24.1 C
Karnataka
Friday, May 22, 2026
    Home Blog Page 44

    ಇಂದಿನಿಂದ ಐತಿಹಾಸಿಕ ಹಾಸನಾಂಬೆಯ ದರ್ಶನಕ್ಕೆ ಭಕ್ತರಿಗೆ ಅವಕಾಶ

    HASSAN OCT 28

    ಪ್ರಸಿದ್ಧ ಹಾಸನಾಂಬೆ ಹಾಗೂ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅ.28 ರಿಂದ ನವೆಂಬರ್ 6ರವರೆಗೆ ನಡೆಯಲಿದೆ, ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ ಸರಳವಾಗಿ ನಡೆಯಲಿದ್ದು, ಅಕ್ಟೋಬರ್ ಇಂದಿನಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮೊದಲನೇ ದಿನ ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ಅವಕಾಶವಿಲ್ಲ.

    ಈ ಬಾರಿ ಹಾಸನಾಂಬೆ ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಒಂದು ಸಾವಿರ, 300 ವಿಶೇಷ ದರ್ಶನ ಟಿಕೆಟ್ ಮೂಲಕ ಅವಕಾಶ ನೀಡಲಾಗಿದೆ.

    ದೇವರ ದರ್ಶನಕ್ಕೆ ಬರುವವರು 2 ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯ. ವ್ಯಾಕ್ಸಿನ್ ಪಡೆದವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

    SENSEX ಗರಿಷ್ಠ – ಅವಕಾಶ ಅದ್ಭುತ, ಇದ್ದರೆ ಚಿಂತನೆ ನಿಯಂತ್ರಿತ

    Indian Stock Market- ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಈ ವರ್ಷದ ಆರಂಭದಲ್ಲಿ 47,700 ರ ಮಟ್ಟದಲ್ಲಿದ್ದು, ಆಗಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ಮೊತ್ತವು ರೂ.189 ಲಕ್ಷ ಕೋಟಿಯ ಸಮೀಪವಿತ್ತು. ಆ ಸಂದರ್ಭದಲ್ಲಿ ನೋಂದಾಯಿಸಿಕೊಂಡಿದ್ದ ರೀಟೇಲ್‌ ಗ್ರಾಹಕರ ಸಂಖೈ ಮಾತ್ರ ಕೇವಲ 5.89 ಕೋಟಿಯಷ್ಠೆ. ಸಧ್ಯ ಸೆನ್ಸೆಕ್ಸ್‌60,821 ಪಾಯಿಂಟುಗಳಲ್ಲಿದ್ದು, ರೂ.264.39 ಲಕ್ಷ ಕೋಟಿ ಮಾರ್ಕೆಟ್‌ಕ್ಯಾಪಿಟಲೈಸೇಷನ್‌ಹೊಂದಿದೆ.

    ಈ ಭಾರಿ ಬೆಳವಣಿಗೆಯ ಹಿಂದೆ ಅಡಕವಾಗಿರುವ ನಮ್ಮ ದೇಶದ ಜನಶಕ್ತಿ. ನೋಂದಾಯಿತ ಗ್ರಾಹಕರ ಸಂಖ್ಯೆಯು 8.37 ಕೋಟಿಗೆ ಏರಿಕೆಯಾಗಿದೆ. ಇದೇ ರೀತಿಯ ರೀಟೇಲ್‌ ಗ್ರಾಹಕರ ಆಸಕ್ತಿ ಹೆಚ್ಚುತ್ತಾ ಹೋದರೆ ನಮ್ಮ ಷೇರುವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್‌ಆಗಿರುವ ಕಂಪನಿಗಳು ಅತಿ ವಿರಳವಾದಂತಾಗಿ, ಬೇಡಿಕೆಯನ್ನು ಪೂರೈಸಲಸಮರ್ಥವಾಗಿ, ಲಿಸ್ಟಿಂಗ್‌ಆಗಿರುವ ಕಂಪನಿಗಳಿಗೆ ಭಾರಿ ಬೇಡಿಕೆಯನ್ನುಂಟುಮಾಡಿ ಷೇರಿನ ಬೆಲೆಗಳನ್ನು ಮತ್ತಷ್ಟು ಏರಿಕೆಗೊಳಪಡಿಸಲೂಬಹುದು. ಹೊಸದಾಗಿ ನೋಂದಾಯಿಸಿಕೊಂಡಿರುವ ಗ್ರಾಹಕರ ಪಟ್ಟಿಯಲ್ಲಿ ಮಹರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಗುಜರಾತ್‌, ಉತ್ತರ ಪ್ರದೇಶ, ಕರ್ನಾಟಕಗಳು ಇವೆ. ಈ ಹೂಡಿಕೆದಾರರು, ಪೇಟೆಯ ಏರಿಳಿತಗಳಿಗೆ, ಎಷ್ಟರ ಮಟ್ಟಿಗೆ ಸ್ಥಿರವಾಗಿರುತ್ತಾರೆ ಎಂಬುದು ಮುಖ್ಯ.

    ಸೆನ್ಸೆಕ್ಸ್‌60 ಸಾವಿರದ ಗಡಿದಾಟಿ ನಿವೃತ್ತಿಯ ಹಂತ ತಲುಪಿದೆ ಎಂದು ಒಂದೆಡೆ ವಿಶ್ಲೇಷಿಸಬಹುದಾದರೆ, ನಿಫ್ಟಿಯು-NIFFTY- 18 ಸಾವಿರದ ಗಡಿದಾಟಿ ಯೌವನಕ್ಕೆ ಪಾದಾರ್ಪಣೆ ಮಾಡಿದೆ ಎನ್ನುವರು. ಈ ಮಧ್ಯೆ ಪೇಟೆಯು ಇಳಿಕೆಯಾದರೆ ದಣಿವಿನಿಂದ ನಿವೃತ್ತಿ ಎಂದಾದರೆ, ಷೇರುಪೇಟೆ ಏರಿಕೆ ಕಂಡಲ್ಲಿ ಯೌವನದ ಪ್ರಭಾವ ಎನ್ನಬಹುದು. ಅಂದರೆ ಪೇಟೆಯು ಯಾವ ದಿಶೆಯಲ್ಲಿ ಸಾಗಿದರೂ ಅದನ್ನು ವಿಶ್ಲೇಷಿಸಬಹುದಾದ ಪರಿಸ್ಠಿತಿಯಲ್ಲಿ ಈಗಿನ ಪೇಟೆಗಳು ತಲುಪಿವೆ. ಆದರೂ ಕಂಪನಿಗಳ ಷೇರುಗಳ ಬೆಲೆಗಳು ಪ್ರದರ್ಶಿಸುವ ಏರಿಳಿತಗಳು, ಕೆಲವು ಭಾರಿ ರಭಸದ ಏರಿಳಿತಗಳು ಹೂಡಿಕೆಗೆ ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ.

    sensex -22-10-2021

    ಆದರೆ ಈ ಸಂದರ್ಭದಲ್ಲಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಉತ್ತಮ ಸಾಧನೆಯಾಧಾರಿತವಾದ, ಆಕರ್ಷಕ ಡಿವಿಡೆಂಡ್‌ಗಳನ್ನು ವಿತರಿಸುವ ಹೂಡಿಕೆದಾರ ಸ್ನೇಹಿ ಆಡಳಿತ ಮಂಡಳಿ ಹೊಂದಿರುವ, ಬೆಲೆಗಳು ಕುಸಿತಕಂಡಿರುವ ಕಂಪನಿಗಳನ್ನು ಮಾತ್ರ ಗಮನಿಸಬೇಕು. ನಂತರದಲ್ಲಿ ಆ ಷೇರು ಒದಗಿಸುವ ಲಾಭದತ್ತಲೇ ಗಮಿನವಿರಿಸಿ ನಿರ್ಗಮಿಸುವ / ಲಾಭಗಳಿಕೆಗಾಗಿ ನಗದೀಕರಣ ಮಾಡಿಕೊಳ್ಳುವಂತಿದ್ದಲ್ಲಿ ಮಾತ್ರ ಹೂಡಿಕೆ ಯಶಸ್ಸು ಕಾಣಲು ಸಾಧ್ಯ.

    ಪೇಟೆಯಲ್ಲಿ ಕೆಲವು ದಿನಗಳಲ್ಲಿ ಪ್ರದರ್ಶಿತವಾದ ಕೆಲವು ಏರಿಳಿತಗಳ ಉದಾಹರಣೆಗಳನ್ನು ಪರಿಶೀಲಿಸೋಣ:

    ಲೌರಸ್‌ಲ್ಯಾಬ್ಸ್‌ಲಿಮಿಟೆಡ್:ಈ ಕಂಪನಿಯು ತನ್ನ ಎರಡನೇ ತ್ರೈಮಾಸಿಕದ ಫಲಿತಾಂಶದೊಂದಿಗೆ ಈ ತಿಂಗಳ 28 ರಂದು ಲಾಭಾಂಶ ಪ್ರಕಟಿಸುವ ಕಾರ್ಯ ಸೂಚಿ ಪ್ರಕಟಿಸಿದೆ. ಆದರೆ ಕಳೆದ ಒಂದೇ ವಾರದಲ್ಲಿ ಷೇರಿನ ಬೆಲೆಯು ರೂ.660 ರ ಸಮೀಪದಿಂದ ರೂ.520 ರವರೆಗೂ ಕುಸಿದು ರೂ.537 ರ ಸಮೀಪದಲ್ಲಿದೆ. ಅಂದರೆ ಫಲಿತಾಂಶಕ್ಕೂ ಮುನ್ನ ಈ ರೀತಿ ಕುಸಿತಕ್ಕೊಳಗಾಗಿರುವುದು ಎರಡು ಕಾರಣವಿರಬಹುದು. ಒಂದು ಕಂಪನಿಯ ಸಾಧನೆಯು ಉತ್ತಮವಾಗಿರಲಾರದು ಎಂಬ ಉದ್ದೇಶದಿಂದ ಮಾರಾಟದ ಒತ್ತಡ ಬಂದಿರಬಹುದು, ಇಲ್ಲವೇ ಕಂಪನಿಯ ಸಾಧನೆಯ ಒಳ ಸುದ್ಧಿಯು ಸೋರಿಕೆಯಾಗಿರಬೇಕು, ಪರ್ಯಾಯವಾಗಿ ಸಣ್ಣ ಹೂಡಿಕೆದಾರರ ದಿಕ್ಕು ತಪ್ಪಿಸಲು ಭಾರಿ ಇಳಿಕೆ ಪ್ರದರ್ಶಿಸಿ ನಂತರ ಫಲಿತಾಂಶದ ಕಾರಣ ಏರಿಕೆಗೆ ದಾರಿ ಮಾಡಿಕೊಂಡಿರಲೂ ಬಹುದು. ಕಾದು ನೋಡೋಣ.

