24.1 C
Karnataka
Friday, May 22, 2026
    Home Blog Page 43

    ನವೆಂಬರ್ ೧ ರ ಮಹತ್ವ; ಹಂಚಿಹೋಗಿದ್ದ ಕರುನಾಡು ಒಂದು ಗೂಡಿದ ದಿನ

    ತ್ನಾ ಶ್ರೀನಿವಾಸ್

    ಕನ್ನಡ ಅಥವಾ ಕರ್ನಾಟಕ ರಾಜ್ಯೋತ್ಸವ ವನ್ನು ಪ್ರತಿವರ್ಷ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಈ ದಿನವನ್ನು ಭೌಗೋಳಿಕ ವಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರಿಗೆ ಭಾಷೆಯ ಆಧಾರದ ಮೇಲೆ ತಮ್ಮ ಅಸ್ಮಿತೆಯನ್ನು ಪ್ರತಿಪಾದಿಸಿದ ದಿನವನ್ನಾಗಿ ಕನ್ನಡಿಗರು ಆಚರಿಸುತ್ತಾರೆ.

    ಕನ್ನಡದ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವ ದಿನವಾಗಿ ಆಚರಿಸುವ ಈ ದಿನಕ್ಕೆ ತನ್ನದೇ ಆದಂತಹ ಮಹತ್ವವಿದೆ. ಐತಿಹಾಸಿಕ ಹಿನ್ನೆಲೆ ಮೂಲಕ ಈ ದಿನವನ್ನು ನೋಡಿದಾಗ ಇದರ ಮಹತ್ವ ತಿಳಿಯುತ್ತದೆ.

    ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆಯುವ ಹೋರಾಟವೊಂದೆಡೆ ಆದರೆ ಇನ್ನೊಂದೆಡೆ ಪ್ರದೇಶಾವಾರು ಹಂಚಿ ಹೋಗಿದ್ದ ಕನ್ನಡಿಗರಿಗೆ ಸಾಂಸ್ಕೃತಿಕ ಮತ್ತು ಭೌಗೋಳಿಕ ನೆಲೆಯನ್ನು ಕಂಡುಕೊಳ್ಳುವದಾಗಿತ್ತು. ಆಗ ಕನ್ನಡದ ಪ್ರದೇಶಗಳು ಮೈಸೂರು, ಮದ್ರಾಸ್, ಮುಂಬಯಿ ಪ್ರಾಂತ್ಯ ಗಳಲ್ಲಿ ಹಚಿಹೋಗಿದ್ದವು.
    ಸ್ವಾತಂತ್ರ ಹೋರಾಟದ ಮೂಲಕ ಭಾರತೀಯರ ಏಕತೆಯ ಮಹತ್ವ ವನ್ನು ಅರಿತಿದ್ದ ಆಲೂರು ವೆಂಕಟ ರಾವ್, ಹುಯಿಲಗೋಲ ನಾರಾಯಣರಾವ್,ಸಿದ್ದಪ್ಪ ಕಂಬಳಿಯಂತಹ ಕನ್ನಡ ಪರ ಹೋರಾಟಗಾರರು ಕನ್ನಡದ ಸಾರ್ವಭೌಮತೆಯ ವಿಚಾರವಾಗಿ ಧ್ವನಿ ಎತ್ತಿದರು.

    ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟ ರಾಯರು ಕರ್ನಾಟಕ ಏಕೀಕರಣ ಚಳವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ಭಾರತವು ಗಣರಾಜ್ಯ ವಾದ ನಂತರ ಭಾರತದ ವಿವಿಧ ಪ್ರಾಂತ್ಯ ಗಳು ಭಾಷೆಗಳ ಆಧಾರದ ಮೇಲೆ ರಾಜ್ಯ ಗಳಾಗಿ ರೂಪುಗೊಂಡ ವು. ಈ ಹಿಂದೆ ರಾಜರ ಆಳ್ವಿಕೆಯ ಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥೆಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು.

    ೧೯೫೬ ರ ನವೆಂಬರ್ ೧ರಂದು ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು.ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.ಹೊಸದಾಗಿ ಏಕೀಕೃತಗೂಂಡ ರಾಜ್ಯದ ಆರಂಭದಲ್ಲಿ ಹೊಸಘಟಕದ ಕೋರ್ಟ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲಿ ಎಂದು “ಮೈಸೂರು ” ಹೆಸರನ್ನು ಉಳಿಸಿಕೊಂಡರು. ಮುಂದೆ ನವೆಂಬರ್ ೧ , ೧೯೭೩ ರಂದು “ಕರ್ನಾಟಕ ” ಎಂದು ಬದಲಾಯಿತು.ಈ ಸಮಯದಲ್ಲಿ ದೇವರಾಜ ಅರಸ್ ಅವರು ಮುಖ್ಯ ಮಂತ್ರಿಗಳಾಗಿದ್ದರು.
    ಕರ್ನಾಟಕ ಏಕೀಕರಣ ದ ಮನ್ನಣೆ ಎ.ಎನ್.ಕೃಷ್ಣ ರಾವ್, ಬಿ.ಎಂ.ಶ್ರೀ., ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಅ.ನ.ಕೃಷ್ಣರಾಯರು, ಶಿವರಾಮ ಕಾರಂತರಿಗೆ ಸಲ್ಲುತ್ತದೆ.

