ರೂ.1,274 ಕೋಟಿಯಾಗಿದೆ. ಇದು ರೂ.1 ರ ಮುಖಬೆಲೆಯ ರಾಜೇಶ್‌ ಎಕ್ಸ್‌ ಪೋರ್ಟ್ಸ್‌ ನ ರೂ.1,472 ಕೋಟಿಗೆ ಸಮನಾಗಿದೆ.

    ಈಗ ಸೆನ್ಸೆಕ್ಸ್‌ ನ ಅಂಗವಾಗಿರುವ ಟೈಟಾನ್‌ ಕಂಪನಿಯ ಷೇರಿನ ಬೆಲೆ ರೂ. 1 ರ ಮುಖಬೆಲೆ ಷೇರು ರೂ.2,400 ನ್ನು ತಲುಪಿರುವುದು, ವಲಯದ ಕಂಪನಿಗಳ ಮೇಲೆ ಹೂಡಿಕೆ / ವಹಿವಾಟುದಾರರ ಆಸಕ್ತಿ ಕೆರಳಿಸಿದೆ. ಸೆಪ್ಟೆಂಬರ್‌ ತಿಂಗಳ ತ್ರೈಮಾಸಿಕದಲ್ಲಿ ಕಂಪನಿಯು ಶೇ.60 ರಷ್ಟು ರೆವೆನ್ಯು ಗಳಿಕೆ ಹೆಚ್ಚಾಗಿದೆ ಎಂದು ಕಂಪನಿಯು ಪ್ರಕಟಿಸಿದೆ. ಅಂದ ಮೇಲೆ ರೂ.10 ರ ಮುಖಬೆಲೆಯ ಷೇರು ರೂ.80 ರ ಸಮೀಪ ಉತ್ತಮ ಹೂಡಿಕೆಯಾಗಬಲ್ಲುದಲ್ಲವೇ? ಒಂದು ಬ್ರಾಂಡೆಡ್‌ ಕಂಪನಿ ರೂ.10 ರ ಮುಖಬೆಲೆ ಷೇರು ರೂ.80 ರ ಸಮೀಪವಿದ್ದರೆ, ಮತ್ತೊಂದು ರೂ.1 ರ ಮುಖಬೆಲೆ ಷೇರು ರೂ.2,400 ರಲ್ಲಿ, ಇನ್ನೊಂದು ರೂ.617 ರ ಸಮೀಪವಿದೆ. ಇವುಗಳಲ್ಲಿ ಯಾವುದರಲ್ಲಿ ಹೆಚ್ಚಿನ ಲಾಭ ಗಳಿಕೆಗೆ ಅವಕಾಶ ದೊರೆಯಬಹುದು ಎಂಬುದನ್ನು ಪರಿಶೀಲಿಸಿ ನಿರ್ಧರಿಸಿರಿ.

    ಯುಕೋ ಬ್ಯಾಂಕ್‌ ಮತ್ತು ಯೆಸ್‌ ಬ್ಯಾಂಕ್: UCO BANK and YES BANK

    ಯೆಸ್‌ ಬ್ಯಾಂಕ್‌ ನ 75% ಷೇರುಗಳನ್ನು ಚಲಾವಣೆಯಿಂದ 3 ವರ್ಷದ ಕಾಲ ಸ್ಥಗಿತಗೊಳಿಸಲಾಗಿದ್ದು ಈಗಾಗಲೇ ಸುಮಾರು ಅರ್ಧ ಸಮಯ ಮುಗಿದಿದೆ. ಮುಂದೆ ಈ ಷೇರುಗಳು ಪೇಟೆಗೆ ಪ್ರವೇಶಿಸಿದಾಗ ಅಂದಿನ ಪರಿಸ್ಥಿತಿಯಾಧರಿಸಿ ಬದಲಾವಣೆ ಕಾಣಬಹುದು. ಹಾಗಾಗಿ ಹೂಡಿಕೆಗೆ ಮುನ್ನ ಈ ಅಂಶವನ್ನು ಗಮನಿಸಲೇಬೇಕು. ಯೆಸ್‌ ಬ್ಯಾಂಕ್‌ ಷೇರಿನ ಮುಖಬೆಲೆ ರೂ.2.

