ಟಾಪ್ 10ತಾಜಾ ವರದಿ ಈ ಹೊತ್ತಿನ ಸುದ್ದಿ By ಕನ್ನಡಪ್ರೆಸ್.ಕಾಮ್ ವರದಿ - June 22, 2021 0 318 FacebookTwitterPinterestWhatsApp ಇಂದು ಮುಖ್ಯಮಂತ್ರಿಗಳಿಗೆ ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ ಸಲ್ಲಿಕೆ. ಶಾಲೆಗಳ ಆರಂಭದ ಬಗ್ಗೆ ಈ ವರದಿ ಅಧ್ಯಯನ ಮಾಡಿ ನಿರ್ಧಾರ. 2011ರ ಟೀವಿ ಸಂದರ್ಶನವೊಂದರಲ್ಲಿ ನಂದಿ ಇನ್ಫಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಲಿಮಿಟೆಡ್ -ನೈಸ್- ಕಂಪೆನಿ ವಿರುದ್ಧ ಮಾಡಿದ್ದ ಆರೋಪ ಸಾಬೀತು ಪಡಿಸದ ಕಾರಣ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ನೈಸ್ ಸಂಸ್ಥೆಗೆ 2ಕೋಟಿ ₹ ನಷ್ಟ ಪರಿಹಾರ ನೀಡುವಂತೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಅನ್ ಲಾಕ್ ಆದ ನಂತರ ಮೈ ಮರೆತ ಜನ. ಎಲ್ಲೆಲ್ಲೂ ಜನಜಂಗುಳಿ. ಕೋವಿಡ್ ಶಿಷ್ಟಾಚಾರಕ್ಕೆ ಡೋಂಟ್ ಕೇರ್. ಹೀಗಾದರೆ ಮೂರನೆ ಅಲೆ ಪಕ್ಕ ಅಂತಾರೆ ತಜ್ಞರು. ದೇಶ ಕೋವಿಡ್ ನಿರ್ವಹಣೆ ಬಗ್ಗೆ ರಾಹುಲ್ ಗಾಂಧೀ ಅವರಿಂದ ಶ್ವೇತ ಪತ್ರ ಬಿಡುಗಡೆ. ಈ ಶ್ವೇತ ಪತ್ರ ಸರ್ಕಾರದ ವಿಫಲತೆ ಬಗ್ಗೆ ಬೆರಳು ತೋರಿಸಲು ಅಲ್ಲ.ಸಂಭಾವ್ಯ ಮೂರನೇ ಅಲೆಗೆ ದೇಶ ಸಿದ್ಧವಾಗಲು ಸಹಾಯ ಮಾಡಲು ಎಂದು ರಾಹುಲ್ ಹೇಳಿದ್ದಾರೆ. ಶರದ್ ಪವಾರ್ ದೆಹಲಿ ಮನೆಯಲ್ಲಿ ಪ್ರತಿಪಕ್ಷ ನಾಯಕರ ಸಭೆ. ರಾಷ್ಟ್ರಮಂಚ್ ಹೆಸರಲ್ಲಿ 15 ಪ್ರತಿಪಕ್ಷ ನಾಯಕರ ಸಮ್ಮಿಲನ. 2024 ರ ಚುನಾವಣೆಗೆ ತಯಾರಿ.