33.2 C
Karnataka
Thursday, May 21, 2026
    Home Blog Page 32

    Health Camp: ಮಂಗಳೂರು ವಿವಿ ಆಶ್ರಯದಲ್ಲಿ ಆರೋಗ್ಯ ಶಿಬಿರ

    MANGALURU FEB 1

    ಆರೋಗ್ಯವೇ ಭಾಗ್ಯ.  ಅರೋಗ್ಯ ಹದಗೆಟ್ಟಾಗ ಮಾತ್ರ ಅದರ ಮಹತ್ವ ನಮಗೆ ಅರಿವಾಗುತ್ತದೆ.  ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಆದರೆ, ಮಿತಿಮೀರಿದ  ಪರಿಸರ ಮಾಲಿನ್ಯ, ಆಧುನಿಕ ಜೀವನ ಶೈಲಿ, ಕಲಬೆರಕೆ ಆಹಾರ,  ಹಲವಾರು  ಕಾರಣಗಳಿಂದ ಇಂದು  ಅರೋಗ್ಯ ಸಮಸ್ಯೆಗಳಿಗೆ ಒಳಗಾಗುವವರ ಸಂಖ್ಯೆ ಏರುತ್ತಿದೆ. ಅನೇಕ ಕಾಯಿಲೆಗಳ ರೋಗಲಕ್ಷಣಗಳು  ಆರಂಭದಲ್ಲಿ  ನಮ್ಮ ಗಮನಕ್ಕೆ ಬಾರದೇ ಒಂದೇ ಸಮಯದಲ್ಲಿ   ಉಲ್ಬಣಗೊಳ್ಳುತ್ತವೆ.  ಕೆಲವೊಂದು ಸಂದರ್ಭದಲ್ಲಿ ಅದು ಕೈಮೀರಿ ಹೋಗಬಹುದು.   ಯಾವುದೇ ಅರೋಗ್ಯ ಸಮಸ್ಯೆ ಇದ್ದರೂ  ಅದನ್ನು ಆರಂಭದಲ್ಲೇ ಪತ್ತೆ ಹಚ್ಚುವುದರ ಮೂಲಕ ಅದು ಉಲ್ಬಣಗೊಳ್ಳವುದನ್ನು  ತಡೆಯಲು ಸಾಧ್ಯವಿದೆ ಮತ್ತು ಉತ್ತಮ ಚಿಕಿತ್ಸೆ ಪಡೆದು ಶೀಘ್ರ ಗುಣಮುಖರಾಗಬಹುದು.

    ಈ ಹಿನ್ನೆಲೆಯಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳು ಸೇರಿದಂತೆ ಎಲ್ಲಾ ನಾಗರಿಕರಿಗಾಗಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆ  ದಕ್ಷಿಣ ಕನ್ನಡ ಜಿಲ್ಲೆ , ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ –  ಗ್ರಾಮ ದತ್ತು ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ  ಸೇವಾ ಯೋಜನೆ, ಮಂಗಳಗಗೋತ್ರಿ ಘಟಕ, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದೇರಳಕಟ್ಟೆ ಹಾಗೂ ಜನ ಶಿಕ್ಷಣ ಟ್ರಸ್ಟ್ , ಮಂಗಳೂರು ಇದರ ಜಂಟಿ ಸಹಭಾಗಿತ್ವದಲ್ಲಿ ಫೆಬ್ರವರಿ 2ರ ಬುಧವಾರದಂದು  ಪೂರ್ವಾಹ್ನ 9:00 ಗಂಟೆಯಿಂದ ಸಂಜೆ   4:00 ಗಂಟೆಯವರೆಗೆ ಜನ ಶಿಕ್ಷಣ ಟ್ರಸ್ಟ್  ಸಭಾಂಗಣ, ಮುಡಿಪು ಇಲ್ಲಿ ಬೃಹತ್ ಉಚಿತ ಆರೋಗ್ಯ ಮತ್ತು ಅರ್ಭುಧ ಖಾಯಿಲೆ ತಪಾಸಣೆ ಹಾಗೂ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ.

    ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಶತಮಾನೋತ್ಸವ ಸಮಾರಂಭದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

    ಶಿಬಿರವನ್ನು ಮಂಗಳೂರು ವಿಶ್ವವಿದ್ಯಾನಿಲಯದ  ಕುಲಪತಿಯವರಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಉದ್ಘಾಟಿಸಲಿದ್ದಾರೆ.  ಭಾರತೀಯ ರೆಡ್ ಕ್ರಾಸ್ ಸಂಸ್ಥೆ  ದಕ್ಷಿಣ ಕನ್ನಡ ಜಿಲ್ಲೆ ಇದರ ಸಭಾಪತಿಗಳಾದ ಸಿ.ಎ. ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದೇರಳಕಟ್ಟೆ ಇದರ ಕುಲಪತಿಯವರಾದ ಡಾ. ಎಂ. ವಿಜಯ್ ಕುಮಾರ್;  ಒಂಬುಡ್ಸ್ಮೆನ್ ಮಹಾತ್ಮ ಗಾಂಧಿ ನರೇಗಾ  ಮಾಜಿ ನಿರ್ದೇಶಕರಾದ ಎನ್.  ಶೀನ ಶೆಟ್ಟಿ , ಜನ ಶಿಕ್ಷಣ ಟ್ರಸ್ಟ್ ಸಹ ನಿರ್ದೇಶಕರಾದ ಕೃಷ್ಣ ಮೂಲ್ಯ ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯೆನೆಪೋಯ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಇದರ ಮುಖ್ಯಸ್ಥರು ಸಮುದಾಯ ಅರ್ಭುಧರೋಗ ತಜ್ಞರಾದ ಡಾ. ಇಬ್ರಾಹಿಂ ನಾಗನೂರ್,  ಯೆನೆಪೋಯ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಹಾಗೂ ಸ್ತ್ರೀರೋಗ  ಕ್ಯಾನ್ಸರ್ ತಜ್ಞರಾದ ಡಾ. ಮರಿಯಮ್ ಅಂಜುಮ್ ಇಪ್ತಿಕಾರ್ ಮತ್ತು ಇನ್ನಿತರ   ತಜ್ಞ  ವೈದ್ಯರುಗಳ ತಂಡ ಸಂಪನ್ಮೂಲ ವ್ಯಕ್ತಿಗಳಾಗಿ  ಭಾಗವಹಿಸಲಿರುವರು.ಪ್ರೊ. ಕಿಶೋರ್ ಕುಮಾರ್ ಸಿ. ಕೆ . ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ ಉಪಸ್ಥಿತರಿರುವರು.  


    ನಿತ್ಯಾಶ್ರೀ ಬಿ. ವಿ . ಕಾರ್ಯಕ್ರಮ ಅಧಿಕಾರಿ, ಯುವ ರೆಡ್ ಕ್ರಾಸ್, ಯೆನೆಪೋಯ, ಡಾ. ಪರಮೇಶ್ವರ, ಕಾರ್ಯಕ್ರಮ ಅಧಿಕಾರಿ, ಯುವ ರೆಡ್ ಕ್ರಾಸ್, ಯೆನೆಪೋಯ, ಮಂಗಳೂರು ವಿ. ವಿ. ಘಟಕ, ಡಾ. ಗೋವಿಂದರಾಜು ಬಿ. ಎಂ., ಕಾರ್ಯಕ್ರಮ ಅಧಿಕಾರಿ, ಎನ್ . ಎಸ್ . ಎಸ್ . ಮಂಗಳೂರು ವಿ. ವಿ . ಘಟಕ, ಪ್ರೊ. ಪ್ರಶಾಂತ ನಾಯ್ಕ, ಮಂಗಳ – ಗ್ರಾಮ ದತ್ತು ಯೋಜನೆ ಸಂಯೋಜಕರು,  ಶ್ರೀ ಸುಚೇತ್ ಸುವರ್ಣ, ನಿರ್ದೇಶಕರು, ರೆಡ್ ಕ್ರಾಸ್, ಉಪಸಮಿತಿ ( ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದ. ಕ. ಜಿಲ್ಲೆ), ಡಾ. ಗಣಪತಿ ಗೌಡ, ನೋಡಲ್ ಅಧಿಕಾರಿ, ಮಂಗಳೂರು  ವಿ. ವಿ. ರೆಡ್ ಕ್ರಾಸ್, ಡಾ. ಲೀನಾ ಕೆ. ಸಿ . ಪ್ರಾಶುಂಪಾಲರು, ಯೆನೆಪೋಯ ನರ್ಸಿಂಗ್ ಕಾಲೇಜು, ಶ್ರೀ ಬಿ. ಕುಸುಮಾಧರ, ಗೌರವ ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ. ಜಿಲ್ಲೆ ಕಾರ್ಯಕ್ರಮವನ್ನು ಸಂಘಟಿಸಲಿರುವುರು.

    ಜ್ವರ, ಕೆಮ್ಮು, ಕಫ, ಉಸಿರಾಟದ ತೊಂದರೆ, ರಕ್ತದೊತ್ತಡ ಮಧುಮೇಹ, ಹೃದಯರಕ್ತನಾಳಗಳ ಕಾಯಿಲೆಗಳು, ಅರ್ಭುದ,  ಹೊಟ್ಟೆಬಾಧೆ, ಮೂಳೆ ಸಮಸ್ಯೆ, ಚರ್ಮ ರೋಗ, ಕಣ್ಣು , ಕಿವಿ ಮೂಗಿಗೆ ಸಂಬಂಧಿಸಿದ ಹಾಗೂ ಇನ್ನಿತರ ಯಾವುದೇ   ಆರೋಗ್ಯಗಳ ಸಮಸ್ಯೆಗಳನ್ನು ತಪಾಸಣೆ ನಡೆಸಿ ಸೂಕ್ತ ಚಿಕ್ತಿತ್ಸೆಗೆ ಅವಕಾಶ ಮಾಡಿಕೊಡಲಾಗುವುದು.  
    ಶಿಬಿರವನ್ನು ಕೋವಿಡ್ -19 ಸುರಕ್ಷತಾ ನಿಯಮಾವಳಿಯನ್ನು ಪಾಲನೆಯೊಂದಿಗೆ ಆಯೋಜಿಸಲಾಗುವುದು.
    ಸಾರ್ವಜನಿಕರು  ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ವಿಜ್ಞಾಪಿಸಲಾಗಿದೆ.

    ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಕೇಂದ್ರ ಬಜೆಟ್‌ನ ಸಾರಾಂಶ

    New Delhi FEB 1

    ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ಶೇ.9.2ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಲಾಗಿದ್ದು, ಇದು ವಿಶ್ವದ ಎಲ್ಲ ಆರ್ಥಿಕತೆಗಳಿಗಿಂತ ಅತ್ಯಧಿಕವಾಗಿದೆ. ಒಟ್ಟಾರೆ ನಮ್ಮ ದೇಶದ ಬಲಿಷ್ಠ ಸ್ಥಿತಿಸ್ಥಾಪಕತ್ವದಿಂದಾಗಿ ಸಾಂಕ್ರಾಮಿಕದ ಅಡ್ಡಪರಿಣಾಮಗಳ ನಡುವೆಯೂ ಆರ್ಥಿಕತೆ ಚೇತರಿಕೆಯಾಗಿದೆ ಮತ್ತು ಕ್ಷಿಪ್ರವಾಗಿ ಪುಟಿದೆದ್ದಿದೆ. ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಈ ಹೇಳಿಕೆ ನೀಡಿದ್ದಾರೆ.

    ನಾವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ ಮತ್ತು ನಾವು ಅಮೃತ ಕಾಲ ಅಂದರೆ ಭಾರತ ಸ್ವಾತಂತ್ರ್ಯಗಳಿಸಿ 100 ವರ್ಷ ಪೂರೈಸುವ ಮುಂದಿನ 25 ವರ್ಷಗಳಿಗೆ ಪ್ರವೇಶಿಸಿದ್ದೇವೆ. ಪ್ರಧಾನಮಂತ್ರಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ ಮುನ್ನೋಟ ಸಾಧನೆಯ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹಣಕಾಸು ಸಚಿವರು ಹೇಳಿದರು. ಅವುಗಳೆಂದರೆ:

    ಎಲ್ಲರ ಸಮಗ್ರ ಕಲ್ಯಾಣಕ್ಕೆ ಒತ್ತು ನೀಡುವ ಸೂಕ್ಷ್ಮ ಆರ್ಥಿಕ ಮಟ್ಟಕ್ಕೆ ಆದ್ಯತೆ ನೀಡಿ ಪೂರಕ ಸೂಕ್ಷ್ಮ ಆರ್ಥಿಕ ಪ್ರಗತಿ ಸಾಧಿಸುವುದು.

    ಡಿಜಿಟಲ್ ಆರ್ಥಿಕತೆ ಮತ್ತು ಫಿನ್ ಟೆಕ್ ತಂತ್ರಜ್ಞಾನಕ್ಕೆ ಉತ್ತೇಜನ, ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಮತ್ತು ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ ಮತ್ತು ಖಾಸಗಿ ಹೂಡಿಕೆಯಲ್ಲಿ ಜನರ ಭಾಗಿದಾರಿಕೆಗೆ ಸಹಾಯ ಮಾಡುವ ಸಾರ್ವಜನಿಕ ಬಂಡವಾಳ ಹೂಡಿಕೆಯ ಮೂಲಕ ಖಾಸಗಿ ಹೂಡಿಕೆಯನ್ನು ಅವಲಂಬಿಸುವುದು.

    2014ರಿಂದೀಚೆಗೆ ಸರ್ಕಾರ ಜನರನ್ನು ಸಬಲೀಕರಣಕ್ಕೆ ವಿಶೇಷವಾಗಿ ಬಡವರು ಮತ್ತು ದುರ್ಬಲ ವರ್ಗದವರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಮತ್ತು ವಸತಿ, ವಿದ್ಯುಚ್ಛಕ್ತಿ, ಅಡುಗೆ ಅನಿಲ ಮತ್ತು ನೀರಿನ ಲಭ್ಯತೆ ಒದಗಿಸಲು ಕ್ರಮಗಳನ್ನು ಕೈಗೊಂಡಿದೆ. ಹಣಕಾಸು ಸೇರ್ಪಡೆ ಖಾತ್ರಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಮತ್ತು ನೇರ ನಗದು ವರ್ಗಾವಣೆ ಹಾಗೂ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಬಡವರ ಸಾಮರ್ಥ್ಯವೃದ್ಧಿಗೆ ಬದ್ಧತೆಯನ್ನು ತೋರುತ್ತಿದೆ.

    ಆತ್ಮನಿರ್ಭರ ಭಾರತ ಗುರಿ ಸಾಧನೆ

    14 ವಲಯಗಳಲ್ಲಿ ಆತ್ಮನಿರ್ಭರ ಭಾರತ ಗುರಿ ಸಾಧನೆಗೆ ನೀಡಲಾಗುತ್ತಿರುವ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ, 60 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಂಭವನೀಯತೆ ಇದೆ ಮತ್ತು ಮುಂದಿನ 5 ವರ್ಷಗಳಲ್ಲಿ ಸುಮಾರು 30 ಲಕ್ಷ ಹೆಚ್ಚುವರಿ ಉತ್ಪಾದನೆಯಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ಹೊಸ ಸಾರ್ವಜನಿಕ ವಲಯದ ಉದ್ಯಮ ನೀತಿ ಜಾರಿ ಕುರಿತಂತೆ ಮಾತನಾಡಿದ ಅವರು, ಏರ್ ಇಂಡಿಯಾದ ಮಾಲಿಕತ್ವವನ್ನು ವರ್ಗಾಯಿಸುವ ಕಾರ್ಯತಂತ್ರ ಪೂರ್ಣಗೊಂಡಿದೆ. ಎನ್ಐಎನ್ಎಲ್ (ನೀಲಾಂಚಲ್ ಇಸ್ಪತ್ ನಿಗಮ ನಿಯಮಿತ) ಕಾರ್ಯತಂತ್ರ ಪಾಲುದಾರರನ್ನು ಆಯ್ಕೆ ಮಾಡಲಾಗಿದೆ. ಸದ್ಯದಲ್ಲೇ ಎಲ್ಐಸಿಯ ಸಾರ್ವಜನಿಕ ಬಿಡ್ಡಿಂಗ್ ಗೆ ಪ್ರಕಟಣೆ ಹೊರಡಿಸಲಾಗುವುದು ಮತ್ತು 2022-23ನೇ ಸಾಲಿನಲ್ಲಿ ಮತ್ತಿತರ ಕಾರ್ಯಗಳು ಕೈಗೊಳ್ಳಲಾಗುವುದು ಎಂದರು.

    ಈ ಬಜೆಟ್ ಪ್ರಗತಿಗೆ ಒತ್ತು ನೀಡುವುದನ್ನು ಮುಂದುವರಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು. ಅಲ್ಲದೆ ಇದು ಪರ್ಯಾಯ ಮಾರ್ಗವನ್ನು ಹಾಕಿಕೊಡಲಿದೆ. (1) ಅಮೃತ ಕಾಲದಲ್ಲಿ ನೀಲನಕ್ಷೆ; ದೂರದೃಷ್ಟಿ ಮತ್ತು ಸಮಗ್ರ ಬೆಳವಣಿಗೆ, ಇದರಿಂದ ನಮ್ಮ ಯುವಜನತೆ, ಮಹಿಳೆಯರು, ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೇರ ಲಾಭವಾಗಲಿದೆ ಮತ್ತು (2) ಆಧುನಿಕ ಮೂಲಸೌಕರ್ಯಕ್ಕೆ ಭಾರೀ ಸಾರ್ವಜನಿಕ ಹೂಡಿಕೆ – ಭಾರತವನ್ನು @100ಗೆ ಸಜ್ಜುಗೊಳಿಸಲು ಪಿಎಂ ಗತಿಶಕ್ತಿ ಯೋಜನೆಯ ಮಾರ್ಗದರ್ಶನ ಪಡೆಯಲಾಗುವುದು ಮತ್ತು ಬಹುಮಾದರಿ ಮನೋಭಾವದ ಸಮನ್ವಯದಿಂದ ಲಾಭವಾಗಲಿದೆ. ಇನ್ನೂ ಮುಂದುವರಿದು, ಈ ಪರ್ಯಾಯ ಪಥದಲ್ಲಿ ನಾಲ್ಕು ಆದ್ಯತೆಗಳನ್ನು ಅವರು ಉಲ್ಲೇಖಿಸಿದರು.

