23.1 C
Karnataka
Sunday, May 24, 2026
    Home Blog Page 72

    ಜಮೀರ್ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ಎಂದ ಸಿದ್ಧರಾಮಯ್ಯ

    BENGALURU AUG 5

    ಮಾಜಿ ಸಚಿವ ಜಮೀರ್ ಅಹಮದ್ ಅವರ ಮನೆಯ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

    ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಐಟಿ, ಇಡಿ ಬಳಸಿಕೊಂಡು ಕಿರುಕುಳ ನೀಡುವ ಬಿಜೆಪಿಯ ವರ್ತನೆ ಖಂಡನೀಯ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

    ಇಂದು ಬೆಳ್ಳಂ ಬೆಳಗ್ಗೆ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದು ಪರಿಶೀಲನೆ ಇನ್ನೂ ನಡೆಯುತ್ತಿದೆ. ಇನ್ನೊಬ್ಬ ಮಾಜಿ ಸಚಿವ ರೋಷನ್ ಬೇಗ್ ಅವರ ಮನೆಯ ಮೇಲೂ ಇಡಿ ದಾಳಿ ನಡೆಸಿದೆ.

    ಧರ್ಮಸ್ಥಳ: ಶನಿವಾರ ಭಾನುವಾರ ದರ್ಶನ ಇಲ್ಲ

    BELTHANGADI AUG 5

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರಕಾರದ ನಿರ್ದೇಶನದಂತೆ ಮಾರ್ಗಸೂಚಿ ಹೊರಡಿಸಿದೆ. ಅದರ ಪ್ರಕಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅಗಸ್ಟ್‌ 5ರಿಂದ 15 ರವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಸೇವೆ, ಪ್ರಸಾದ, ಅನ್ನ ಸಂತರ್ಪಣೆ, ವಸತಿ ವ್ಯವಸ್ಥೆಗಳನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

    ವಾರಾಂತ್ಯದಲ್ಲಿ (ಶನಿವಾರ/ಭಾನುವಾರ) ದೇವರ ದರ್ಶನವನ್ನೂ ನಿರ್ಬಂಧಿಸಲಾಗಿದ್ದು, ಧರ್ಮಸ್ಥಳಕ್ಕೆ ಹೋಗುವ ಭಕ್ತರು ಈ ಅಂಶವನ್ನು ಗಮನಿಸಬೇಕಿದೆ.

    ಭಕ್ತಾದಿಗಳೆಲ್ಲರೂ ಸಹಕರಿಸುವಂತೆ ವಿನಂತಿಸುತ್ತೇವೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ

    ಅಣ್ಣಾಮಲೈ ಉಪವಾಸ ಮಾಡಿದರೆ ಮೇಕೆದಾಟು ನಿಲ್ಲುವುದಿಲ್ಲ

    BENGALURU AUG 5

    ಮೇಕೆದಾಟು ಯೋಜನೆಯ ಬಗ್ಗೆ ರಾಜ್ಯ ಸರಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಯೋಜನೆಯನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಆರಂಭ ಮಾಡಿರುವ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

    ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಈ ವಿಷಯವನ್ನಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಕೇವಲ ರಾಜಕಾರಣಕ್ಕಾಗಿಯೇ ಅಲ್ಲಿನ ನಾಯಕರು ಈ ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ. ಆ ರಾಜ್ಯಕ್ಕೆ ಸಂಬಂಧಿಸಿದ ಯಾರೇ ಆದರೂ ಧರಣಿ-ಸತ್ಯಾಗ್ರಹ ಮಾಡಿದರೆ ಮೇಕೆದಾಟು ನಿಲ್ಲುವುದಿಲ್ಲ ಎಂದರು.

    ಈ ಯೋಜನೆ ಪಾರದರ್ಶಕವಾಗಿದೆ. ಕುಡಿಯುವ ನೀರು, ವಿದ್ಯುತ್‌ ಉತ್ಪಾದನೆ ಹಾಗೂ ಕಷ್ಟಕಾಲದಲ್ಲಿ ನೀರು ಹಂಚಿಕೆ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಬಗ್ಗೆ ಕೇಂದ್ರದ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್‌ ಶೆಖಾವತ್‌ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಅವರು ಹೇಳಿದರು.