    ಕನ್ನಡ ಬಾವುಟ

    ಕನ್ನಡಕ್ಕೊಂದು ಬಾವುಟದ ಅವಶ್ಯಕತೆಯನ್ನು ಅರಿತ ಕನ್ನಡ ಹೋರಾಟಗಾರರಾದ ಎಂ.ರಾಮಮೂರ್ತಿಗಳುಹಳದಿ ಮತ್ತು ಕೆಂಪು ಬಣ್ಣವನ್ನು ಬಳಸಿ ಬಾವುಟವನ್ನು ಸಿದ್ಧ ಪಡಿಸಿದರು.ಈ ಧ್ವಜವನ್ನುಎರಡು ಸಮತಲ ಭಾಗಗಳಾಗಿ ಮಾಡಲಾಗಿದೆ.ಮೇಲಿನ ಭಾಗ ಹಳದಿ, ಕೆಳಗಿನ ಭಾಗ ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣಶಾಂತಿಯನ್ನು ಕೆಂಪು ಬಣ್ಣ ಧೈರ್ಯ ವನ್ನು ಪ್ರತಿನಿಧಿಸುತ್ತದೆ. ಈ ಬಣ್ಣ ಕನ್ನಡ ನಾಡಿನ ಹೆಣ್ಣು ಮಗಳ ಅರಿಶಿನ ಮತ್ತು ಕುಂಕುಮದ ಪ್ರತಿಕವೂ ಆಗಿದೆ. ಕೆಂಪು ಬಣ್ಣ ಅಭಿವೃದ್ಧಿ ಯ ಸಂಕೇತವಾದರೆ ಅರಿಶಿಣಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ.

    ಈ ಧ್ವಜವನ್ನು ನವಂಬರ್ ೧ನೇ ತಾರೀಕಿನಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಸಾರ್ವಜನಿಕ ಸಂಸ್ಥೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾರಿಸಿ ಕರ್ನಾಟಕ ನಾಡಗೀತೆಯಾದ”ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಗೀತೆ(ಹಾಡು) ಯನ್ನು ಹಾಡಲಾಗುತ್ತದೆ.

    ರಾಜ್ಯೋತ್ಸವ ಆಚರಣೆಯಲ್ಲಿ ನಮ್ಮೆಲ್ಲರ ಪಾ ತ್ರ ಹೆಚ್ಚು ಮಹತ್ವದ್ದಾಗಿದೆ. ನಾಡು, ನುಡಿ, ಸಂಸ್ಕೃತಿ, ಸಂಪತ್ತನ್ನು ಕಾಪಾಡಿ ಅದನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಎಲ್ಲಾ ಕನ್ನಡಿಗರ ಜವಾಬ್ದಾರಿ ಯಾಗಿದೆ.

    ಜೈ ಕರ್ನಾಟಕ ಮಾತೆ.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    ಪರಮಾತ್ಮ ಚಿತ್ರದ ಟ್ಯೂನ್ ಗೆ ಹೊಸ ಸಾಲು ಬರೆದು ಅಪ್ಪುಗೆ ಗೀತ ನಮನ ಸಲ್ಲಿಸಿದ ಯೋಗರಾಜ ಭಟ್

    ಉಸಿರು ಪೂರ್ತಿ ಹೋದರೂ , ಹೆಸರು ಪೂರ್ತಿ ನೆನಪಿದೆ , ನೀನು ಇರದೆ ಹೋದರೂ , ನಿನ್ನ ನಗೆಯ ಬೆಳಕಿದೆ ಎಂದು ಹೆಸರಾಂತ ನಿರ್ದೇಶಕ ಯೋಗರಾಜ ಭಟ್ಟರು ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಸಲ್ಲಿಸಿದ್ದಾರೆ.

    ತಮ್ಮದೇ ಚಿತ್ರ ಪರಮಾತ್ಮ ಚಿತ್ರದಲ್ಲಿ ವಿ ಹರಿಕೃಷ್ಣ ರಾಗ ಸಂಯೋಜಿಸಿದ್ದ ಟ್ಯೂನ್ ಗೆ ಭಟ್ಟರು ಭಾವ ಪೂರ್ಣ ಸಾಲುಗಳನ್ನು ಸೇರಿಸಿದ್ದಾರೆ.

    ಯೋಗರಾಜ ಭಟ್ಟರ ಪಂಚರಂಗಿ ಆಡಿಯೋದಲ್ಲಿರುವ ಈ ಗೀತೆಯ ಲಿಂಕ್ ಇಲ್ಲಿದೆ. ಭಟ್ಟರ ಪುತ್ರಿ ಪುನರ್ವಸು ಭಟ್ ಈ ಹಾಡು ಹಾಡಿದ್ದಾರೆ.

    ಒಬ್ಬ ಅಪೂರ್ವ ತಾರೆ ; ಪುನೀತ್ ನೆನಪಿನಲ್ಲಿ ಸುದೀರ್ಘ ಲೇಖನ ಬರೆದ ಸುದೀಪ್

    ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಬಗ್ಗೆ ಕಂಬನಿ ಮಿಡಿದಿರುವ ನಟ ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಸುದೀರ್ಘ ಬರಹದ ಮೂಲಕ ಅಶ್ರುತರ್ಪಣ ಸಲ್ಲಿಸಿದ್ದಾರೆ. ಆ ಬರೆಹದ ಪೂರ್ಣ ಪಾಠ ಇಲ್ಲಿದೆ.

    ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನ

    BENGALURU OCT 30

    ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ ನಡೆಸಲು ತೀಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಕಟಿಸಿದರು.

    ಇಂದು ಮಧ್ಯಾಹ್ನ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಅವರ ಸಹೋದರರಾದ ಶಿವರಾಜ್ ಕುಮಾರ್ ಮತ್ತ ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗೆ ಈ ಬಗ್ಗೆ ಇಂದು ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

    ಅಪ್ಪು ಅವರ ಅಂತಿಮ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ಮಾಡಿಕೊಡಲು ನಾಳೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಅಪ್ಪು ಅವರ ಅಂತಿಮ ದರ್ಶನಕ್ಕೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ನಾಳೆವರೆಗೂ ದರ್ಶನಕ್ಕೆ ಅವಕಾಶವಿರುವುದರಿಂದ ಜನರು ಸಮಾಧಾನದಿಂದ ಬರಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಜನರು ಸಹಕರಿಸುವಂತೆ ಮನವಿ ಮಾಡಿದರು.

    ಇನ್ಯಾವ ದೂರತೀರದ ಮೋಹದ ಮುರುಳಿ ನಿಮ್ಮನ್ನು ಆ ಮಟ್ಟಿಗೆ ದಂಡಿಸಿಕೊಳ್ಳುವಂತೆ ಮಾಡಿತು ಅಪ್ಪು?

    ನಿಷ್ಕಲ್ಮಶ ನಗುವಿನ ಸರದಾರ ಹೊರಟು ಹೋಗಿದ್ದಾನೆ.ಹಣ್ಣೆಲೆಯನ್ನೇ ಉಳಿಸಿ ಚಿಗುರೆಲೆಯೊಂದು ಉದುರಿಹೋಗಿದೆ. ಏನೋ ಮೋಡಿಯಾಗಿ ಆ ಚಿಗುರೆಲೆಯನ್ನು ಮರ ಮತ್ತೆ ತನ್ನ ಹರೆಗೆ ಅಂಟಿಸಿಕೊಳ್ಳಬಹುದಾ ಎನ್ನುವ ನಿರೀಕ್ಷೆ ಮತ್ತೂಮತ್ತೂ ಹುಟ್ಟುತ್ತಲೇ ಇದೆ.ಅದು ಹುಸಿ ನಿರೀಕ್ಷೆ ಎಂಬುದು ಗೊತ್ತಿದ್ದರೂ ಮನಸ್ಸು ಸುಳ್ಳನ್ನೇ ನೆಚ್ಚಿ‌ಕೂತಿದೆ.

    ಆದರೂ..

    ಕಲಾವಿದರ ಎದೆ ಮೇಲೆ ನಿರೀಕ್ಷೆಯ ಹೊರೆಯನ್ನು ಹೇರುವವರು ನಾವೇ ಅಲ್ಲವೇ?ಅವರ ಅಭಿಮಾನಿಗಳು?

    ಅಪ್ಪುವಿನ ಸಿಕ್ಸ್ ಪ್ಯಾಕಿಗೆ ಥಿಯೇಟರ್ರೇ ಹಾರಿ ಹೋಗುವಂತೆ ಸಿಳ್ಳೆ ಚಪ್ಪಾಳೆ ಹೊಡೆದು ನೀವು ಹೀಗೇ ಇರಬೇಕು ಎನ್ನುವ ಭಾರ ಹೊರಿಸಿದವರು?

    ಅವರ ಅತಿವೇಗದ ನೃತ್ಯಕ್ಕೆ ಇನ್ನಿಲ್ಲದಂತೆ ಹುಚ್ಚೆದ್ದವರು?
    ಬ್ಯಾಕ್ ಕಿಕ್ಕನ್ನು ,ಫೈಟ್ ಮಾಡುವ ಸೊಗಸನ್ನು ಕಣ್ರೆಪ್ಪೆ ಮಿಟುಕಿಸದೆ ನೋಡಿ., ಆ ಮೂಲಕ ನೀವು ಹೀಗೇ ಇರಬೇಕು ಎಂಬ ಪರೋಕ್ಷ ಸಂದೇಶ ತಲುಪಿಸಿದವರು ನಾವೇ ಅಲ್ಲವೇ?

    ಅಪ್ಪು, ನಿಮ್ಮ ಸಿಕ್ಸಪ್ಯಾಕ್ ಹೊರತಾಗಿಯೂ ನೀವು ನಮಗಿಷ್ಟ.
    ಸಾದಾ ಡ್ಯಾನ್ಸ್ ಮಾಡಿದರೂ ನಿಮ್ಮನ್ನು ಆರಾಧಿಸುತ್ತೇವೆ.
    ನಿಮ್ಮನ್ನು ಪ್ರೀತಿಸುವುದು ನಿಮ್ಮ ನಗುವಿಗೆ,ನಿಮ್ಮ ಮಗುತನಕ್ಕೆ,ನಿಮ್ಮ ಹಮ್ಮುಬಿಮ್ಮುಗಳಿಲ್ಲದ ನಡಾವಳಿಗೆ.

    ಹೌದಲ್ಲವೇ?

    ಯಾವುದೇ ಕಲಾವಿದನಿಗೂ ಅಭಿಮಾನಿಗಳು ಮನದಟ್ಟು ಮಾಡಬೇಕಾದ ಸಂಗತಿ ಇದು ತಾನೇ?