    ಪಿಎಂ ಗತಿಶಕ್ತಿ
    ಸಮಗ್ರ ಅಭಿವೃದ್ಧಿ
    ಉತ್ಪಾದನೆ ಮತ್ತು ಹೂಡಿಕೆ ವೃದ್ಧಿ, ಸೌರಶಕ್ತಿ ಅವಕಾಶಗಳ ಬಳಕೆ, ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ
    ಹೂಡಿಕೆಗಳಿಗೆ ಹಣಕಾಸು.

    ಪಿಎಂ ಗತಿಶಕ್ತಿ

    ಪಿಎಂ ಗತಿಶಕ್ತಿ ಯೋಜನೆ ಕುರಿತು ವಿವರ ನೀಡಿದ ಹಣಕಾಸು ಸಚಿವರು, ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಇದು ಪರಿವರ್ತನಾ ಮನೋಭಾವದ ಕ್ರಮವಾಗಿದೆ ಎಂದರು. ಇದರಲ್ಲಿ ಮುಖ್ಯವಾಗಿ ಏಳು ಇಂಜಿನ್ ಗಳಿವೆ ಅವುಗಳೆಂದರೆ ರಸ್ತೆ, ರೈಲ್ವೆ, ವಿಮಾನ ನಿಲ್ದಾಣ, ಬಂದರು, ಸಮೂಹ ಸಾರಿಗೆ, ಜಲಮಾರ್ಗ ಮತ್ತು ಸಾರಿಗೆ ಮೂಲಸೌಕರ್ಯ ಈ ಎಲ್ಲ ಇಂಜಿನ್ ಗಳು ಆರ್ಥಿಕತೆಯನ್ನು ಒಗ್ಗಟ್ಟಿನಿಂದ ಮುಂದುವರಿಸಿಕೊಂಡು ಹೋಗುತ್ತವೆ.

    ಈ ಇಂಜಿನ್ ಗಳಿಗೆ ಇಂಧನ ಪರಿವರ್ತನೆ, ಮಾಹಿತಿ ತಂತ್ರಜ್ಞಾನ ಸಂವಹನ, ಭಾರೀ ಜಲ ಮತ್ತು ಒಳಚರಂಡಿ ಹಾಗೂ ಸಾಮಾಜಿಕ ಮೂಲಸೌಕರ್ಯ ಪೂರಕ ಪಾತ್ರವನ್ನು ವಹಿಸಲಿವೆ. ಅಂತಿಮವಾಗಿ ಶುದ್ಧ ಇಂಧನ ಮತ್ತು ಸಬ್ ಕಾ ಪ್ರಯಾಸ್ ನ – ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಒಟ್ಟಾರೆ ಪ್ರಯತ್ನಗಳೊಂದಿಗೆ ಮುನ್ನಡೆಯಲಿವೆ. ಇದರಿಂದ ಭಾರೀ ಉದ್ಯೋಗಾವಕಾಶಗಳು ಮತ್ತು ಎಲ್ಲರಿಗೂ ಉದ್ಯಮಶೀಲ ಅವಕಾಶಗಳು ವಿಶೇಷವಾಗಿ ಯುವಕರಿಗೆ ಲಭ್ಯವಾಗಲಿವೆ.

    ಅಂತೆಯೇ ಎಕ್ಸ್ ಪ್ರೆಸ್ ವೇಗಳಿಗೆ 2022-23ರಲ್ಲಿ ಪಿಎಂ ಗತಿಶಕ್ತಿ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಇದರಿಂದ ಪ್ರಯಾಣಿಕರು ಮತ್ತು ಸರಕು ಸಾಗಾಣೆಯ ವೇಗದ ಸಂಚಾರಕ್ಕೆ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು 2022-23ರಲ್ಲಿ 25,000 ಕಿ.ಮೀ. ವಿಸ್ತರಿಸಲಾಗುವುದು ಮತ್ತು ಸುಮಾರು 20,000 ಕೋಟಿ ರೂ.ಗಳನ್ನು ಸಾರ್ವಜನಿಕ ಸಂಪನ್ಮೂಲಗಳಿಗೆ ಪೂರಕವಾಗಿ ನವೀನ ವಿಧಾನಗಳ ಮೂಲಕ ಕ್ರೂಢೀಕರಿಸಲಾಗುವುದು.

    2022-23ನೇ ಸಾಲಿನಲ್ಲಿ ನಾಲ್ಕು ಕಡೆ ಪಿಪಿಪಿ ಮೂಲಕ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಟೆಂಡರ್ ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

    ರೈಲ್ವೆ

    ರೈಲ್ವೆಯಲ್ಲಿ ಸ್ಥಳೀಯ ಉದ್ಯಮಿಗಳು ಮತ್ತು ಪೂರೈಕೆ ಸರಣಿಗೆ ಸಹಕರಿಸಲು “ಒಂದು ನಿಲ್ದಾಣ-ಒಂದು ಉತ್ಪನ್ನ” ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಅಲ್ಲದೆ ಆತ್ಮನಿರ್ಭರ ಭಾರತದ ಭಾಗವಾಗಿ 2000 ಕಿ.ಮೀ. ಜಾಲವನ್ನು 2022-23ನೇ ಸಾಲಿನಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಸುರಕ್ಷತೆ ದೃಷ್ಟಿಯಿಂದ ಸ್ವದೇಶಿ ವಿಶ್ವದರ್ಜೆಯ ತಂತ್ರಜ್ಞಾನದ ಕವಚ ಯೋಜನೆಯಡಿ ತರಲಾಗುವುದು ಎಂದರು. 400 ಹೊಸ ತಲೆಮಾರಿನ ವಂದೆ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಲಾಗುವುದು, ಇವುಗಳನ್ನು ಇಂಧನ ದಕ್ಷತೆಯನ್ನು ಹೊಂದಿರುವಂತೆ ಮತ್ತು ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡುವ ರೀತಿ ಅಭಿವೃದ್ಧಿಗೊಳಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಮಲ್ಟಿ ಮಾದರಿ ಸಾಗಾಣೆಗೆ ಅನುಕೂಲವಾಗುವಂತೆ ನೂರು ಪಿಎಂ ಗತಿಶಕ್ತಿ ಕಾರ್ಗೊ ಟರ್ಮಿನಲ್ ಗಳನ್ನು ನಿರ್ಮಿಸಲಾಗುವುದು ಎಂದರು.

    ಕೃಷಿ ವಲಯ

    ಕೃಷಿ ವಲಯದಲ್ಲಿ ದೇಶಾದ್ಯಂತ ರಾಸಾಯನಿಕ ರಹಿತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಗಂಗಾ ನದಿಯ ಉದ್ದಗಲಕ್ಕೂ 5 ಕಿ.ಮೀ.ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವ ರೈತರಿಗೆ ಮೊದಲ ಹಂತದಲ್ಲಿ ಒತ್ತು ನೀಡಲಾಗುವುದು. ಬೆಳೆ ಸಮೀಕ್ಷೆ, ಭೂ ದಾಖಲೆಗಳ ಡಿಜಿಟಲೀಕರಣ, ರಾಸಾಯನಿಕ ಕೀಟನಾಶಕ ಮತ್ತು ಪೌಷ್ಠಿಕಾಂಶಗಳ ಸಿಂಪಡಣೆಗೆ ‘ಕಿಸಾನ್ ಡ್ರೋನ್’ಗಳ ಬಳಕೆಯನ್ನು ಉತ್ತೇಜಿಸಲಾಗುವುದು. ಎಣ್ಣೆ ಬೀಜಗಳ ಆಮದು ಅವಲಂಬನೆ ತಗ್ಗಿಸಲು ದೇಶದಲ್ಲಿ ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ಏಕರೂಪದ ಮತ್ತು ಸಮಗ್ರ ಯೋಜನೆಯನ್ನು ರೂಪಿಸಿ ಜಾರಿಗೊಳಿಸಲಾಗುವುದು.

    2023ನೇ ವರ್ಷವನ್ನು ಈಗಾಗಲೇ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಕಟಾವಿನ ನಂತರ ಮೌಲ್ಯವರ್ಧನೆ, ದೇಶೀಯ ಬಳಕೆ ಹೆಚ್ಚಳ ಮತ್ತು ಸಿರಿಧಾನ್ಯಗಳ ಉತ್ಪನ್ನಗಳ ಬ್ರಾಂಡಿಂಗ್ ಅನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಲು ಸರ್ಕಾರ ಸಂಪೂರ್ಣ ನೆರವು ನೀಡಲಿದೆ.

    ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು ಅಂದಾಜು 44,605 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ 9.08 ಲಕ್ಷ ಹೆಕ್ಟೇರ್ ರೈತರ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ. 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. 103 ಮೆಗಾವ್ಯಾಟ್ ಜಲವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ತಿಳಿಸಿದರು. 2021-22ನೇ ಸಾಲಿನ ಪರಿಷ್ಕೃತ ಅಂದಾಜಿನಲ್ಲಿ 4,300 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. 2020-23ರಲ್ಲಿ ಈ ಯೋಜನೆಗೆ 1,400 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೆ ಐದು ನದಿಗಳ ಜೋಡಣೆ, ಅವುಗಳೆಂದರೆ ದಾಮನ್ ಗಂಗಾ-ಪಿಂಜಾಲ್, ಪಾರ್-ತಪಿನರ್ಮದಾ, ಗೋದಾವರಿ-ಕೃಷ್ಣಾ, ಕೃಷ್ಣಾ-ಪೆನ್ನಾರ್ ಮತ್ತು ಪೆನ್ನಾರ್-ಕಾವೇರಿ ಜೋಡಣೆಯ ಕರಡು ಡಿಪಿಆರ್ ಗಳನ್ನು ಅಂತಿಮಗೊಳಿಸಲಾಗಿದೆ. ಫಲಾನುಭವಿ ರಾಜ್ಯಗಳ ನಡುವೆ ಸಹಮತ ಮೂಡಿದ ಕೂಡಲೇ ಆ ಯೋಜನೆಗಳ ಜಾರಿಗೆ ಕೇಂದ್ರ ಆರ್ಥಿಕ ನೆರವು ನೀಡಲಿದೆ.

    ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮದಿಂದ ಹೊರಬರಲು ಸುಮಾರು 130 ಲಕ್ಷಕ್ಕೂ ಅಧಿಕ ಎಂಎಸ್ಎಂಇಗಳ ಸಹಾಯಕ್ಕೆ ಬಹು ನಿರೀಕ್ಷಿತ ಹೆಚ್ಚುವರಿ ಸಾಲ ಒದಗಿಸಲು ತುರ್ತು ಸಾಲ ಮಾರ್ಗ ಖಾತ್ರಿ ಯೋಜನೆ (ಇಸಿಎಲ್ ಜಿಎಸ್)ಅನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು. ಆತಿಥ್ಯ ಮತ್ತು ಅದರ ಸಂಬಂಧಿ ಸೇವೆಗಳು, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳು ಇನ್ನೂ ವ್ಯಾಪಾರ ವಹಿವಾಟಿನಲ್ಲಿ ಸಾಂಕ್ರಾಮಿಕದ ಪೂರ್ವ ಸ್ಥಿತಿಗೆ ಮರಳಲು ಯತ್ನಿಸುತ್ತಿವೆ. ಈ ಅಂಶಗಳನ್ನೆಲ್ಲಾ ಪರಿಗಣಿಸಿ ಇಸಿಎಲ್ ಜಿಎಸ್ಅನ್ನು2023ರ ಮಾರ್ಚ್ ವರೆಗೆ ವಿಸ್ತರಿಸಲಾಗುವುದು. ಖಾತ್ರಿ ವ್ಯಾಪ್ತಿಯನ್ನು 50,000 ಕೋಟಿ ರೂ.ಗಳಿಂದ ಒಟ್ಟು 5 ಲಕ್ಷ ರೂ.ಗಳವರೆಗೆ ವಿಸ್ತರಿಸಲಾಗುವುದು. ಈ ಹೆಚ್ಚುವರಿ ಮೊತ್ತವನ್ನು ವಿಶೇಷವಾಗಿ ಆತಿಥ್ಯ ಮತ್ತು ಅದರ ಸಂಬಂಧಿ ಉದ್ಯಮಗಳಿಗೆ ಮೀಸಲಿಡಲಾಗಿದೆ.

    ಅದೇ ರೀತಿ, ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ವಿಶ್ವಾಸ ಯೋಜನೆ (ಸಿಜಿಟಿಎಂಎಸ್ ಇ) ಯನ್ನು ಅಗತ್ಯವಾದ ಹಣದ ಒಳಹರಿವಿನೊಂದಿಗೆ ಪರಿಷ್ಕರಿಸಲಾಗುವುದು. ಇದು ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ಸಾಲ ನೀಡಲು ಸುಲಭಗೊಳಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತದೆ. ಎಂಎಸ್ ಎಂಇ ವಲಯವನ್ನು ಹೆಚ್ಚು ಸ್ಥಿತಿ ಸ್ಥಾಪಕ, ಸ್ಪರ್ಧಾತ್ಮಕ ಮತ್ತು ದಕ್ಷಗೊಳಿಸಲು 5 ವರ್ಷಗಳಲ್ಲಿ 6,000 ಕೋಟಿ ರೂ.ಗಳ ವೆಚ್ಚದೊಂದಿಗೆ ಎಂಎಸ್ ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ (ಆರ್ ಎಎಂಪಿ) ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಉದ್ಯಮ್, ಇ-ಶ್ರಮ್, ಎನ್ ಸಿಎಸ್ ಮತ್ತು ಎಎಸ್ಇಇಎಂ ಪೋರ್ಟಲ್ ಗಳನ್ನು ಇಂಟರ್ ಲಿಂಕ್ ಮಾಡಲಾಗುವುದು ಮತ್ತು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು.

    ಕೌಶಲ್ಯ ಅಭಿವೃದ್ಧಿ

    ಕೌಶಲ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣದ ವಿಷಯದ ಕುರಿತು ಮಾತನಾಡುತ್ತಾ, ವಿವಿಧ ಅಪ್ಲಿಕೇಶನ್‌ಗಳ ಮೂಲಕ ಮತ್ತು ಡ್ರೋನ್ ಅನ್ನು ಸೇವೆಯಾಗಿ ಬಳಸುವ (ಡಿಆರ್ ಎಎಸ್ ಎಸ್ ) ಗಾಗಿ ‘ಡ್ರೋನ್ ಶಕ್ತಿ’ಗೆ ಅನುಕೂಲವಾಗುವಂತೆ ನವೋದ್ಯಮಗಳನ್ನು ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಎಲ್ಲಾ ರಾಜ್ಯಗಳಲ್ಲಿ ಆಯ್ದ ಐಟಿಐಗಳಲ್ಲಿ ಕೌಶಲ್ಯಕ್ಕಾಗಿ ಅಗತ್ಯವಿರುವ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ವೃತ್ತಿಪರ ಕೋರ್ಸ್‌ಗಳಲ್ಲಿ, ನಿರ್ಣಾಯಕ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಉತ್ತೇಜಿಸಲು, ಸೃಜನಶೀಲತೆಗೆ ಜಾಗವನ್ನು ನೀಡಲು 2022-23 ರಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ 750 ವರ್ಚುವಲ್ ಲ್ಯಾಬ್‌ಗಳು ಮತ್ತು ಸಿಮ್ಯುಲೇಟೆಡ್ ಕಲಿಕಾ ಪರಿಸರಕ್ಕಾಗಿ 75 ಕೌಶಲ್ಯ ಇ-ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದರು.


    ಸಾಂಕ್ರಾಮಿಕ ರೋಗದ ಪರಿಣಾಮಾಗಿ ಶಾಲೆಗಳ ಮುಚ್ಚುರಿವುದರಿಂದಾಗಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳು ಮತ್ತು ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರ ದುರ್ಬಲ ವರ್ಗದ ಮಕ್ಕಳು ಬಹುತೇಕ 2 ವರ್ಷಗಳ ಅಧಿಕೃತ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ ಮತ್ತು ಹೆಚ್ಚಾಗಿ ಈ ಮಕ್ಕಳು ಸರ್ಕಾರಿ ಶಾಲೆಗೆ ಸೇರಿದವರಾಗಿದ್ದಾರೆ. ಹೀಗಾಗಿ ಪೂರಕ ಬೋಧನೆಯನ್ನು ನೀಡಲು ಮತ್ತು ಶಿಕ್ಷಣ ನೀಡಲು ಸ್ಥಿತಿಸ್ಥಾಪಕ ಕಾರ್ಯವಿಧಾನವನ್ನು ನಿರ್ಮಿಸಲು, ಪಿಎಂ ಇವಿದ್ಯಾ ‘ಒಂದು ವರ್ಗ-ಒಂದು ಟಿವಿ ಚಾನೆಲ್’ ಕಾರ್ಯಕ್ರಮವನ್ನು 12 ರಿಂದ 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸಲಾಗುವುದು ಮತ್ತು ಇದು ಎಲ್ಲಾ ರಾಜ್ಯಗಳಿಗೆ 1-12 ತರಗತಿಗಳವರೆಗೆ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣವನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.

    ಡಿಜಿಟಲ್ ವಿಶ್ವವಿದ್ಯಾಲಯ

    ದೇಶಾದ್ಯಂತ ವಿದ್ಯಾರ್ಥಿಗಳಿಗೆ ಮನೆ ಬಾಗಿಲಿಗೆ ವೈಯಕ್ತಿಕ ಕಲಿಕೆಯ ಅನುಭವದೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣ ಒದಗಿಸಲು ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಇದು ವಿವಿಧ ಭಾರತೀಯ ಭಾಷೆಗಳಲ್ಲಿ ಮತ್ತು ಐಸಿಟಿ ವಿಧಾನಗಳಲ್ಲಿ ಲಭ್ಯವಾಗಲಿದೆ. ವಿಶ್ವವಿದ್ಯಾನಿಲಯವನ್ನು ನೆಟ್‌ವರ್ಕ್ ಹಬ್-ಸ್ಪೋಕ್ ಮಾದರಿಯಲ್ಲಿ ನಿರ್ಮಿಸಲಾಗುವುದು, ಹಬ್ ಕಟ್ಟಡವು ಅತ್ಯಾಧುನಿಕ ಐಸಿಟಿ ಪರಿಣತಿಯನ್ನು ಹೊಂದಿದೆ. ದೇಶದ ಅತ್ಯುತ್ತಮ ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಹಬ್-ಸ್ಪೋಕ್‌ಗಳ ಜಾಲವಾಗಿ ಸಹಕಾರ ನೀಡುತ್ತವೆ.

    ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ, ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಮುಕ್ತ ವೇದಿಕೆಯನ್ನು ರೂಪಿಸಲಾಗುವುದು ಮತ್ತು ಇದು ಆರೋಗ್ಯ ಪೂರೈಕೆದಾರರು ಮತ್ತು ಆರೋಗ್ಯ ಸೌಲಭ್ಯಗಳ ಡಿಜಿಟಲ್ ದಾಖಲಾತಿಗಳು, ವಿಶಿಷ್ಟ ಆರೋಗ್ಯ ಗುರುತು, ಸಹಮತದ ನೀತಿ ಮತ್ತು ಆರೋಗ್ಯ ಸೌಲಭ್ಯಗಳು ಸಾರ್ವತ್ರಿಕವಾಗಿ ಲಭ್ಯವಾಗಲಿವೆ.


    ಸಾಂಕ್ರಾಮಿಕ ರೋಗವು ಎಲ್ಲಾ ವಯೋಮಾನದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿರುವುದರಿಂದ, ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳಿಗೆ ಉತ್ತಮ ಲಭ್ಯತೆಗಾಗಿ ‘ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಪ್ರೋಗ್ರಾಂ’ ಅನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದು 23 ಟೆಲಿ-ಮೆಂಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ನೆಟ್‌ವರ್ಕ್ ಅನ್ನು ಒಳಗೊಂಡಿರುತ್ತದೆ, ನಿಮ್ಹಾನ್ಸ್ ನೋಡಲ್ ಕೇಂದ್ರವಾಗಲಿದೆ ಮತ್ತು ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ (ಐಐಐಟಿಬಿ) ತಂತ್ರಜ್ಞಾನ ನೆರವನ್ನು ಒದಗಿಸುತ್ತದೆ.

    ನಿರ್ಮಲಾ ಸೀತಾರಾಮನ್ ಅವರು ಹರ್ ಘರ್, ನಲ್ ಸೇ ಜಲ್ (ಪ್ರತಿಯೊಂದು ಮನೆಗೂ ಕೊಳಾಯಿ ನೀರು)ನಡಿ 2022-23 ರಲ್ಲಿ 3.8 ಕೋಟಿ ಕುಟುಂಬಗಳನ್ನು ತರಲು 60,000 ಕೋಟಿ ರೂ. ಪ್ರಕಟಿಸಿದ್ದಾರೆ. ಪ್ರಸ್ತುತ ವ್ಯಾಪ್ತಿ 8.7 ಕೋಟಿಯಾಗಿದ್ದು, ಇದರಲ್ಲಿ 5.5 ಕೋಟಿ ಕುಟುಂಬಗಳಿಗೆ ಕಳೆದ 2 ವರ್ಷಗಳಲ್ಲಿ ನಲ್ಲಿಯ ಮೂಲಕ ನೀರನ್ನು ಪೂರೈಸಲಾಗಿದೆ.

    ಅದೇ ರೀತಿ, 2022-23 ರಲ್ಲಿ, ಪ್ರಧಾನಮಂತ್ರಿ ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಎರಡರಲ್ಲೂ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು, ಈ ಉದ್ದೇಶಕ್ಕಾಗಿ 48,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

    ಪ್ರಧಾನಮಂತ್ರಿ ಗತಿಶಕ್ತಿ ಸ್ಫೂರ್ತಿಯಲ್ಲಿ ಮೂಲಸೌಕರ್ಯ ಮತ್ತು ಈಶಾನ್ಯದ ಅಗತ್ಯಗಳ ಆಧಾರದ ಮೇಲೆ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಹಣ ಒದಗಿಸಲು ಈಶಾನ್ಯ ಮಂಡಳಿಯ ಮೂಲಕ ಪ್ರಧಾನಮಂತ್ರಿಯವರ ಈಶಾನ್ಯ ಅಭಿವೃದ್ಧಿಯ ಉಪಕ್ರಮವಾಗಿ ಹೊಸ ಯೋಜನೆ DevINE ಅನ್ನು ಜಾರಿಗೆ ತರಲಾಗುವುದು. ಆರಂಭಿಕವಾಗಿ 15೦೦ ಕೋಟಿ ರೂ.ಗಳ ಹಂಚಿಕೆಯು ಯುವಕರು ಮತ್ತು ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ, ಮತ್ತು ವಿವಿಧ ವಲಯಗಳಲ್ಲಿನ ಕಂದಕಗಳನ್ನು ನಿವಾರಿಸುತ್ತದೆ.

    ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್

    2022ರಲ್ಲಿ, 1.5 ಲಕ್ಷ ಅಂಚೆ ಕಚೇರಿಗಳಲ್ಲಿ ಶೇಕಡಾ 100ರಷ್ಟು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಬರಲಿದ್ದು, ಹಣಕಾಸು ಪೂರಣ ಮತ್ತು 11 ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂಗಳ ಮೂಲಕ ಖಾತೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಮತ್ತು ಅಂಚೆ ಕಚೇರಿ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳ ನಡುವೆ ಆನ್ ಲೈನ್ ವರ್ಗಾವಣೆಯ ಸೌಲಭ್ಯವನ್ನು ಒದಗಿಸುತ್ತದೆ. ಇದರಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರು ಮತ್ತು ಹಿರಿಯ ನಾಗರಿಕರಿಗೆ ಸಹಾಯವಾಗಲಿದೆ, ಇದು ಪರಸ್ಪರ ಕಾರ್ಯಾಚರಣೆ ಮತ್ತು ಹಣಕಾಸು ಪೂರಣಕ್ಕೆ ಅನುವು ಮಾಡಿಕೊಡುತ್ತದೆ.

    ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಂಗವಾಗಿ, ಡಿಜಿಟಲ್ ಬ್ಯಾಂಕಿಂಗ್ ನ ಪ್ರಯೋಜನಗಳು ದೇಶದ ಮೂಲೆ ಮೂಲೆಗೂ ಗ್ರಾಹಕ ಸ್ನೇಹಿ ರೀತಿಯಲ್ಲಿ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಮೂಲಕ ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ಸ್ಥಾಪಿಸಲು ಸರ್ಕಾರ ಪ್ರಸ್ತಾಪಿಸಿದೆ.

    ಎಂಬೆಡೆಡ್ (ಅಂತರ್ಗತ) ಚಿಪ್ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಪಾಸ್ ಪೋರ್ಟ್ ಗಳ ವಿತರಣೆಯನ್ನು 2022-23ರಲ್ಲಿ ಜಾರಿಗೆ ತರಲಾಗುವುದು, ಇದು ನಾಗರಿಕರಿಗೆ ಅವರ ವಿದೇಶ ಪ್ರಯಾಣದಲ್ಲಿ ಅನುಕೂಲವನ್ನು ಹೆಚ್ಚಿಸುತ್ತದೆ.

    ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಅಭಿವೃದ್ಧಿಶೀಲ ಭಾರತಕ್ಕೆ ನಿರ್ದಿಷ್ಟ ಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಈ ಕ್ಷೇತ್ರಗಳಲ್ಲಿ ಪ್ರಮಾಣೀಕೃತ ತರಬೇತಿಯನ್ನು ನೀಡಲು, ವಿವಿಧ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಐದು ಶೈಕ್ಷಣಿಕ ಸಂಸ್ಥೆಗಳನ್ನು ಉತ್ಕೃಷ್ಟತೆಯ ಕೇಂದ್ರಗಳಾಗಿ ನಿಯುಕ್ತಿಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು. ಈ ಕೇಂದ್ರಗಳಿಗೆ ತಲಾ 25೦ ಕೋಟಿ ರೂ.ಗಳ ದತ್ತಿ ನಿಧಿಯನ್ನು ಒದಗಿಸಲಾಗುವುದು.

    ಅನಿಮೇಶನ್, ವಿಶುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ (ಎವಿಜಿಸಿ) ವಲಯಗಳು ಯುವಕರ ನೇಮಕಾತಿಯ ಅಪಾರ ಸಾಮರ್ಥ್ಯವನ್ನು ನೀಡುತ್ತವೆ. ಹೀಗಾಗಿ ಇದನ್ನು ಸಾಕಾರಗೊಳಿಸಲು ಮತ್ತು ನಮ್ಮ ಮಾರುಕಟ್ಟೆಗಳು ಮತ್ತು ಜಾಗತಿಕ ಬೇಡಿಕೆಗೆ ಸೇವೆ ಸಲ್ಲಿಸಲು ದೇಶೀಯ ಸಾಮರ್ಥ್ಯವನ್ನು ನಿರ್ಮಿಸುವ ಮಾರ್ಗೋಪಾಯಗಳ ಶಿಫಾರಸಿಗಾಗಿ ಎಲ್ಲಾ ಬಾಧ್ಯಸ್ಥಗಾರರೊಂದಿಗೆ ಎವಿಜಿಸಿ ಉತ್ತೇಜನ ಕಾರ್ಯಪಡೆಯನ್ನು ಸ್ಥಾಪಿಸಲಾಗುವುದು.

    5ಜಿ ತಂತ್ರಜ್ಞಾನ

    ಸಾಮಾನ್ಯವಾಗಿ ದೂರಸಂಪರ್ಕ ಮತ್ತು ವಿಶೇಷವಾಗಿ 5ಜಿ ತಂತ್ರಜ್ಞಾನವು ಪ್ರಗತಿಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ನೀಡುತ್ತದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಖಾಸಗಿ ಟೆಲಿಕಾಂ ಪೂರೈಕೆದಾರರು 2022-23ರ ಒಳಗೆ 5ಜಿ ಮೊಬೈಲ್ ಸೇವೆಗಳನ್ನು ಹೊರತರಲು ಅನುಕೂಲವಾಗುವಂತೆ 2022ರಲ್ಲಿ ಅಗತ್ಯ ಸ್ಪೆಕ್ಟ್ರಂ (ತರಂಗಾಂತರ) ಹರಾಜುಗಳನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ ಯೋಜನೆಯ ಭಾಗವಾಗಿ 5ಜಿಗಾಗಿ ಬಲಿಷ್ಠ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿನ್ಯಾಸ ನೇತೃತ್ವದ ಉತ್ಪಾದನಾ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

    ರಕ್ಷಣಾ ರಂಗ

    ರಕ್ಷಣಾ ರಂಗದಲ್ಲಿ, ಸಶಸ್ತ್ರ ಪಡೆಗಳಿಗೆ ಉಪಕರಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಆಮದು ತಗ್ಗಿಸಿ, ಸ್ವಾವಲಂಬನೆಯಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. 2022-23 ರಲ್ಲಿ ದಾಸ್ತಾನು ಬಂಡವಾಳ ಬಜೆಟ್ ನ ಶೇಕಡಾ 68ರಷ್ಟನ್ನು ದೇಶೀಯ ಉದ್ಯಮಕ್ಕೆ ಮೀಸಲಿಡಲಾಗುವುದು, ಇದು 2021-22ರಲ್ಲಿ ಶೇಕಡಾ 58ರಷ್ಟಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಬಜೆಟ್ ನ ಶೇಕಡಾ 25ರಷ್ಟನ್ನು ಮೀಸಲಿಡುವ ಮೂಲಕ ಉದ್ಯಮ, ನವೋದ್ಯಮಗಳು ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ರಕ್ಷಣಾ ಸಂಶೋಧನೆಯನ್ನು ಮುಕ್ತಗೊಳಿಸಲಾಗುವುದು.

    ಸನ್ ರೈಸ್ ಅವಕಾಶಗಳನ್ನು ಉಲ್ಲೇಖಿಸಿದ ಹಣಕಾಸು ಸಚಿವರು , ಕೃತಕ ಬುದ್ಧಿಮತ್ತೆ, ಭೂಪ್ರಾದೇಶಿಕ ವ್ಯವಸ್ಥೆಗಳು ಮತ್ತು ಡ್ರೋನ್ ಗಳು, ಸೆಮಿಕಂಡಕ್ಟರ್ ಮತ್ತು ಅದರ ಪರಿಸರ ವ್ಯವಸ್ಥೆ, ಬಾಹ್ಯಾಕಾಶ ಆರ್ಥಿಕತೆ, ಜೀನೋಮಿಕ್ಸ್ ಮತ್ತು ಔಷಧ, ಹಸಿರು ಇಂಧನ ಮತ್ತು ಸ್ವಚ್ಛ ಸಂಚಾರ ವ್ಯವಸ್ಥೆಗಳು ಸುಸ್ಥಿರ ಅಭಿವೃದ್ಧಿಗೆ ನೆರವಾಗಲಿದ್ದು, ದೇಶವನ್ನು ಆಧುನೀಕರಿಸಲು ಅಪಾರ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು. ಅವು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ ಮತ್ತು ಭಾರತೀಯ ಉದ್ಯಮವನ್ನು ಹೆಚ್ಚು ದಕ್ಷ ಮತ್ತು ಸ್ಪರ್ಧಾತ್ಮಕಗೊಳಿಸುತ್ತವೆ ಎಂದರು.

    2030ರ ವೇಳೆಗೆ ಸ್ಥಾಪಿತ ಸೌರ ಸಾಮರ್ಥ್ಯದ 280 ಗಿ.ವ್ಯಾ. ಮಹತ್ವಾಕಾಂಕ್ಷೆಯ ಗುರಿಗಾಗಿ ದೇಶೀಯ ಉತ್ಪಾದನೆಯನ್ನು ಸುಗಮಗೊಳಿಸಲು, ಪಾಲಿಸಿಲಿಕಾನ್ ನಿಂದ ಸೌರ ಪಿವಿ ಮಾಡ್ಯೂಲ್ ಗಳವರೆಗೆ ಸಂಪೂರ್ಣ ಸಂಯೋಜಿತ ಉತ್ಪಾದನಾ ಘಟಕಗಳಿಗೆ ಆದ್ಯತೆ ನೀಡುವ ಮೂಲಕ, ಹೆಚ್ಚಿನ ದಕ್ಷತೆಯ ಮಾಡ್ಯೂಲ್ ಗಳ ತಯಾರಿಕೆಗೆ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕಕ್ಕಾಗಿ 19,500 ಕೋಟಿ ರೂ.ಗಳ ಹೆಚ್ಚುವರಿ ಹಂಚಿಕೆಯನ್ನು ಮಾಡಲಾಗಿದೆ ಎಂದರು.

    2022-23ರಲ್ಲಿ ಸಾರ್ವಜನಿಕ ಹೂಡಿಕೆಯು ತನ್ನ ಮುಂಚೂಣಿಯ ನೇತೃತ್ವವನ್ನು ಮುಂದುವರಿಸಬೇಕು, ಖಾಸಗಿ ಹೂಡಿಕೆ ಮತ್ತು ಬೇಡಿಕೆಯನ್ನು ಉತ್ತೇಜಿಸಿ ಮತ್ತು ಪ್ರಮುಖಗೊಳಿಸಬೇಕು. ಹೀಗಾಗಿ ಕೇಂದ್ರ ಬಜೆಟ್‌ ನಲ್ಲಿ ಬಂಡವಾಳ ವೆಚ್ಚವನ್ನು ಮತ್ತೊಮ್ಮೆ ಶೇ.35.4ರಷ್ಟು ತೀವ್ರವಾಗಿ ಹೆಚ್ಚಿಸಲಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿರುವ 5.54 ಲಕ್ಷ ಕೋಟಿ ರೂ.ಗಳಿಂದ 2022-23ರಲ್ಲಿ 7.50 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವರು ಪ್ರತಿಪಾದಿಸಿದರು. ಇದು 2019-20ರ ವೆಚ್ಚಕ್ಕಿಂತ 2.2 ಪಟ್ಟು ಹೆಚ್ಚಾಗಿದೆ ಮತ್ತು 2022-23ರಲ್ಲಿ ಈ ವೆಚ್ಚವು ಜಿಡಿಪಿಯ ಶೇಕಡಾ 2.9 ರಷ್ಟಾಗಲಿದೆ. ರಾಜ್ಯಗಳಿಗೆ ಧನ ಸಹಾಯದ ಮೂಲಕ ಬಂಡವಾಳ ಸ್ವತ್ತುಗಳನ್ನು ರಚಿಸಲು ಒದಗಿಸಲಾದ ನಿಬಂಧನೆಯೊಂದಿಗೆ ಈ ಹೂಡಿಕೆಯೊಂದಿಗೆ, ಕೇಂದ್ರ ಸರ್ಕಾರದ ‘ಪರಿಣಾಮಕಾರಿ ಬಂಡವಾಳ ವೆಚ್ಚ’ವು 2022-23ರಲ್ಲಿ 10.68 ಲಕ್ಷ ಕೋಟಿ ರೂ.ಗಳಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ, ಇದು ಜಿಡಿಪಿಯ ಸುಮಾರು ಶೇಕಡಾ 4.1 ರಷ್ಟಿರುತ್ತದೆ.

    2022-23ರಲ್ಲಿ ಸರ್ಕಾರದ ಒಟ್ಟಾರೆ ಮಾರುಕಟ್ಟೆ ಸಾಲಗಳ ಭಾಗವಾಗಿ, ಹಸಿರು ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಸಾರ್ವಭೌಮ ಹಸಿರು ಬಾಂಡ್ ಗಳನ್ನು ತರಲಾಗುವುದು. ಇದರಿಂದ ಬರುವ ಆದಾಯವನ್ನು ಸಾರ್ವಜನಿಕ ವಲಯದ ಯೋಜನೆಗಳಲ್ಲಿ ನಿಯೋಜಿಸಲಾಗುವುದು, ಇದು ಆರ್ಥಿಕತೆಯಿಂದ ಇಂಗಾಲದ ತೀವ್ರತೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

    ಡಿಜಿಟಲ್ ರೂಪಾಯಿ

    2022-23 ರಿಂದ ಬ್ಲಾಕ್ ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚು ದಕ್ಷ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಡಿಜಿಟಲ್ ರೂಪಾಯಿಯನ್ನು ಪರಿಚಯಿಸಲು ಸರ್ಕಾರ ಪ್ರಸ್ತಾಪಿಸಲಾಗಿದೆ.