    ಯೂಕೋ ಬ್ಯಾಂಕ್‌ ಇತ್ತೀಚೆಗೆ ಆರ್‌ ಬಿ ಐ ನ ಪಿಸಿಎ (Prompt Corrective Action) ವ್ಯಾಪ್ತಿಯಿಂದ ಹೊರಬಂದಿದ್ದು, ಕಳೆದ ಎರಡು ತ್ರೈಮಾಸಿಕದಲ್ಲೂ ಉತ್ತಮ ಸಾಧನೆಯನ್ನು ಪ್ರದರ್ಶಿಸಿದೆ. ಕಳೆದ ವರ್ಷದ ಸಾಧನೆಯೂ ಸಕಾರಾತ್ಮಕವಾಗಿದ್ದು ಬ್ಯಾಂಕ್‌ ಅಭಿವೃದ್ಧಿಯ ಪಥದಲ್ಲಿರುವಂತೆ ತೋರುತ್ತದೆ. ರೂ.10 ರ ಮುಖಬೆಲೆ ಷೇರು ರೂ.14 ರ ಸಮೀಪವಿರುವುದು ಹೂಡಿಕೆಗೆ ಉತ್ತಮವೆನ್ನಬಹುದಲ್ಲವೇ?

    ಬ್ಯಾಂಕಿಂಗ್‌ ವಲಯದ ಕೋಷ್ಠಕವನ್ನು ಪರಿಶೀಲಿಸಿರಿ:

    BankS B IHDFC BANKUCO BANK P N B YES BANK
    Sales65,564.4330,482.973,569.5718,920.924,525.42
    PAT6,504.007,729.64101.791,023.46206.84
    Equity892.46552.6711,956.962,202.205,010.98
    FACEVLAUE111022
    MARKET PRICE4581,60214.7040.3013.20
    DIVIDEND4.006.50—-—–—–

    ಇಲ್ಲಿ ಹೆಸರಿಸಿರುವ ಕಂಪನಿಗಳು ಮತ್ತು ಅವುಗಳ ವಿಚಾರಗಳು ಹೂಡಿಕೆದಾರರ ಮಾಹಿತಿಗಾಗಿಯಷ್ಠೆ. ಹೂಡಿಕೆಗೆ ಮುನ್ನ ಅಂದಿನ ಪರಿಸ್ಥಿತಿಯನ್ನರಿತು ನಿರ್ಧರಿಸಿರಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    DASARA: ಡಾ. ಮೇಘನಾ ಅವರ ಮನೆಯ ಸುಂದರ ಗೊಂಬೆ ನೋಟ

    ಬೆಂಗಳೂರಿನ ಬಸವನಗುಡಿಯಲ್ಲಿನ [ಡಾ. ಮೇಘನಾ ಅವರ ಮನೆಯಲ್ಲಿನ ಗೊಂಬೆಗಳನ್ನು ನೋಡುವುದೆ ಒಂದು ಸೊಗಸು. ಪರಂಪರೆಯಿಂದ ಬಂದ ಪದ್ಧತಿಯನ್ನು ಡಾ. ಮೇಘನಾ ಮುಂದುವರಿಸಿಕೊಂಡು ಬಂದಿದ್ದಾರೆ.

    ಎಲ್ಲವನ್ನೂ ಕಲಾತ್ಮಕವಾಗಿ ಜೋಡಿಸಿರುವುದು ಇವರು ಗೊಂಬೆ ಸಂಗ್ರಹದ ವೈಶಿಷ್ಟ್ಯ. ಪ್ರತಿಯೊಂದು ಗೊಂಬೆಯನ್ನು ಅತ್ಯಂತ ಜತನದಿಂದ ಸುಂದರವಾಗಿ ಜೋಡಿಸಿದ್ದಾರೆ.

    ಅವರ ಮನೆಯ ಗೊಂಬೆ ಸಂಗ್ರಹದ ಸ್ಲೈಡ್ ಶೋ ಇಲ್ಲಿದೆ.