    ಅಪ್ಪುವಿನ ಸಿನೆಮಾ ನೋಡಿದ ಯಾವುದೇ ಹೆಣ್ಣೂ ಅಂತಹ ಪಾರ್ಟನರ್ ಸಿಗಲಿ ಎಂದುಕೊಂಡಿದ್ದಕ್ಕಿಂತ ಇವನಂಥ ಜೀವದ ಗೆಳೆಯನೊಬ್ಬ ಸಿಕ್ಕರೆ ಎಂದುಕೊಂಡಿದ್ದೇ ಹೆಚ್ಚಲ್ಲವೇ?

    ಇವನಂಥ ಅಣ್ಣ ತಮ್ಮ ಸಿಕ್ಕರೇ ಅದೆಷ್ಟು ಸೊಗಸು ಎಂದುಕೊಂಡೆವಲ್ಲವೇ? ಪ್ರತಿ ತಾಯಿಯೂ ಅಪ್ಪುವಿನಂತ ಮಗ ಹುಟ್ಟಲಿ ಎಂದುಕೊಂಡಿದ್ದರಲ್ಲವೇ?

    ಹಾಗಿದ್ದರೆ

    ಇನ್ಯಾವ ದೂರತೀರದ ಮೋಹದ ಮುರುಳಿ ನಿಮ್ಮನ್ನು ಆ ಮಟ್ಟಿಗೆ ದಂಡಿಸಿಕೊಳ್ಳುವಂತೆ ಮಾಡಿತು ಅಪ್ಪು?

    ಪ್ರತಿ ಕಲಾವಿದನೂ ವೈಯುಕ್ತಿಕ ಆಸೆ ಹಂಬಲ ಗುರಿಗಳ ಜೊತೆಗೆ ಸಮಾಜದ ಜವಾಬ್ದಾರಿಯನ್ನು ಬೇಕಿಲ್ಲದಿದ್ದರೂ ಹೊತ್ತಿರುತ್ತಾನೆ.ಅವನನ್ನು ಹಿಂಬಾಲಿಸುವ ದೊಡ್ಡದೊಂದು ಯುವ ಸಮೂಹ ಇದ್ದೇ ಇರುತ್ತದೆ. ಅದರಲ್ಲೂ ಅಪ್ಪುವಿನಂಥ ಸಮಾಜಮುಖಿ ವ್ಯಕ್ತಿತ್ವದ ನಾಯಕನನ್ನು ನೂರಾರು ಜೀವಗಳು ನೆಚ್ಚಿಕೊಂಡಿರುತ್ತವೆ.
    ಈ ನೆಚ್ಚುಗೆಯ ಋಣ ಅಪ್ಪುವನ್ನು ಎಚ್ಚರಿಸಬೇಕಿತ್ತು ಅಂತ ತೀವ್ರವಾಗಿ ಅನಿಸ್ತಿದೆ.

    ಸಣ್ಣ ನೋವು ಕಾಣಿಸಿಕೊಂಡಾಗಲೇ ವೈದ್ಯರನ್ನು ಕಂಡಿದ್ದರೆ,ನೋವನ್ನು ಕಡೆಗಣಿಸದಿದ್ದರೆ ಅಥವಾ ಸುಮ್ಮನೆ ಆರಾಮು ಮಾಡಿದ್ದರೆ?ಅರಮನೆಯಲ್ಲಿ ರಾಜಕುಮಾರ ಉಳಿಯುತ್ತಿದ್ದ. ಲೋಕದ ಶೋಕ ಈ ಮಟ್ಟಿಗೆ ಹೆಚ್ಚುತ್ತಿರಲಿಲ್ಲ.ಪರಮ್ ಈ ಹೊತ್ತಿಗೆ ಪರಮಾತ್ಮನಾಗುತ್ತಿರಲಿಲ್ಲ.

    ನಿಮ್ಮ ದಿನಚರಿ ,ನಿಮ್ಮ ಆಹಾರ ವಿಹಾರ, ನಿಮ್ಮ ಕುಟುಂಬ, ನಿಮ್ಮ ಮನಸ್ಥಿತಿ ಎಲ್ಲವನ್ನೂ ಕೇಳಿ, ಓದಿ ಅಷ್ಟೇ ಪರಿಚಿತರು ನಾವು. ಜಡ್ಜಮೆಂಟಲ್ ಆದ ಮಾತುಗಳನ್ನು ಹೇಳುವುದು ಒಳಗೊಂದು ಮುಳ್ಳುಮುರಿದ ಭಾವ ಹುಟ್ಟಿಸುತ್ತದೆ.

    ಇದೆಲ್ಲದರ ಹೊರತಾಗಿಯೂ
    ‘ನಾವೇನ್ ತಿಂತಿವಿ..ಎಲ್ಲ್ ಮಲಗ್ತಿವಿ…ಎಲ್ಲ ಬರೆದುಬಿಟ್ಟಿದ್ದಾನೆ…ವಿಧಿ…ವಿಧಿಯ ಮುಂದೆ ನಮ್ದೇನಿಲ್ಲ..’

    ನಿಮ್ಮದೇ ಸಿನೆಮಾ ಡೈಲಾಗ್ …ಮತ್ತು ಇದೇ ಅಂತಿಮ ಸತ್ಯ.

    ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ರಾಜ್ ಕುಮಾರ್ ಅಂತ್ಯ ಸಂಸ್ಕಾರ

    BENGALURU OCT 29

    ಇಂದು ನಿಧನರಾದ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿಸಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

    ಡಾ. ರಾಜ್ ಕುಮಾರ್ ಪ್ರತಿಷ್ಠಾನದ ಸ್ವಾಮ್ಯದಲ್ಲಿರುವ ಜಮೀನನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲು ನಿರ್ಧರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

    ಪುನೀತ್ ಹಠಾತ್ ನಿಧನ; ಕಂಬನಿ ಮಿಡಿದ ಮೋದಿ

    ಕನ್ನಡದ ಜನಪ್ರಿಯ ನಟ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ತಾವು ಪುನೀತ್ ಅವರೊಂದಿಗಿರುವ ಫೋಟೋವನ್ನು ಟ್ವೀಟ್ ಮಾಡಿರುವ ಅವರು ವಿಧಿ ನಮ್ಮಿಂದ ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ದೂರ ಮಾಡಿದೆ ಎಂದು ದುಃಖಿಸಿದ್ದಾರೆ.

    ಮುಂದಿನ ತಲೆಮಾರು ಈ ಕಲಾವಿದನನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ ಎಂದೂ ಅವರು ಹೇಳಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

    ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬ, ಅಪಾರ ಅಭಿಮಾನಿಗಳಿಗೆ ಆಘಾತವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರೂ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

    pm-modi-condoles-death-of-kannada-actor-puneeth-rajkumar

    ಪುನೀತ್ ರಾಜ್ ಕುಮಾರ್ ನಿಧನ; ಕಣ್ಮರೆಯಾದ ಯುವರತ್ನ

    ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದ ಪುನೀತ್ ರಾಜ್ ಕುಮಾರ್ (45) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಮೇರು ನಟ ಡಾ. ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ 26 ಚಿತ್ರಗಳಲ್ಲಿ ಅಭಿನಯಿಸಿದ್ದರು.

    ಇಂದು ಬೆಳಿಗ್ಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುವಾಗ ತೀವ್ರ ಹೃದಯಾಘಾತಕ್ಕೆ ತುತ್ತಾದ ಅವರನ್ನು ವಿಕ್ರಮ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದರು.

    ತಮ್ಮ ತಂದೆ ರಾಜ್ ಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ವಸಂತ ಗೀತ (1980), ಭಾಗ್ಯವಂತ (1981),  ಚಲಿಸುವ ಮೋಡಗಳು  (1982), ಎರಡು ನಕ್ಷತ್ರಗಳು  (1983) ಮತ್ತು ಬೆಟ್ಟದ ಹೂವು  (1985) ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು.

    ನಾಯಕನಾಗಿ ಅವರ ಮೊದಲ ಚಿತ್ರ ಅಪ್ಪು (2002 ).ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಚಿತ್ರ ಯುವರತ್ನ.

    ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು.ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ದ್ರಿತಿ ಮತ್ತು ವಂದಿತಾ.ಇವರ ಮೊದಲ ಹೆಸರು ಮಾ.ಲೋಹಿತ್.

    ಬಾಲ ನಟನಾಗಿ ಅಭಿನಯಿಯಿದ ಚಿತ್ರಗಳು

    1. ಪ್ರೇಮದ ಕಾಣಿಕೆ
    2. ಭಾಗ್ಯವಂತ
    3. ಎರಡು ನಕ್ಷತ್ರಗಳು
    4. ಬೆಟ್ಟದ ಹೂವು
    5. ಚಲಿಸುವ ಮೋಡಗಳು
    6. ಶಿವ ಮೆಚ್ಚಿದ ಕಣ್ಣಪ್ಪ
    7. ಪರಶುರಾಮ್
    8. ಯಾರಿವನು
    9. ಭಕ್ತ ಪ್ರಹ್ಲಾದ
    10. ವಸಂತ ಗೀತ