    ಸಹಕಾರಿ ಒಕ್ಕೂಟ ವ್ಯವಸ್ಥೆಯ ನೈಜ ಮನೋಭಾವವನ್ನು ಪ್ರತಿಬಿಂಬಿಸಿದ ಕೇಂದ್ರ ಸರ್ಕಾರವು, ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಆರ್ಥಿಕ ನೆರವು ನೀಡುವ ಯೋಜನೆ’ಯ ವೆಚ್ಚವನ್ನು ಬಜೆಟ್ ಅಂದಾಜಿನಲ್ಲಿ 10,000 ಕೋಟಿ ರೂ.ಗಳಿಂದ ಪ್ರಸಕ್ತ ವರ್ಷದ ಪರಿಷ್ಕೃತ ಅಂದಾಜುಗಳಲ್ಲಿ 15,000 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಇದಲ್ಲದೆ, 2022-23ಕ್ಕಾಗಿ, ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯಗಳಿಗೆ ಸಹಾಯ ಮಾಡಲು 1 ಲಕ್ಷ ಕೋಟಿ ರೂ. ಹಂಚಿಕೆಯನ್ನು ಮಾಡಲಾಗಿದೆ. ಈ ಐವತ್ತು ವರ್ಷಗಳ ಬಡ್ಡಿರಹಿತ ಸಾಲಗಳು ರಾಜ್ಯಗಳಿಗೆ ಅನುಮತಿಸುವ ಸಾಮಾನ್ಯ ಸಾಲಗಳಿಗಿಂತ ಹೆಚ್ಚಿನದಾಗಿರುತ್ತವೆ. ಈ ಹಂಚಿಕೆಯನ್ನು ಪ್ರಧಾನ ಮಂತ್ರಿ ಗತಿಶಕ್ತಿ ಸಂಬಂಧಿತ ಮತ್ತು ರಾಜ್ಯಗಳ ಇತರ ಉತ್ಪಾದಕ ಬಂಡವಾಳ ಹೂಡಿಕೆಗೆ ಬಳಸಲಾಗುತ್ತದೆ.

    15ನೇ ಹಣಕಾಸು ಆಯೋಗದ ಶಿಫಾರಸುಗಳ ಅನುಸಾರ 2022-23ರಲ್ಲಿ ರಾಜ್ಯಗಳಿಗೆ ಜಿಎಸ್ ಡಿಪಿಯ ಶೇ.4ರಷ್ಟು ವಿತ್ತೀಯ ಕೊರತೆಗೆ ಅವಕಾಶ ನೀಡಲಾಗುವುದು, ಅದರಲ್ಲಿ ಶೇ.0.5ರಷ್ಟು ವಿದ್ಯುತ್ ವಲಯದ ಸುಧಾರಣೆಗಳಿಗೆ ಸಂಬಂಧಿಸಿರುತ್ತದೆ ಎಂದು ಸಹ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು, ಇದಕ್ಕಾಗಿ ಈಗಾಗಲೇ 2021-22ರಲ್ಲಿ ಷರತ್ತುಗಳನ್ನು ತಿಳಿಸಲಾಗಿದೆ.

    ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.6.9

    ತಮ್ಮ ಬಜೆಟ್ ಭಾಷಣದ ಭಾಗ -ಎ ಅನ್ನು ಪರಿಸಮಾಪ್ತಿಗೊಳಿಸಿದ ಹಣಕಾಸು ಸಚಿವರು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.6.9 ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು. 2022-23ರಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ.6.4ರಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ, ಇದು 2025-26ರ ವೇಳೆಗೆ ವಿತ್ತೀಯ ಕೊರತೆಯ ಮಟ್ಟವನ್ನು ಶೇ.4.5ಕ್ಕಿಂತ ಕಡಿಮೆಗೆ ತರಲು ಕಳೆದ ವರ್ಷ ತಾವು ಘೋಷಿಸಿದ ವಿತ್ತೀಯ ಕ್ರೋಡೀಕರಣದ ವಿಶಾಲ ಮಾರ್ಗಕ್ಕೆ ಅನುಗುಣವಾಗಿದೆ ಎಂದರು. 2022-23ರಲ್ಲಿ ವಿತ್ತೀಯ ಕೊರತೆಯ ಮಟ್ಟವನ್ನು ನಿಗದಿಪಡಿಸುವಾಗ, ಬಲಿಷ್ಠ ಮತ್ತು ಸುಸ್ಥಿರವಾದ ಸಾರ್ವಜನಿಕ ಹೂಡಿಕೆಯ ಮೂಲಕ ವೃದ್ಧಿಯನ್ನು ಪೋಷಿಸಲು ಅವರು ಕರೆ ನೀಡಿದರು.

    ಕೇಂದ್ರ ಬಜೆಟ್ 2022-23, ಸ್ಥಿರ ಮತ್ತು ಊಹಿಸಬಹುದಾದ ತೆರಿಗೆ ವ್ಯವಸ್ಥೆಯ ಘೋಷಿತ ನೀತಿಯನ್ನು ಮುಂದುವರಿಸುತ್ತಾ, ವಿಶ್ವಾಸಾರ್ಹ ತೆರಿಗೆ ವ್ಯವಸ್ಥೆಯನ್ನು ಸ್ಥಾಪಿಸುವ ದೃಷ್ಟಿಕೋನವನ್ನು ಮುಂದುವರಿಸುತ್ತಾ ಹೆಚ್ಚಿನ ಸುಧಾರಣೆಗಳನ್ನು ತರಲು ಉದ್ದೇಶಿಸಿದೆ. ತೆರಿಗೆ ಮತ್ತು ಸುಂಕಗಳಿಗೆ ಸಂಬಂಧಿಸಿದ ಪ್ರಸ್ತಾಪಗಳು ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸುತ್ತವೆ, ತೆರಿಗೆದಾರರ ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುತ್ತವೆ ಮತ್ತು ಕಟ್ಲೆಗಳನ್ನು ತಗ್ಗಿಸುತ್ತವೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

    ಆದಾಯ ತೆರಿಗೆ ರಿಟರ್ನ್

    ನೇರ ತೆರಿಗೆ ನಿಟ್ಟಿನಲ್ಲಿ, ದೋಷಗಳನ್ನು ಸರಿಪಡಿಸಲು ತೆರಿಗೆದಾರರಿಗೆ 2 ವರ್ಷಗಳಲ್ಲಿ ನವೀಕರಿಸಿದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಬಜೆಟ್ ಅನುಮತಿಸುತ್ತದೆ. ಇದು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ತೆರಿಗೆ ಪರಿಹಾರವನ್ನು ಸಹ ಒದಗಿಸುತ್ತದೆ. ಬಜೆಟ್ ಸಹಕಾರಿ ಸಂಸ್ಥೆಗಳಿಗೆ ಪರ್ಯಾಯ ಕನಿಷ್ಠ ತೆರಿಗೆ ದರ ಮತ್ತು ಉಪಕರವನ್ನು ಕಡಿಮೆ ಮಾಡುತ್ತದೆ. ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲು, ಅರ್ಹ ನವೋದ್ಯಮಗಳ ಸೇರ್ಪಡೆಯ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರೊಂದಿಗೆ ಸಮಾನತೆಯನ್ನು ತರಲು ರಾಜ್ಯ ಸರ್ಕಾರಿ ನೌಕರರ ಎನ್.ಪಿಎಸ್ ಖಾತೆಗೆ ಉದ್ಯೋಗದಾತರ ಕೊಡುಗೆಯ ಮೇಲಿನ ತೆರಿಗೆ ಕಡಿತ ಮಿತಿಯನ್ನು ಹೆಚ್ಚಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಿದೆ. ಹೊಸದಾಗಿ ಸಂಯೋಜಿಸಲಾದ ಉತ್ಪಾದನಾ ಘಟಕಗಳನ್ನು ರಿಯಾಯಿತಿ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಉತ್ತೇಜಿಸಲಾಗುತ್ತದೆ. ವರ್ಚುವಲ್ ಸ್ವತ್ತುಗಳ ವರ್ಗಾವಣೆಯಿಂದ ಬರುವ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುವುದು. ಪುನರಾವರ್ತಿತ ಮನವಿಗಳನ್ನು ತಪ್ಪಿಸಲು ಬಜೆಟ್ ಉತ್ತಮ ವ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ.

    ಪರೋಕ್ಷ ತೆರಿಗೆಯ ಕಡೆಯಲ್ಲಿ, ವಿಶೇಷ ಆರ್ಥಿಕ ವಲಯಗಳಲ್ಲಿ ಸೀಮಾಸುಂಕ ಆಡಳಿತವನ್ನು ಸಂಪೂರ್ಣವಾಗಿ ಐಟಿ ಚಾಲಿತವಾಗಲಿದೆ ಎಂದು ಕೇಂದ್ರ ಬಜೆಟ್ ನಲ್ಲಿ ತಿಳಿಸಲಾಗಿದೆ. ಇದು ಬಂಡವಾಳ ಸರಕುಗಳು ಮತ್ತು ಯೋಜನಾ ಆಮದುಗಳಲ್ಲಿನ ರಿಯಾಯಿತಿ ದರಗಳನ್ನು ಹಂತಹಂತವಾಗಿ ತೆಗೆದುಹಾಕಲು ಮತ್ತು ಶೇ.7.5ರಷ್ಟು ಸಾಧಾರಣ ಸುಂಕವನ್ನು ಅನ್ವಯಿಸಲು ಅವಕಾಶ ಕಲ್ಪಿಸುತ್ತದೆ. ಕಸ್ಟಮ್ಸ್ ವಿನಾಯಿತಿಗಳು ಮತ್ತು ಸುಂಕ ಸರಳೀಕರಣದ ಪರಾಮರ್ಶೆಯನ್ನು ಬಜೆಟ್ ಒತ್ತಿ ಹೇಳುತ್ತದೆ, 350ಕ್ಕೂ ಹೆಚ್ಚು ವಿನಾಯಿತಿಗಳನ್ನು ಕ್ರಮೇಣ ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ. ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅನುಕೂಲವಾಗುವಂತೆ ಶ್ರೇಣೀಕೃತ ರಚನೆಯನ್ನು ಒದಗಿಸಲು ಸೀಮಾ ಸುಂಕ ದರಗಳನ್ನು ಮಾಪನ ಮಾಡಲಾಗುವುದು ಎಂದು ಅದು ಪ್ರಸ್ತಾಪಿಸುತ್ತದೆ. ಭಾರತದಲ್ಲಿ ತಯಾರಾದ ಕೃಷಿ ವಲಯಕ್ಕೆ ಉಪಕರಣಗಳು ಮತ್ತು ಸಾಧನಗಳ ಮೇಲಿನ ವಿನಾಯಿತಿಗಳನ್ನು ತರ್ಕಬದ್ಧಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು. ಉಕ್ಕಿನ ಸ್ಕ್ರ್ಯಾಪ್ ಗೆ ಸೀಮಾ ಸುಂಕ ವಿನಾಯಿತಿಯನ್ನು ವಿಸ್ತರಿಸಲಾಗುವುದು. ಮಿಶ್ರಣ ಮಾಡದ ಇಂಧನವು ಹೆಚ್ಚುವರಿ ವಿಭಿನ್ನ ಅಬಕಾರಿ ಸುಂಕವನ್ನು ಆಕರ್ಷಿಸುತ್ತದೆ.

    ಹೆಚ್ಚುವರಿ ತೆರಿಗೆ ಪಾವತಿಯ ಮೇಲೆ ನವೀಕರಿಸಿದ ರಿಟರ್ನ್ ಸಲ್ಲಿಸಲು ತೆರಿಗೆದಾರರಿಗೆ ಅನುಮತಿಸುವ ಹೊಸ ನಿಬಂಧನೆಯನ್ನು ಬಜೆಟ್ ಪ್ರಸ್ತಾಪಿಸುತ್ತದೆ. ಈ ನವೀಕರಿಸಿದ ರಿಟರ್ನ್ ಅನ್ನು ಸಂಬಂಧಿತ ಕರ ನಿರ್ಧರಣೆ ವರ್ಷದ ಅಂತ್ಯದಿಂದ ಎರಡು ವರ್ಷಗಳಲ್ಲಿ ಸಲ್ಲಿಸಬಹುದು. ಈ ಪ್ರಸ್ತಾಪದೊಂದಿಗೆ, ತೆರಿಗೆದಾರರಲ್ಲಿ ಒಂದು ವಿಶ್ವಾಸವನ್ನು ಮರು ನಿಗದಿಪಡಿಸಲಾಗುವುದು, ಅದು ತೆರಿಗೆದಾರರಿಗೆ ತಮ್ಮ ರಿಟರ್ನ್ ಸಲ್ಲಿಸುವಾಗ ಮೊದಲೇ ತಪ್ಪಿಸಿಕೊಂಡಿರಬಹುದಾದ ಆದಾಯವನ್ನು ಘೋಷಿಸಲು ಅನುವು ಮಾಡಿಕೊಡುತ್ತದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಇದು ಸ್ವಯಂಪ್ರೇರಿತ ತೆರಿಗೆ ಅನುಸರಣೆಯ ದಿಕ್ಕಿನಲ್ಲಿ ದೃಢವಾದ ಹೆಜ್ಜೆಯಾಗಿದೆ.

    ಸಹಕಾರ ಸಂಘಗಳು

    ಸಹಕಾರ ಸಂಘಗಳು ಮತ್ತು ಕಂಪನಿಗಳ ನಡುವೆ ಒಂದು ಸಮಾನ ಅವಕಾಶ ಒದಗಿಸಲು, ಸಹಕಾರಿ ಸಂಘಗಳಿಗೆ ಪರ್ಯಾಯ ಕನಿಷ್ಠ ತೆರಿಗೆಯನ್ನು ಶೇಕಡಾ ಹದಿನೈದಕ್ಕೆ ಇಳಿಸಲು ಬಜೆಟ್ ಪ್ರಸ್ತಾಪಿಸಿದೆ. 1 ಕೋಟಿ ರೂ.ಗಿಂತ ಹೆಚ್ಚಿನ ಮತ್ತು 1೦ ಕೋಟಿ ರೂ.ಗಳವರೆಗೆ ಒಟ್ಟು ಆದಾಯ ಹೊಂದಿರುವವರಿಗೆ ಸಹಕಾರ ಸಂಘಗಳ ಮೇಲಿನ ಉಪಕರವನ್ನು ಪ್ರಸ್ತುತ ಶೇಕಡಾ 12 ರಿಂದ 7 ಕ್ಕೆ ಇಳಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು.

    ವಿಕಲಚೇತನ ವ್ಯಕ್ತಿಯ ಪೋಷಕರು ಅಥವಾ ಪಾಲಕರು ಅಂತಹ ವ್ಯಕ್ತಿಗೆ ವಿಮಾ ಯೋಜನೆಯನ್ನು ಪಡೆಯಬಹುದು. ಪ್ರಸ್ತುತ ಕಾನೂನು ಚಂದಾದಾರನ ಮರಣದ ನಂತರ ಅಂದರೆ ಪೋಷಕರು ಅಥವಾ ಪೋಷಕರ ಮರಣದ ನಂತರ ವಿಕಲಚೇತನ ವ್ಯಕ್ತಿಗೆ ದೊಡ್ಡ ಮೊತ್ತದ ಪಾವತಿ ಅಥವಾ ವರ್ಷಾಶನ ಲಭ್ಯವಿದ್ದರೆ ಮಾತ್ರ ಪೋಷಕರು ಅಥವಾ ಪೋಷಕರಿಗೆ ತೆರಿಗೆ ಕಡಿತವನ್ನು ಒದಗಿಸುತ್ತದೆ. ಪೋಷಕರು/ಪಾಲಕರ ಜೀವಿತಾವಧಿಯಲ್ಲಿ ಅವಲಂಬಿತರಾದ ವಿಕಲಚೇತನರು, ಅಂದರೆ ಅರವತ್ತು ವರ್ಷ ವಯಸ್ಸನವರೆಗೆ ಪೋಷಕರು/ ಪಾಲಕರ ಮೇಲೆ ವಾರ್ಷಿಕ ಮತ್ತು ಒಟ್ಟಾರೆ ಮೊತ್ತವನ್ನು ಪಾವತಿಸಲು ಬಜೆಟ್ ಈಗ ಅನುಮತಿಸುತ್ತದೆ.

    ಕೇಂದ್ರ ಸರ್ಕಾರವು ತನ್ನ ಉದ್ಯೋಗಿಯ ವೇತನದ ಶೇಕಡಾ 14 ರಷ್ಟನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್.ಪಿಎಸ್) ಹಂತ-1ಕ್ಕೆ ನೀಡುತ್ತದೆ. ಉದ್ಯೋಗಿಯ ಆದಾಯವನ್ನು ಲೆಕ್ಕಹಾಕುವಲ್ಲಿ ಇದರ ಕಡಿತಕ್ಕೆ ಅನುಮತಿಸಲಾಗುತ್ತದೆ. ಆದಾಗ್ಯೂ, ರಾಜ್ಯ ಸರ್ಕಾರದ ಉದ್ಯೋಗಿಗಳ ಸಂದರ್ಭದಲ್ಲಿ ವೇತನದ ಶೇಕಡಾ 1೦ ರಷ್ಟು ಮಾತ್ರ ಅಂತಹ ಕಡಿತಕ್ಕೆ ಅನುಮತಿಸಲಾಗಿದೆ. ಸಮಾನವಾಗಿ ಕಾಣುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರಿ ನೌಕರರ ಎನ್.ಪಿಎಸ್ ಖಾತೆಗೆ ಉದ್ಯೋಗದಾತರ ಕೊಡುಗೆಯ ಮೇಲೆ ತೆರಿಗೆ ಕಡಿತ ಮಿತಿಯನ್ನು ಶೇಕಡಾ 1೦ ರಿಂದ 14 ಕ್ಕೆ ಹೆಚ್ಚಿಸಲು ಬಜೆಟ್ ಪ್ರಸ್ತಾಪಿಸಿದೆ.

    31.3.2022ರ ಮೊದಲು ಸ್ಥಾಪಿಸಲಾದ ಅರ್ಹ ನವೋದ್ಯಮಗಳಿಗೆ ಸೇರ್ಪಡೆಯಿಂದ ಹತ್ತು ವರ್ಷಗಳಲ್ಲಿ ಸತತ ಮೂರು ವರ್ಷಗಳವರೆಗೆ ತೆರಿಗೆ ಪ್ರೋತ್ಸಾಹಕವನ್ನು ಒದಗಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಅರ್ಹ ನವೋದ್ಯಮದ ಸೇರ್ಪಡೆಯ ಅವಧಿಯನ್ನು ಇನ್ನೂ ಒಂದು ವರ್ಷದವರೆಗೆ ಅಂದರೆ 31.03.2023 ರವರೆಗೆ ಅಂತಹ ತೆರಿಗೆ ಪ್ರೋತ್ಸಾಹಕವನ್ನು ವಿಸ್ತರಿಸಲು ಬಜೆಟ್ ಅವಕಾಶ ಒದಗಿಸುತ್ತದೆ.