    ಆದಷ್ಟು ಬೇಗ ಯೋಜನೆಯ ಸಮಗ್ರ ಯೋಜನಾ ವರದಿಗೆ (ಡಿಪಿಆರ್) ಕೇಂದ್ರದ ಒಪ್ಪಿಗೆ ಸಿಗಲಿದೆ. ಅದರ ಜತೆಯಲ್ಲೇ ಇತರೆ ಕ್ಲಿಯರೆನ್ಸ್‌ಗಳು ಕೂಡ ಸಿಗಲಿವೆ. ಅವೆಲ್ಲ ಸಿಕ್ಕಿದ ಕೂಡಲೇ ಯೋಜನೆಯ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

    ನೆರೆ, ಕೋವಿಡ್ ಉಸ್ತುವಾರಿಗೆ ಜಿಲ್ಲಾ ಸಚಿವರ ನೇಮಕ

    BENGALURU AUG 4

    ನೂತನ ಸಚಿವರ ಪ್ರಮಾಣ ವಚನ ಸ್ವೀಕಾರವಾದ ಬೆನ್ನ ಹಿಂದೆಯೇ ಕೋವಿಡ್ ಮತ್ತು ನೆರೆ ಉಸ್ತುವಾರಿಗೆ ಜಿಲ್ಲಾ ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಇದು ಕೋವಿಡ್ ಮತ್ತು ನೆರೆ ಉಸ್ತುವಾರಿಗೆ ಮಾತ್ರ ಸೀಮಿತವಾಗಿದ್ದು ಜಿಲ್ಲಾ ಉಸ್ತುವಾರಿಗೂ ಇದೇ ನೇಮಕ ಮುಂದುವರಿಯುತ್ತದೆಯೋ ಎಂಬುದು ಆದೇಶದಲ್ಲಿ ಸ್ಪಷ್ಟವಾಗಿಲ್ಲ. ವಿವರ ಈ ರೀತಿ ಇದೆ.

    ಗೋವಿಂದ ಕಾರಜೋಳ- ಬೆಳಗಾವಿ
    ಕೆ ಎಸ್ ಈಶ್ವರಪ್ಪ -ಶಿವಮೊಗ್ಗ
    ಆರ್ ಅಶೋಕ್ – ಬೆಂಗಳೂರು ನಗರ
    ಡಾ ಅಶ್ವಥ್ ನಾರಾಯಣ – ರಾಮನಗರ
    ಬಿ ಶ್ರೀರಾಮುಲು – ಚಿತ್ರದುರ್ಗ
    ವಿ ಸೋಮಣ್ಣ – ರಾಯಚೂರು
    ಜೆ ಸಿ ಮಾಧುಸ್ವಾಮಿ -ತುಮಕೂರು
    ಸಿ ಸಿ ಪಾಟೀಲ್ -ಗದಗ
    ಪ್ರಭು ಚವಾಣ – ಬೀದರ್
    ಆನಂದ್ ಸಿಂಗ್ – ಬಳ್ಳಾರಿ, ವಿಜಯನಗರ
    ಕೆ. ಗೋಪಾಲಯ್ಯ – ಹಾಸನ
    ಬೈರತಿ ಬಸವರಾಜ -ದಾವಣಗೆರೆ
    ಎಸ್ ಟಿ ಸೋಮಶೇಖರ – ಮೈಸೂರು-ಚಾಮರಾಜನಗರ
    ಬಿ ಸಿ ಪಾಟೀಲ್ -ಹಾವೇರಿ
    ಕೆ ಸುಧಾಕರ್- ಚಿಕ್ಕ ಬಳ್ಳಾಪುರ
    ಕೆ ಸಿ ನಾರಾಯಣಗೌಡ- ಮಂಡ್ಯ
    ಶಿವರಾಮ ಹೆಬ್ಬಾರ್-ಉತರ ಕನ್ನಡ
    ಉಮೇಶ್ ಕತ್ತಿ -ಬಾಗಲಕೋಟೆ
    ಎಸ್ ಅಂಗಾರ-ದಕ್ಷಿಣ ಕನ್ನಡ
    ಮುರುಗೇಶ್ ನಿರಾಣಿ- ಕಲಬುರ್ಗಿ
    ಎಂ ಟಿ ಬಿ ನಾಗರಾಜ- ಬೆಂಗಳೂರು ಗ್ರಾಮಾಂತರ
    ಕೋಟ ಶ್ರೀನಿವಾಸ ಪೂಜಾರಿ- ಕೊಡಗು
    ಶಶಿಕಲಾ ಜೊಲ್ಲೆ-ವಿಜಯಪುರ
    ವಿ ಸುನಿಲ್ ಕುಮಾರ್-ಉಡುಪಿ
    ಹಾಲಪ್ಪ ಆಚಾರ್-ಕೊಪ್ಪಳ
    ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
    ಶಂಕರ್ ಪಾಟೀಲ್ ಮುನೇನಕೊಪ್ಪ-ಧಾರವಾಡ
    ಬಿ ಸಿ ನಾಗೇಶ್ -ಯಾದಗಿರಿ
    ಮುನಿರತ್ನ-ಕೋಲಾರ

    ಪ್ರಮಾಣ ವಚನಕ್ಕೆ ರಾಜಭವನ ಸಜ್ಜು..ಇಲ್ಲಿದೆ ಫೈನಲ್ ಪಟ್ಟಿ

    BENGALURU AUG 4

    ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ 2.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದು ಅಂತಿಮ ಪಟ್ಟಿ ಈ ರೀತಿ ಇದೆ.

