ಟಾಪ್ 10ತಾಜಾ ವರದಿ ಈ ಮಧ್ಯಾಹ್ನದ ಹೆಡ್ ಲೈನ್ By ಕನ್ನಡಪ್ರೆಸ್.ಕಾಮ್ ವರದಿ - June 20, 2021 0 815 FacebookTwitterPinterestWhatsApp ಭದ್ರಾ ಮೇಲ್ದಂಡೆ ಯೋಜನೆ ಫೈಲ್ ಚಿತ್ರ ನೀರಾವರಿ ಇಲಾಖೆ ಕಾರ್ಯದರ್ಶಿ ವಾಸ್ತವ ಸಂಗತಿಗಳನ್ನು ಹೇಳಿರುವುದರಿಂದ ವಿಶ್ವನಾಥ್ ಮಾಡಿರುವ ಆರೋಪದ ಬಗ್ಗೆ ತನಿಖೆಯ ಅಗತ್ಯ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾಳೆಯಿಂದ ಮೆಟ್ರೋ ಮತ್ತು ಬಸ್ ಸಂಚಾರ. ಚಿತ್ರಮಂದಿರಗಳು ಮತ್ತು ಮಾಲ್ ಗಳಿಗೆ ತೆರೆಯುವ ಭಾಗ್ಯ ಇನ್ನೂ ಇಲ್ಲ. ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ರಸ್ತೆಗಳಲ್ಲಿ ವಾಹನ ದಟ್ಟಣೆ ಮೂರು ದಿನಗಳ ಹಿಂದೆ ಬೆಳಗಾವಿ ಬಳಿ ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆ ದೇಶ 81 ದಿನಗಳ ನಂತರ ದೈನಂದಿನ ಹೊಸ ಕೊರೊನಾ ಪ್ರಕಣಗಳ ಸಂಖ್ಯೆ 60 ಸಾವಿರ ಮಟ್ಟದಿಂದ ಕೆಳಗಿದ್ದು, ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 58,419 ಹೊಸ ಪ್ರಕರಣಗಳು ಪತ್ತೆಯಾಗಿವೆ. ತಮಿಳುನಾಡಿನಲ್ಲಿ ಜೂನ್ 28ರವೆರಗೂ ಲಾಕ್ ಡೌನ್ ವಿಸ್ತರಣೆ. ಕೋವಿಡ್ ನೆಗಟೀವ್ ಸರ್ಟಿಫಿಕೇಟ್ ಹೊಂದಿರುವ ಉತ್ತರಖಂಡದ ನಿವಾಸಿಗಳಿಗೆ ಮಾತ್ರ ಜುಲೈ 11ರಿಂದ ಚಾರ್ ಧಾಮ್ ಯಾತ್ರೆಗೆ ಅವಕಾಶ.