    ಕೆಲವು ದೇಶೀಯ ಕಂಪನಿಗಳಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ವ್ಯಾಪಾರ ವಾತಾವರಣವನ್ನು ರೂಪಿಸುವ ಪ್ರಯತ್ನದಲ್ಲಿ, ಹೊಸದಾಗಿ ಸಂಯೋಜಿಸಲಾದ ದೇಶೀಯ ಉತ್ಪಾದನಾ ಕಂಪನಿಗಳಿಗೆ ಸರ್ಕಾರವು ಶೇಕಡಾ 15 ರಷ್ಟು ತೆರಿಗೆಯ ರಿಯಾಯಿತಿಯ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದೆ. 115 ಬಿಎಬಿ ಸೆಕ್ಷನ್ ಅಡಿಯಲ್ಲಿ ಉತ್ಪಾದನೆ ಅಥವಾ ಉತ್ಪಾದನೆಯನ್ನು ಪ್ರಾರಂಭಿಸಲು ಕೊನೆಯ ದಿನಾಂಕವನ್ನು ಒಂದು ವರ್ಷ ಅಂದರೆ 2024ರ ಮಾರ್ಚ್ 31ರವರೆಗೆ ವಿಸ್ತರಿಸಲು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ.

    ವರ್ಚುವಲ್ ಡಿಜಿಟಲ್ ಸ್ವತ್ತುಗಳ ತೆರಿಗೆಗಾಗಿ, ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇಕಡಾ 3೦ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದು ಬಜೆಟ್ ಪ್ರಸ್ತಾಪಿಸುತ್ತದೆ. ಸ್ವಾಧೀನ ವೆಚ್ಚವನ್ನು ಹೊರತುಪಡಿಸಿ ಅಂತಹ ಆದಾಯವನ್ನು ಲೆಕ್ಕಹಾಕುವಾಗ ಯಾವುದೇ ವೆಚ್ಚ ಅಥವಾ ಭತ್ಯೆಗೆ ಸಂಬಂಧಿಸಿದಂತೆ ಯಾವುದೇ ಕಡಿತವನ್ನುಅನುಮತಿಸಲಾಗುವುದಿಲ್ಲ. ಇದಲ್ಲದೆ, ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ನಷ್ಟವನ್ನು ಬೇರೆ ಯಾವುದೇ ಆದಾಯದ ವಿರುದ್ಧ ನಿಗದಿಪಡಿಸಲು ಸಾಧ್ಯವಿಲ್ಲ. ವಹಿವಾಟಿನ ವಿವರಗಳನ್ನು ತಿಳಿಯಲು, ವಿತ್ತೀಯ ಮಿತಿಗಿಂತ ಹೆಚ್ಚಿನ ಪರಿಗಣನೆಯ ಶೇಕಡಾ 1 ರ ದರದಲ್ಲಿ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದಂತೆ ಮಾಡಿದ ಪಾವತಿಯ ಮೇಲೆ ಟಿಡಿಎಸ್ ಗೆ ಒಂದು ಅವಕಾಶ ಕಲ್ಪಿಸಲಾಗಿದೆ. ವರ್ಚುವಲ್ ಡಿಜಿಟಲ್ ಆಸ್ತಿಯ ಉಡುಗೊರೆಯನ್ನು ಸ್ವೀಕರಿಸುವವರಿಗೆ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ.

    ಸದೃಢ ವ್ಯಾಜ್ಯ ನಿರ್ವಹಣೆಯ ನೀತಿಯನ್ನು ಮುನ್ನಡೆಸಲು ತೆರಿಗೆದಾರನ ವಿಷಯದಲ್ಲಿ ಕಾನೂನಿನ ಪ್ರಶ್ನೆಯು ಯಾವುದೇ ಸಂದರ್ಭದಲ್ಲಿ ಅಧಿಕಾರ ವ್ಯಾಪ್ತಿಯು ಹೈಕೋರ್ಟ್ ಅಥವಾ ಸರ್ವೋಚ್ಚ ನ್ಯಾಯಾಲಯದ ಮುಂದೆ ಮೇಲ್ಮನವಿಯಲ್ಲಿ ಬಾಕಿ ಇರುವ ಕಾನೂನಿನ ಪ್ರಶ್ನೆಗೆ ಹೋಲುತ್ತಿದ್ದರೆ, ಇಲಾಖೆಯು ಈ ಕರ ನಿರ್ಧರಣೆದಾರನ ಪ್ರಕರಣದಲ್ಲಿ ಪುನರ್ ಮೇಲ್ಮನವಿಯನ್ನು ಸಲ್ಲಿಸುವ ಅಧಿಕಾರ ವ್ಯಾಪ್ತಿಯ ಉನ್ನತ ಮಟ್ಟದ ಉನ್ನತ ನ್ಯಾಯಾಲಯವು ವ್ಯಾಪ್ತಿಯ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ನಿರ್ಧರಿಸುವವರೆಗೆ ಮುಂದೂಡಲಾಗುವುದು ಎಂದು ಬಜೆಟ್ ಪ್ರಸ್ತಾಪಿಸುತ್ತದೆ.

    ಕಡಲಾಚೆಯ ವ್ಯುತ್ಪನ್ನ ಸಾಧನಗಳಿಂದ ಅನಿವಾಸಿಯ ಆದಾಯ, ಅಥವಾ ಕಡಲಾಚೆಯ ಬ್ಯಾಂಕಿಂಗ್ ಘಟಕವು ನೀಡುವ ಕೌಂಟರ್ ಉತ್ಪನ್ನಗಳ ಮೇಲೆ, ಹಡಗಿನ ಗುತ್ತಿಗೆಯ ಮೇಲಿನ ಬಡ್ಡಿ ಮತ್ತು ಐಎಫ್.ಎಸ್ ಸಿಯಲ್ಲಿ ಖಾತೆಯ ನಿರ್ವಹಣಾ ಸೇವೆಗಳಿಂದ ಪಡೆದ ಆದಾಯದ ಮೇಲೆ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.

    ಆದಾಯ ಮತ್ತು ಲಾಭದ ಮೇಲಿನ ಯಾವುದೇ ಹೆಚ್ಚುವರಿ ಕರ ಅಥವಾ ಉಪ ಕರವನ್ನು ವ್ಯವಹಾರ ವೆಚ್ಚವಾಗಿ ಅನುಮತಿಸಲಾಗುವುದಿಲ್ಲ ಎಂದು ಬಜೆಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ.

    ಸ್ಪಷ್ಟತೆಯನ್ನು ತರಲು ಮತ್ತು ತೆರಿಗೆ ವಂಚಕರಲ್ಲಿ ಪ್ರತಿರೋಧವನ್ನು ಹೆಚ್ಚಿಸಲು, ಶೋಧ ಮತ್ತು ಸಮೀಕ್ಷೆ ಕಾರ್ಯಾಚರಣೆಗಳ ಸಮಯದಲ್ಲಿ ಪತ್ತೆಯಾದ ಅಘೋಷಿತ ಆದಾಯದ ವಿರುದ್ಧ ಯಾವುದೇ ನಷ್ಟವನ್ನು ಅನುಮತಿಸಬಾರದು ಎಂದು ಹಣಕಾಸು ಸಚಿವರು ಪ್ರಸ್ತಾಪಿಸಿದರು.

    ವಿಶೇಷ ಆರ್ಥಿಕ ವಲಯಗಳ ಕಸ್ಟಮ್ಸ್ ಆಡಳಿತದಲ್ಲಿ ಸುಧಾರಣೆಗಳನ್ನು ಕೈಗೊಳ್ಳಲಾಗುವುದು ಮತ್ತು ಇನ್ನು ಮುಂದೆ ಅದನ್ನು ಸಂಪೂರ್ಣವಾಗಿ ಐಟಿ ಚಾಲಿತಗೊಳಿಸಲಾಗುವುದು ಮತ್ತು ಹೆಚ್ಚಿನ ಸೌಲಭ್ಯದ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ಅಪಾಯ ಆಧಾರಿತ ತಪಾಸಣೆಗಳೊಂದಿಗೆ ಸೀಮಾಸುಂಕ ರಾಷ್ಟ್ರೀಯ ಪೋರ್ಟಲ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಬಜೆಟ್ ಹೇಳುತ್ತದೆ. ಈ ಸುಧಾರಣೆಯನ್ನು 2022ರ ಸೆಪ್ಟೆಂಬರ್ 30ರೊಳಗೆ ಜಾರಿಗೆ ತರಲಾಗುವುದು.

    ಬಂಡವಾಳ ಸರಕುಗಳು ಮತ್ತು ಯೋಜನಾ ಆಮದುಗಳಲ್ಲಿ ರಿಯಾಯಿತಿ ದರಗಳನ್ನು ಹಂತ ಹಂತವಾಗಿ ತೆಗೆದು ಹಾಕಲು ಮತ್ತು ಶೇಕಡಾ 7.5 ರಷ್ಟು ಸಾಧಾರಣ ಸುಂಕವನ್ನು ಅನ್ವಯಿಸಲು ಬಜೆಟ್ ಪ್ರಸ್ತಾಪಿಸಿದೆ. ದೇಶದೊಳಗೆ ತಯಾರಿಸಲಾಗದ ಸುಧಾರಿತ ಯಂತ್ರೋಪಕರಣಗಳಿಗೆ ಕೆಲವು ವಿನಾಯಿತಿಗಳು ಮುಂದುವರಿಯುತ್ತವೆ. ಬಂಡವಾಳ ಸರಕುಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ವಿಶೇಷ ಎರಕ ಹೊಯ್ದ, ಬಾಲ್ ಸ್ಕ್ರೂ ಮತ್ತು ರೇಖೀಯ ಚಲನೆ ಮಾರ್ಗದರ್ಶಿಯಂತಹ ಇನ್ ಪುಟ್ ಗಳಲ್ಲಿ ಕೆಲವು ವಿನಾಯಿತಿಗಳನ್ನು ಪರಿಚಯಿಸಲಾಗಿದೆ.

    350ಕ್ಕೂ ಹೆಚ್ಚು ವಿನಾಯಿತಿ ನಮೂದುಗಳನ್ನು ಕ್ರಮೇಣ ಹಂತಹಂತವಾಗಿ ತೆಗೆದು ಹಾಕಲಾಗುವುದು. ಇವುಗಳಲ್ಲಿ ಕೆಲವು ಕೃಷಿ ಉತ್ಪನ್ನಗಳು, ರಾಸಾಯನಿಕಗಳು, ಬಟ್ಟೆಗಳು, ವೈದ್ಯಕೀಯ ಸಾಧನಗಳು ಮತ್ತು ಔಷಧಗಳು ಮತ್ತು ಸಾಕಷ್ಟು ದೇಶೀಯ ಸಾಮರ್ಥ್ಯ ಅಸ್ತಿತ್ವದಲ್ಲಿರುವ ಔಷಧಿಗಳ ಮೇಲೆ ವಿನಾಯಿತಿ ಸೇರಿದೆ. ಇದಲ್ಲದೆ, ಹಲವಾರು ರಿಯಾಯಿತಿ ದರಗಳನ್ನು ವಿವಿಧ ಅಧಿಸೂಚನೆಗಳ ಮೂಲಕ ಶಿಫಾರಸು ಮಾಡುವ ಬದಲು ಸೀಮಾಸುಂಕ ಪರಿಶಿಷ್ಟಗಳಲ್ಲಿ ಅಳವಡಿಸಲಾಗುತ್ತಿದೆ.

    ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ, ಧರಿಸಬಹುದಾದಂತಹ ಸಾಧನಗಳು, ಆಲಿಸಬಹುದಾದ ಸಾಧನಗಳು ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್ ಗಳ ದೇಶೀಯ ತಯಾರಿಕೆಗೆ ಅನುಕೂಲವಾಗುವಂತೆ ಶ್ರೇಣೀಕೃತ ದರ ರಚನೆಯನ್ನು ಒದಗಿಸಲು ಸೀಮಾ ಸುಂಕ ದರಗಳನ್ನು ನಿರ್ಧರಣೆ ಮಾಡಲಾಗುತ್ತಿದೆ. ಮೊಬೈಲ್ ಫೋನ್ ಚಾರ್ಜರ್ ಗಳ ಟ್ರಾನ್ಸ್ ಫಾರ್ಮರ್ ನ ಭಾಗಗಳು ಮತ್ತು ಮೊಬೈಲ್ ಕ್ಯಾಮೆರಾ ಮಾಡ್ಯೂಲ್ ನ ಕ್ಯಾಮೆರಾ ಲೆನ್ಸ್ ಮತ್ತು ಇತರ ಕೆಲವು ವಸ್ತುಗಳಿಗೂ ಸುಂಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

    ಹರಳು ಮತ್ತು ಆಭರಣ ವಲಯ

    ಹರಳು ಮತ್ತು ಆಭರಣ ವಲಯಕ್ಕೆ ಉತ್ತೇಜನ ನೀಡಲು, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಹರಳುಗಳ ಮೇಲಿನ ಸೀಮಾ ಸುಂಕವನ್ನು ಶೇಕಡಾ 5ಕ್ಕೆ ತಗ್ಗಿಸಲಾಗುತ್ತಿದೆ. ಇ-ಕಾಮರ್ಸ್ ಮೂಲಕ ಆಭರಣಗಳ ರಫ್ತಿಗೆ ಅನುಕೂಲವಾಗುವಂತೆ, ಈ ವರ್ಷದ ಜೂನ್ ವೇಳೆಗೆ ಸರಳೀಕೃತ ನಿಯಂತ್ರಣ ಚೌಕಟ್ಟನ್ನು ಜಾರಿಗೆ ತರಲಾಗುವುದು. ಕಡಿಮೆ ಮೌಲ್ಯದ ಅನುಕರಣೆ ಆಭರಣಗಳ ಆಮದನ್ನು ನಿರಾಕರಿಸಲು, ಗಿಲೀಟು ಆಭರಣಗಳ ಮೇಲಿನ ಸೀಮಾ ಸುಂಕವನ್ನು ಪ್ರತಿ ಕೆ.ಜಿ.ಗೆ ಕನಿಷ್ಠ 4೦೦ ರೂ.ಗಳ ಸುಂಕವನ್ನು ಅದರ ಆಮದಿಗೆ ಪಾವತಿಸುವ ರೀತಿಯಲ್ಲಿ ಶಿಫಾರಸು ಮಾಡಲಾಗುತ್ತಿದೆ.

    ಪೆಟ್ರೋಲಿಯಂ ಸಂಸ್ಕರಣೆಗಾಗಿ ಮೆಥನಾಲ್, ಅಸಿಟಿಕ್ ಆಮ್ಲ ಮತ್ತು ಹೆವಿ ಫೀಡ್ ಸ್ಟಾಕ್ ಗಳ ಕೆಲವು ನಿರ್ಣಾಯಕ ರಾಸಾಯನಿಕಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದ್ದರೆ, ಆದರೆ ಸಾಕಷ್ಟು ದೇಶೀಯ ಸಾಮರ್ಥ್ಯ ಅಸ್ತಿತ್ವದಲ್ಲಿರುವ ಸೋಡಿಯಂ ಸೈನೈಡ್ ಮೇಲೆ ಸುಂಕವನ್ನು ಹೆಚ್ಚಿಸಲಾಗಿದೆ.

    ಕೊಡೆಗಳ ಮೇಲಿನ ಸುಂಕವನ್ನು ಶೇಕಡಾ 20ಕ್ಕೆ ಏರಿಸಲಾಗಿದೆ. ಕೊಡೆಗಳ ಭಾಗಗಳಿಗೆ ವಿನಾಯಿತಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಭಾರತದಲ್ಲಿ ತಯಾರಿಸಲಾಗುವ ಕೃಷಿ ವಲಯದ ಉಪಕರಣಗಳು ಮತ್ತು ಸಾಧನಗಳ ಮೇಲೆ ವಿನಾಯಿತಿಯನ್ನು ತರ್ಕಬದ್ಧಗೊಳಿಸಲಾಗುತ್ತಿದೆ. ಕಳೆದ ವರ್ಷ ಉಕ್ಕಿನ ಸ್ಕ್ರ್ಯಾಪ್ ಗೆ ನೀಡಲಾದ ಸೀಮಾ ಸುಂಕ ವಿನಾಯಿತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ. ತುಕ್ಕು ಹಿಡಿಯದ ಉಕ್ಕು ಮತ್ತು ಲೇಪಿತ ಉಕ್ಕು ಪಟ್ಟಿ ಉತ್ಪನ್ನಗಳು, ಅಲಾಯ್ ಉಕ್ಕು ಮತ್ತು ಹೈ-ಸ್ಪೀಡ್ ಉಕ್ಕಿನ ಪಟ್ಟಿಗಳ ಮೇಲೆ ಕೆಲವು ಆಂಟಿ-ಡಂಪಿಂಗ್ ಮತ್ತು ಸಿವಿಡಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ.

    ರಫ್ತು ಉತ್ತೇಜಿಸಲು, ಕರಕುಶಲ ವಸ್ತುಗಳು, ಜವಳಿ ಮತ್ತು ಚರ್ಮದ ಉಡುಪುಗಳು, ಚರ್ಮದ ಪಾದರಕ್ಷೆಗಳ ವಿಶ್ವಾಸಾರ್ಹ ರಫ್ತುದಾರರಿಗೆ ಅಗತ್ಯವಿರುವ ಅಲಂಕಾರಿಕ, ಟ್ರಿಮ್ಮಿಂಗ್, ಫಾಸ್ಟೆನರ್‌ ಗಳು, ಗುಂಡಿಗಳು, ಝಿಪ್ಪರ್, ಲೈನಿಂಗ್ ಮೆಟೀರಿಯಲ್, ನಿರ್ದಿಷ್ಟಪಡಿಸಿದ ಚರ್ಮ, ಪೀಠೋಪಕರಣ ಫಿಟ್ಟಿಂಗ್‌ ಗಳು ಮತ್ತು ಪೊಟ್ಟಣ ಮಾಡುವ ಪೆಟ್ಟಿಗೆಗಳಂತಹ ವಸ್ತುಗಳ ಮೇಲೆ ವಿನಾಯಿತಿಗಳನ್ನು ಒದಗಿಸಲಾಗುತ್ತಿದೆ. ಮತ್ತು ಇತರ ಸರಕುಗಳು. ಸೀಗಡಿ ಆಕ್ವಾಕಲ್ಚರ್‌ ಗೆ ಅದರ ರಫ್ತುಗಳನ್ನು ಉತ್ತೇಜಿಸಲು ಅಗತ್ಯವಿರುವ ಕೆಲವು ಒಳಹರಿವಿನ ಮೇಲೆ ಸುಂಕವನ್ನು ಕಡಿಮೆ ಮಾಡಲಾಗುತ್ತಿದೆ.