    ಇಂಡಿಯನ್‌ ಎನರ್ಜಿ ಎಕ್ಸ್ ಚೇಂಜ್‌ ಲಿಮಿಟೆಡ್:ಹೊಸದಾಗಿ ʼಎಫ್‌ & ಒʼ ಸಮೂಹಕ್ಕೆ ಪ್ರವೇಶ ಪಡೆದ ಈ ಕಂಪನಿಯು ಕಳೆದ ಒಂದು ತಿಂಗಳ ಅವಧಿಯಲ್ಲಿ ರೂ.567 ರ ಸಮೀಪದಿಂದ ರೂ.956 ರವರೆಗೂ ಏರಿಕೆ ಕಂಡು, ರೂ.764 ರಲ್ಲಿ ಕೊನೆಗೊಂಡಿದೆ. ವಿಶೇಷವೆಂದರೆ ಕಂಪನಿಯು ಪ್ರತಿ ಒಂದು ಷೇರಿಗೆ ಎರಡು ಷೇರುಗಳ ಬೋನಸ್‌ ಘೋಷಿಸಿದ ಕಾರಣ ಶುಕ್ರವಾರ ಆರಂಭದಲ್ಲಿ ದಿನದ ಗರಿಷ್ಠ ಆವರಣ ಮಿತಿ ರೂ.833 ರಲ್ಲಿದ್ದು ಸ್ವಲ್ಪ ಸಮಯದ ನಂತರ ರೂ.760 ರವರೆಗೂ ಕುಸಿದು ರೂ.764 ರಲ್ಲಿ ಕೊನೆಗೊಂಡಿದೆ. ಆದರೆ ದಿನದ ಆರಂಭದಲ್ಲಿ ಗರಿಷ್ಠದಲ್ಲಿದ್ದಾಗ ಬೋನಸ್‌ ಷೇರು ಎಂಬ ಮಾಂತ್ರಿಕ ಪದಕ್ಕೆ ಮೋಹಿತರಾದವರಿಗೆ ಬೇಸರ ಮೂಡಿಸುವಂತಾಯಿತು. ಅಂದರೆ ಚಟುವಟಿಕೆಯಲ್ಲಿ ಯಾವುದೇ ಬೆಳವಣಿಗೆಗಳಿಗೆ ಆದ್ಯತೆ ನೀಡದೆ ಕೇವಲ ʼವ್ಯಾಲ್ಯು ಪಿಕ್‌ – ಪ್ರಾಫಿಟ್‌ ಬುಕ್‌ ʼ ಎಂಬುದು ಅನುಕೂಲಕರವೆಂದಾಯಿತು.

    ಇಂಡಿಯಾ ಬುಲ್‌ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್:ಈ ಷೇರಿನ ಬೆಲೆಯು ಕಳೆದ ಒಂದು ತಿಂಗಳಿನಿಂದ ರೂ.222 ರ ಸಮೀಪದಿಂದ ರೂ.264 ರವರೆಗೂ ಏರಿಕೆ ಕಂಡು ರೂ.230 ರ ಸಮೀಪಕ್ಕೆ ಹಿಂದಿರುಗಿದೆ. ಸೆಪ್ಟೆಂಬರ್‌ 29 ರಂದು ರೂ.222 ರಲ್ಲಿದ್ದ ಷೇರಿನ ಬೆಲೆ ಅಕ್ಟೋಬರ್‌ 19 ರಂದು ರೂ.264 ರವರೆಗೂ ಜಿಗಿದು, 22 ರಂದು ರೂ.224 ರವರೆಗೂ ಕುಸಿದಿದೆ. ಅಂದರೆ ಸುಮಾರು 20 ದಿನಗಳಲ್ಲಿ ರೂ.42 ರಷ್ಟು ಏರಿಕೆ ಕಂಡು ರೂ.40 ರಷ್ಟು ಇಳಿಕೆ ಕಂಡಿದೆ. ಹಿಂದಿನ ತಿಂಗಳು ಈ ಕಂಪನಿ 1,650 ಕೋಟಿ ಅಮೇರಿಕನ್‌ ಡಾಲರ್‌ ಮೌಲ್ಯದ ಫಾರಿನ್‌ ಕರೆನ್ಸಿ ಕನ್ವರ್ಟಬಲ್‌ ಬಾಂಡ್‌ ಗಳನ್ನು ವಿತರಿಸಿದೆ. ನವೆಂಬರ್‌ 15 ರಂದು ಈ ಕಂಪನಿಯ ವಿಶೇಷ ಸಾಮಾನ್ಯ ಸಭೆ ನಡೆಯಲಿದೆ.

    ಜುಬಿಲಿಯಂಟ್‌ ಇನ್‌ ಗ್ರೇವಿಯಾ ಲಿಮಿಟೆಡ್:ಈ ಕಂಪನಿಯ ಷೇರು ಒಂದೇ ವಾರದಲ್ಲಿ ಪ್ರದರ್ಶಿಸಿದ ಏರಿಳಿತಗಳನ್ನು ಬೆರಗುಗೊಳಿಸುವಂತಹುದಾಗಿದೆ. ಸೋಮವಾರದಂದು ಕಂಪನಿಯ ಷೇರಿನ ಬೆಲೆ ರೂ.877 ರ ವಾರ್ಷಿಕ / ಸರ್ವಕಾಲೀನ ಗರಿಷ್ಠ ತಲುಪಿತು. 19 ರಂದು ಕಂಪನಿಯು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿತು. ವಹಿವಾಟು ಉತ್ತಮವಾಗಿದ್ದರೂ ಲಾಭಗಳಿಕೆಯು ಸ್ವಲ್ಪ ಕುಸಿತದಲ್ಲಿದೆ ಎಂಬ ಅಂಶದಿಂದ ಷೇರಿನ ಬೆಲೆ ಕುಸಿತಕ್ಕೊಳಗಾಗಿ ರೂ.657 ರವರೆಗೂ ತಲುಪಿ ಶುಕ್ರವಾರ ರೂ.689 ಕ್ಕೆ ಜಿಗಿದು ರೂ.677 ರ ಸಮೀಪ ಕೊನೆಗೊಂಡಿದೆ.

    ಸ್ಟೀಲ್‌ ಅಥಾರಿಟೀಸ್‌ ಆಫ್‌ ಇಂಡಿಯಾ ಲಿಮಿಟೆಡ್:ಈ ಕಂಪನಿಯ ಷೇರಿನ ಬೆಲೆ ಕೇವಲ ಹತ್ತೇ ದಿನಗಳಲ್ಲಿ ರೂ.115 ರ ಸಮೀಪದಿಂದ ರೂ.131 ರವರೆಗೂ ಜಿಗಿದು, ಅಲ್ಲಿಂದ ರೂ.115 ಕ್ಕೆ ಮರಳಿದೆ. ಕಂಪನಿಯ ಆಡಳಿತ ಮಂಡಳಿಯು ಈ ತಿಂಗಳ 29 ರಂದು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ ಎಂಬುದನ್ನು ಶುಕ್ರವಾರ ಸಂಜೆ ಪ್ರಕಟಣೆ ಹೊರಬಿದ್ದಿದೆ. ಇದು ಸೋಮವಾರ ಯಾವರೀತಿಯ ಪ್ರಭಾವ ಬೀರಬಹದೆಂಬುದನ್ನು ಕಾದು ನೋಡಬೇಕಾಗಿದೆ.

    ಚಿಂತನೆಗಳನ್ನುಸಕಾರಾತ್ಮಕವಾಗಿರುವಂತೆ ಮಾಡಲು, ರಚನಾತ್ಮಕತೆಯತ್ತ ತೊಡಗಿಸುವುದರೊಂದಿಗೆ ಮಿತವಾದ ಸಂಪಾದನೆ ಗಳಿಸಲು ಸಹ ಸಾಧ್ಯವಿರುವ ಸುಲಭ ಮಾರ್ಗ ಎಂದರೆ ಷೇರುಪೇಟೆ. ಷೇರುಪೇಟೆಯ ಚಟುವಟಿಕೆಗೆ ತೊಡಗಿಸಿಕೊಂಡವರಲ್ಲಿ ಸಾಮಾನ್ಯವಾಗಿ ನಕಾರಾತ್ಮಕವಾದ ಅಭಿಪ್ರಾಯ ಹೊರಬರುವುದು, ಕಾರಣ ನಡೆಸುವ ಚಟುವಟಿಕೆ ಕೇವಲ ಭಾವನಾತ್ಮಕವಾಗಿದ್ದು, ವಾಸ್ತವಿಕತೆಯಿಂದ ದೂರವಿರುವುದಾಗಿದೆ.

    ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಈಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೀಟೇಲ್‌ ಗ್ರಾಹಕರು, ಗೃಹಿಣಿಯರೂ ಸೇರಿದಂತೆ, ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ
    ಹಿರಿಯ ನಾಗರೀಕರೂ ಸೇರಿ, ಸೀಮಿತವಾದ, ನಿಯಂತ್ರಿತ ರೀತಿಯಲ್ಲಿ, ಯಾವುದೇ ವ್ಯಾಮೋಹಕ್ಕೊಳಗಾಗದೆ ಕೇವಲ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡಿ ಆಕರ್ಷಕ ಲಾಭ ಪಡೆಯುವ ಮೂಲಕ ತಮ್ಮ ದೈಹಿಕ, ಮಾನಸಿಕ, ಬಾಧೆಗಳನ್ನು ಮರೆತು ಆರೋಗ್ಯವನ್ನ ವೃದ್ಧಿಸಿಕೊಂಡ ಹಲವಾರು ಉದಾಹರಣೆಗಳುಂಟು. ಕೇವಲ ಮನಿ ವಿಕಾಸಕ್ಕಿಂತ ಮನೋವಿಕಾಸದೊಂದಿಗೆ ಮನಿ ವಿಕಾಸ ಪಡೆದು ಉತ್ತಮ ಸ್ವಾಸ್ಥ್ಯದೊಂದಿಗೆ ಕಾಸುಗಳಿಕೆಯೂ ಆಗುವುದು. ಇದಕ್ಕೆ ಪೂರಕವಾದ ಶೈಲಿ ಎಂದರೆ ʼವ್ಯಾಲ್ಯು ಪಿಕ್‌ – ಪ್ರಾಫಿಟ್‌ ಬುಕ್‌ ʼ, ಇಲ್ಲಿ ಪೇಟೆಗಳು ಗರಿಷ್ಠದಲ್ಲಿರುವ ಕಾರಣ ಪ್ರಾಫಿಟ್‌ ಬುಕ್‌ ಗೆ ಹೆಚ್ಚು ಆದ್ಯತೆಯಿರಲಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ಸ್ಮರಣಾಂಜಲಿ – ಪೋಲಿಸ್ ಅಮರವೀರ ಭಾವಚಿತ್ರ ಪ್ರದರ್ಶನ