    ಸಚಿವರ ಅಂತಿಮ ಪಟ್ಟಿ

    1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

    2.ಆರ್.ಅಶೋಕ್- ಪದ್ಮನಾಭ ನಗರ

    3.ಬಿ.ಸಿ ಪಾಟೀಲ್ – ಹಿರೇಕೇರೂರು

    4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

    5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

    6.ಉಮೇಶ್ ಕತ್ತಿ- ಹುಕ್ಕೇರಿ

    7.ಎಸ್.ಟಿ.ಸೋಮಶೇಖರ್- ಯಶವಂತಪುರ

    8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

    9.ಬೈರತಿ‌ ಬಸವರಾಜ – ಕೆ ಆರ್ ಪುರಂ

    10.ಮುರುಗೇಶ್ ನಿರಾಣಿ – ಬೀಳಗಿ

    11.ಶಿವರಾಂ ಹೆಬ್ಬಾರ್- ಯಲ್ಲಾಪುರ

    12.ಶಶಿಕಲಾ ಜೊಲ್ಲೆ- ನಿಪ್ಪಾಣಿ

    13.ಕೆ.ಸಿ ನಾರಾಯಣ ಗೌಡ – ಕೆ‌ಆರ್ ಪೇಟೆ

    14.ಸುನೀಲ್ ಕುಮಾರ್ – ಕಾರ್ಕಳ

    15.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ

    16.ಗೋವಿಂದ ಕಾರಜೋಳ-ಮುಧೋಳ

    17.ಮುನಿರತ್ನ- ಆರ್ ಆರ್ ನಗರ

    18.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

    19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

    20.ಜೆ.ಸಿ.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

    21.ಹಾಲಪ್ಪ ಆಚಾರ್ – ಯಲಬುರ್ಗಾ

    22.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

    23.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

    24.ಪ್ರಭು ಚೌವ್ಹಾಣ್ – ಔರಾದ್

    25.ವಿ ಸೋಮಣ್ಣ – ಗೋವಿಂದ ರಾಜನಗರ

    26.ಎಸ್ ಅಂಗಾರ-ಸುಳ್ಯ

    27.ಆನಂದ್ ಸಿಂಗ್ – ಹೊಸಪೇಟೆ

    28.ಸಿ .ಸಿ‌ ಪಾಟೀಲ್ – ನರಗುಂದ

    29.ಬಿಸಿ ನಾಗೇಶ್ – ತಿಪಟೂರು

    ಪ್ರಮಾಣ ವಚನ ಸಮಾರಂಭವನ್ನು ಲೈವ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

    ಇಂದು ಮಧ್ಯಾಹ್ನ ನೂತನ ಸಂಪುಟ ಪ್ರಮಾಣ; 11ರ ವೇಳೆಗೆ ಅಧಿಕೃತ ಪಟ್ಟಿ ಬಿಡುಗಡೆ

    BENGALURU AUG 4

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಗೆ ಬಿಜೆಪಿ ವರಿಷ್ಠರು ಗ್ರೀನ್‌ ಸಿಗ್ನಲ್‌ ನೀಡಿದ್ದು, ಇಂದು (ಬುಧವಾರ) ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನಡೆಯುವ ಸರಳ ಸಮಾರಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಲಿದ್ದಾರೆ.

    ಇಂದು ಮುಂಜಾನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನೂ ಎರಡು ವಿಷಯಗಳು ಮಾತ್ರ ಬಾಕಿ ಇದೆ. ಅದು ಶೀಘ್ರವೇ ಬಗೆಹರಿಯಲಿದೆ. 10.30 ರಿಂದ 11ರ ಒಳಗೆ ಅಧಿಕೃತ ಹೊರಪಟ್ಟಿ ಹೊರ ಬೀಳಲಿದೆ ಎಂದರು.

    ಉಪಮುಖ್ಯಮಂತ್ರಿಗಳ ಸ್ಥಾನ ಕುರಿತಂತೆ ಎಲ್ಲವೂ ಆ ಪಟ್ಟಿಯಲ್ಲೇ ಬಹಿರಂಗವಾಗಲಿದೆ ಎಂದರು.

