ಟಾಪ್ 10ತಾಜಾ ವರದಿ ಒಂದೇ ದಿನ 75 ಲಕ್ಷ ಡೋಸ್ ಲಸಿಕೆ By ಕನ್ನಡಪ್ರೆಸ್.ಕಾಮ್ ವರದಿ - June 21, 2021 0 295 FacebookTwitterPinterestWhatsApp ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಸಿಎಂ ಪೋಸ್ಟ್ ನ ಗದ್ದಲ. ಸಿದ್ದು ಪರ ಹಲವರ ಬ್ಯಾಟಿಂಗ್. ಸಿಎಂ ಯಾರು ಅಂತ ನಿರ್ಧರಿಸೋರು ದಿಲ್ಲಿಯವರು ಎಂದ ಡಿಕೆಶಿ. ಗೆದ್ದ ಎಂಎಲ್ಎ ಗಳು ತೀರ್ಮಾನಿಸ್ತಾರೆ ಎಂದ ಸಿದ್ದರಾಮಯ್ಯ ರಾಜ್ಯದ ಹಲವೆಡೆ ಅನ್ ಲಾಕ್ ಜಾರಿ. ನಿನ್ನೆಯ ಪಟ್ಟಿಗೆ ಆರು ಜಿಲ್ಲೆ ಸೇರ್ಪಡೆ. ಕೊರೊನಾ ನಿಯಮ ಪಾಲಿಸಿದ ಜನ. ಪರಿಸ್ಥಿತಿ ಹೀಗೆ ಮುಂದುವರಿದರೆ ಮೂರನೇ ಅಲೆ ಪಕ್ಕಾ ಅಂದ ತಜ್ಞರು. ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 4867, ಬೆಂಗಳೂರಿನ ಪ್ರಕರಣಗಳು 1034. ಪಾಸಿಟಿವಿಟಿ ದರ ಶೇಕಡ 3.25. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳು 1,23,134. ಕೃಷಿ ಸಂಬಂಧಿಸಿದ ಕೋರ್ಸುಗಳಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಶೇಕಡ 50 ರಷ್ಟು ಮೀಸಲು ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನ. ದೇಶ ಇವತ್ತು ಒಂದೇ ದಿನ 75 ಲಕ್ಷ ಮಂದಿಗೆ ಕೋವಿಡ್ ಲಸಿಕೆ ಹಾಕಿ ದಾಖಲೆ ಮೆರೆದ ಭಾರತ. ಕರ್ನಾಟಕ ಒಂದರಲ್ಲೇ 10 ಲಕ್ಷ ಡೋಸ್ ನೀಡಿಕೆ. ಕೋವಿಡ್ ಕಾರಣದಿಂದ ಈ ವರ್ಷವೂ ಅಮರನಾಥ್ ಯಾತ್ರೆ ರದ್ದು.