    ಬಳಕೂರು ವಿ ಎಸ್ ನಾಯಕ

    ಅಂದು ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರವೇಶಿಸಿದವರಿಗೆ ಒಂದು ಕ್ಷಣ ಭಾವಪರವಶ ರನ್ನಗಿಸುವಂತಿತ್ತು. ಕಾರಣ ಪೊಲೀಸ್ ಸಂಸ್ಮರಣ ದಿನಾಚರಣೆಯ ಅಂಗವಾಗಿ ಪೋಲಿಸ್ ಅಮರವೀರ ಭಾವಚಿತ್ರ ಪ್ರದರ್ಶನ -ಸ್ಮರಣಾಂಜಲಿ -ಕಾರ್ಯಕ್ರಮ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಒಂದು ವಿಶೇಷವಾದ ಕಲಾ ಪ್ರದರ್ಶನವಾಗಿ ಹೊರಹೊಮ್ಮಿತ್ತು.

    ಕರ್ತವ್ಯ ನಿರತರಾಗಿದ್ದಾಗ ಪೊಲೀಸರು ಮಾಡಿದಸರ್ವೋಚ್ಚ ತ್ಯಾಗ ಬಲಿದಾನಗಳನ್ನು ಹೆಮ್ಮೆಯಿಂದ ಸ್ಮರಿಸಲು ಅಮರರಾದ ಪೊಲೀಸ್ ಹುತಾತ್ಮ ರ ಹೆಸರುಗಳನ್ನು ಆ ದಿನ ಈ ಪರೇಡ್ ನಲ್ಲಿ ಓದಲಾಗುತ್ತದೆ. ಮತ್ತು ಹುತಾತ್ಮರ ಗೌರವಕ್ಕಾಗಿ ಮೂರು ಬಾರಿ ಕುಶಾಲ ತೋಪುಗಳನ್ನು ಹರಿಸಲಾಗುತ್ತದೆ . ಈ ವರ್ಷ ಜಾಗತಿಕ ಪಿಡುಗಾಗಿರುವ ಕೋವಿಡ್ -19 ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಕರ್ನಾಟಕ ರಾಜ್ಯದಲ್ಲಿ 83 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಇನ್ನಿತರೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ 17 ಜನ ಹುತಾತ್ಮರಾಗಿರುತ್ತಾರೆ.

    ಈ ವೀರರ ಕರ್ತವ್ಯನಿಷ್ಠೆ ಬಲಿದಾನಗಳನ್ನು ಗೌರವಪೂರ್ಣವಾಗಿ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅದಕ್ಕಾಗಿ ಪೊಲೀಸ್ ಸಂಸ್ಮರಣ ದಿನಾಚರಣೆ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಪೊಲೀಸ್ಮ ಅಮರವೀರರ ಭಾವಚಿತ್ರ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ವಿನೂತನ ವಿಭಿನ್ನವಾಗಿ ಆಯೋಜಿಸಿರುದ್ದು ಎಲ್ಲರ ಗಮನ ಸೆಳೆಯುತ್ತಿದೆ.

    ಕರ್ನಾಟಕದಲ್ಲಿ ಕರ್ತವ್ಯದ ಅವಧಿಯಲ್ಲಿ ವೀರಮರಣವನ್ನಪ್ಪಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವ ಸ್ಮರಣಾಂಜಲಿ ಎಂಬ ಭಾವ ಚಿತ್ರ ಪ್ರದರ್ಶನ ಎರಡನೇ ಬಾರಿ ನಡೆಯುತ್ತಿದೆ. ಇದರ ಮೂಲಕ ಅವರ ತ್ಯಾಗ ಬಲಿದಾನ ಕರ್ತವ್ಯನಿಷ್ಠೆ ನಮನವನ್ನು ಸಲ್ಲಿಸುವ ಕಾರ್ಯಕ್ರಮ ಇದಾಗಿದೆ.

    ಸ್ಮರಣಾಂಜಲಿಪೋಲಿಸ್ ಅಮರವೀರ ರ ಭಾವಚಿತ್ರ ಪ್ರದರ್ಶನದ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಪ್ರೊಫೆಸರ್ ಕೆಎಸ್ ಅಪ್ಪಾಜಯ್ಯ ರವರು ಡಿಸೈನ್ ಇನ್ಸ್ಟಾಲೇಷನ್ ( ಸೃಜನಾತ್ಮಕ ವಿನ್ಯಾಸ ಅನಾವರಣಗೊಳಿಸಿದ್ದಾರೆ). ಇವರು ವಿನ್ಯಾಸಗೊಳಿಸಿರುವ ಭಾವಚಿತ್ರ ಪ್ರದರ್ಶನ ಎಲ್ಲರನ್ನೂ ಭಾವಪರವಶರಾಗಿಸುತ್ತದೆ. ಇವರ ಕ್ರಿಯಾಶೀಲತೆ ಕಲಾ ಗ್ಯಾಲರಿಗೆ ಬಂದು ವೀಕ್ಷಿಸುವಂತಹ ಎಲ್ಲರಿಗೂ ಒಂದು ಕ್ಷಣ ಭಾವನಾತ್ಮಕ ಸೆಳೆತ ಸೆಳೆಯುವಂತಿದೆ.

    ಬಿಆರ್ ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತರು( ಸಂಚಾರ ) ಇವರ ಮುಂದಾಳುತ್ವದಲ್ಲಿ ವಿಶೇಷವಾಗಿ ಈ ಪ್ರದರ್ಶನ ಬಂದಿರುವುದು ಇವರ ಉತ್ತಮ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪೊಲೀಸ್ ಸಮರವೀರ ಭಾವಚಿತ್ರ ಪ್ರದರ್ಶನ ಸ್ಮರಣಾಂಜಲಿ ಕಾರ್ಯಕ್ರಮವು ದಿನಾಂಕ 21-10-2021 ರಿಂದ ಆರಂಭವಾಗಿ 24-10-2021 ರವರೆಗೆ ಪ್ರದರ್ಶನ ನಡೆಯಲಿದ್ದು ಪ್ರತಿಯೊಬ್ಬರೂ ಬಂದು ಪ್ರದರ್ಶನವನ್ನು ವೀಕ್ಷಿಸುವ ಸದವಕಾಶ ದೊರೆಯಲಿದೆ. ಪ್ರವೇಶ ಉಚಿತ


    ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿ
    ಕುಮಾರಕೃಪಾ ರಸ್ತೆ ಬೆಂಗಳೂರು -1

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಪರಿಹಾರಕ್ಕೆ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟ ಅನುಮೋದನೆ

    NEW DELHI OCT 21

    ಪ್ರಧಾನಮಂತ್ರಿ ನರೇಂದ್ರ ಮೋದಿ-Narendra Modi ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 1.7.2021ರಿಂದ ಪೂರ್ವಾನ್ವಯವಾಗುವಂತೆ ಬಾಕಿ ಇದ್ದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ)DA ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್)DRಕ್ಕಾಗಿ ಹೆಚ್ಚುವರಿ ಕಂತಿನ ಹಣ ಬಿಡುಗಡೆಗೆ ಅನುಮೋದನೆ ನೀಡಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಹಾಲಿ ಇರುವ ಶೇ.28ರಷ್ಟು ಮೂಲ ಪಾವತಿ/ ಪಿಂಚಣಿ ದರದಲ್ಲಿ ಶೇ.3ರಷ್ಟು ಹೆಚ್ಚಳವಾಗಲಿದೆ.

    ಈ ಹೆಚ್ಚಳ ಒಪ್ಪಿತ ಸೂತ್ರದಂತೆ ಇರಲಿದೆ, ಅದು 7ನೇ ಕೇಂದ್ರ ವೇತನ ಆಯೋಗದ ಶಿಫಾರಸು ಆಧರಿಸಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡೂ ಸೇರಿ ವಾರ್ಷಿಕ ಬೊಕ್ಕಸದ ಮೇಲೆ 9,488.70 ಕೋಟಿ ರೂ. ಹೊರೆ ತಗುಲಲಿದೆ. ಇದರಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

    ಒಂದು ಬಿಲಿಯನ್ ಲಸಿಕೆ ನೀಡಿಕೆಯ ಮಹತ್ವದ ಮೈಲಿಗಲ್ಲು ಸಾಧಿಸಿದ ಭಾರತ

    ದೇಶಾದ್ಯಂತ ನಡೆಯುತ್ತಿರುವ ಬೃಹತ್ ಲಸಿಕಾ ಅಭಿಯಾನದಲ್ಲಿ ಒಟ್ಟು 100 ಕೋಟಿ ಕೋವಿಡ್-19 ಡೋಸ್ ಲಸಿಕೆ ನೀಡುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ,ಈ ಅದ್ಭುತ ಸಾಧನೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ ವೈಜ್ಞಾನಿಕ ಸಮುದಾಯ ಮತ್ತು ಆರೋಗ್ಯ ವೃತ್ತಿಪರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

    ಈ ಮಹತ್ವದ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರೂ ಸಹ ದೇಶವನ್ನು ಅಭಿನಂದಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ 17,561 ಕೋವಿಡ್ ರೋಗಿಗಳು ಗುಣಮುಖರಾಗುವುದರೊಂದಿಗೆ ಈವರೆಗೆ ಒಟ್ಟು (ಸಾಂಕ್ರಾಮಿಕ ಆರಂಭವಾದಾಗಿನಿಂದ ಇಲ್ಲಿಯವರೆಗೆ) 3,34,95,808 ಸೋಂಕಿತರು ಗುಣಮುಖರಾಗಿದ್ದಾರೆ.