    ಕಾರ್ಯಕ್ರಮಕ್ಕೆ ಶಿಷ್ಟಾಚಾರ ವಿಭಾಗ ಸಿದ್ಧತೆ ಮಾಡಿಕೊಂಡಿದ್ದು. ಸೀಮಿತ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.ಇನ್ನು, ಯಡಿಯೂರಪ್ಪ ಸಂಪುಟದಲ್ಲಿದ್ದ ಯಾರಿಗೆಲ್ಲ ಸಚಿವ ಸ್ಥಾನ ಸಿಗುವದಿಲ್ಲ ಎಂಬ ಮಾಹಿತಿ ಬಿಜೆಪಿ ವಲಯದಲ್ಲಿ ತೀವ್ರ ಕಂಪನಗಳನ್ನೇ ಉಂಟು ಮಾಡಿದೆ. ಹಾವೇರಿ ಶಾಶಕ ನೆಹರೂ ಒಲೇಕಾರ್ ತಮ್ಮ ಅಸಮಾಧಾನವನ್ನು ಈಗಾಗಲೇ ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಉಪಸಭಾಪತಿ ಆನಂದ ಮಾಮನಿ ಮಂತ್ರಿ ಸ್ಥಾನ ಸಿಗದಿದ್ದರೆ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಎನ್ನುವ ಮಾತನ್ನು ಆಡಿದ್ದಾರೆ.

    ಬಿಸಿ ಪಾಟೀಲ್ ತಮಗೆ ಆಹ್ವಾನ ಬಂದಿರುವುದನ್ನು ವಾಟ್ಸಾಪ್ ಗ್ರೂಪ್ ಲ್ಲೇ ಬಹಿರಂಗ ಪಡಿಸಿದ್ದಾರೆ. ಬಿಎಸ್ ವೈ ಪುತ್ರ ವಿಜಯೇಂದ್ರ ಸಂಪುಟ ಸೇರುವ ಸಸ್ಪೆನ್ಸ್ ಇನ್ನೂ ಹಾಗೆಯೇ ಉಳಿದಿದೆ.

    ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಂದೂಡಿಕೆ

    ರಾಜ್ಯದ ಎಲ್ಲಾ ಸರಕಾರಿ ಮತ್ತು ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆಗಸ್ಟ್ 4 ರಿಂದ ಆರಂಭವಾಗಬೇಕಿದ್ದ ಪ್ರವೇಶ ಪ್ರಕ್ರಿಯೆಯನ್ನು ಮುಂದೂಡಿ ಕಾಲೇಜು ಶಿಕ್ಷಣ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

    ಕಾರಣಾಂತರಗಳಿಂದ 2021-22 ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಯನ್ನು ಮುಂದೂಡವಂತೆ ಸೂಚಿಸಲಾಗಿದೆ ಎಂದು ಈ ಸುತ್ತೋಲೆಯಲ್ಲಿ ನಿರ್ದೇಶಕರು ತಿಳಿಸಿದ್ದಾರೆ. ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸುವುದಾಗಿಯೂ ಅವರು ಹೇಳಿದ್ದಾರೆ.

    ಸುತ್ತೋಲೆಯ ಪ್ರತಿ ಇಲ್ಲಿದೆ.

    ಸ್ವಯಂ ಘೋಷಿತ ಆಸ್ತಿ ತೆರಿಗೆ: ವಲಯ ವರ್ಗೀಕರಣದಲ್ಲಿ ತಪ್ಪು ಘೋಷಣೆ ದಂಡ-ಬಡ್ಡಿಗೆ ವಿನಾಯಿತಿ ನೀಡಲು ಸಲಹೆ

    BENGALURU AUG 3

    ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡು ದಂಡ ಮತ್ತು ಬಡ್ಡಿ ಸುಳಿಗೆ ಸಿಲುಕಿರುವ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡುವಂತೆ ಮಲ್ಲೇಶ್ವರದ ಶಾಸಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಿಬಿಎಂಪಿಗೆ ಸಲಹೆ ನೀಡಿದರು.

    ಈ ವಿಷಯಕ್ಕೆ ಸಂಬಂಧಿಸಿ ಮಂಗಳವಾರ ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಅವರು, ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣದಿಂದ ಆಸ್ತಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ದಂಡ ಮತ್ತು ಬಡ್ಡಿಗೆ ಗುರಿಯಾದ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡಬೇಕು. ಈ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸೂಚಿಸಿದರು.

    ನಗರದಲ್ಲಿ ಒಟ್ಟು 22 ಲಕ್ಷ ಆಸ್ತಿಗಳಿದ್ದು, 78,000 ಆಸ್ತಿಗಳ ಮಾಲೀಕರು 2016ರಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡಿದ್ದಾರೆ. ಇದರಿಂದಾಗಿ ಬಿಬಿಎಂಪಿಗೆ ಸುಮಾರು 116 ಕೋಟಿ ರೂಪಾಯಿ ಆದಾಯ ಖೋತಾ ಆಗಿದೆ. ಈ ವಿಷಯವನ್ನು ಯೋಜನೆ ಜಾರಿ‌ ಮಾಡಿದಾಗಲೇ ಆಸ್ತಿ ಮಾಲೀಕರಿಗೆ ಮನವರಿಕೆ ಮಾಡಬೇಕಿತ್ತು. ಹಾಗೆ ಮಾಡದೇ 2016ರಿಂದ ಅನ್ವಯವಾಗುಂತೆ ಇದರ ಮೇಲೆ ಬಡ್ಡಿ (89 ಕೋಟಿ ರೂಪಾಯಿ) ಮತ್ತು ಮಾಡಿದ ತಪ್ಪಿಗೆ ದಂಡ (232 ಕೋಟಿ ರೂಪಾಯಿ) ವಿಧಿಸುವುದು ತಪ್ಪಾಗುತ್ತದೆ. ಇದರ ಬದಲು ಬಡ್ಡಿ ಮತ್ತು ದಂಡದ ಮೊತ್ತಕ್ಕೆ ವಿನಾಯಿತಿ ಕೊಟ್ಟು, ಆಸ್ತಿ ತೆರಿಗೆಯನ್ನು ಮಾತ್ರ ಕಟ್ಟಿಸಿಕೊಳ್ಳುವ ವ್ಯವಸ್ಥೆ ಆದರೆ ಸೂಕ್ತ ಎಂದು ಅವರು ಅಧಿಕಾರಿಗಳ ಗಮನಕ್ಕೆ ತಂದರು.ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಜತೆಗೂ ಚರ್ಚೆ ನಡೆಸುವಂತೆ ಅಶ್ವತ್ಥನಾರಾಯಣ ಅವರು ಸೂಚಿಸಿದರು.  .

    ಸಾರ್ವಜನಿಕರು ಆಸ್ತಿ ತೆರಿಗೆ ಮೇಲೆ ವಿಧಿಸುತ್ತಿರುವ ದಂಡ- ಬಡ್ಡಿಯ ಬಗ್ಗೆ ದೂರು ಸಲ್ಲಿಸಿದ್ದಾರೆ. ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇಂಥ ಸಮಯದಲ್ಲಿ ದುಪ್ಪಟ್ಟು ದಂಡ, ಬಡ್ಡಿ ವಿಧಿಸಿದರೆ ಜನರಿಗೆ ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

    ಸಭೆಯಲ್ಲಿ ಬಿಬಿಎಂಪಿ ಪಶ್ಚಿಮ ವಲಯದ ವಿಶೇಷ ಆಯುಕ್ತ ಬಸವರಾಜ್‌ ಹಾಗೂ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ಮುಂತಾದ ಅಧಿಕಾರಿಗಳು ಇದ್ದರು.

    ಆಧಾರರಹಿತ ಹೇಳಿಕೆ ಕೊಡದಿರಿ ಎಂದು ಕಾಂಗ್ರೆಸ್ಸಿಗರಿಗೆ ಬಿಜೆಪಿ ಎಚ್ಚರಿಕೆ

    BENGALURU AUG 2

    ರಾಜ್ಯದ ಸಚಿವ ಸಂಪುಟ ಕೆಲವೇ ದಿನಗಳಲ್ಲಿ ವಿಸ್ತರಣೆ ಆಗಲಿದೆ. ಸರಕಾರವು ಉತ್ತಮವಾಗಿ ಕೆಲಸ ಮಾಡಲಿದೆ.ಪ್ರತಿಪಕ್ಷಗಳು ಕಾಲೆಳೆಯುವ ಪ್ರವೃತ್ತಿಯನ್ನು ಕೈಬಿಟ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಆಧಾರರಹಿತ ಹಾಗೂ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ್ ಅವರು ಪಕ್ಷದ ರಾಜ್ಯ ಘಟಕದ ಪರವಾಗಿ ಎಚ್ಚರಿಕೆ ನೀಡಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಹಾದಿಬೀದಿಗಳಲ್ಲಿ ಸರಕಾರದ ವಿರುದ್ಧ ಅಪಪ್ರಚಾರದ ಹುನ್ನಾರಕ್ಕೆ ಸಿದ್ದರಾಮಯ್ಯ ಮುಂದಾಗಿದ್ದರು. ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬಳಿಕ ಈಗ ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ಇಲ್ಲ ಎಂಬ ಮಾತನಾಡಲು ಆರಂಭಿಸಿದ್ದಾರೆ. ನೀವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದೀರಿ. ಯಾಕೆ ಕಿತ್ತು ಹಾಕಿದಿರಿ? ನೀವು ಕಾರಣ ಕೊಡಬೇಕಲ್ಲವೇ? ಮಂಡ್ಯದ ಅಂಬರೀಷ್ ಅವರನ್ನು ಮಂತ್ರಿ ಪದವಿಯಿಂದ ಏಕಾಏಕಿ ಕಿತ್ತು ಹಾಕಿದ್ದಕ್ಕೆ ಉತ್ತರ ಕೊಟ್ಟಿದ್ದೀರಾ? ಮಂಗಳೂರಿನ ಹಿರಿಯ ನಾಯಕರು, ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ ಜನಾರ್ದನ ಪೂಜಾರಿ ಅವರನ್ನು ಮೂಲೆಗುಂಪು ಮಾಡಿದ್ದಕ್ಕೆ ಕಾರಣ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.