    Dasara Music Fest: ಕೋಲು ಕೃಷ್ಣ ಸಾಗರಶಯನ ಕೋಲಣ್ಣ ಕೋಲೆ

    ಕನ್ನಡಪ್ರೆಸ್.ಕಾಮ್ ನ ನವರಾತ್ರಿ ಸಂಗೀತೋತ್ಸವದ ನಾಲ್ಕನೇ ದಿನವಾದ ಇಂದಿನ ಸಂಗೀತ ಕಚೇರಿಯನ್ನು ಅಮೆರಿಕ ಕನ್ನಡತಿ ಶೀಲಾ ಶ್ರೀಕಾಂತ್ ನಡೆಸಿಕೊಟ್ಟಿದ್ದಾರೆ.

    ಶ್ರೀಮತಿ ಕಮಲಾ ಭಾರ್ಗವ ಅವರಲ್ಲಿ 11 ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡಿರುವ ಶೀಲಾ ಕರ್ನಾಟಕ ಸಂಗೀತವನ್ನು ಸೊಗಸಾಗಿ ಹಾಡಬಲ್ಲರು. ಭಕ್ತಿ ಗೀತೆಗಳನ್ನು ಭಾವ ತುಂಬಿ ಹಾಡುವುದು ಇವರ ವೈಶಿಷ್ಟ್ಯ.

    ಅಕೋ ಹಂಗಿಹಾನಾ , ಇಕೋ ಹಿಂಗಿಹಾನಾ ಎಂದು ಶ್ರೀ ಹರಿಯನ್ನು ಆರಾಧಿಸುತ್ತಾ ತಮ್ಮ ಸಂಗೀತ ಕಾರ್ಯಕ್ರಮ ಆರಂಭಿಸುವ ಶೀಲಾ ಅವರು ಮುಂದೆ ಶ್ರೀರಮಣಿ ಕರಕಮಲಾ ಪೂಜಿತಾ ಎಂದು ನರಸಿಂಹನನ್ನು ಕೊಂಡಾಡುತ್ತಾರೆ. ಇದಾದ ನಂತರ ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲೆ ಎಂದು ಶ್ರೀಕೃಷ್ಣನನ್ನು ಪ್ರಾರ್ಥಿಸಿ ಶ್ರೀರಾಮ ನಿನ್ನ ಪಾದವ ತೋರೆೋ ಎಂದು ಹಾಡುತ್ತಾ ಕಾರ್ಯಕ್ರಮವನ್ನು ಮುಗಿಸಿದ್ದಾರೆ.

    ಈ ಸಂಚಿಕೆಯಲ್ಲಿ ದಸರಾ ಆನೆಗಳ ಬಗ್ಗೆ ವಿಶೇಷವಾದ ಮಾಹಿತಿಯನ್ನು ಭಾರತಿ ಶ್ರೀನಿವಾಸ್ ಅವರು ನೀಡಿದ್ದಾರೆ.

    ಆಲಿಸಿ, ವೀಕ್ಷಿಸಿ ಜೊತಗೆ ನಮ್ಮ ಯೂ ಟ್ಯೂಬ್ ಚಾನಲ್ subscribe ಆಗುವುದನ್ನು ಮರೆಯಬೇಡಿ.

    DASARA: ನವಾವರಣ ಕೀರ್ತನೆಗಳ ಗಾಯನ

    ಕನ್ನಡಪ್ರೆಸ್ .ಕಾಮ್ ನ ದಸರಾ ಸಂಗೀತೋತ್ಸವದ ಶನಿವಾರದ ಮುಂಜಾನೆಯ ಕಾರ್ಯಕ್ರಮದಲ್ಲಿ ದೇವಿ ಸ್ತುತಿಯನ್ನು ಪ್ರಸ್ತುತ ಪಡೆಸಿದ್ದ ಬೆಂಗಳೂರು ಶ್ರೀನಗರದ ಶ್ರೀ ವೆಂಕಟರಮಣ ಮಹಿಳಾ ಸಂಘದ ಸದಸ್ಯೆಯರು ಇಂದು ನವಾವರಣ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದ್ದಾರೆ.

    ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಈ ಸಂಘ ವಿಜಯಲಕ್ಷ್ಮಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ವಿಜಯಲಕ್ಷ್ಮಿ ಅವರ ಜೊತೆ ಗೀತಾ ಗಣೇಶ್,ಲಕ್ಷ್ಮಿ,ಎಂ. ಎ ಪುಷ್ಪಾ,ಸೀತಾಲಕ್ಷ್ಮಿ ಮತ್ತು ಸಂಘಧ ಕಾರ್ಯದರ್ಶಿ ನಾಗರತ್ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ವೀಕ್ಷಿಸಿ , ಆಲಿಸಿ ಪ್ರತಿಕ್ರಿಯಿಸಿ. ಹಾಗೇಯೆ ನಮ್ಮ ಯೂ ಟ್ಯೂಬ್ ಚಾನಲ್ ಗೂ subscribe ಆಗಿ.

    Mysuru Dasara Live: ಹಂಸಲೇಖ ತಂಡದಿಂದ ದೇಸಿ ಸಂಸ್ಕೃತಿ ಹಬ್ಬ

    ಮೈಸೂರು ದಸರಾ ಅಂಗವಾಗಿ ಖ್ಯಾತ ನಿರ್ದೇಶಕ ಹಂಸಲೇಖ ಮತ್ತು ತಂಡದಿಂದ ದೇಸಿ ಸಂಸ್ಕೃತಿ ಹಬ್ಬ ನಡೆಯುತ್ತಿದೆ. ಮೈಸೂರಿನಿಂದ ಅದರ ನೇರ ಪ್ರಸಾರ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

    ಬೆಂಗಳೂರು ಜಿಲ್ಲಾ bengaluru district incharge-ಉಸ್ತುವಾರಿ ನೇಮಕ ವಿಚಾರ ಎಲ್ಲರ ಜತೆ ಚರ್ಚೆ ಮಾಡಿ ಸೌಹಾರ್ದಯುತ ಪರಿಹಾರ

    BENGALURU OCT 9

    ಬೆಂಗಳೂರು ಜಿಲ್ಲೆ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಎಲ್ಲರ ಜತೆ ಸಮಾಲೋಚನೆ ನಡೆಸಿ ಸೌಹಾರ್ದಯುತವಾದ ನಿರ್ಧಾರವನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ -basavaraja bommai-ತಿಳಿಸಿದರು.

    ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.

    ಬೆಂಗಳೂರು ಜಿಲ್ಲೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುವ ವಿಷಯವನ್ನು ಎಲ್ಲರೊಂದಿಗೆ ಚರ್ಚಿಸಲಾಗುವುದು.‌ಎಲ್ಲರೂ ನಮ್ಮವರೇ. ಹೀಗಾಗಿ ಎಲ್ಲರ ಜತೆ ಸಮಾಲೋಚನೆ ನಡೆಸಿ ಸೌಹಾರ್ದಯುತವಾಗಿ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರು ಮಹತ್ವದ ಜಿಲ್ಲೆಯಾಗಿದ್ದು , ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ನಿರ್ಧಾರವನ್ನು ಶೀಘ್ರದಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಡಿಕೆ ಶಿವಕುಮಾರ್-DK SHIVAKUMAR -ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ-H D KUMARASWAMY

    BENGALURU OCT 9


    ತಾವು ನಿಧನರಾಗುವುದಕ್ಕೆ ಹದಿನೈದು ದಿನ ಮೊದಲು ಎಂ ಸಿ ಮನಗೂಳಿ- M C MANAGOLI- ಅವರು ತಮ್ಮ ಮನೆಗೆ ಬಂದು ಮಕ್ಕಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಕೇಳಿದ್ದರು ಎಂಬುದಾಗಿ ಕೆಪಿಸಿಸಿ- KPCC PRESIDENT-ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಡಿಕೆ ಶಿವಕುಮಾರ್ ಅಪ್ಪಟ ಸುಳ್ಳು ಹೇಳುತ್ತಿದ್ದಾರೆಂದು ಕಟುವಾಗಿ ಟೀಕಿಸಿದ್ದಾರೆ.