    ಅಂತೆಯೇ ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.98.15 ತಲುಪಿದೆ. 2020ರ ಮಾರ್ಚ್ ನಿಂದೀಚೆಗೆ ಇದೇ ಮೊದಲ ಬಾರಿ ಅತ್ಯಧಿಕ ಚೇತರಿಕೆ ಪ್ರಮಾಣ ದಾಖಲಾಗಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಾಮೂಹಿಕ ಪ್ರಯತ್ನಗಳ ಪರಿಣಾಮ, ಸತತ 116ನೇ ದಿನವೂ ಸಹ ಸೋಂಕಿತರ ಸಂಖ್ಯೆ 50ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ.

    ಕಳೆದ 24 ಗಂಟೆಗಳಲ್ಲಿ 18,454 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

    ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತ ಕಡಿಮೆ ಇದೆ ಮತ್ತು ಹಾಲಿ 1,78,831 ಪ್ರಕರಣಗಳಿವೆ. ದೇಶದಲ್ಲಿನ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸದ್ಯದ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.52ರಷ್ಟು ಮಾತ್ರ, ಇದು 2020ರ ಮಾರ್ಚ್ ನಿಂದೀಚೆಗೆ ಅತಿ ಕಡಿಮೆಯಾಗಿದೆ.

    ದೇಶದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ವಿಸ್ತರಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 12,47,506 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತ ಈವರೆಗೆ ಒಟ್ಟಾರೆ 59.57 ಕೋಟಿ (59,57,42,218) ಪರೀಕ್ಷೆಗಳನ್ನು ನಡೆಸಿದೆ.

    ದೇಶಾದ್ಯಂತ ಸೋಂಕು ಪರೀಕ್ಷಾ ಸಾಮರ್ಥ್ಯವನ್ನು ವೃದ್ಧಿಸಲಾಗಿದೆ. ವಾರದ ಪಾಸಿಟಿವಿಟಿ ದರ ಶೇ.1.34ರಷ್ಟು ಮಾತ್ರ ಇದೆ, ಸತತ 118ನ ನೇ ದಿನವೂ ಶೇ.3ಕ್ಕಿಂತ ಕಡಿಮೆ ದಾಖಲಾಗಿದೆ. ದಿನದ ಪಾಸಿಟಿವಿಟಿ ದರ ಶೇ. 1.48ರಷ್ಟು ದಾಖಲಾಗಿದೆ. ದಿನದ ಪಾಸಿಟಿವಿಟಿ ದರ ಕಳೆದ 52 ದಿನಗಳಿಂದ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಸತತ 135 ದಿನಗಳಿಂದ ಶೇ.5ಕ್ಕಿಂತ ಕಡಿಮೆ ದಾಖಲಾಗಿದೆ.

    IBPS ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಕರೆದಿದ್ದಾರೆ; ಡಿಗ್ರಿ ಆದವರಿಗೆ ಅವಕಾಶ

    ಬ್ಯಾಂಕ್  ನಲ್ಲಿ ಅಧಿಕಾರಿ ಯಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು  4,135 ಹುದ್ದೆಗಳಿಗೆ  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ,ಸಂದರ್ಶನ ನಡೆಸಲು ತೀರ್ಮಾನಿಸಿದೆ. ಪರಿಶಿಷ್ಟ ಜಾತಿಯವರಿಗೆ 679, ಪರಿಶಿಷ್ಟ ಪಂಗಡದವರಿಗೆ 350, ಹಿಂದುಳಿದ ವರ್ಗದವರಿಗೆ 1102, ಸಾಮಾನ್ಯ ವರ್ಗದವರಿಗೆ 1,600, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 404 ಹುದ್ದೆಗಳು  ದೇಶಾದ್ಯಂತ ಮೀಸಲಾಗಿವೆ.

    ರಾಜ್ಯದ  12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.

    ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

    ಕೆನರಾ ಬ್ಯಾಂಕ್ 650,  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 912, ಯೂಕೋ ಬ್ಯಾಂಕ್ 440, ಪಂಜಾಬ್ ಎಂಡ್ ಸಿಂಧ್ ಬ್ಯಾಂಕ್ 427,ಇಂಡಿಯನ್ ಓವರ್ಸೀಸ್ ಬ್ಯಾಂಕ್ 98, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 620, ಬ್ಯಾಂಕ್ ಆಪ್ ಮಹಾರಾಷ್ಟ್ರ 400, ಬ್ಯಾಂಕ್ ಆಫ್ ಇಂಡಿಯಾ 588 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

    ಶೈಕ್ಷಣಿಕ ಅರ್ಹತೆ:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ಒಂದು ವೇಳೆ ಸಂದರ್ಶನಕ್ಕೆ ಕರೆ ಬಂದರೆ, ಅವರು 10 ನೇ ನವೆಂಬರ್ 2021 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್.

    ಅರ್ಜಿ ಸಲ್ಲಿಕೆ ದಿನಾಂಕ: ಅಕ್ಟೋಬರ್ 20 ರಿಂದ ನವೆಂಬರ್ 10 ರವರೆಗೆ.

    ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.

    ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ ಬದಲಾವಣೆಗೆ/ಸ್ಥಳ ಬದಲಾವಣೆ ಗೆ  ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹ ದಲ್ಲಿ  ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ – ಡಿಸೆಂಬರ್ 04 ಹಾಗೂ 11 ಡಿಸೆಂಬರ್ 2021

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ – ಜನವರಿ, 2022

    ಮೂರನೇ ಹಂತ: ಸಂದರ್ಶನ ಫೆಬ್ರವರಿ /ಮಾರ್ಚ್,2022

    ವಯೋಮಿತಿ:

    01.10.2021 ಕ್ಕೆ, 21 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 1.10.2021 ಕ್ಕೆ 30 ವರ್ಷಗಳಿಗಿಂತ ಹೆಚ್ಚಿರಬಾರದು.ಅಂದರೆ 21 ವರ್ಷದಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಗಳು 02.10.1991 ಕ್ಕಿಂತ ಮುಂಚಿತವಾಗಿ ಮತ್ತು 01.10.2001 ಕ್ಕಿಂತ ನಂತರ ಜನಿಸಿರಬಾರದು. (ಎರಡೂ ದಿನಾಂಕಗಳು ಒಳಗೊಂಡಂತೆ)

    ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅರ್ಜಿ ಶುಲ್ಕ:

    850 ರೂ. ಉಳಿದೆಲ್ಲ ಅಭ್ಯರ್ಥಿಗಳಿಗೆ [inclusive of GST](ಎಸ್‌ಸಿ/ಎಸ್‌ಟಿ/PWBD/ EXSM ಅಭ್ಯರ್ಥಿಗಳಿಗೆ 175 ರೂ.[ inclusive of GST]

    ಆನ್ಲೈನ್ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಿರುತ್ತದೆ.

    ನೆನಪಿಡಿ: ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆಅರ್ಹರಾಗಿರುವುದಿಲ್ಲ.ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non cremy layer) ಷರತ್ತಿನೊಂದಿಗೆ  OBC ಪ್ರಮಾಣಪತ್ರವನ್ನು ಹೊಂದಿರಬೇಕು.

    ಬಾರಿಯ ಬದಲಾವಣೆಗಳೇನು?:

    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:

    ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್‌ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಿರಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಅಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು. ಕನಿಷ್ಟ 8 ಭಾವಚಿತ್ರವನ್ನು (ಅಭ್ಯರ್ಥಿಯು ಕಾಲ್-ಲೆಟರ್‌ನಲ್ಲಿ ಅಂಟಿಸಿದಂತೆಯೇ) ಹಾಗೂ  ಪ್ರಿಲಿಮ್ಸ್ ಹಾಗೂ ಮೇನ್ಸ್ ನ ಕರೆ ಪತ್ರದ  ಝೆರಾಕ್ಸ ಪ್ರತಿಯನ್ನು ಅಥವಾ ಹೆಚ್ಚುವರಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ. ಕೊನೆಯಲ್ಲಿ ಅದರ ಪ್ರತಿಯನ್ನು ಬ್ಯಾಂಕ್ ಗಳಿಗೆ ಸೇರುವಾಗ ನೀಡಬೇಕು ಎಂಬುದನ್ನು ಮರೆಯಬೇಡಿ.

    ನಂತರದ ದಿನಗಳಲ್ಲಿ ವೆಬ್ ಸೈಟ್ ನಲ್ಲಿ ಸಿಗುವುದಿಲ್ಲ.

    ಅಭ್ಯರ್ಥಿಗಳು ಒಂದು ಹೆಚ್ಚುವರಿ ಛಾಯಾಚಿತ್ರವನ್ನು (ಅಭ್ಯರ್ಥಿಯು ಕಾಲ್ ಲೆಟರ್‌ನಲ್ಲಿ ಅಂಟಿಸಿದಂತೆಯೇ) ಜೊತೆಗೆ ಕರೆ ಪತ್ರ ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ “ಮಾಹಿತಿ ಕೈಪಿಡಿ” ಮತ್ತು ಕರೆ ಪತ್ರದಲ್ಲಿ ಸೂಚಿಸಿದ ಮಾಹಿತಿಯಂತೆ ತೆಗೆದುಕೊಂಡು ಹೋಗಬೇಕು.

    ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ನೋಂದಣಿ:

    .ಅಭ್ಯರ್ಥಿಗಳ ನೋಂದಣಿಯನ್ನು ಫೋಟೋ ಕ್ಯಾಪ್ಚರ್ ಮೂಲಕ ಮಾಡಲಾಗುವುದು.

    ಬಿ.ಅಭ್ಯರ್ಥಿಯನ್ನು ಪರೀಕ್ಷಾ ಕೇಂದ್ರದಲ್ಲಿ ನಿಲ್ಲಿಸಿ ಛಾಯಾಚಿತ್ರ ತೆಗೆಯಲಾಗುವುದು.

    ಸಿ. ಅಭ್ಯರ್ಥಿಗಳಿಗೆ ಸೀಟ್ ನಂಬರ್ ನೀಡಲಾಗುತ್ತದೆ.

    ಡಿ. ರಫ್ ಶೀಟ್,(ಗಳನ್ನು) ಪ್ರತಿ ಕ್ಯಾಂಡಿಡೇಟ್ ಡೆಸ್ಕ್ ನಲ್ಲಿ ಇರಿಸಲಾಗಿರುತ್ತದೆ. ಪರೀಕ್ಷೆಯ ಕೊನೆಯಲ್ಲಿ ಅಭ್ಯರ್ಥಿಗಳಿಗೆ  ಸೂಚಿಸಿದಂತೆ ನಿಗದಿತ ಡ್ರಾಪ್ ಬಾಕ್ಸ್‌ನಲ್ಲಿ ರಫ್ ಶೀಟಗಳನ್ನು ಹಿಂತಿರುಗಿಸಬೇಕು.

