ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೈನಿಕ 1,14,460 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ತಿಂಗಳಲ್ಲಿಯೇ ಇದು ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ. ದೇಶವು ಸತತ 10 ನೇ ದಿನವೂ ದೈನಿಕ 2 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ದಾಖಲಿಸಿದೆ.

ಭಾರತದ ಸಕ್ರಿಯ ಪ್ರಕರಣಗಳ ಹೊರೆ ಸತತ ಇಳಿಕೆಯಾಗುತ್ತಿದೆ. ಇಂದು ದೇಶದ ಸಕ್ರಿಯ ಪ್ರಕರಣಗಳ ಹೊರೆ 15 ಲಕ್ಷಕ್ಕಿಂತ ಕೆಳಗಿಳಿದಿದೆ ಮತ್ತು ಅದು 14,77,799 ರಲ್ಲಿದೆ. ಸತತ ಆರನೇ ದಿನವೂ ಪ್ರಕರಣಗಳ ಹೊರೆ 20 ಲಕ್ಷಕ್ಕಿಂತ ಕಡಿಮೆ ಇದೆ.
ಕಳೆದ 24 ಗಂಟೆಗಳಲ್ಲಿ 77,449 ನಿವ್ವಳ ಇಳಿಕೆ ಕಂಡು ಬಂದಿದೆ. ಮತ್ತು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೇ 5.13% ರಷ್ಟಿದೆ.

ಕೋವಿಡ್ -19 ಸೋಂಕಿನಿಂದ ಹೆಚ್ಚು ಜನರು ಗುಣಮುಖರಾಗುತ್ತಿದ್ದು, ಭಾರತದ ದೈನಿಕ ಚೇತರಿಕೆ/ಗುಣಮುಖ ಪ್ರಕರಣಗಳ ಸಂಖ್ಯೆ ಸತತ 24 ನೇ ದಿನವೂ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 1,89,232 ಮಂದಿ ಗುಣಮುಖರಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೈನಿಕ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಪ್ರಕರಣಗಳು 74,772 ರಷ್ಟು ಹೆಚ್ಚಾಗಿವೆ.

ಸಾಂಕ್ರಾಮಿಕವು ಜಾಗತಿಕವಾಗಿ ಆರಂಭಗೊಂಡಂದಿನಿಂದ ಸೋಂಕಿತರಾಗಿದ್ದವರ 2,69,84,781 ಮಂದಿ ಈಗಾಗಲೇ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಗುಣಮುಖ ದರ 93.67%, ಆಗಿದೆ, ಅದು ಹೆಚ್ಚಳದ ಪ್ರವೃತ್ತಿಯನ್ನು ದಾಖಲಿಸುತ್ತಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 20,36,311 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಭಾರತವು ಇದುವರೆಗೆ ಒಟ್ಟು 36.4 ಕೋಟಿ (36,47,46,522) ಪರೀಕ್ಷೆಗಳನ್ನು ನಡೆಸಿದೆ.ಒಂದೆಡೆ ದೇಶಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದರೆ, ಸಾಪ್ತಾಹಿಕವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 6.54% ಇದೆ, ದೈನಿಕ ಪಾಸಿಟಿವ್ ದರ ಇಂದು 5.62% ಆಗಿದೆ. ಅದು ಸತತ 13ನೇ ದಿನವೂ 10% ಗಿಂತ ಕೆಳಗಿದೆ.

ಇನ್ನೊಂದು ಪ್ರಮುಖ ಸಾಧನೆಯಲ್ಲಿ, ದೇಶದಲ್ಲಿ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಮೂಲಕ ಹಾಕಲಾದ ಕೋವಿಡ್ -19 ಲಸಿಕಾ ಡೋಸ್ ಗಳ ಒಟ್ಟು ಪ್ರಮಾಣ ಇಂದು 23 ಕೋಟಿ ದಾಟಿದೆ. ರಾಷ್ಟ್ರವ್ಯಾಪ್ತಿ ಲಸಿಕಾ ಆಂದೋಲನದ ಮೂಲಕ 23.13 ಕೋಟಿ ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 33,53,539 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.
ಇಂದು ಬೆಳಿಗ್ಗೆ 7 ಗಂಟೆಯವರೆಗಿನ ತಾತ್ಕಾಲಿಕ ವರದಿಗಳ ಪ್ರಕಾರ 23,13,22,417 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.
ವಿವರಗಳು ಈ ಕೆಳಗಿನಂತಿವೆ:
| ಆರೋಗ್ಯ ಕಾರ್ಯಕರ್ತರು | 1ನೇ ಡೋಸ್ | 99,63,790 |
| 2ನೇ ಡೋಸ್ | 68,55,261 | |
| ಮುಂಚೂಣಿ ಕಾರ್ಯಕರ್ತರು. | 1ನೇ ಡೋಸ್ | 1,61,65,342 |
| 2ನೇ ಡೋಸ್ | 86,62,859 | |
| 18-44 ವರ್ಷ ವಯೋಗುಂಪಿನವರು | 1ನೇ ಡೋಸ್ | 2,77,39,545 |
| 2ನೇ ಡೋಸ್ | 1,61,253 | |
| 45 ರಿಂದ 60 ವರ್ಷ ವಯೋಗುಂಪಿನವರು | 1ನೇ ಡೋಸ್ | 7,07,15,580 |
| 2ನೇ ಡೋಸ್ | 1,12,99,332 | |
| 60ವರ್ಷಕ್ಕಿಂತ ಮೇಲ್ಪಟ್ಟವರು | 1ನೇ ಡೋಸ್ | 6,05,54,245 |
| 2ನೇ ಡೋಸ್ | 1,92,05,210 | |
| ಒಟ್ಟು | 23,13,22,417 |
(ವರದಿ ಪಿಐಬಿ)



Good 👍