ಟಾಪ್ 10ತಾಜಾ ವರದಿ ಈ ರಾತ್ರಿಯ ಪ್ರಮುಖ ಹೆಡ್ ಲೈನ್ By ಕನ್ನಡಪ್ರೆಸ್.ಕಾಮ್ ವರದಿ - June 19, 2021 0 278 FacebookTwitterPinterestWhatsApp ಮಂದುವರಿದ ಮಳೆಯ ಅಬ್ಬರ. ಮಹಾರಾಷ್ಟ್ರ ಮಳೆಯಿಂದ ಉತ್ತರ ಕರ್ನಾಟಕ ತತ್ತರ . ಅಪಾಯದಲ್ಲಿ 1710 ಹಳ್ಳಿಗಳು. ಕೊಡಗು, ಕರಾವಳಿ ಮತ್ತು ಮಲೆನಾಡಿನಲ್ಲೂ ಮುಂಗಾರು ಅಬ್ಬರ. ಮೈಸೂರು ಹೊರತು ಪಡಿಸಿ ಪಾಸಿಟಿವಿಟಿ ದರ ಶೇಕಡ 5 ಕ್ಕಿಂತ ಇರುವ ಜಿಲ್ಲೆಗಳಲ್ಲಿ ಅನ್ ಲಾಕ್, 5 ಗಂಟೆ ವರೆಗೆ ಅಂಗಡಿ ಓಪನ್, ಎಸಿ ರಹಿತ ಹೋಟೆಲ್ ಓಪನ್, ಬಸ್ ಮೆಟ್ರೋ ಶೇಕಡ 50 ಪ್ರಯಾಣಿಕರೊಂದಿಗೆ ಅನುಮತಿ ಭದ್ರಾ ಮೇಲ್ದಂಡೆ ಕಿಕ್ ಬ್ಯಾಕ್ ಕುರಿತು ಶಾಸಕ ವಿಶ್ವನಾಥ್ ಮಾಡಿರುವ ಆರೋಪದ ಬಗ್ಗೆ ಎಸಿಬಿ ತನಿಖೆಗೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ ಕರ್ನಾಟಕದಲ್ಲಿ ಇಂದಿನ ಕೋವಿಡ್ ಪಾಸಿಟಿವಿಟಿ ದರ ಶೇಕಡ 3.38ಕ್ಕೆ ಇಳಿಕೆ. ಹೊಸ ಕೇಸುಗಳ ಸಂಖ್ಯೆ 5815.ಬೆಂಗಳೂರಿನ ಹೊಸ ಕೇಸು 1263. ದೇಶ ಪಕ್ಕದ ತೆಲಾಂಗಣದಲ್ಲಿ ನಾಳೆಯಿಂದ ಲಾಕ್ ಡೌನ್ ಪೂರ್ಣ ತೆರವು, ಜುಲೈ 1 ರಿಂದ ಶಿಕ್ಷಣ ಸಂಸ್ಥೆಗಳೂ ಆರಂಭ ಪಂಜಾಬಿನಲ್ಲೂ 12 ನೇ ತರಗತಿ ಪರೀಕ್ಷೆ ರದ್ದು . ಕೋವಿಡ್ ಕಾರಣದಿಂದ ಸಿಬಿಎಸ್ ಇ ಮಾದರಿಯಂತೆ ಫಲಿತಾಂಶ ಪ್ರಕಟ 15 ನಿಮಿಷಗಳಲ್ಲಿ ಕೋವಿಡ್ ವೈರಾಣು ಪತ್ತೆ ಮಾಡುವ ಸೆನ್ಸಿಟ್ ರಾಪಿಡ್ ಕೋವಿಡ್-19 ಎಜಿ ಕಿಟ್ ಅನ್ನು ಯುಬಿಯೋ ಬಯೋಟೆಕ್ನಾಲಜಿ ಸಿಸ್ಟಂ ಪ್ರವೈಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.