    ಮುಖ್ಯ ಪರೀಕ್ಷೆಗೆ  ಸ್ಟ್ಯಾಂಪ್ ಮಾಡಿದ ಫೋಟೊ ಕಾಪಿ ಯನ್ನು ತರದೇ ಇರುವ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.

    ನೇಮಕ ಹೇಗೆ?

    ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ. ಬೆಳಗಾವಿ, ಬೆಂಗಳೂರು, ಬೀದರ್,ದಾವಣಗೆರೆ, ದಾರವಾಡ ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ,ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ ಪರೀಕ್ಷೆ ಪರೀಕ್ಷಾ ಕೇಂದ್ರಗಳಿರಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ  20 ನಿಮಿಷಗಳಂತೆ  ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ) ಇದರಲ್ಲಿ ಇಂಗ್ಲೀಷ್ ಲಾಂಗ್ವೇಜಗೆ 30, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.(ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆ ಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ)

    ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಯಲಿದ್ದು, ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿದೆ. ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯು ಮೂರು ಗಂಟೆ ಗಳ ಕಾಲ ನಡೆಯಲಿದ್ದು, 155 ಪ್ರಶ್ನೆಗಳನ್ನು  200 ಅಂಕಗಳಿಗೆ ಕೇಳಲಾಗುತ್ತದೆ.

    I. Reasoning & Computer Aptitude 45 ಪ್ರಶ್ನೆ  60 ಅಂಕಗಳು 60 ನಿಮಿಷಗಳು,

    II.General/ Economy/ Banking Awareness 40 ಪ್ರಶ್ನೆ 40 ಅಂಕಗಳು 35 ನಿಮಿಷಗಳು,

    III. English Language 35 ಪ್ರಶ್ನೆ 40 ಅಂಕಗಳು 40 ನಿಮಿಷಗಳು,

    VI.Data Analysis & Interpretation 35 ಪ್ರಶ್ನೆ 60 ಅಂಕಗಳು 45 ನಿಮಿಷಗಳು,

    ಹೀಗೆ ಒಟ್ಟಾರೆ 155 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು ಹಾಗೂ 180 ನಿಮಿಷದ ಸಮಯ ನಿಗದಿಪಡಿಸಲಾಗಿದೆ. ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು  ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆಯನ್ನು ಬರೆಯಲು ಪ್ರಯತ್ನಿಸದೆ ಹಾಗೆಯೆ ಬಿಟ್ಟರೆ, ಅಂದರೆ ಯಾವುದೇ ಉತ್ತರವನ್ನು ಗುರುತಿಸಲಾಗಿಲ್ಲದಿದ್ದರೆ ಅಂತಹ ಭ್ಯರ್ಥಿಗಳಿಗೆ, ಆ ಪ್ರಶ್ನೆಗೆ ಯಾವುದೇ ರೀತಿಯ ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ದಂಡವಿರುವುದಿಲ್ಲ.

    (ಮೇನ್ಸ್) ಮುಗಿಯುತ್ತಿದ್ದಂತೆಯೇ ಡಿಸ್ಸ್ಕ್ರಿಟ್ಟಿವ್ ಟೆಸ್ಟ್ ಇಂಗ್ಲೀಷ್ ಭಾಷೆಗೆ (Letter Writing & Essay- with two questions)ಸಂಬಂಧಿಸಿದಂತೆ 25 ಅಂಕಗಳಿಗೆ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು.

    ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ವೈಶಿಷ್ಟ್ಯಗಳನ್ನು ಗುರುತಿಸುವುದು ಇದರ ಕಾರ್ಯವಿಧಾನವಾಗಿದೆ. ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರ ಪ್ರಾವೀಣ್ಯತೆಯನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ.

    ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ.

    ಅಭ್ಯರ್ಥಿಯು ಆನ್‌ಲೈನ್ ಮುಖ್ಯ ಪರೀಕ್ಷೆಯ ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು ಮತ್ತು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಎಂದು ಪರಿಗಣಿಸಬೇಕಾದ ಕನಿಷ್ಠ ಒಟ್ಟು ಅಂಕಗಳನ್ನು ಗಳಿಸಿರಬೇಕು.ಕನಿಷ್ಠ ಅಂಕಗಳು ಖಾಲಿ ಹುದ್ದೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಮತ್ತು ಅವುಗಳ ಮೇಲೆ ಕಟ್-ಆಫ್‌ಗಳನ್ನು ನಿರ್ಧರಿಸಲಾಗುವುದು ಮತ್ತು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

    ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಸಂದರ್ಶನ ಪ್ರಕ್ರಿಯೆ, ಪೂರ್ಣಗೊಳಿಸುವ ಮೊದಲು ಆನ್‌ಲೈನ್ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

    ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ  ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ'(‘Non-Creamy layer’) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. EWS ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು 2020-21ರ ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

    ಆಯ್ಕೆ ಪಟ್ಟಿ:

    ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಮತ್ತು ಹಂತ-III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು.ಸಂದರ್ಶನಕ್ಕೆ ನಿಗದಿಪಡಿಸಿಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು 40% (35% SC/ST/OBC/PWBD ಅಭ್ಯರ್ಥಿಗಳಿಗೆ). ಆನ್‌ಲೈನ್ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಕ್ರಮವಾಗಿ 80:20 ಅನುಪಾತದ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

    ಅರ್ಜಿ ಸಲ್ಲಿಸಲು ಹಾಗೂ

    ನೋಂದಣಿಗೆ ಬಳಸಬೇಕಾದ ಲಿಂಕ್:

    Authorised Website: www.ibps.in

    ಕಾಂಗ್ರೆಸ್, ಬಿಜೆಪಿ ಪರ್ಸೆಂಟೇಜ್‌ ಸರಕಾರಗಳು: ಎಚ್‌ಡಿಕೆ ಟೀಕಾ ಪ್ರಹಾರ

    KALABURGI OCT 19

    ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಷ್ಟ್ರೀಯ ಪಕ್ಷಗಳ ಸರಕಾರಗಳು ಪರ್ಸೆಂಟೇಜ್‌ ಸರಕಾರಗಳಾಗಿದ್ದು, ಸ್ವತಃ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೇ ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ಈ ಮೂಲಕ ಆ ಪಕ್ಷಗಳ ಭ್ರಷ್ಟಮುಖ ಜನರ ಮುಂದೆ ಅನಾವರಣಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.‌ಡಿ.ಕುಮಾರಸ್ವಾಮಿ ಅವರು ಹೇಳಿದರು.

    ಸಿಂಧಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಲು ಇಂದು ಬೆಳಗ್ಗೆ ಕಲಬುರಗಿಗೆ ಆಗಮಿಸಿದ ಅವರು ಮಾಧ್ಯಮಗಳ ಜತೆ ಮಾತನಾಡಿದರು.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು 10% ಸರಕಾರ ಎಂದು ಕರೆಯುತ್ತಿದ್ದರು. ಈಗ ಅವರದ್ದೇ ಪಕ್ಷದ ಸರಕಾರವನ್ನು ಕಾಂಗ್ರೆಸ್‌ ಪಕ್ಷದವರು 20% ಸರಕಾರ ಎಂದು ಕರೆಯುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

    ಜನರ ಹಣ ಲೂಟಿ ಹೊಡೆಯುವುದರಲ್ಲಿ ಹಾಗೂ ಪರ್ಸೆಂಟೇಜ್‌ ತೆಗೆದುಕೊಳ್ಳುವುದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ದೊಡ್ಡ ಪೈಪೋಟಿಯೇ ಇದೆ ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.

    ಪೊಲೀಸ್‌ ವಸತಿ ಸಮುಚ್ಛಯವೇ ಬೀಳುತ್ತಿದೆ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಇದ್ದಾಗ ಬೆಂಗಳೂರಿನಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪೊಲೀಸ್‌ ವಸತಿ ಸಮುಚ್ಛಯ ಈಗ ಬೀಳುವ ಹಂತದಲ್ಲಿದೆ. ಕಳಪೆ ಕಾಮಗಾರಿ, ಪರ್ಸಂಟೇಜ್‌ ವ್ಯವಹಾರ ಇತ್ಯಾದಿ ಅಕ್ರಮಗಳಿಂದ ರಾಜ್ಯವನ್ನು ರಕ್ಷಣೆ ಮಾಡುವ ಪೊಲೀಸ್‌ ಕುಟುಂಬಗಳು ಅಪಾಯಕ್ಕೆ ಸಿಲುಕಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

    ನಾಡನ್ನು ಕಾಪಾಡುವ ಪೊಲೀಸ್‌ ಸಿಬ್ಬಂದಿ ವಾಸ ಮಾಡುವ ಕ್ವಾಟ್ರಸ್‌ ನಿರ್ಮಾಣದಲ್ಲಿ ಕಳಪೆ, ಅವ್ಯವಹಾರ ನಡೆದಿದೆ ಎಂದರೆ ಉಳಿದ ಯೋಜನೆಗಳ ಕಥೆ ಏನು? ಎಷ್ಟು ಅಕ್ರಮ ನಡೆದಿದೆ? ಎಷ್ಟು ಪರ್ಸೆಂಟೇಜ್‌ ವ್ಯವಹಾರವಾಗಿದೆ ಎಂಬುದು ಜನರಿಗೆ ಗೊತ್ತಾಗಲಿ ಎಂದು ಅವರು ಹೇಳಿದರು.

    ಕರ್ನಾಟಕಕ್ಕೆ ರಾಷ್ಟ್ರೀಯ ಪಕ್ಷಗಳು ಏನು ಮಾಡಿವೆ ಎಂಬುದು ಜನರಿಗೆ ಚೆನ್ನಾಗಿ ಅರ್ಥವಾಗಿದೆ. ಇನ್ನು ಮುಂದೆಯಾದರೂ ಜನರು ಎಚ್ಚೆತ್ತುಕೊಂಡು ನಾಡಿನ ಬಗ್ಗೆ ಕಾಳಜಿ ಇರುವ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಲಿ ಎಂದು ಕೋರಿದರು.