    ನಾಯಕ ನಟನಾಗಿ

    ಸಂಖ್ಯೆವರ್ಷಚಿತ್ರದ ಹೆಸರುನಿರ್ದೇಶನಸಂಗೀತ
    ೨೦೦೨ಅಪ್ಪುಪುರಿ ಜಗನಾಥ್ಗುರುಕಿರಣ್
    ೨೦೦೩ಅಭಿದಿನೇಶ್ ಬಾಬುಗುರುಕಿರಣ್
    ೨೦೦೪ವೀರ ಕನ್ನಡಿಗಮೆಹರ್ ರಮೇಶ್ಚಕ್ರಿ
    ೨೦೦೪ಮೌರ್ಯಎಸ್. ನಾರಾಯಣ್ಗುರುಕಿರಣ್
    ೨೦೦೫ಆಕಾಶ್ಮಹೇಶ್ ಬಾಬುಆರ್.ಪಿ.ಪಟ್ನಾಯಕ್
    ೨೦೦೫ನಮ್ಮ ಬಸವವೀರಾ ಶಂಕರ್ಗುರುಕಿರಣ್
    ೨೦೦೬ಅಜಯ್ಮೆಹರ್ ರಮೇಶ್ಮಣಿಶರ್ಮ
    ೨೦೦೭ಅರಸುಮಹೇಶ್ ಬಾಬುಜೋಶ್ವ ಶ್ರೀಧರ್
    ೨೦೦೭ಮಿಲನಪ್ರಕಾಶ್ಮನೋಮೂರ್ತಿ
    ೧೦೨೦೦೮ಬಿಂದಾಸ್ಡಿ .ರಾಜೇಂದ್ರ ಬಾಬುಗುರುಕಿರಣ್
    ೧೧೨೦೦೮ವಂಶಿಪ್ರಕಾಶ್ಆರ್.ಪಿ.ಪಟ್ನಾಯಕ್
    ೧೨೨೦೦೯ರಾಜ್ ದ ಶೋಮ್ಯಾನ್ಪ್ರೇಮ್ವಿ.ಹರಿಕೃಷ್ಣ
    ೧೩೨೦೦೯ಪೃಥ್ವಿಜೇಕಬ್ ವರ್ಗೀಸ್ಮಣಿಕಾಂತ್ ಕದ್ರಿ
    ೧೪೨೦೧೦ರಾಮ್ಕೆ.ಮಾದೇಶ್ವಿ.ಹರಿಕೃಷ್ಣ
    ೧೫೨೦೧೦ಜಾಕಿಸೂರಿವಿ.ಹರಿಕೃಷ್ಣ
    ೧೬೨೦೧೧ಹುಡುಗರುಕೆ.ಮಾದೇಶ್ವಿ.ಹರಿಕೃಷ್ಣ
    ೧೭೨೦೧೧ಪರಮಾತ್ಮಯೋಗರಾಜ್ ಭಟ್ವಿ.ಹರಿಕೃಷ್ಣ
    ೧೮೨೦೧೨ಅಣ್ಣ ಬಾಂಡ್ಸೂರಿವಿ.ಹರಿಕೃಷ್ಣ
    ೧೯೨೦೧೨ಯಾರೇ ಕೂಗಾಡಲಿಸಮುದ್ರಖಣಿವಿ.ಹರಿಕೃಷ್ಣ
    ೨೦೨೦೧೪ನಿನ್ನಿಂದಲೇಜಯಂತ್ ಸಿ ಪರಾಂಜಿಮಣಿಶರ್ಮ
    ೨೧೨೦೧೫ಮೈತ್ರಿಗಿರಿರಾಜ್.ಬಿ.ಎಂಇಳೆಯರಾಜ
    ೨೨೨೦೧೫ಪವರ್ ಸ್ಟಾರ್ಕೆ.ಮಾದೇಶ್ತಮನ್ ಎಸ್. ಎಸ್
    ೨೩೨೦೧೫ಧೀರ ರಣ ವಿಕ್ರಮಪವನ್ ಒಡೆಯರ್ವಿ.ಹರಿಕೃಷ್ಣ
    ೨೪೨೦೧೬ಚಕ್ರವ್ಯೂಹಶರವಣನ್.ಎಂತಮನ್ ಎಸ್. ಎಸ್
    ೨೫೨೦೧೬ದೊ‍ಡ್ಮನೆ ಹುಡುಗದುನಿಯಾ ಸೂರಿವಿ.ಹರಿಕೃಷ್ಣ
    ೨೬೨೦೧೭ರಾಜಕುಮಾರಸಂತೋಷ್ ಆನಂದ್ ರಾಮ್ವಿ.ಹರಿಕೃಷ್ಣ
    ೨೭೨೦೧೭ಅಂಜನಿ ಪುತ್ರಹರ್ಷರವಿ ಬಸ್ರುರೂ
    ೨೮


    29
    ೨೦೧೯

    2020
    ನಟಸಾರ್ವಭೌಮ

    ಯುವರತ್ನ


    ಕಿರುತೆರೆಯಲ್ಲಿ

    new education policy 2021: ಮಾರ್ಚ್ ಹೊತ್ತಿಗೆ ಇಡೀ ಶಿಕ್ಷಣ ವ್ಯವಸ್ಥೆಯ ಡಿಜಿಟಲ್ ರೂಪಾಂತರ

    BELLARY OCT 28

    ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಅನ್ವಯಿಕತೆಯ ಮೂಲಕ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಆಗಿ ರೂಪಾಂತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ -Dr.C.N.Ashwatha Narayana-ಹೇಳಿದ್ದಾರೆ.

    ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ-Vijayanagara Sri Krishnadevaraya University- ಮತ್ತು ನಾಸ್ಕಾಂ -NASSCOM-ನಡುವಿನ ಒಡಂಬಡಿಕೆಗೆ ಮತ್ತು ಎನ್ಇಪಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸ್ಕಿಲ್ಸ್ ಪಾಸ್ ಪೋರ್ಟ್, ಸ್ಕಿಲ್ಸ್ ವ್ಯಾಲೆಟ್ ಮತ್ತು ಬ್ಯಾಡ್ಜಸ್ ನಂತಹ ಜಾಗತಿಕ ಗುಣಮಟ್ಟದ ಕೌಶಲ್ಯಗಳು ಉಚಿತವಾಗಿ ಸಿಗಲಿವೆ ಎಂದರು. ಈ ಕಾರ್ಯಾಗಾರವು ಇಲ್ಲಿನ ಬಳ್ಳಾರಿ ಎಂಜಿನಿಯರಿಂಗ್ ಸಂಸ್ಥೆ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಿತು.

    ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆ ಸೇರಿದಂತೆ ಇತರ ಮೂಲಗಳಿಂದ ಈ ಶೈಕ್ಷಣಿಕ ವರ್ಷದಿಂದಲೇ 10 ಸಾವಿರ ಶಿಕ್ಷಕರಿಗೆ ಡಿಜಿಟಲ್ ತರಬೇತಿ ಕೊಡಲಾಗುವುದು. ಇನ್ಫೋಸಿಸ್ ಸಂಸ್ಥೆ ಮತ್ತು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಮೂಲಕವೂ 3 ಸಾವಿರ ಶಿಕ್ಷಕರಿಗೆ ಇಂತಹ ವಿಶ್ವ ಗುಣಮಟ್ಟದ ತರಬೇತಿಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

    ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎರಡು ವರ್ಷಗಳಲ್ಲಿ 3.50 ಲಕ್ಷ ಕಲಿಕಾ ಸಾಮಗ್ರಿ ಸಿದ್ಧಪಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ನಿರಂತರವಾಗಿ ಕಲಿಯಬಹುದಾಗಿದೆ. ಬಹುಶಿಸ್ತೀಯ ಕಲಿಕೆಯ ಮಾದರಿಯನ್ನು ಪ್ರಪ್ರಥಮವಾಗಿ ಅಳವಡಿಸಿಕೊಂಡಿರುವ ರಾಜ್ಯದತ್ತ ಇಡೀ ಭಾರತವೇ ನೋಡುತ್ತಿದೆ ಎಂದು ಸಚಿವರು ನುಡಿದರು.

    ಕರ್ನಾಟಕವೇ ಇವತ್ತು ದೇಶದ ಜ್ಞಾನ ಮತ್ತು ಆರ್ಥಿಕ ರಾಜಧಾನಿಯಾಗಿದ್ದು, ಅಮೆರಿಕದಂತೆ ಉಜ್ವಲ ಅವಕಾಶಗಳ ಆಡುಂಬೊಲವಾಗಿದೆ. ಈ ವಿಚಾರದಲ್ಲಿ ನಾವು ಮುಂಬೈಯನ್ನು ಹಿಂದಿಕ್ಕಿದ್ದೇವೆ. ಸಂಶೋಧನೆ ಮತ್ತು ಆವಿಷ್ಕಾರಗಳ ತೊಟ್ಟಿಲಾಗಿರುವ ರಾಜ್ಯದ ಶಿಕ್ಷಣ ಕ್ಷೇತ್ರದತ್ತ ಈಗ ಇಡೀ ವಿಶ್ವವೇ ನೋಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

    ಎನ್ಇಪಿ ಗುರಿಯಂತೆ ಪ್ರತಿಯೊಬ್ಬ ಶಿಕ್ಷಿತನಿಗೂ ಉದ್ಯೋಗ ಸಿಗಬೇಕು, ಇಲ್ಲವೇ ಉದ್ಯೋಗದಾತನಾಗಬೇಕು. ಈ ನಿಟ್ಟಿನಲ್ಲಿ ಅನುಭವನಿಷ್ಠ ಕಲಿಕೆ, ಪ್ರಾಯೋಗಿಕತೆ, ನಾಯಕತ್ವ, ಕೌಶಲ್ಯ ಮತ್ತು ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಆಯಾಯ ತರಗತಿಗಳಲ್ಲೇ ನಡೆಯಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

    ಎಂಜಿನಿಯರಿಂಗ್ ನಲ್ಲಿ ಈಗಾಗಲೇ ಆಂತರಿಕ ಮೌಲ್ಯಮಾಪನವನ್ನು ಪ್ರತೀ ವಿಷಯಕ್ಕೆ 50 ಅಂಕಗಳಿಗೆ ಹೆಚ್ಚಿಸಲಾಗಿದೆ. ಪದವಿ ಶಿಕ್ಷಣದಲ್ಲೂ ಇದೇ ವ್ಯವಸ್ಥೆ ಜಾರಿಯಾಗಲಿದೆ. ಇದರನ್ವಯ, 45 ನಿಮಿಷಗಳ ಬೋಧನೆ ಮತ್ತು 15 ನಿಮಿಷಗಳ ಆಂತರಿಕ ಮೌಲ್ಯಮಾಪನ ಎಲ್ಲೆಡೆ ಬರಲಿದೆ. ಇದರ ಜತೆಗೆ ಅತ್ಯುತ್ತಮ ವಿದೇಶೀ ವಿ.ವಿ.ಗಳೊಂದಿಗೆ ಸಹಭಾಗಿತ್ವಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

    ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಎಂಎಲ್ ಸಿ ಕೆ.ಸಿ.ಕೊಂಡಯ್ಯ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ., ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ,  ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಬಿಐಇಟಿ ಅಧ್ಯಕ್ಷ ಯಶವಂತ್ ಭೂಪಾಲ್ ಉಪಸ್ಥಿತರಿದ್ದರು

    ಮಾತಾಡ್ ಮಾತಾಡ್ ಕನ್ನಡ;ಲಕ್ಷ ಕಂಠಗಳ ಗೀತ ಗಾಯನ

    ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿನ ಆಡಳಿತ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗ ಹಿಂದೆಂದೂ ಕಂಡು ಕೇಳರಿಯದ ಇತಿಹಾಸಕ್ಕೆ ಸಾಕ್ಷಿಯಾಯಿತು.