    ನಿಮ್ಮ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹವನ್ನು ಮೊದಲು ಸರಿ ಮಾಡಿಕೊಳ್ಳಿ. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಆಗಬೇಕೇ ಅಥವಾ ನಲಪಾಡ್ ಆಗಬೇಕೇ ಎಂಬ ಗೊಂದಲ ನಿವಾರಿಸಿ. ಡಿ.ಕೆ.ಶಿವಕುಮಾರ್ ಹಾಗೂ ನಿಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಮೊದಲು ಸರಿ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಅವರು, ನಮ್ಮ ಪಕ್ಷದ ಕೇಂದ್ರ ನಾಯಕರ ನಿರ್ಧಾರದ ಬಗ್ಗೆ ನೀವು ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಎಂದರು.

    ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರೂ ಆದ ಶ್ರೀ ಛಲವಾದಿ ನಾರಾಯಣಸ್ವಾಮಿ ಮತ್ತು ರಾಜ್ಯ ವಕ್ತಾರರಾದ ಶ್ರೀ ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

    ದಿಲ್ಲಿಯಲ್ಲಿ ಸಿಎಂ ಬೊಮ್ಮಾಯಿ; ಕ್ಯಾಬಿನೆಟ್‌ಗೆ ಇಂದೇ ಅಂತಿಮ ಟಚ್; ಬುಧವಾರ ಅಥವಾ ಗುರುವಾರ ಪ್ರಮಾಣ

    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಆರು ದಿನಗಳ ನಂತರ ಅವರ ಸಂಪುಟ ರಚನೆಯ ಕಸರತ್ತು ಕ್ಲೈಮ್ಯಾಕ್ಸ್‌ಗೆ ಬಂದಿದ್ದು, ಇವತ್ತು ರಾತ್ರಿ ಅಥವಾ ನಾಳೆ ಬೆಳಗ್ಗೆ ಹೊತ್ತಿಗೆ ಅಂತಿಮ ಪಟ್ಟಿ ಅವರ ಕೈಸೇರಲಿದೆ.

    22-26 ಮಂದಿಯ ಹೆಸರಿದೆ ಎನ್ನಲಾದ ಹೈಕಮಾಂಡ್‌ ಕೊಡುವ ಪಟ್ಟಿಯೊಂದಿಗೆ ಮುಖ್ಯಮಂತ್ರಿ ನಾಳೆ ಬೆಂಗಳೂರಿಗೆ ವಾಪಸ್‌ ಆಗಲಿದ್ದು, ಬುಧವಾರ ಇಲ್ಲವೇ ಗುರುವಾರ ನೂತನ ಸಂಪುಟದ ಪ್ರಮಾಣ ವಚನ ಸ್ವೀಕಾರ ನಡೆಯಬಹುದು.

    ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತಿತರ ಮುಖಂಡರ ಜತೆ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಮಾಧ್ಯಮಗಳ ಜತೆ ಮಾತನಾಡಿ “ಮೂರು ಸೂತ್ರ ಇಟ್ಟುಕೊಂಡಿದ್ದೇವೆ. ಅದರ ಅನ್ವಯವೇ ಸಂಪುಟ ರಚನೆ ನಡೆಯಲಿದೆ. ಎಷ್ಟು ಹಂತದಲ್ಲಿ ಸಂಪುಟ ರಚನೆ ಆಗಬೇಕು? ಎಷ್ಟು ಸಚಿವರು ಇರಬೇಕು? ಜಾತಿ-ಪ್ರಾದೇಶಿಕ ಸಮತೋಲನ ಇತ್ಯಾದಿ ಅಂಶಗಳು ಸೂತ್ರದಲ್ಲಿವೆ” ಎಂದರು.

    ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಹದಿನೇಳು ವಲಸಿಗರಲ್ಲಿ ಎಷ್ಟು ಜನ ಸಂಪುಟದಲ್ಲಿ ಇರುತ್ತಾರೆ? ಎಷ್ಟು ಡಿಸಿಎಂಗಳು ಇರಬೇಕು? ಎಂಬುದು ಅಂತಿಮ ಪಟ್ಟಿ ಬಂದ ನಂತರವೇ ಗೊತ್ತಾಗುತ್ತದೆ. ಆವರೆಗೂ ಏನನ್ನೂ ಹೇಳಲಾಗದು. ಎಲ್ಲವನ್ನೂ ವರಿಷ್ಠರೇ ನಿರ್ಧಾರ ಮಡುತ್ತಾರೆ ಎಂದರು ಬೊಮ್ಮಾಯಿ.

    ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವಂಥ ಸಮತೋಲನ ಸಂಪುಟ ರಚನೆ ಆಗಲಿದೆ. ಎಲ್ಲರೂ ಸಚಿವರಾಗಲು ಆಗದು ಎಂಬ ಅಂಶ ನಮ್ಮ ಶಾಸಕರಿಗೆ ಗೊತ್ತಿದೆ. ಹಿಂದೆಯೂ ಒಂದು ಸಂಪುಟ ಇತ್ತು. ಅದೆಲ್ಲವನ್ನೂ ಗಮನದಲ್ಲಿದ್ದಟ್ಟುಕೊಂಡು ಸಂಪುಟ ರಚನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

    ಹೈಕಮಾಂಡ್‌ ಅಂತಿಮ ಪಟ್ಟಿ ಆಖೈರು ಮಾಡಿದ ಮೇಲೆಯೂ ಸಚಿವಾಕಾಂಕ್ಷಿಗಳು ಬಿರುಸಿನ ಲಾಬಿ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಂತೂ ಯಡಿಯೂರಪ್ಪ, ಸಂಘ ಪರಿವಾರ ಮತ್ತು ಹೈಕಮಾಂಡ್‌ ಪಟ್ಟಿಗಳ ಒತ್ತಡದಲ್ಲಿ ಹೈರಾಣಾಗಿದ್ದಾರೆ.

    ಸಂಘ ಪರಿವಾರ ಮತ್ತು ಮುಖ್ಯಮಂತ್ರಿಗಳ ಬಳಿ ಇರುವ ಯಡಿಯೂರಪ್ಪ ಅವರು ರೆಕಮಂಡ್‌ ಮಾಡಿರುವ ಆಕಾಂಕ್ಷಿಗಳ ಪಟ್ಟಿಯನ್ನೂ ಅವಲೋಕನ ಮಾಡಿರುವ ಮಾಡಿರುವ ವರಿಷ್ಠರು, ಅಂತಿಮ ಪಟ್ಟಿಯನ್ನು ಬೊಮ್ಮಾಯಿ ಕೈಗಿಡಲಿದ್ದಾರೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಡುವೆ ಇಂದು ಸಂಜೆ ಮಹತ್ವದ ಮಾತುಕತೆ ನಡೆಯಲಿದೆ. ಯಾರೆಲ್ಲ ಸಂಪುಟಕ್ಕೆ ಸೇರುತ್ತಾರೆ? ಯಾರೆಲ್ಲ ಹೊರಗಿರುತ್ತಾರೆ? ಎಂಬುದನ್ನು ವರಿಷ್ಠರು ನಿರ್ಣಯಿಸಿದ್ದು, ಆ ಮಾಹಿತಿಯನ್ನು ನಡ್ಡಾ ಅವರು ಸಿಎಂ ಜತೆ ಹಂಚಿಕೊಳ್ಳಲಿದ್ದಾರೆ.

    ಸಂಪಟ ಲೆಕ್ಕ ಹೇಗೆ? ಎತ್ತ?

    ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಹೊಸಬರು, ಹಳಬರು ಹಾಗೂ ವಲಸಿಗರನ್ನು ಒಳಗೊಂಡ ಸಮತೋಲಿತ ಕ್ಯಾಬಿನೆಟ್‌ ಅಸ್ತಿತ್ವಕ್ಕೆ ಬರಲಿದ್ದು, 17ವಲಸಿಗರ ಪೈಕಿ ಯಡಿಯೂರಪ್ಪ ಸಂಪುಟದಲ್ಲಿದ್ದ 9 ಹಾಗೂ ಹೊಸಬರು 8 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗಿದೆ. ಮುಖ್ಯವಾಗಿ ಸಂಘದ ಹಿನ್ನೆಲೆಯಿಂದ ಬಂದ ಹಾಗೂ ಬಿಜೆಪಿ ಮೂಲ ನಿವಾಸಿಗಳಿಗೆ ಅಗ್ರ ಆದ್ಯತೆ ನೀಡಬೇಕು ಹಾಗೂ ಪ್ರಮುಖ ಖಾತೆಗಳೂ ಅವರಿಗೇ ಹೋಗಬೇಕು ಎಂದು ವರಿಷ್ಠರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಈ ಸಂಖ್ಯೆಗಳಲ್ಲಿ ಕೊಂಚ ವ್ಯತ್ಯಾಸವೂ ಆಗಬಹುದು.