    INDIAN STOCK MARKET:ಹೂಡಿಕೆ ಎಂಬ ಚಕ್ರವ್ಯೂಹದೊಳಗೆ ಅಭಿಮನ್ಯುಗಳಾಗದೆ, ಅರ್ಜುನರಾಗಬೇಕು

    ಷೇರುಪೇಟೆ ಚಲಿಸುತ್ತಿರುವ ರೀತಿ ಮತ್ತು ದಿನೇ ದಿನೇ ನಿರ್ಮಿಸುತ್ತಿರುವ ಗರಿಷ್ಠದಿಂದ ದಾಖಲೆಯ ಏರಿಕೆಯು ಹಲವರಿಗೆ ವಿಸ್ಮಯಕಾರಿಯಾಗಿರಬಹುದು. ಇದೇ ನಮ್ಮ ದೇಶದ ಆಸ್ತಿ ಎನಿಸಿಕೊಂಡಿರುವ ಜನಸಾಮಾನ್ಯರ ಶಕ್ತಿ. ಎಲ್ಲವೂ ವಿಚಿತ್ರ ಎಂದೆನಿಸಿದರೂ ಅದು ಕಟು ಸತ್ಯ.

    ಅಕ್ಟೋಬರ್ 18ರ ಸೆನ್ಸೆಕ್ಸ್

    ಸೆಪ್ಟೆಂಬರ್‌ ತಿಂಗಳಲ್ಲಿ ಮ್ಯೂಚುಯಲ್‌ ಫಂಡ್‌ ಗಳಿಂದ ವಿವಿಧ ಸಾಲ ನಿಧಿಯೋಜನೆ (Debt funds) ಗಳಾದ ಲಿಕ್ವಿಡ್‌ ಫಂಡ್‌, ಅಲ್ಟ್ರಾ ಷಾರ್ಟ್‌ ಡ್ಯುರೇಷನ್‌ ಫಂಡ್‌, ಲೋ ಡ್ಯುರೇಷನ್‌ ಫಂಡ್‌, ಮನಿ ಮಾರ್ಕೆಟ್‌ ಫಂಡ್‌, ಬ್ಯಾಂಕಿಂಗ್‌ ಅಂಡ್‌ ಪಿ ಎಸ್‌ ಯು ಫಂಡ್‌, ಕಾರ್ಪೊರೇಟ್‌ ಬಾಂಡ್‌ ಫಂಡ್‌ ಗಳ ಮೂಲಕ ಅತಿ ಹೆಚ್ಚಿನ ಹಣದ ಹೊರಹರಿವು ಸಾಮಾನ್ಯ ಪರಿಸ್ಥಿತಿಯಲ್ಲಿ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿತ್ತು. ಆದರೂ ಸಹ ಪೇಟೆಗಳು ಉತ್ತುಂಗಕ್ಕೇರುತ್ತಿರುವುದು ಸೋಜಿಗವೆನಸುವುದು.

    ಇದಕ್ಕೆ ಕಾರಣ ಷೇರುಪೇಟೆಗಳತ್ತ ನೇರವಾಗಿಯೂ ಮತ್ತು ಮ್ಯುಚುಯಲ್‌ ಫಂಡ್‌ ಗಳ ಮೂಲಕ, ಎಸ್‌ ಐ ಪಿ ಗಳ ಮೂಲಕ ಬರುತ್ತಿರುವ ಹಣದ ಒಳಹರಿವು. ಈಕ್ವಿಟಿ ಫಂಡ್‌ ಗಳಲ್ಲಿ ಮಲ್ಟಿಕ್ಯಾಪ್‌ ಮತ್ತು ಫ್ಲೆಕ್ಸಿ ಫಂಡ್‌ ಗಳು ಒಟ್ಟು ಒಳಹರಿವು ಕಂಡರೆ ಇ ಎಲ್‌ ಎಸ್‌ ಎಸ್‌ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್ ಗಳಿಂದ ಹೊರಹರಿವು ದಾಖಲಾಗಿದೆ. ಮಾಸಿಕ ಎಸ್‌ ಐ ಪಿ ಗಳ ಮೂಲಕ ಸಂಗ್ರಹವಾದ ರೂ.10,351 ಕೋಟಿಯು ಹೊಸದಾಖಲೆಯನ್ನು ಸೃಷ್ಟಿಸಿದೆ. ಮ್ಯೂಚುಯಲ್ ಫಂಡ್‌ ಗಳ ಇಂಡೆಕ್ಸ್‌ ಫಂಡ್‌ ಮತ್ತು ಇಟಿಎಫ್‌ ಗಳ ಮೂಲಕವೂ ಸುಮಾರು ರೂ.10 ಸಾವಿರ ಕೋಟಿಗೂ ಹೆಚ್ಚಿನ ಹಣ ಒಳಹರಿದಿರುವುದು ಸಹ ಪೇಟೆಯ ಏರಿಕೆಗೆ ಪೂರಕ ಅಂಶವಾಗಿದೆ.

    ಯಾವುದೇ ಒಂದು ಸಾರ್ವಜನಿಕ ಕಾರ್ಯಕ್ರಮ, ಕ್ರಿಕೆಟ್‌, ಸಿನಿಮಾ ಯಶಸ್ಸು ಕಾಣಬೇಕಾದರೆ ಅದರ ಹಿಂದೆ ಜನಸಾಮಾನ್ಯರ ಭಾಗವಹಿಸುವಿಕೆ ಅತಿ ಮುಖ್ಯ. ಅಂತೆಯೇ ಷೇರುಪೇಟೆಯ ಈಗಿನ ವಾತಾವರಣಕ್ಕೆ ಮೂಲ ಕಾರಣ ಜನಸಾಮಾನ್ಯರ ಶಕ್ತಿ. ಈ ವಾತಾವರಣವನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ಧಾರಿತನವು ಸಧ್ಯ ಕಾರ್ಪೊರೇಟ್‌ ವಲಯ ಮತ್ತು ಸರ್ಕಾರಗಳ ಮೇಲಿದೆ.

    ಕಾರ್ಪೊರೇಟ್‌ ಗಳು ಈ ವಾತಾವರಣವನ್ನು ಮುಂದುವರೆಸಿಕೊಂಡು ಹೋಗಬೇಕಿದ್ದಲ್ಲಿ ಉತ್ತಮ ಸಾಧನೆಯನ್ನು ಮತ್ತು ಬೆಂಬಲಿಸುತ್ತಿರುವ ಷೇರುದಾರರ ಹಿತವನ್ನು ಕಾಪಾಡುವತ್ತ ದಾಪುಗಾಲಿಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನಿಯಂತ್ರಕರು ಮತ್ತು ಸರ್ಕಾರ ಈ ವಾತಾವರಣವನ್ನು ಕದಡುವಂತಹವರ ಮೇಲೆ ಕಣ್ಗಾವಲು ಇರಿಸಿ ನಂಬಿಕೆಯನ್ನು ಉಳಿಸಿಕೊಡುವಂತಹ ಗುರುತರ ಜವಾಬ್ಧಾರಿ ವಹಿಸಿಕೊಳ್ಳಲೇಬೇಕಾಗಿದೆ.

    ಈ ವಾತಾವರಣಕ್ಕೆ ಪೂರಕವಾದ ಅಂಶವೆಂದರೆ ಹಿಂದಿನ ವರ್ಷದ ಅಕ್ಟೋಬರ್‌ 16 ರಂದು ಸೆನ್ಸೆಕ್ಸ್‌ -BSE SENSEX_39,982.98 ರಲ್ಲಿದ್ದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.158.37 ಲಕ್ಷ ಕೋಟಿಯಲ್ಲಿತ್ತು. ಅಂದು ನೋಂದಾಯಿತ ಗ್ರಾಹಕರ ಸಂಖ್ಯೆಯು 5.56 ಕೋಟಿ ಇತ್ತು. ಈ ವರ್ಷ ಅಕ್ಟೋಬರ್‌ 14 ರ ವಾರಾಂತ್ಯದಲ್ಲಿ ಸೆನ್ಸೆಕ್ಸ್‌ 61,305.95 ರಲ್ಲಿದೆ. ಅಂದರೆ 21,322.97 ಪಾಯಿಂಟುಗಳ ಏರಿಕೆ ಈ ಅವಧಿಯಲ್ಲಿ ಸೆನ್ಸೆಕ್ಸ್‌ ಕಂಡಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.272.76 ಲಕ್ಷ ಕೋಟಿಯಾಗಿದೆ. ಮತ್ತೊಂದು ಪ್ರಮುಖ ಅಂಶ ಎಂದರೆ ಈಗ ನೋಂದಾಯಿತ ಗ್ರಾಹಕರ ಸಂಖ್ಯೆಯು 8,27ಕೋಟಿಯಲ್ಲಿದೆ. ಅಂದರೆ ಈ ಒಂದು ವರ್ಷದ ಅವಧಿಯಲ್ಲಿ 2.7 ಕೋಟಿ ನೋದಾಯಿತ ಹೂಡಿಕೆದಾರರ ಸಂಖ್ಯೆಯು ಹೆಚ್ಚಾಗಿದೆ. ಈ ಪ್ರಮಾಣದ ಹೂಡಿಕೆದಾರರ ಮೂಲಕ ಹರಿದುಬರುತ್ತಿರುವ ಹಣದ ಒಳಹರಿವು ಸಹ ಪೇಟೆಯ ಏರಿಕೆಗೆ ಪೂರಕ ಅಂಶವಾಗಿದೆ.

    ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳ ಏರಿಳಿತಗಳ ಲಾಭವನ್ನು ವಹಿವಾಟುದಾರರು ಪಡೆದುಕೊಳ್ಳುತ್ತಿರುವಾಗ ಸಣ್ಣ ಹೂಡಿಕೆದಾರರು ಸಹ ಅಲ್ಪ ಪ್ರಮಾಣದಲ್ಲಿ ಲಾಭ ಗಳಿಸಲು ಪ್ರಯತ್ನಿಸಬಹುದು. ಆದರೆ ಸದಾ ನೆನಪಿನಲ್ಲಿಡಬೇಕಾದ ಅಂಶ ಎಂದರೆ ಈ ಚಟುವಟಿಕೆಯು ವ್ಯವಹಾರಿಕ ದೃಷ್ಠಿಯಿಂದ, ದೀರ್ಘಕಾಲೀನ ಎಂಬ ಮೋಹಕ ಪದದಿಂದ ದೊರೆಯುವ ಅವಕಾಶ ಕಳೆದುಕೊಳ್ಳದೆ, ʼಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ – ಇರುವೆಯಾಗಿ ಸಕ್ಕರೆ ತಿನ್ನುವುದು ಲೇಸುʼ ಎಂಬುದು. ಗಜಗಾತ್ರದ ವಹಿವಾಟಿನ ವ್ಯಾಮೋಹ ಬೇಡ, ಸೀಮಿತ ಲಾಭಕ್ಕೆ ಸೀಮಿತಗೊಳಿಸಿಕೊಂಡಲ್ಲಿ ಬಂಡವಾಳವೂ ಸುರಕ್ಷಿತ ಮತ್ತು ಮನಸ್ಸು ಮತ್ತು ದೇಹಗಳ ಸೌಖ್ಯವೂ ಸಾಧ್ಯ. ಸಾಧ್ಯವಾದಷ್ಠು ಹೂಡಿಕೆಗುಚ್ಚವನ್ನು ಹೆಚ್ಚು ಹೆಚ್ಚು ಕಂಪನಿಗಳಿಗೆ ವಿಸ್ತರಿಸಿರಿ ಮತ್ತು ಷೇರಿನ ದರಗಳ ಕುಸಿತಕ್ಕೆ ಕಾಯಿರಿ. ಖಂಡಿತಾ ಅವಕಾಶಗಳು ಸೃಷ್ಠಿಯಾಗುತ್ತವೆ. ಇತ್ತೀಚಿನ ಕೆಲವು ಉದಾಹರಣೆಗಳನ್ನು ಪರಿಶೀಲಿಸಿರಿ. ಇದು ಯಾವುದೇ ರೀತಿಯ ಶಿಫಾರಸ್ಸು ಅಲ್ಲ, ಕೇವಲ ನಿದರ್ಶನಕ್ಕೆ ಮಾತ್ರ.