    ವಿಧಾನಸೌಧದ ಎಲ್ಲ ಮೆಟ್ಟಿಲುಗಳ ಮೇಲೆ ಬಣ್ಣಬಣ್ಣದ ಉಡುಗೆ-ತೊಡುಗೆ ತೊಟ್ಟ ಪುರುಷರು ಮಹಿಳೆಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು ಆರಕ್ಷಕ ಸಿಬ್ಬಂದಿ ಹೀಗೆ ಯಾವ ಭೇದ ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಯಿತು.

    ಬೆಳಿಗ್ಗೆ ಸರಿಯಾಗಿ ಹನ್ನೊಂದು ಗಂಟೆಗೆ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಲಾಗಿದ್ದ ಬೃಹತ್ ಪರದೆಯ ಮುಂದೆ ನಿಂತು ಕನ್ನಡ ಗೀತ ಗಾಯನದ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರ ಜೊತೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳನ್ನು ಒಳಗೊಂಡಂತೆ ಎಲ್ಲಾ ಹಿರಿಯ ಭಾರತೀಯ ಆಡಳಿತ ಸೇವೆಯ ಹಾಗೂ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳು. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪೂರ್ವ ಕಾರ್ಯಕ್ರಮವನ್ನಾಗಿ ಮಾಡಲು ಸಹಕರಿಸಿದರು.

    ಹುಬ್ಭಳ್ಳಿಯಲ್ಲಿ ಮುಖ್ಯಮಂತ್ರಿ

    ಹುಬ್ಬಳ್ಳಿಯಲ್ಲಿಂದು ಮಹಾನಗರಪಾಲಿಕೆ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ವೈಭವ, ಕನ್ನಡದ ಶ್ರೇಷ್ಟತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು.


    ಇದೇ ರೀತಿ ಇಡೀ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ತಾಲೂಕು ಕೇಂದ್ರಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ ಭಾರಿ ಉತ್ಸಾಹ ,ಸಡಗರ ಸಂಭ್ರಮದಿಂದ ನಡೆಯಿತು.ಒಂದು ಅಂದಾಜಿನ ಪ್ರಕಾರ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 18 ಲಕ್ಷ ಎಂದು ವರದಿಗಳು ತಿಳಿಸಿವೆ.


    ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಹಾಗೆಯೇ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಈ ಗೀತಗಾಯನ ಅಭೂತಪೂರ್ವ ಜನಸ್ಪಂದನ ಯೊಂದಿಗೆ ಆಯೋಜನೆಗೊಂಡಿತ್ತು.
    ನೂರಾರು ಗಾಯಕರು ಕಲಾವಿದರು ಸಾಹಿತಿಗಳು ಜನಸಾಮಾನ್ಯರು ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ವಿಶ್ವವಿಖ್ಯಾತ ಗೋಲ್ ಗುಂಬಜ್ ಮುಂಭಾಗದಲ್ಲಿ 50 ಕಲಾತಂಡಗಳು 250 ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
    ಮಂಡ್ಯದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
    ಉಡುಪಿಯ ಶ್ರೀಕೃಷ್ಣ ದೇಗುಲದ ಮುಂಭಾಗ ಮತ್ತು ಹಂಪಿಯ ಐತಿಹಾಸಿಕ ಸ್ಮಾರಕಗಳ ಮುಂದೆ ಅಭೂತಪೂರ್ವ ಕನ್ನಡ ಗೀತೆಗಳ ಮಾರ್ದನಿಸಿದವು.

    ಬೆಂಗಳೂರು ವಿಭಾಗದ 125 ಸ್ಥಳಗಳಲ್ಲಿ 161232ಮಂದಿ ಕನ್ನಡ ಗೀತೆಗಳಿಗೆ ತಮ್ಮ ದನಿಗೂಡಿಸಿದರು.

    ಮೈಸೂರು ವಿಭಾಗದಲ್ಲಿ
    96 ಸ್ಥಳಗಳಲ್ಲಿ 541365ಜನ ಈ ಗೀತ ಗಾಯನದಲ್ಲಿ ಪಾಲ್ಗೊಂಡರು.

    ಬೆಳಗಾವಿ ವಿಭಾಗದ 105 ಸ್ಥಳಗಳಲ್ಲಿ 1074418ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಕಲಬುರ್ಗಿ ವಿಭಾಗದ 60 ಸ್ಥಳಗಳಲ್ಲಿ 77125ಜನ ಈ ಗೀತ ಗಾಯನ ದ ಮಾಧುರ್ಯಕ್ಕೆ ಜೊತೆಯಾದರು.

    ದೆಹಲಿ ಮುಂಬಯಿ ಕಾಸರಗೋಡು ಮತ್ತು ಪುಣೆ ಹೀಗೆ ಹೊರರಾಜ್ಯಗಳಿಂದ 31 ಸ್ಥಳಗಳಲ್ಲಿ 350 ಮಂದಿ ಈ ಗೀತ ಗಾಯನದ ಸಂಭ್ರಮಕ್ಕೆ ಜೊತೆಯಾದರು.

    ಒಟ್ಟಾರೆ ಇದು ದಾಖಲೆಯ ಮೇಲೆ ದಾಖಲೆ ಬರೆದ ಕಾರ್ಯಕ್ರಮವಾಗಿ ಕನ್ನಡ ಸಂಸ್ಕೃತಿಯ ಅಧ್ಯಾಯದಲ್ಲಿ ಅಚ್ಚಳಿಯದೆ ಉಳಿಯಿತು.

    error: Content is protected !!