    ವಲಸಿಗರಲ್ಲಿ ಮುಖ್ಯವಾಗಿ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್‌, ಭೈರತಿ ಬಸವರಾಜು, ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯ, ಆನಂದ್ ಸಿಂಗ್, ಡಾ.ಕೆ.ಸಿ.ನಾರಾಯಣ ಗೌಡ, ಶಿವರಾಮ ಹೆಬ್ಬಾರ್, ಮುನಿರತ್ನ ಸಂಪುಟದೊಳಕ್ಕೆ ಬರಬಹುದು ಎನ್ನಲಾಗುತ್ತಿದ್ದು, ಈ ಪಟ್ಟಿಯಲ್ಲಿರುವ ಶಿವರಾಮ್‌ ಹೆಬ್ಬಾರ್‌ ಬಿ.ಸಿ.ಪಾಟೀಲ್‌ ಅನುಮಾನ ಎಂಬ ಸುದ್ದಿಗಳೂ ಇವೆ. ಜತೆಗೆ; ಶಂಕರ್, ಕೋಲಾರದ ನಾಗೇಶ್‌, ಶ್ರೀಮಂತ ಪಾಟೀಲ್ ಅವರಿಗೆ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ.

    ಇನ್ನು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಆರ್.ಅಶೋಕ್,‌ ಬಿ.ಶ್ರೀರಾಮುಲು, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಜಿ.ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಎಸ್.ಅಂಗಾರ ಅವರ ಜೊತೆಗೆ ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್.ಸುರೇಶ್ ಕುಮಾರ್‌ ಅವರೂ ಸಚಿವರಾಗಬಹುದು ಎಂಬ ಮಾಹಿತಿ ಇದೆ.

    ಮೇಲೆ ತಿಳಿಸಲಾದ ವಲಸಿಗರು ಹಾಗೂ ಹಳಬರ ಜತೆಗೆ, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಬದಲಾಗಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ, ಅರವಿಂದ ಬೆಲ್ಲದ್, ಪೂರ್ಣಿಮಾ ಶ್ರೀನಿವಾಸ್, ಪಿ.ರಾಜೀವ್, ಸುನೀಲ್ ಕುಮಾರ್, ರಾಜೂಗೌಡ, ಎಸ್.ಎ.ರಾಮದಾಸ್, ಹರ್ಷ ವರ್ಧನ್, ರೂಪಾಲಿ ನಾಯ್ಕ್ ಹೆಸರುಗಳು ಹೊಸ ಸಚಿವರ ಯಾದಿಯಲ್ಲಿವೆ ಎನ್ನಲಾಗಿದೆ.

    ಇದಲ್ಲದೆ, ಈವರೆಗಿನ ಎಲ್ಲ ಬಿಜೆಪಿ ಸರಕಾರಗಳಲ್ಲೂ ಸಚಿವ ಸ್ಥಾನಕ್ಕೆ ಪ್ರಯತ್ನವನ್ನೂ ಮಾಡದ ಹಾಗೂ ಸಚಿವ ಸ್ಥಾನಕ್ಕೆ ಪರಿಗಣನೆಯೂ ಮಾಡದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೂ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಗಬುದು ಎಂಬ ಸುದ್ದಿ ಹರಿದಾಡುತ್ತಿದೆ. ಶೆಟ್ಟರ ಬಗ್ಗೆ ಹೈಕಮಾಂಡ್‌ ಹಾಗೂ ಆರ್‌ಎಸ್‌ಎಸ್‌ ಕೂಡ ಸಮ್ಮತಿಸಿದೆ ಎಂದು ಗೊತ್ತಾಗಿದೆ.

    ಹೊನ್ನಾಳಿ ಶಾಸಕ ಹಾಗೂ ಬಿಎಸ್‌ವೈ ಕಟ್ಟಾ ಬೆಂಬಲಿಗ ರೇಣುಕಾಚಾರ್ಯ ಅವರ ಹೆಸರೂ ಕೇಳಿಬರುತ್ತಿದ್ದು, ಅವರಿಗೆ ಸಂಘದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿಲ್ಲ ಎಂದ ಮಾಹಿತಿ ಇದೆ.

    ಸಂಭನೀಯ ಪಟ್ಟಿಗಳ ಜತೆ ಭರ್ಜರಿ ಲಾಬಿ

    ಸಚಿವಾಕಾಂಕ್ಷಿಗಳ ಲಾಬಿ ಬಿರುಸಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಿಸಿ ಪಾಟೀಲ್‌, ರಾಜೂಗೌಡ ಮುಂತಾದವರು ದಿಲ್ಲಿಯಲ್ಲಿ ವಿವಿಧ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸಿದ್ದಾರೆ. ವಲಸಿಗರಂತೂ ಒಂದೆಡೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದು, ಅದರ ಜತೆಗೆ ಬಸವರಾಜ ಬೊಮ್ಮಾಯಿ ಅವರನ್ನು ಎಲ್ಲಿಗೇ ಹೋದರೂ ನೆರಳಿಂತೆ ಫಾಲೋ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

    error: Content is protected !!