    ಬೊರೊಸಿಲ್‌ರಿನ್ಯೂವಬಲ್ಸ್‌ಲಿಮಿಟೆಡ್:ಈ ಕಂಪನಿಯು ಕಳೆದ ಒಂದು ತಿಂಗಳಿನಲ್ಲಿ ರೂ.293 ರ ಸಮೀಪದಿಂದ ರೂ.453 ರವರೆಗೂ ಜಿಗಿತ ಕಂಡಿದೆ. ಸೋಜಿಗವೆಂದರೆ ಹಿಂದಿನ ವರ್ಷದ ಅಕ್ಟೋಬರ್‌ನಂದು ರೂ.72 ರಲ್ಲಿದ್ದಂತಹ ಈ ಕಂಪನಿ ಷೇರಿನ ಬೆಲೆ ಈ ವರ್ಷದ ಅಕ್ಟೋಬರ್‌14 ರಂದು ರೂ.453 ನ್ನು ತಲುಪಿದೆ ಎಂದರೆ ಒಂದೇ ವರ್ಷದಲ್ಲಿ ರೂ.380 ಕ್ಕೂ ಹೆಚ್ಚಿನ ಏರಿಕೆ ಕಂಡು ವಿಜೃಂಭಿಸಿದೆ. ಈ ತಿಂಗಳ 21 ರಂದು ಕಂಪನಿಯು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸುವ ಕಾರ್ಯಸೂಚಿ ಪ್ರಕಟಿಸಿದೆ.

    ಈ ಸುದ್ಧಿಯೇ ಹೆಚ್ಚಿನ ನಿರೀಕ್ಷೆಯನ್ನು ಸೃಷ್ಠಿಸಿದೆಯೇ? ಕಾದು ನೋಡೋಣ. ಮತ್ತೊಂದು ಪ್ರಮುಖ ಅಂಶ ಎಂದರೆ ಈ ಕಂಪನಿಯು 65,250 ಷೇರುಗಳನ್ನು ಕೇಂದ್ರ ಸರ್ಕಾರದ ಇನ್ವೆಸ್ಟರ್‌ ಎಜುಕೇಷನ್‌ಅಂಡ್‌ಪ್ರೊಟೆಕ್ಷನ್‌ಫಂಡ್‌ಗೆ ವರ್ಗಾಯಿಸಿದೆ. ಸೋಮವಾರ ತನ್ನ ಏರಿಕೆಯನ್ನು ಮುಂದುವರೆಸಿ ರೂ.475 ರಲ್ಲಿದೆ.

    ಗೋದಾವರಿ ಪವರ್‌ಅಂಡ್‌ಇಸ್ಪಾಟ್‌ ಲಿಮಿಟೆಡ್:

    ಈ ಕಂಪನಿಯು ಆಗಸ್ಟ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.18.50 ಯಂತೆ ಲಾಭಾಂಶ ವಿತರಿಸಿದ ನಂತರ ರೂ.1,400 ರ ಸಮೀಪದಿಂದ ನಿರಂತರವಾಗಿ ಇಳಿಕೆ ಕಂಡು ರೂ.1,000 ದ ವರೆಗೂ ಕುಸಿಯಿತು. ಆ ಸಂದರ್ಭದಲ್ಲಿ ಕಂಪನಿಯು ಬೋನಸ್‌ ಷೇರು ಮತ್ತು ಮುಖಬೆಲೆ ಸೀಳಿಕೆಯ ಪರಿಶೀಲನೆ ಪ್ರಕಟಿಸಿದ ನಂತರ ಏರಿಕೆಯಿಂದ ರೂ. 1,400 ಕ್ಕೆ ಜಿಗಿದು ಮತ್ತೆ ಕುಸಿಯಿತು. 14ನೇ ಅಕ್ಟೋಬರ್‌ ಕಂಪನಿಯ ಷೇರುದಾರರು ಮುಖಬೆಲೆ ಸೀಳಿಕೆ ಮತ್ತು ಬೋನಸ್‌ ಷೇರಿಗೆ ಸಮ್ಮತಿಸಿದ್ದರಿಂದ ಸೋಮವಾರ ಷೇರಿನ ಬೆಲೆ ರೂ.1,425 ರ ಸಮೀಪದಲ್ಲಿ ಗರಿಷ್ಠ ಆವರಣಮಿತಿಯಲ್ಲಿತ್ತು. ಈ ತಿಂಗಳ 26 ನಿಗದಿತ ದಿನವಾಗಿದೆ.

    ಹಿಂದೂಸ್ಥಾನ್‌ ಝಿಂಕ್‌ ಲಿಮಿಟೆಡ್:

    ಈ ಕಂಪನಿಯು ಆಗಷ್ಟ್‌ 17 ರಂದು ಮಧ್ಯಂತರ ಲಾಭಾಂಶ ವಿತರಣೆ ಪರಿಶೀಲನೆಯ ಕಾರ್ಯಸೂಚಿ ಪ್ರಕಟಿಸಿದಾಗ ಷೇರಿನ ಬೆಲೆ ರೂ.332 ರ ಸಮೀಪವಿದ್ದು, ಲಾಭಾಂಶ ಪರಿಶೀಲನೆಯನ್ನು ಮುಂದೂಡಿದ ಕಾರಣ ಷೇರಿನ ಬೆಲೆ ರೂ.311 ರ ವರೆಗೂ ಇಳಿದು ನಂತರದ ದಿನಗಳಲ್ಲಿ ಪುಟಿದೆದ್ದಿತು. ಸೆಪ್ಟೆಂಬರ್‌ 14 ರಂದು ಮತ್ತೊಮ್ಮೆ ಏರಿಕೆಯಿಂದ ರೂ.338 ನ್ನು ತಲುಪಿ ಅಕ್ಟೋಬರ್‌ 1 ರಂದು ರೂ.306 ಕ್ಕೆ ಕುಸಿದು 18 ರಂದು ರೂ.407.90 ರ ವಾರ್ಷಿಕ ಗರಿಷ್ಠಕ್ಕೆ ಜಿಗಿದು ರೂ.387 ರ ಸಮೀಪದಲ್ಲಿ ಕೊನೆಗೊಂಡಿದೆ. ಈ ತಿಂಗಳ 22 ರಂದು ಕಂಪನಿಯು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ. ಆದರೆ ಲಾಭಾಂಶದ ಬಗ್ಗೆ ಅಧಿಕೃತ ಪ್ರಕಟಣೆಯಿಲ್ಲ. ಕೇವಲ ಒಂದೆರಡು ತಿಂಗಳಲ್ಲಿ ಈ ಪರಿಯ ಏರಿಳಿತಗಳು ಪೇಟೆಯು ದಣಿದಿರುವುದರ ಸಂಕೇತವೇ ಎಂಬುದನ್ನು ಕಾದು ನೋಡಬೇಕಾಗಿದೆ.

    ಮೈಂಡ್‌ಟ್ರೀ, ಬಿ ಇ ಎಂ ಎಲ್‌, ಹಿಕಾಲ್‌, ಕಮ್ಮಿನ್ಸ್‌, ಐಟಿಸಿ, ತಿರುಮಲೈ ಕೆಮಿಕಲ್ಸ್‌, ಗುಡ್‌ಇಯರ್‌, ಹೆಚ್‌ಐ ಎಲ್‌, ಟಾಟಾ ಮೋಟಾರ್ಸ್‌, ಮದರ್ಸನ್‌ಸುಮಿ, ಲೌರಸ್‌ಲ್ಯಾಬ್‌, ದಿಲೀಪ್‌ಬ್ಯುಲ್ಡ್‌ಕಾನ್‌, ಮೆಟ್ರೋಪೊಲಿಸ್‌ಹೆಲ್ತ್‌ಕೇರ್‌, ಇಪ್ಕಾ ಲ್ಯಾಬ್ಸ್‌, ಗಳಂತಹ ಕಂಪನಿಗಳು ಈಚಿನ ದಿನಗಳಲ್ಲಿ ಅತೀವ ಏರಿಳಿತಗಳನ್ನು ಪ್ರದರ್ಶಿಸಿವೆ. ಇವು ಕೆಲವು ಕಂಪನಿಗಳಲ್ಲಿ ದೀರ್ಘಕಾಲೀನದಲ್ಲೂ ಲಾಭದ ಇಳುವರಿ ಒದಗಿಸದ ಮಟ್ಟದಲ್ಲಿ ಅಲ್ಪಕಾಲೀನದಲ್ಲೇ ಅಧಿಕ ಲಾಭ ಗಳಿಸಿಕೊಟ್ಟಿವೆ. ಇವು ಹೂಡಿಕೆದಾರರು ಹೂಡಿಕೆ ಎಂಬ ಚಕ್ರವ್ಯೂಹದೊಳಗೆ ಅಭಿಮನ್ಯುಗಳಾಗದೆ, ಅರ್ಜುನರಾಗಬೇಕೆಂದು ತಿಳಿಸುತ್ತಿದೆಯೇ ನೀವೇ ನಿರ್ಧರಿಸಿರಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    MySugar:ಮೈಶುಗರ್ ಸಕ್ಕರೆ ಕಾರ್ಖಾನೆ ಲೀಸ್ ಗೆ ನೀಡುವ ಕ್ರಮಕ್ಕೆ ತಾತ್ಕಾಲಿಕ ತಡೆ;

    BENGALURU OCT 18

    ಮಂಡ್ಯದ -MANDYA_ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಲೀಸ್ ಗೆ ನೀಡುವ ಸಚಿವ ಸಂಪುಟದ ನಿರ್ಣಯವನ್ನು ತಾತ್ಕಾಲಿಕವಾಗಿ ತಡೆ ಹಿಡಿದು, ಸರ್ಕಾರವೇ ನಡೆಸುವ ಪ್ರಯತ್ನ ಮಾಡಲಾಗುವುದು. ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.