    ಇಂಧನದ ಮಿಶ್ರಣವು ಈ ಸರ್ಕಾರದ ಆದ್ಯತೆಯಾಗಿದೆ. ಇಂಧನದ ಮಿಶ್ರಣದ ಪ್ರಯತ್ನಗಳನ್ನು ಉತ್ತೇಜಿಸಲು, ಮಿಶ್ರಣ ಮಾಡದ ಇಂಧನವು 2022 ರ ಅಕ್ಟೋಬರ್ 1ನೇ ತಾರೀಖಿನಿಂದ ಪ್ರತಿ ಲೀಟರ್ ಗೆ 2 ರೂ. ಹೆಚ್ಚುವರಿ ಅಬಕಾರಿ ಸುಂಕವನ್ನು ಆಕರ್ಷಿಸುತ್ತದೆ.

    Joint session of state Legislature :ಫೆಬ್ರುವರಿ 14 ರಿಂದ 25:ವಿಧಾನಮಂಡಲದ ಜಂಟಿ ಅಧಿವೇಶನ

    BENGALURU JAN 27

    ವಿಧಾನಮಂಡಲದ ಜಂಟಿ ಅಧಿವೇಶನದ ಫೆಬ್ರುವರಿ 14 ರಿಂದ 25ರವರೆಗೆ ಜಂಟಿ ಅಧಿವೇಶನ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.ಸಚಿವ ಸಂಪುಟದ ಸಭೆಯ ನಂತರ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಕೋವಿಡ್ ಸ್ಥಿತಿಗತಿ, ಕೋವಿಡ್ ನಿರ್ವಹಣೆ, ಶಾಲಾ-ಕಾಲೇಜು ಹಾಗೂ ಸಂಘ ಸಮಸ್ಥೆಗಳ ಮನವಿಗಳನ್ನು ತಜ್ಞರ ಸಮಿತಿಯ ಮುಂದೆ ಇರಿಸಲಾಗಿದ್ದು, ತಜ್ಞರ ವರದಿ ಬಂದ ನಂತರ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಬಿಬಿಎಂಪಿ ಚುನಾವಣೆ :ಬಿಬಿಎಂಪಿ ಚುನಾವಣೆಯ ಬಗ್ಗೆ ಚರ್ಚಿಸಲಾಗಿದ್ದು, ಬೆಂಗಳೂರಿನ ಸಚಿವರೊಂದಿಗೆ ಇತರ ಜಿಲ್ಲೆಗಳ ಸಚಿವರನ್ನೂ ನಿಯೋಜಿಸಿ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

    ಸರ್ಕಾರದ 6 ತಿಂಗಳ ಸಾಧನೆಗಳ ಪ್ರಚಾರ :ಸರ್ಕಾರ 6 ತಿಂಗಳ ಆಡಳಿತ ಪೂರೈಸಿರುವ ಹಿನ್ನಲೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ ನಡೆಯಲಿದೆ. 2023 ವರೆಗಿನ ಸರ್ಕಾರದ ಕಾರ್ಯಕ್ರಮಗಳು, ಈ 6 ತಿಂಗಳ ಅವಧಿಯಲ್ಲಿ ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆಗಳ ಬಗ್ಗೆ ಮುಂದಿನ ಒಂದು ವಾರದ ಕಾಲ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಸಚಿವರು ತಮ್ಮ ಇಲಾಖೆಗಳಿಗೆ ತಿಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಭಾಜಪ ಪಕ್ಷದ ಚಿಂತನ-ಮಂಥನ ಸಭೆ :ಬರುವ ದಿನಗಳಲ್ಲಿ ಪಕ್ಷ, ಸಂಘಟನೆ ಹಾಗೂ ಸರ್ಕಾರದ ಮಧ್ಯೆ ಸಮನ್ವಯ ಸಾಧಿಸುವ ಚಿಂತನ-ಮಂಥನ ಸಭೆಯನ್ನು ಪಕ್ಷದ ಅಧ್ಯಕ್ಷರು ಶೀಘ್ರದಲ್ಲಿ ನಡೆಸಲಿದ್ದು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುವ ತೀರ್ಮಾನವನ್ನು ಮಾಡಲಾಗಿದೆ ಎಂದರು.

    ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ :
    ರೇಸ್ ಕೋರ್ಸ್ ನಲ್ಲಿ ನಡೆಯುವ ಡರ್ಬಿ ರೇಸ್‍ನಲ್ಲಿ ಸಾವಿರಾರು ಜನ ಸೇರುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷದವರು ಆಕ್ಷೇಪ ಎತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ಯಾವುದೇ ಅವಕಾಶವಿರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಪಾಲನೆ ಆಗಬೇಕು . ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಬಿಬಿಎಂಪಿ ಸಭೆಗಳನ್ನು ನಡೆಸುವ ಮೂಲಕ ಬೆಂಗಳೂರಿನ ಬಿಜೆಪಿಗೆ ಅನುಕೂಲವಾಗಲು ಹಾಗೂ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಪ್ರತಿಕ್ರಯಿಸಿ ಕಾಂಗ್ರೆಸ್ ಪಕ್ಷ ಇರುವುದೇ ಆರೋಪ ಮಾಡಲು. ಅವರ ಸರ್ಕಾರ ಇದ್ದಾಗ ಏನೆಲ್ಲಾ ಮಾಡಿದ್ದರು ಎನ್ನುವುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.

    Guest Lecturers: 27ರಿಂದ ಆನ್ ಲೈನ್ ಕೌನ್ಸೆಲಿಂಗ್

    BNENGALURU JAN 26

    2021-22ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಜ.27ರಿಂದ (ಗುರುವಾರ) 30ರವರೆಗೆ ನಾಲ್ಕು ದಿನಗಳ ಕಾಲ ಆನ್ ಲೈನ್ ಕೌನ್ಸೆಲಿಂಗ್ ನಡೆಯಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.

    ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಟ್ಟು 10,636 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಅಭ್ಯರ್ಥಿಗಳು ಜೇಷ್ಠತೆ ಆಧಾರದ ಮೇಲೆ ತಮಗೆ ಬೇಕಾದ ಕಾಲೇಜನ್ನು ಕೌನ್ಸೆಲಿಂಗ್ ನಲ್ಲಿ ಆಯ್ಕೆ ‌ಮಾಡಿಕೊಳ್ಳಬಹುದು. ಬಳಿಕ ತಮ್ಮ ಕಚೇರಿಯಿಂದ ನೇಮಕಾತಿ ಆದೇಶ ನೀಡಲಾಗುತ್ತದೆ. ಅದರ ನಂತರದ ಎರಡು ದಿನಗಳಲ್ಲಿ ತಮಗೆ ಸೂಚಿಸಿದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ವರದಿ ಮಾಡಿಕೊಳ್ಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಅವರು ಮೂಲ ದಾಖಲೆಗಳನ್ನು ಪರಿಶೀಲನೆಗೆ ಒಪ್ಪಿಸಿ, ಕರ್ತವ್ಯಕ್ಕೆ ಹಾಜರಾಗಬೇಕು. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಂತಹವರನ್ನು ಕೈಬಿಡಲಾಗುವುದು ಎಂದು ಅವರು ಹೇಳಿದ್ದಾರೆ.

    `ಒಟ್ಟು 47 ವಿಷಯಗಳಲ್ಲಿ ವಾರಕ್ಕೆ 15 ಗಂಟೆಗಳ ಬೋಧನೆಯ ಪೂರ್ಣ ಕಾರ್ಯಭಾರವಿರುವ 7,225 ಮತ್ತು ಭಾಗಶಃ ಕಾರ್ಯಭಾರವಿರುವ 3,411 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

    ಈ ಹುದ್ದೆಗಳಲ್ಲಿ ವಾಣಿಜ್ಯ ವಿಷಯವು 1,830, ಕನ್ನಡ 1,008, ಇತಿಹಾಸ 675, ಇಂಗ್ಲಿಷ್ 736, ಸಮಾಜಶಾಸ್ತ್ರ 526, ಅರ್ಥಶಾಸ್ತ್ರ 620, ಬಿಜೆನೆಸ್ ಮ್ಯಾನೇಜ್ಮೆಂಟ್ 490, ಕಂಪ್ಯೂಟರ್ ಸೈನ್ಸ್ 910, ಭೌತಶಾಸ್ತ್ರ 562, ರಾಜ್ಯಶಾಸ್ತ್ರ 602, ರಸಾಯನಶಾಸ್ತ್ರ 663, ಗಣಿತ 492, ಪ್ರಾಣಿಶಾಸ್ತ್ರ 198, ಸಸ್ಯಶಾಸ್ತ್ರ 212, ಮನೋವಿಜ್ಞಾನ 54, ಪರಿಸರ ವಿಜ್ಞಾನ 53, ಸಮಾಜಕಾರ್ಯ 80 ಮತ್ತು ಉರ್ದು 78 ಹುದ್ದೆಗಳನ್ನು ಹೊಂದಿವೆ ಎಂದು ಪ್ರದೀಪ್ ಮಾಹಿತಿ ನೀಡಿದ್ದಾರೆ.

    ಆದ್ಯತೆ: ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿರುವವರನ್ನು ಜ್ಯೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೌನ್ಸೆಲಿಂಗ್ ಬಳಿಕ ಎಲ್ಲರೂ ಹಾಜರಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

    ಮಹಿಳಾ ವಿವಿ ಮುಚ್ಚಲ್ಲ, ಸಂಸ್ಕೃತ ವಿವಿ ಹೊಸ ಕ್ಯಾಂಪಸ್ ನಿರ್ಮಾಣ ಕೈ ಬಿಡಲ್ಲ ಎಂದ ಸಚಿವರು

    BENGALURU JAN 24

    ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆ ಸರಕಾರಕ್ಕಿದೆಯೇ ವಿನಾ ಅದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಇದರ ಜತೆಗೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂತನ ಕ್ಯಾಂಪಸ್ ನಿರ್ಮಾಣ ಮಾಡುವುದರಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

    ಸೋಮವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ಸಮಕಾಲೀನ ಜಗತ್ತಿನಲ್ಲಿ ಮಹಿಳೆಯರನ್ನು ಕುರಿತ ಅಧ್ಯಯನ ವಿಸ್ತೃತವಾಗಿ ನಡೆಯಬೇಕಾಗಿದೆ. ಇದಕ್ಕೆ ತಕ್ಕಂತೆ ಮಹಿಳಾ ವಿ.ವಿ.ಯ ಚಟುವಟಿಕೆಗಳನ್ನು ಹೇಗೆ ವಿಸ್ತರಿಸಬೇಕು ಎನ್ನುವ ಕುರಿತು ಸಮಾಲೋಚಿಸಲಾಗುತ್ತಿದೆ. ಆದರೆ ಕೆಲವರು ವಿನಾ ಕಾರಣ ಗುಲ್ಲೆಬ್ಬಿಸುತ್ತಿರುವುದು ವಿಷಾದನೀಯ’ ಎಂದರು.

    ಸಂಸ್ಕೃತ ವಿವಿ ಕ್ಯಾಂಪಸ್ ನಿರ್ಮಾಣ ಕುರಿತಂತೆ ಕೇಳಿದ ಪ್ರಶ್ನೆಗೆ ಅವರು, `ಈ ವಿವಿ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇದುವರೆಗೂ ಇದಕ್ಕೊಂದು ಸ್ವತಂತ್ರ ಮತ್ತು ಸುಸಜ್ಜಿತ ಕ್ಯಾಂಪಸ್ ಇರಲಿಲ್ಲ. ನಮ್ಮ ಸರಕಾರ ಅದನ್ನು ಮಾಡುತ್ತಿದೆ ಅಷ್ಟೆ. ಮ್ಯಾಕ್ಸ್ ಮುಲ್ಲರ್ ಭವನಕ್ಕೆ ಹೋಗಿ ನೋಡಿದರೆ ಸಂಸ್ಕೃತ ಅಧ್ಯಯನವನ್ನು ನಾವು ಏಕೆ ಮಾಡಬೇಕೆನ್ನುವುದು ಗೊತ್ತಾಗುತ್ತದೆ’ ಎಂದು ಚಾಟಿ ಬೀಸಿದರು.

    ಸ್ವಾಗತಿಸಲೂ ಇಲ್ಲ:`ಕನ್ನಡಕ್ಕೆ ನಮ್ಮ ಸರಕಾರ ಕೊಟ್ಟಿರುವಷ್ಟು ಆದ್ಯತೆಯನ್ನು ಯಾರೂ ಕೊಟ್ಟಿರಲಿಲ್ಲ. ಪದವಿಯಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿದಾಗ ನಮ್ಮ ಕನ್ನಡ ಹೋರಾಟಗಾರರು ಕನಿಷ್ಠಪಕ್ಷ ಅದನ್ನು ಸ್ವಾಗತಿಸಲೂ ಇಲ್ಲ. ಈಗ ಹೈಕೋರ್ಟ್ ಇದಕ್ಕೆ ತಡೆ ನೀಡಿದ್ದು, ಮಧ್ಯಂತರ ಆಜ್ಞೆ ನೀಡಿದೆ. ಅದನ್ನು ಪುರಸ್ಕರಿಸಿ ನಾವು ಕನ್ನಡ ಕಲಿಕೆಯನ್ನು ಸದ್ಯಕ್ಕೆ ತಡೆ ಹಿಡಿದಿದ್ದೇವಷ್ಟೆ’ ಎಂದು ಅವರು ನುಡಿದರು.

    `ಹಾಗೆಯೇ ಹಂಪಿ ಕನ್ನಡ ವಿ.ವಿ.ಯಲ್ಲಿ ಕೋವಿಡ್ ಸಮಸ್ಯೆಯ ಹಿನ್ನೆಲೆಯಲ್ಲಿ ಪ್ರಸಾರಾಂಗ ಸ್ಥಗಿತವಾಗಿದೆ. ಇದರಿಂದಾಗಿ, ಅವರಿಗೆ ವರ್ಷಕ್ಕೆ ಬರುತ್ತಿದ್ದ 4 ಕೋಟಿ ರೂ.ಗಳಷ್ಟು ಆದಾಯ ನಿಂತುಹೋಗಿದೆ. ಆ ವಿ.ವಿ.ಗೆ ಅನುದಾನ ಕೊಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಏನನ್ನೇ ಮಾಡುವುದಕ್ಕೂ ಮೊದಲು ಆರ್ಥಿಕ ಪರಿಸ್ಥಿತಿಯನ್ನೂ ಅವಲೋಕಿಸಬೇಕಾಗುತ್ತದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

    ಅತಿಥಿ ಉಪನ್ಯಾಸಕರ ನೇಮಕಾತಿ ಚುರುಕು:ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪ್ರಕ್ರಿಯೆಯ ಮುಂದಿನ ಹೆಜ್ಜೆಗಳನ್ನು ಇನ್ನು ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ವಿವರಿಸಿದರು.

    ಸರಕಾರವು ಅತಿಥಿ ಉಪನ್ಯಾಸಕರ ವೇತನವನ್ನು ಎರಡೂವರೆ ಪಟ್ಟಿಗಿಂತಲೂ ಹೆಚ್ಚಿಸಿದೆ. ಈ ಹಂತದಲ್ಲಿ ಅವರ ಸಂಘಟನೆಗಳು ಮತ್ತು ವಿಧಾನ ಪರಿಷತ್ತಿನ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೂ ಅತಿಥಿ ಉಪನ್ಯಾಸಕರು ಮುಷ್ಕರ ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ಅವರ ಬೇಸರ ವ್ಯಕ್ತಪಡಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

    BENGALURU JAN 24

    ಕೋವಿಡ್ ಉಸ್ತುವಾರಿಯ ಜೊತೆಗೆ ಸಚಿವ ಸಂಪುಟದ ಸದಸ್ಯರಿಗೆ ಜಿಲ್ಲಾ ಉಸ್ತುವಾರಿಯನ್ನು ವಹಿಸಿ ರಾಜ್ಯ ಸರಕಾರ ಇಂದು ಆದೇಶ ಹೊರಡಿಸಿದೆ. ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳು ರದ್ದಾಗಿದ್ದು ಈ ಆದೇಶ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.

    ಈ ಆದೇಶದ ಪ್ರಕಾರ ಬೆಂಗಳೂರು ನಗರ ಉಸ್ತುವಾರಿಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಸಚಿವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಹೊಂದಿರುವ ಜಿಲ್ಲೆಗಳನ್ನು ಹೊರತು ಪಡಿಸಿ ಬೇರೆ ಬೇರೆ ಜಿಲ್ಲೆಗಳ ಉಸ್ತುವಾರಿಯನ್ನು ಆಯಾ ಸಚಿವರಗೆ ನೀಡಲಾಗಿದೆ.

    ಆದೇಶ ಪಟ್ಟಿ ಇಲ್ಲಿದೆ . ಸ್ಕ್ರಾಲ್ ಮಾಡಿ ಓದಿ.

    ವಿ.ವಿ.ಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ ಅಳವಡಿಕೆ

    BENGALURU JAN 24

    ಉನ್ನತ ಶಿಕ್ಷಣ ವಲಯದಲ್ಲಿ ಪರೀಕ್ಷಾಂಗವನ್ನು ಸದೃಢಗೊಳಿಸುವ ಪರೀಕ್ಷಾ ತಂತ್ರಾಂಶ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರ ಇತ್ಯಾದಿಗಳನ್ನು ಸುಗಮವಾಗಿ ಒದಗಿಸುವ `ಇ-ಸಹಮತಿ’ ಉಪಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಚಾಲನೆ ನೀಡಿದರು.

    ವಿಧಾನಸೌಧದಲ್ಲಿ ಇದರ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಇದರಿಂದ ವಿ.ವಿ.ಗಳು ಪರೀಕ್ಷೆ ಮತ್ತು ಅಂಕಪಟ್ಟಿಗಳ ಬಾಬ್ತಿಗೆಂದು ಖರ್ಚು ಮಾಡುತ್ತಿದ್ದ ಸುಮಾರು 60 ಕೋಟಿ ರೂ. ಹಣ ಉಳಿತಾಯವಾಗಲಿದೆ. ಜೊತೆಗೆ, ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ದಂಧೆಗೆ ಇದರಿಂದ ಕಡಿವಾಣ ಬೀಳಲಿದ್ದು, ಮಾನ್ಯತೆ ಹೊಂದಿರುವ 3,400ಕ್ಕೂ ಹೆಚ್ಚು ಕಾಲೇಜುಗಳ 16 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದರು.

    ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ ಯೋಜನೆಯಡಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. 10 ಮಾಡ್ಯೂಲ್ ಗಳನ್ನು ಒಳಗೊಂಡಿರುವ ಈ ಯೋಜನೆಯಡಿ 2021ರ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ ಪ್ರವೇಶಾತಿ ಮತ್ತು ಶೈಕ್ಷಣಿಕ ಹಾಗೂ ತರಗತಿ ನಿರ್ವಹಣೆ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಉಳಿದವುಗಳನ್ನು ಜೂನ್ ಹೊತ್ತಿಗೆ ಅಳವಡಿಸಲಾಗುವುದು. ಇಂತಹ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ಅವರು ಹೇಳಿದರು.

    ಸದ್ಯಕ್ಕೆ ಸರಕಾರಿ ಸ್ವಾಮ್ಯದ 24 ವಿ.ವಿ.ಗಳ ಪೈಕಿ ಎರಡು ವಿ.ವಿ.ಗಳು ತಮ್ಮದೇ ಆದ ಪರೀಕ್ಷಾ ನಿರ್ವಹಣೆಯ ತಂತ್ರಾಂಶಗಳನ್ನು ಹೊಂದಿದ್ದರೆ, 8 ವಿ.ವಿ.ಗಳಲ್ಲಿ ಯಾವುದೇ ಪರೀಕ್ಷಾ ತಂತ್ರಾಂಶಗಳಿಲ್ಲ. ಮಿಕ್ಕ ವಿ.ವಿ.ಗಳು ಇದಕ್ಕೆಲ್ಲ ಹೊರಗುತ್ತಿಗೆಯನ್ನು ನೆಚ್ಚಿಕೊಂಡಿದ್ದವು. ಈಗ ಅಭಿವೃದ್ಧಿಪಡಿಸಿರುವ ಪರೀಕ್ಷಾ ನಿರ್ವಹಣಾ ತಂತ್ರಾಂಶದ ಮೂಲಕ ಡಿಜಿಟಲ್ ಮೌಲ್ಯಮಾಪನ, ಆನ್ಲೈನ್ ಮೂಲಕ ಪ್ರಶ್ನೆಪತ್ರಿಕೆ, ಪ್ರವೇಶಪತ್ರ, ವೇಳಾಪಟ್ಟಿ, ಪರೀಕ್ಷಾ ಶುಲ್ಕ ಪಾವತಿ, ಪ್ರಯೋಗಾಲಯಗಳ ಬ್ಯಾಚ್ ನಿರ್ವಹಣೆ, ಅಂಕಪಟ್ಟಿ ಪೂರೈಕೆ ಮುಂತಾದವು ಸಾಧ್ಯವಾಗಲಿವೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಬಹುಶಿಸ್ತೀಯ ಪಠ್ಯಕ್ರಮವನ್ನು ಇಲ್ಲಿ ಪರಿಗಣಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ಮೊಟಕುಗೊಳಿಸಿದರೆ ಅಥವಾ ಮರುಪ್ರವೇಶ ಬಯಸಿದರೆ ಅದನ್ನೂ ಸಾಧ್ಯವಾಗಿಸುವ ವ್ಯವಸ್ಥೆಯನ್ನು ಈ ತಂತ್ರಾಂಶದಲ್ಲಿ ಕಲ್ಪಿಸಲಾಗಿದ್ದು, ತಮಗೆ ಅಗತ್ಯವೆನಿಸಿದಾಗ ಪ್ರಮಾಣಪತ್ರಗಳನ್ನು ಪಡೆಯಬಹುದು ಎಂದು ಅಶ್ವತ್ಥನಾರಾಯಣ ನುಡಿದರು.

    ಇದಲ್ಲದೆ, ಇ-ಸಹಮತಿ’ ತಂತ್ರಾಂಶದ ಮೂಲಕ ಪರೀಕ್ಷೆಗೆ ಸಂಬಂಧಿಸಿದ ಡೇಟಾವನ್ನು ರಾಷ್ಟ್ರೀಯ ಶೈಕ್ಷಣಿಕ ಸಾಧನಾ ಭಂಡಾರಕ್ಕೆ (ನ್ಯಾಷನಲ್ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್- ಎನ್ಎಬಿಸಿ) ಸೇರಿಸಲು ಹಾಗೂ ಉದ್ಯೋಗಧಾತರ ಜತೆಗೆ ಅಂಕಪಟ್ಟಿ ಹಂಚಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. ಇವೆಲ್ಲವೂ ಎನ್ಕ್ರಿಪ್ಟೆಡ್ ರೂಪದಲ್ಲಿ ಇರಲಿದ್ದು, ಪ್ರತೀ ಸೆಮಿಸ್ಟರಿನ ಅಂಕಪಟ್ಟಿಗಳನ್ನು ನೇರವಾಗಿಡಿಜಿಲಾಕರ್-ಎನ್ಎಡಿ’ಗೆ ನೇರವಾಗಿ ವರ್ಗಾಯಿಸಬಹುದು. ಈ ಪ್ರಕ್ರಿಯೆಯಲ್ಲಿ ಭದ್ರತೆ ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

    ವಿ.ವಿ.ಗಳು ತಮ್ಮ ಸ್ವಾಯತ್ತತೆಗೆ ಅನುಸಾರವಾಗಿ ಪರೀಕ್ಷೆಯ ನಿಯಮಗಳನ್ನು ಈ ತಂತ್ರಾಂಶದಲ್ಲಿ ರೂಪಿಸಿ, ಅಳವಡಿಸುವ ಸ್ವಾತಂತ್ರ್ಯವೂ ಇದೆ. ಇದರ ಅನುಷ್ಠಾನಕ್ಕೆ 24/7 ಕಾರ್ಯನಿರ್ವಹಿಸುವ ಸಹಾಯವಾಣಿ ವ್ಯವಸ್ಥೆಯೂ ಇರಲಿದೆ.

    ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕುಮಾರ್ ನಾಯಕ್, ಇ-ಆಡಳಿತ ಕೇಂದ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ತಿಮ್ಮೇಗೌಡ ಮತ್ತು ಹಲವು ವಿ.ವಿ.ಗಳ ಕುಲಪತಿಗಳು ಹಾಗೂ ಕುಲಸಚಿವರು ಇದ್ದರು. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಅವರು ವರ್ಚುವಲ್ ಮೂಲಕ ಹಾಜರಾಗಿದ್ದರು.

    ಅತಿಯಾದರೆ ಅಮೃತವೂ ವಿಷ

    ಸುಮಾ ವೀಣಾ

    ಬಸುರ ಹೆಂಡತಿಯೂಟ ಶಿಶುವ ದಣಿಸುವವೊಲು–  ಚಾಮರಸನ ‘ಪ್ರಭುಲಿಂಗ ಲೀಲೆ’ಯಿಂದ ಪ್ರಸ್ತುತ ಸಾಲನ್ನು ಆರಿಸಿದೆ.   ಪ್ರಸ್ತುತ ಚಾಮರಸನ ದೇಸಿ  ಶೈಲಿಯ ತತ್ವವನ್ನು ಹೇಳುತ್ತದೆ.ಬಸುರಿ ಹೆಂಗಸು ಅಗತ್ಯವಿದ್ದಷ್ಟು ಮಾತ್ರ ಊಟವನ್ನು ಸೇವಿಸಬೇಕು ಇಲ್ಲದಿದ್ದರೆ ಬೆಳೆಯುವ ಭ್ರೂಣದ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂಬ  ಅರ್ಥವನ್ನು ಕೊಡುತ್ತದೆ.

    ವಾಚ್ಯಾರ್ಥದಲ್ಲಿ ಇದು ಅನ್ನಾಹಾರಾದಿ ವಿಚಾರಗಳಿಗೆ ಸಂಬಂಧಿಸಿದ್ದು ಎಂದಾದರೆ ಲಕ್ಷ್ಯಾರ್ಥದಲ್ಲಿ  ಮನುಷ್ಯನ ಲೋಕವ್ಯಾಪಾರಕ್ಕೂ ಅನ್ವಯವಾಗುತ್ತದೆ.  ಅತಿಯಾದರೆ ‘ಅಮೃತವೂ ವಿಷ’  ಎಂಬಂತೆ    ಎಂಬ ಮಾತನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು.

    ಉದಾಹರಣೆಗೆ ಯಾರೋ ಕಷ್ಟದಲ್ಲಿದ್ದಾರೆ ಎಂದರೆ  ಅವರಿಗೆ ಸಹಾಯ ಮಾಡುವುದು ಸರಿ ಆದರೆ ಅತಿರೇಕಕ್ಕೆ ಹೋಗಿ ಸಹಾನುಭೂತಿ ತೋರಿದರೆ ಹಾಗೆಯೇ ಸಹಾಯ ಮಾಡುವ ವ್ಯಕ್ತಿ ತಾನು  ಮುನ್ನೆಲೆಗೆ ಬರಬೇಕೆಂದು ಅತಿರೇಕದ ವರ್ತನೆ ತೋರಿದರೆ ಕಷ್ಟದಲ್ಲಿರುವವರ ಖಾಸಗಿತನಕ್ಕೆ  ಧಕ್ಕೆ ಬರುತ್ತದೆ. ಬಸುರಿ ಸೇವಿಸುವ  ಆಹಾರ  ಆಕೆ ಹಾಗು ಆಕೆಗೆ ಜನಿಸಲಿರುವ ಮಗುವಿನ ಆರೋಗ್ಯವನ್ನು ಕಾಪಾಡಬೇಕು. ಆದರೆ ಬಸುರಿ ಆಹಾರ  ರುಚಿಯಾಗಿದೆ ನನಗಿಷ್ಟ  ಎಂದು ಅತಿಯಾಗಿ ಸೇವಿಸಿದರೆ ಮಗುವಿಗೆ ಅದನ್ನು ಸಹಿಸಲಾಗುವುದಿಲ್ಲ.

    ‘ಬಸುರ ಹೆಂಡತಿಯೂಟ ಶಿಶುವ ದಣಿಸುವವೊಲು’ ಈ ಮಾತನ್ನು  ಶಿಕ್ಷಕ ಹಾಗು  ವಿಜ್ಞಾನಿಯ ಹಿನ್ನೆಲೆಯಿಂದಲೂ ತೆಗೆದುಕೊಳ್ಳಬಹುದು.   ಅಧ್ಯಯನ  ಶೀಲ ಶಿಕ್ಷಕ  ತನ್ನ ತಿಳಿವಳಿಕೆಯನ್ನೆಲ್ಲಾ  ತನ್ನ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂಬ ಆಸೆ ಇರಿಸಿಕೊಳ್ಳುವುದು ಸರಿ ಆದರೆ ಅದನ್ನು ವಿದ್ಯಾರ್ಥಿ ಎಷ್ಟರಮಟ್ಟಿಗೆ  ಅರ್ಜಿಸಿಕೊಳ್ಳುತ್ತಾನೆ ಎಂಬುದು ಮುಖ್ಯವಾಗುತ್ತದೆ.  ಶಿಕ್ಷಕ  ವಿದ್ಯಾರ್ಥಿಯ ವಯೋಮಾನಕ್ಕನ್ನುಗುಣವಾಗಿ ಅವನ ತಿಳಿವಳಿಕೆಗೆ  ತಕ್ಕಂತೆ ಬೋಧನೆ  ಮಾಡಿದರೆ ಸಹಾಯವಾಗುತ್ತದೆ.

    ಇನ್ನೊಂದು ಮಗ್ಗುಲಲ್ಲಿ  ನೋಡುವುದಾದರೆ  ವಿಜ್ಞಾನಿ  ತನ್ನ ಸಂಶೋಧನೆಗಳನ್ನು  ಪ್ರಯೋಗಾರ್ಥಿಗಳ ಮೇಲೆ ಅನ್ವಯಿಸಹೋದರೆ ಎಡವಟ್ಟುಗಳಾಗುತ್ತವೆ.   ‘ಗುಬ್ಬಿಮೇಲೆ  ಬ್ರಹ್ಮಾಸ್ತ್ರ’ವನ್ನು ಪ್ರಯೋಗಿಸಲಾಗದು ಎಂಬಂತೆ ತಮ್ಮ ಆಸೆ, ಸಹಾನುಭೂತಿ, ತಿಳಿವಳಿಕೆ.ಪರಿಣತಿಗಳನ್ನು   ಬಲವಂತವಾಗಿ ಈಡೇರಿಸಿಕೊಳ್ಳುವುದು, ಪ್ರಯೋಗಿಸ ಹೋದರೆ ಖಂಡಿತಾ  ಅನಾನುಕೂಲವಾಗುತ್ತದೆ .

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಅತಿಥಿ ಉಪನ್ಯಾಸಕರ ನೇಮಕಕ್ಕೆ ಚಾಲನೆ: ಅರ್ಜಿ ಹಾಕಲು ಜ.21 ಕೊನೆ ದಿನ

    BENGALURU JAN 16

    2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರಕಾರವು ಅರ್ಜಿ ಆಹ್ವಾನಿಸಿದೆ.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜ.17ರ ಸೋಮವಾರದಿಂದ https://dec.karnataka.gov.in ಮೂಲಕ ಆನ್-ಲೈನ್ ಅರ್ಜಿ ಹಾಕಿಕೊಳ್ಳಬಹುದಾಗಿದ್ದು, ಅರ್ಜಿ ಸಲ್ಲಿಸಲು ಜ.21 ಕೊನೆಯ ದಿನವಾಗಿರಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಇಷ್ಟದ ಆಯ್ದ 10 ಸರಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆಯ್ಕೆಯಾದವರಿಗೆ ಈ ಕಾಲೇಜುಗಳಲ್ಲೇ ಕಾರ್ಯನಿರ್ವಹಿಸಲು ಆದಷ್ಟು ಮಟ್ಟಿಗೆ ಅವಕಾಶ ಕೊಡಲಾಗುವುದು. ಒಂದು ವೇಳೆ, ಅಭ್ಯರ್ಥಿಗಳ ಆಯ್ಕೆಯ ಕಾಲೇಜುಗಳಲ್ಲಿ ವಾರಕ್ಕೆ 15 ಗಂಟೆಗಳ ಕಾರ್ಯಭಾರ ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಬೇರೆ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

    ಅತಿಥಿ ಉಪನ್ಯಾಸಕರಾಗಿ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿರುವವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು. ಅಲ್ಲದೆ, ವಿದ್ಯಾರ್ಹತೆ ಮತ್ತು ಸೇವಾ ವಿವರಗಳ ಆಧಾರದ ಮೇಲೆ, ನಾನಾ ಮಾನದಂಡಗಳ ಅನ್ವಯ ರಾಜ್ಯವ್ಯಾಪ್ತಿಯ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ವಿದ್ಯಾರ್ಹತೆ ಮತ್ತು ಅಂಕಗಳ ವಿವರ

    ಅತಿಥಿ ಉಪನ್ಯಾಸಕರ ನೇಮಕಾತಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯ ಎರಡು ವರ್ಷಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಪೈಕಿ ಶೇ.15ರಷ್ಟನ್ನು ಪರಿಗಣನೆಗೆ ತೆಗೆದುಕೊಂಡು, ಇದಕ್ಕೆ ಗರಿಷ್ಠ 25 ಅಂಕಗಳನ್ನು ಕೊಡಲಾಗುವುದು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಉಳಿದಂತೆ, ಪಿಎಚ್.ಡಿ., ಎನ್ಇಟಿ/ಕೆ-ಸೆಟ್/ಸ್ಲೆಟ್ ಮತ್ತು ಎಂ.ಫಿಲ್ ಪದವಿಗಳನ್ನು ಹೆಚ್ಚುವರಿ ವಿದ್ಯಾರ್ಹತೆ ಎಂದು ಪರಿಗಣಿಸಿದ್ದು, ಇವುಗಳಿಗೆ ಕ್ರಮವಾಗಿ ಗರಿಷ್ಠ 12, 9 ಮತ್ತು 6 ಅಂಕಗಳನ್ನು ನೀಡಲಾಗುವುದು. ಜತೆಗೆ, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಒಂದು ವರ್ಷಕ್ಕೆ (ಗರಿಷ್ಠ 16 ವರ್ಷಗಳಿಗೆ ಮಾತ್ರ ಅನ್ವಯವಾಗುವಂತೆ 48 ಅಂಕಗಳು) 3 ಅಂಕಗಳನ್ನು ಕೊಡಲಾಗುವುದು. ಈ ಅವಧಿಯಲ್ಲಿ ಶೈಕ್ಷಣಿಕ ವರ್ಷದ ಒಂದು ಸೆಮಿಸ್ಟರ್ ನಲ್ಲಿ ಮಾತ್ರ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ 1.5 ಅಂಕಗಳನ್ನು ಮಾತ್ರ ನೀಡಲಾಗುವುದು. ನೇಮಕಾತಿಯಲ್ಲಿ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ಕೊಡಲಾಗುವುದು ಎಂದು ಅವರು ವಿವರಿಸಿದ್ದಾರೆ.

    Indian Stock Market : start upಗಳು ಸಾರ್ವಜನಿಕ ಹೂಡಿಕೆದಾರರನ್ನು ಮರೆಯದಿರಲಿ

    ಷೇರುಪೇಟೆಯು ಸಧ್ಯಕ್ಕೆ ಎರಡು ವಿಧಗಳ ಚಟುವಟಿಕೆಗೆ ವೇದಿಕೆಯಾಗುತ್ತಿದೆ. ಅದೆಂದರೆ ಒಂದು ವರ್ಗದಿಂದ ಷೇರುಗಳನ್ನು ವಿತರಣೆ ಮಾಡುವುದು, ಮತ್ತೊಂದು ವರ್ಗದಿಂದ ಷೇರುಗಳನ್ನು ಹಿಂಪಡೆಯುವ ಅಥವಾ ಹಿಂಕೊಳ್ಳುವ ಪ್ರಕ್ರಿಯೆಗಳಾಗಿವೆ.