    ಅವರ ಟ್ವೀಟ್ʼನ ಪೂರ್ಣ ವಿವರ ಇಲ್ಲಿದೆ;

    ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ವ್ಯಕ್ತಿ ಇಲ್ಲವಾದ ಮೇಲೆ ಅವರ ವಿಚಾರದಲ್ಲಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ರಾಜಕೀಯವಾಗಿ, ವೈಯಕ್ತಿಕವಾಗಿ ʼಅನೈತಿಕʼ ಎಂಬುದು ನನ್ನ ಅಭಿಪ್ರಾಯ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ʼಅಪ್ಪಟ ಸುಳ್ಳುʼ ಹೇಳುವ ಮೂಲಕ ದಿವಂಗತ ನಾಯಕ ಎಂಸಿ ಮನಗೂಳಿ ಅವರಿಗೆ ಅಪಚಾರ ಮಾಡಿದ್ದಾರೆ.

    ತಾವು ನಿಧನರಾಗುವುದಕ್ಕೆ 15 ದಿನ ಮೊದಲು ಮನಗೂಳಿ ಅವರು ತಮ್ಮ ಪುತ್ರ ಅಶೋಕ್ ಅವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದರು. ನನಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ. ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ, ಅಶೋಕನನ್ನು ನಿಮ್ಮ ಹಾಗೂ ಸಿದ್ದರಾಮಯ್ಯ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ!

    ಸುಳ್ಳುಗಳನ್ನು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎನ್ನುವುದಕ್ಕೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಬೇರೆ ಇಲ್ಲ. ಸತ್ಯ ಏನೆಂದರೆ; ಕೋವಿಡ್ ಸೋಂಕಿತರಾಗಿದ್ದ ಮನಗೂಳಿ ಅವರನ್ನು ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ನಾವೇ ಸೇರಿಸಿದ್ದೆವು. ೧೯ ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದರು.

    ಜನವರಿ 9ರಂದು ಮನಗೂಳಿ ಅವರು ಅಪೊಲೋ ಆಸ್ಪತ್ರೆಗೆ ದಾಖಲಾಗಿ, ಜನವರಿ 28ರಂದು ಅಲ್ಲಿಯೇ ನಿಧನರಾದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನಗೂಳಿ ಅವರನ್ನು ನಾನೂ ಸೇರಿ ಅವರ ಮಕ್ಕಳೂ ನೋಡಲಾಗಲಿಲ್ಲ. ಅದಕ್ಕೂ ಮೊದಲು ಅವರು ಒಂದೂವರೆ ತಿಂಗಳು ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

    ಹಾಗಾದರೆ, ಮನಗೂಳಿ ಅವರು ಡಿಕೆ ಶಿವಕುಮಾರ್ ಮನೆಗೆ ಹೋಗಿದ್ದು ಯಾವಾಗ? ಮಕ್ಕಳನ್ನು ಮಡಿಲಿಗೆ ಹಾಕಿಕೊಳ್ಳಿ ಎಂದಿದ್ದು ಎಂದು? ಅವರ ʼಹಸಿಸುಳ್ಳುಗಳು ಅಸಹ್ಯ ಹುಟ್ಟಿಸುವಂತಿವೆʼ. ನಮ್ಮ ಪಕ್ಷದ ಅಭ್ಯರ್ಥಿಯಾಗಬೇಕಿದ್ದ ಅಶೋಕ್ ಮನಗೂಳಿ ಅವರನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಲ್ಲದೆ, ಈಗ ಸುಳ್ಳುಗಳ ಸರಮಾಲೆ ಹಣೆಯುತ್ತಾ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ.

    ಸಿಂಧಗಿ ಜನತೆಗೆ ಯಾಮಾರಿಸುವ ಪ್ರಯತ್ನ ಬೇಡ. ಅಭ್ಯರ್ಥಿಗೆ ದಿಕ್ಕಿಲ್ಲದ ಕಾಂಗ್ರೆಸ್ ಪಕ್ಷದ ನಾಯಕರು ಈಗ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ನಮ್ಮ ಪಕ್ಷ ಹಾಗೂ ಮಾನ್ಯ ದೇವೇಗೌಡರ ಬಗ್ಗೆ ಅಚಲ ನಿಷ್ಠೆ ಹೊಂದಿದ್ದ ದಿವಂಗತ ಮನಗೂಳಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಬೇಡ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

    error: Content is protected !!