    ಅವರು ಇಂದು ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಂಡ್ಯದ ರೈತ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

    ಮೈಶುಗರ್ ಗೆ ಒಬ್ಬ ಅನುಭವಿ ಹಿರಿಯ ತಜ್ಞರ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಲಾಗುವುದು. ತಜ್ಞರ ಸಮಿತಿ ಮೂರು ತಿಂಗಳಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ ವರದಿಯನ್ನು ಆಧಾರವಾಗಿಟ್ಟುಕೊಂಡು ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಕ್ರಮಗಳನ್ನು ವಹಿಸಲಾಗುವುದು.‌ ಕಾರ್ಖಾನೆ ಕಬ್ಬು ನುರಿಸುವ ಸಾಮರ್ಥ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಯಂತ್ರೋಪಕರಣಗಳ ದುರಸ್ಥಿಗೆ ಆರ್ಥಿಕ ನೆರವು ನೀಡಲಾಗುವುದು. ಬರುವ ಹಂಗಾಮಿನಿಂದ ಕಬ್ಬು ನುರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

    ಕಾರ್ಖಾನೆ ಪುನರಾರಂಭಕ್ಕೆ ಅಗತ್ಯವಿರುವ ಹಣಕಾಸಿನ ವಿವರ ಹಾಗೂ ದುಡಿಯುವ ಬಂಡವಾಳ ಕುರಿತಂತೆ ಮಾಹಿತಿ ಒದಗಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    ಡಿಸ್ಟಿಲರಿ, ಎಥಿನಾಲ್, ಮೊಲ್ಯಾಸಿಸ್, ಕೊ-ಜನರೇಷನ್ ಮತ್ತಿತರ ಉಪ ಉತ್ಪನ್ನಗಳ ತಯಾರಿಕೆ ಪ್ರಾರಂಭಿಸುವ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ತಜ್ಞರು ನೀಡುವ ವರದಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲಾ ಅಂಶಗಳ ಕುರಿತು ಚರ್ಚಿಸಿ, ಒಪ್ಪಿಗೆ ಪಡೆದು ಮುಂದಿನ‌ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಸರ್ಕಾರಗಳು ಮೈಷುಗರ್ ಪುನಶ್ಚೇತನಕ್ಕೆ ಸಾಕಷ್ಟು ವ್ಯಯಿಸಿದ್ದರೂ ಯಶಸ್ಸು ದೊರೆತಿಲ್ಲ. ಕಳೆದ ಮೂರು ವರ್ಷದಿಂದ ಫ್ಯಾಕ್ಟರಿ ಬಂದ್ ಕಬ್ಬು ಬೆಳೆಗಾರರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ ಆರ್ ಓ ಟಿ ಮೂಲಕ ನಡೆಸಲು ತೀರ್ಮಾನಿಸಿತ್ತು. ಆದರೆ ರೈತರು, ಜನಪ್ರತಿನಿಧಿಗಳು ಇದನ್ನು ವಿರೋಧಿಸಿದ್ದಾರೆ. ಹಾಗಾದರೆ ಮೈಷುಗರ್ ಪುನಶ್ಚೇತನಕ್ಕೆ ಮುಂದಿನ ನಡೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

    ಕಾರ್ಖಾನೆ ಪ್ರಾರಂಭಿಸಬೇಕು ಎನ್ನುವುದು ಸರ್ಕಾರದ ಆಶಯ. ಕಬ್ಬಿನ ಮೌಲ್ಯವರ್ಧನೆಗಾಗಿ ಸ್ಥಾಪಿಸಿದ ಕಾರ್ಖಾನೆ ಇದು. ರೈತರ ಕಬ್ಬಿಗೆ ನಿಗದಿತ ಸಮಯದಲ್ಲಿ ಹಣಪಾವತಿ ಮಾಡಿದರೆ, ಲಾಭ ಎನ್ನುವುದು ನನ್ನ ಭಾವನೆ ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.

    ಮುಂದಿನ ಮೂರು ತಿಂಗಳಲ್ಲಿ ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗುವುದು. ವ್ಯವಸ್ಥೆಯಲ್ಲಿ ಲೋಪದೋಷ ಸರಿ ಪಡಿಸಿ, ಒಮ್ಮೆ ಪ್ರಾಯೋಗಿಕವಾಗಿ ನಡೆಸಲು ಸಿದ್ಧರಿದ್ದೇವೆ. ಆದರೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು..

    ಸಚಿವರಾದ ಜೆ.ಸಿ. ಮಾಧುಸ್ವಾಮಿ, ನಾರಾಯಣಗೌಡ, ಶಂಕರ ಪಾಟೀಲ ಮುನೇನಕೊಪ್ಪ, ಎಸ್ ಟಿ ಸೋಮಶೇಖರ್, ಮಂಡ್ಯ ಸಂಸದೆ ಸುಮಲತಾ, ಮಂಡ್ಯ ಜಿಲ್ಲೆಯ ಶಾಸಕರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರೈತ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಮಾಸ್ಟರ್ ಪ್ಲಾನ್:Master Plan to Streamline Bengaluru’s Drainage System

    BENGALURU OCT 18:
    ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ವಿಶೇಷ ಸಭೆ ಕರೆದು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಮಳೆಯಿಂದ ಹಾನಿಗೊಳಗಾದ ಎಚ್.ಎಸ್.ಆರ್ ಬಡಾವಣೆ, ಮಡಿವಾಳ,-madiwala- ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್-silk board junction- ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿಗಳು ಅಗರ ಪಕ್ಕದಲ್ಲಿರುವ ಬಡಾವಣೆಗಳಿಗೆ ನೀರು ಮನೆಗಳಿಗೆ ನುಗ್ಗಿ ಅನಾಹುತಗಳಾಗಿವೆ. 15-20 ಕೆರೆಗಳ ನೀರು ಮೇಲ್ಮಟ್ಟದಿಂದ ಅಗರ ಕೆರೆಗೆ ಹರಿದು ಬರುತ್ತಿದೆ. ಇದನ್ನು ತಡೆಗಟ್ಟಿ ಸಾಮರ್ಥ್ಯವನ್ನು ಹೆಚ್ಚಿಸಲು ಮುಖ್ಯ ಚರಂಡಿ ದುರಸ್ಥಿ ಮಾಡಲು ಸೂಚನೆ ನೀಡಲಾಗಿದೆ ಎಂದರು.

    ಅಗರ-agara lake- ಸುತ್ತುಲಿನ ಬಡಾವಣೆಗಳಿಗೆ ಪ್ರತ್ಯೇಕ ಚರಂಡಿ ನಿರ್ಮಾಣ ಕಾರ್ಯವನ್ನು 4-5 ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಒಳಚರಂಡಿ ಹಾಗೂ ಕೊಳಚೆ ನೀರನ್ನು ಪ್ರತ್ಯೇಕ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದರು.

    ಬಡಾವಣೆಗಳಲ್ಲಿ ಯು.ಜಿ.ಡಿ ಲೆವೆಲ್ ಗಳಲ್ಲಿ ವ್ಯತ್ಯಾಸ ಉಂಟಾಗಿದ್ದು, ಅದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ಅಗರ ಎಸ್.ಟಿ.ಪಿ ಘಟಕದ ಸಾಮರ್ಥ್ಯ 35 ಎಂ.ಎಲ್‌ಡಿ ಇದ್ದರೂ ಕೇವಲ 25 ಎಂ.ಎಲ್.ಡಿ ನೀರನ್ನು ಸಂಸ್ಕರಿಸುತ್ತಿದೆ. ಪರಿಶೀಲನೆ ವೇಳೆಯಲ್ಲಿ ಸಂಸ್ಕರಿತ ನೀರೂ ಸಹ ಚರಂಡಿಗೆ ಸೇರುತ್ತಿರುವುದನ್ನು ಗಮನಿಸಿದ್ದು, ತಕ್ಷಣವೇ ಇದನ್ನು ಸರಿಪಡಿಸಿ, ನೇರವಾಗಿ ಕೆರೆಗಳಿಗೆ ಹರಿಸಬೇಕೆಂದು ಈಗಾಗಲೇ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

    ಮಡಿವಾಳ ಕೆರೆಗೆ ಹೊಂದಿಕೊಂಡಂತೆ ಇರುವ 4 ಎಂ.ಎಲ್.ಡಿ ಎಸ್.ಟಿ.ಪಿ ಘಟಕ ಕಾರ್ಯಾರಂಭ ಮಾಡಿಲ್ಲ. 4-5 ತಿಂಗಳ ಅವಧಿಯಲ್ಲಿ ಅದು ಕೂಡ ಸಂಪೂರ್ಣವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದರು.

    ಸಮನ್ವಯ
    ಬಿ.ಬಿ.ಎಂ.ಪಿ, ಬೆಸ್ಕಾಂ, ಬಿ.ಡಬ್ಲೂ ಎಸ್.ಎಸ್.ಬಿ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.

    ಗುಂಡಿ ಮುಚ್ಚಲು ಕ್ರಮ
    ಗುಂಡಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದ್ದು, ಸಮಸ್ಯೆ ಬಗೆಹರಿಸಲು ಸಭೆ ಕರೆದು, ಪರಿಶೀಲಿಸಲಾಗುವುದು. ಸತತ ಮಳೆಯಿಂದಾಗಿ ದುರಸ್ಥಿ ಸಾಧ್ಯವಾಗುತ್ತಿಲ್ಲ. ಮಳೆ ಬಿಡುವು ನೀಡಿದ ಕೂಡಲೇ ಗುಂಡಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕ್ರಮವಹಿಸಲಾಗುವುದು ಎಂದರು.

    ಶಾಸಕ ಸತೀಶ್ ರೆಡ್ಡಿ, ಬಿ.ಬಿ.ಎಂ.ಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

    error: Content is protected !!