    ಒಂದೆಡೆ ಕಂಪನಿಯ ಪ್ರವರ್ತಕರು ತಮ್ಮ ಷೇರುಗಳನ್ನು ಸಾರ್ವಜನಿಕವಾಗಿ ವಿತರಿಸಿ ಷೇರುದಾರರ ಜಾಲವನ್ನು ವಿಸ್ತರಿಸುವ ಪ್ರಯತ್ನದಲ್ಲಿ, ಕಂಪನಿಯು ಹಾನಿಗೊಳಗಾಗಿದ್ದರೂ, ತಮ್ಮ ಖರೀದಿಯ ಬೆಲೆ ಒಂದಂಕಿಯಲ್ಲಿದ್ದರೂ, ಷೇರಿನ ಮುಖಬೆಲೆಯನ್ನು ರೂ.1 ಕ್ಕೆ ಸೀಳಿ ಆರಂಭಿಕ ಷೇರು ವಿತರಣೆಯ ಮೂಲಕ ಸಾರ್ವಜನಿಕರಿಂದ ಅಧಿಕ ಪ್ರೀಮಿಯಂನೊಂದಿಗೆ ಸಂಪನ್ಮೂಲ ಸಂಗ್ರಹಣೆ ಮಾಡುತ್ತಾರೆ. ಈ ಪ್ರಕ್ರಿಯೆಯಿಂದ ಕಂಪನಿಯಲ್ಲಿರುವ ಹಾನಿಯನ್ನು ಜನಸಾಮಾನ್ಯರ ಹೆಗಲಿಗೆ ಹಸ್ತಾಂತರಿಸುತ್ತಾರೆ. ವರ್ಣರಂಜಿತ, ವಿಶ್ಲೇಷಣೆಗಳು, ಭವಿಷ್ಯದಲ್ಲಿ ಸಾಧಿಸಬಹುದಾದ ಅಂಕಿ ಅಂಶಗಳ ಮೂಲಕ ಮೂಗಿನ ತುದಿಗೆ ತುಪ್ಪ ಸವರಿ, ತಮ್ಮ ಸಂಪನ್ಮೂಲ ಸಂಗ್ರಹಣೆಯನ್ನು ಯಶಸ್ವಿಗೊಳಿಸಿಕೊಳ್ಳುತ್ತಾರೆ. ಈ ದಿನಗಳಲ್ಲಿ ಸ್ಟಾರ್ಟ್‌ ಅಪ್‌ ಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

    ಮತ್ತೊಂದೆಡೆ ಕಂಪನಿಗಳು ತಮ್ಮಲ್ಲಿರುವ ಮೀಸಲು ನಿಧಿ, ಇತರೆ ಚಟುವಟಿಕೆಗಳಿಂದ ಸಂಗ್ರಹವಾದ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಕಂಪನಿಯ ಷೇರುಗಳನ್ನು ಪೇಟೆಯ ಬೆಲೆಗಿಂತ ಹೆಚ್ಚಿನ ಬೆಲೆಗಳಿಗೆ ಹಿಂಕೊಳ್ಳುವ ಮೂಲಕ ಷೇರುದಾರರಿಗೆ ಉತ್ತಮ ಫಲ ನೀಡುವ ಕಾರ್ಪೊರೇಟ್‌ ಸಂಪ್ರದಾಯಗಳನ್ನು
    ಮುಂದುವರೆಸಿಕೊಂಡು ಹೋಗುವ ಹವ್ಯಾಸ. ಈ ಮೂಲಕ ಷೇರುದಾರರ- ಕಂಪನಿಗಳ ನಡುವೆ ಮೂಡಬಹುದಾದ ಬಾಂಧವ್ಯದ ಬೆಸುಗೆ ದೀರ್ಘಕಾಲೀನವಾಗಿ ಪ್ರಭಾವಿಯಾಗುವಂತೆ ಮಾಡುವುದು.

    ಸ್ಟಾರ್ಟ್‌ ಅಪ್‌ ಯೋಜನೆ

    ಸ್ಟಾರ್ಟ್‌ ಅಪ್‌ ಯೋಜನೆಯು 2015 ರಲ್ಲೇ ಪ್ರಕಟಿಸಲಾಯಿತು. ಲೈಸೆನ್ಸ್‌ ರಾಜ್‌ ಅಗತ್ಯವಿರುವ, ಪ್ರದೇಶ ಸ್ವಾದೀನ, ಸಂಪನ್ಮೂಲ ಒದಗಿಸುವ, ವಿದೇಶೀ ಹೂಡಿಕೆಯ ಯೋಜನೆಗಳ ವಲಯಗಳಲ್ಲಿ ಸ್ಟಾರ್ಟ್‌ ಅಪ್‌ ಉದ್ಧಿಮೆ ಆರಂಭಿಸಲು ಅನುವು ಮಾಡಿಕೊಡುವುದು ಯೋಜನೆಯ ಮೂಲ ಉದ್ದೇಶವಾಗಿದ್ದು, ಇದರಿಂದ ಯುವಶಕ್ತಿಯು ತಮ್ಮ ಕೌಶಲ್ಯಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಉದ್ಯೋಗ ಸೃಷ್ಠಿ ಮಾಡುವುದರೊಂದಿಗೆ ಸ್ವಯಂ ಉದ್ಯೋಗಪತಿಗಳಾಗಿ ದೇಶದ ಆರ್ಥಿಕ ಉನ್ನತಿಗೆ ಕೊಡುಗೆ ನೀಡಲು ಪ್ರೋತ್ಸಾಹಿಸಿದಂತಾಗುತ್ತದೆ.

    ಹತ್ತು ವರ್ಷಗಳೊಳಗೆ ಸ್ಥಾಪನೆಯಾದ, ಒಂದು ನೂರು ಕೋಟಿ ರೂಪಾಯಿಗಳೊಳಗೆ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳು ಸ್ಟಾರ್ಟ್‌ ಅಪ್‌ ಪಟ್ಟಕ್ಕೆ ಅರ್ಹವಾಗಿದ್ದು, ಪೇಟೆಂಟ್‌ ನೋಂದಾವಣಿ, ಮೂರು ವರ್ಷಗಳ ಕಾಲ ತನಿಖೆಗಳಿಂದ, ಬಂಡವಾಳ ತೆರಿಗೆ ರಿಯಾಯಿತಿ, ತೆರಿಗೆ ರಿಯಾಯಿತಿ, ಸ್ವಯಂ ದೃಡೀಕರಣ ಪತ್ರಕ್ಕೆ ಅವಕಾಶ ಮುಂತಾದ ಸವಲತ್ತುಗಳನ್ನುಈ ಯೋಜನೆ ಒದಗಿಸುತ್ತದೆ.

    ಹಿಂದಿನ ವರ್ಷ ಪ್ರಧಾನ ಮಂತ್ರಿಗಳು ರೂ.1,000 ಕೋಟಿ ಗಾತ್ರದ ಸೀಡ್‌ ಫಂಡ್‌ ಯೋಜನೆಯನ್ನು ಸಹ ಪ್ರಕಟಿಸಿದರು. ಈ ಎಲ್ಲಾ ವಿವಿಧ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಅನೇಕ ಕಂಪನಿಗಳು ಕಾರ್ಯೋನ್ಮುಖವಾಗಿವೆ. ಸಧ್ಯ ಕರ್ನಾಟಕವು ಟಾಪ್‌ ಪರ್ಫಾರ್ಮರ್‌ ಎಂದು ಗುರುತಿಸಲ್ಪಟ್ಟಿದೆ.

    ಸಧ್ಯ ಷೇರುಪೇಟೆಗಳು ಉತ್ತುಂಗದಲ್ಲಿರುವ ಕಾರಣ, ಇತ್ತೀಚೆಗೆ ಝೊಮೆಟೋ, ಪೇಟಿಎಂ, ಪಾಲಿಸಿ ಬಜಾರ್‌, ಗಳಂತಹ ಕಂಪನಿಗಳು ಆರಂಭಿಕ ಷೇರು ವಿತರಣೆ ಮಾಡಿ ಷೇರುವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಂಪನಿಗಳು ಆರಂಭಿಕ ಷೇರು ವಿತರಣೆಗೆ ಸಜ್ಜಾಗುತ್ತಿವೆ. ಸ್ಟಾರ್ಟ್‌ಅಪ್‌ ನೆಪದಲ್ಲಿ ತಮ್ಮ ಬುನಾದಿಯನ್ನು ಹಾಕಿ, ಸರ್ಕಾರದ ಅಂದರೆ ಸಾರ್ವಜನಿಕ ಸವಲತ್ತುಗಳನ್ನು ಪಡೆದುಕೊಂಡು ಸಮೃದ್ಧವಾಗಿ ಬೆಳೆದು ನಂತರ ತಮ್ಮ ಮತ್ತು ತಮಗೆ ಪೂರ್ವಶ್ರಮದಲ್ಲಿ ಬೆಂಬಲಿಸಿದ ಖಾಸಗಿ ಹೂಡಿಕೆದಾರರಿಗೆ ಲಾಭ ಗಳಿಸಿವ ಚಿಂತನೆಯನ್ನೇ ಮೂಲವಾಗಿಸಿಕೊಂಡು ಆರಂಭಿಕ ದಿನಗಳಲ್ಲಿ ಆಲಿಂಗಿಸಿಕೊಂಡಿರುವ ಸಾರ್ವಜನಿಕರನ್ನೇ ಬಲಿಪಶುಗಳನ್ನಾಗಿಸುವ ರೀತಿಯು ಒಳ್ಳೆಯ ಸಂಪ್ರದಾಯವಲ್ಲ.

    ಆರಂಭಿಕ ಷೇರು ವಿತರಣೆಗಳನ್ನು ಅಧಿಕ ಪ್ರೀಮಿಯಂಗಳಲ್ಲಿ ವಿತರಿಸುವುದೊಂದೇ ಅಲ್ಲ, ವಿತರಣೆಗೆ ಮುನ್ನವೇ ಆ ಕಂಪನಿಗಳ ಆಡಳಿತ ಮಂಡಳಿಗಳು ಕಂಪನಿಯಲ್ಲಿರುವ ವಿವಿಧ ಮೀಸಲು ನಿಧಿಗಳನ್ನು ಕರಗಿಸುವ ಪ್ರಕ್ರಿಯೆಯು ನಿಜಕ್ಕೂ ಬೇಸರದ ಸಂಗತಿ. ಒಂದೆಡೆ ಹೆಚ್ಚಿನ ಪ್ರೀಮಿಯಂ ಮತ್ತೊಂದೆಡೆ ಕಂಪನಿಯಲ್ಲಿರುವ ಆಂತರಿಕ ಆರ್ಥಿಕ ಸಂಪತ್ತನ್ನು ಕರಗಿಸುವ ವಿಧಾನಗಳು ಇಂದು ಸಾಮಾನ್ಯವಾಗಿವೆ. ಕಂಪನಿಗಳು ತಮ್ಮ ಆರಂಭಿಕ ಷೇರು ವಿತರಣೆಗೂ ಮುನ್ನ ಷೇರಿನ ಮುಖಬೆಲೆಯನ್ನು ಸೀಳುವುದು, ಅಸಹಜ ಪ್ರಮಾಣದ ಬೋನಸ್‌ಷೇರುಗಳನ್ನು ವಿತರಿಸುವುದು ನಂತರ ಅಸಹಜ ಗಾತ್ರದ ಪ್ರೀಮಿಯಂನಲ್ಲಿ ವಿತರಣೆ ಮಾಡುವುದು ಇಂದಿನ ವಾಡಿಕೆಯಾಗಿದೆ. ಇಂತಹ ಅಂಶಗಳು ಹೊಸದಾಗಿ ಪೇಟೆ ಪ್ರವೇಶಿಸುವ ಹೂಡಿಕೆದಾರರಿರಲಿ, ಅನುಭವಸ್ಥ ಹೂಡಿಕೆದಾರರ ಗಮನಕ್ಕೂ ಬಾರದೆ, ಕೇವಲ ಅಲಂಕಾರಿಕ ಪ್ರಚಾರಗಳಿಗೆ ವಿಶ್ಲೇಷಣೆಗಳಿಗೆ ಒಲವು ಮೂಡಿಸಿಕೊಂಡು ಹೂಡಿಕೆ ಹಣವನ್ನು ಕರಗಿಸಿಕೊಂಡವರ ಸಂಖ್ಯೆ ಹೆಚ್ಚಾಗಿದೆ. ಲೀಸ್ಟಿಂಗ್‌ಆದ ಮೇಲೆಯೂ ಕೆಲವು ಕಂಪನಿಗಳಲ್ಲಿನ ಷೇರಿನ ದರದಲ್ಲಿ ಭಾರಿ ಇಳಿಕೆಯಾದಾಗ ಮಾರಾಟಮಾಡಲು ಮನಸಾಗದು, ಏರಿಕೆಯಾದಲ್ಲಿ ಇನ್ನೂ ಹೆಚ್ಚಬಹುದೆಂಬ ನಿರೀಕ್ಷೆಯಿಂದ ಲಾಭದ ನಗದೀಕರಣಕ್ಕೆ ಮುಂದಾಗದ ಪರಿಸ್ಥಿತಿಯಲ್ಲಿರುವುದು ಅನೇಕ ಹೂಡಿಕೆದಾರರಿಗೆ ಚಿಂತನೆಯಾಗಿರುತ್ತದೆ. ಶೇ. 27 ರಷ್ಟು ಆರ್ಥಿಕ ಸಾಕ್ಷರತೆ ಹೊಂದಿರುವ ನಮ್ಮ ದೇಶದಲ್ಲಿ ಇಂತಹ ಅಸಹಜ ರೀತಿಯ ಬೆಳವಣಿಗೆಗಳಿಗೆ ಕಡಿವಾಣ ಅಗತ್ಯ.

    ಇತ್ತೀಚೆಗೆ ಪ್ರಮುಖ ಕಂಪನಿಗಳಾದ ಅಜಂತಾ ಫಾರ್ಮ, ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌, ಟಿಸಿಎಸ್‌ ಕಂಪನಿಗಳು ತಮ್ಮಲ್ಲಿರುವ ಹೆಚ್ಚುವರಿ ಮೀಸಲು ನಿಧಿಯನ್ನು ಹೂಡಿಕೆದಾರರಿಗೆ ಹಂಚಲು, ಷೇರು ಹಿಂಕೊಳ್ಳುವ ಯೋಜನೆ ಮೂಲಕ ಮುಂದಾಗಿವೆ. ಇದು ಹೂಡಿಕೆದಾರರಿಗೆ ಯಾವ ರೀತಿ ಅನುಕೂಲ ಅಥವಾ ಲಾಭದಾಯಕ ಕ್ರಮ ಎಂಬ ಅನುಮಾನ ಹಲವರಲ್ಲಿ ಮೂಡಬಹುದು. ಹಿಂಕೊಳ್ಳುವಿಕೆಯು ಪೇಟೆಯ ದರಗಳಿಗಿಂತ ಹೆಚ್ಚಿನ ದರದಲ್ಲಿ ನಡೆಯುವುದರಿಂದ ಲಭ್ಯವಿರುವ ಮೀಸಲು ನಿಧಿಯು ಷೇರುದಾರರಿಗೆ
    ಹಂಚಿದಂತಾಗುತ್ತದೆ.

    ಉದಾಹರಣೆಗೆ ಒಂದು ವಾರದ ಕೆಳಗೆ ರೂ.2,200 ರ ಸಮೀಪವಿದ್ದ ಅಜಂತಾ ಫಾರ್ಮ ಷೇರು, ಹಿಂಕೊಳ್ಳುವಿಕೆ ದರ ರೂ.2,550 ಎಂದು ಪ್ರಕಟವಾದ ಮೇಲೆ ಷೇರಿನ ಬೆಲೆ ರೂ.2,330 ರ ವರೆಗೂ ತಲುಪಿದೆ. ಈ ಮೂಲಕ ಹೂಡಿಕೆ ಮಾಡಿದವರಿಗೆ ಪೇಟೆಯಲ್ಲಿಯೂ ಲಾಭ ಗಳಿಕೆಗೆ ಅವಕಾಶ ಕಲ್ಪಿತವಾಗುವುದಲ್ಲದೆ, ಷೇರುಗಳನ್ನು ಹಿಂದಿರುಗಿಸಿದವರಿಗೆ ರೂ.2,550 ರಂತೆ ನಿಗದಿತ ಪ್ರಮಾಣದಲ್ಲಿ, ಆಂಗೀಕರಿಸಲಾದ ಷೇರುಗಳಿಗೆ ನೀಡಲಾಗುವುದು.

    ಇನ್ನು ಟಿಸಿಎಸ್‌ ಷೇರಿನ ಬೆಲೆ ರೂ.3,840 ರ ಸಮೀಪವಿದ್ದಾಗ ಪ್ರತಿ ಷೇರಿಗೆ ರೂ.4,500 ರಂತೆ ಹಿಂಕೊಳ್ಳುವ ಯೋಜನೆ ಪ್ರಕಟಿಸಿದೆ. ಈ ಕಾರಣ ಷೇರಿನ ದರಗಳಲ್ಲಿ ಭಾರಿ ಏರಿಕೆ ಕಂಡು ರೂ.3,970 ರ ಸಮೀಪಕ್ಕೆ ಏರಿಕೆಯಾಗಿದೆ. ಇಲ್ಲಿ ಪೇಟೆಯ ವಹಿವಾಟಿನಲ್ಲಿಯೂ ಲಾಭ ಗಳಿಕೆಗೆ ಅವಕಾಶ ಅಲ್ಲದೆ, ಷೇರನ್ನು ಹಿಂಕೊಳ್ಳುವ ಯೋಜನೆಯಲ್ಲಿ ಹಿಂದಿರುಗಿಸಿದ ಅನುಪಾತಕ್ಕೆ ತಕ್ಕಂತೆ ರೂ.4,500 ರಂತೆ ಮಾರಾಟಮಾಡಿ ಲಾಭ ಗಳಿಕೆಗೆ ಅವಕಾಶ.

    ಹೀಗೆ ಎರಡು ವಿಭಿನ್ನ ರೀತಿಯ ಚಟುವಟಿಕೆಗಳು ವಿರುದ್ಧ ಚಿಂತನೆಗಳ ಆಧಾರದ ಮೇಲೆ ನಡೆಯುತ್ತಿವೆ. ನಮಗೆ ಯಾವುದು ಅನುಕೂಲಕರ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾದ
    ಮಾಡಿಕೊಳ್ಳಬೇಕಾದ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕಾಗಿರುವುದು ನಮ್ಮಗಳಿಗೆ ಸವಾಲಾಗಿದೆ.

    ಬಜೆಟ್‌ ಮಂಡಣೆಯು ಫೆಬ್ರವರಿ ಒಂದರಂದು ನಡೆಯಲಿದ್ದು, ಮುಂದಿನ ದಿನಗಳಲ್ಲಿ ಪೇಟೆಯು ಯಾವ ರೀತಿ ಸ್ಪಂಧಿಸುವುದೆಂದು ನಿರ್ಧರಿಸುವುದು ಸಾಧ್ಯವಾಗದ ಪರಿಸ್ಥಿತಿ, ಕಾರಣ ಪೇಟೆಯಲ್ಲಿ ಹರಿದುಬರುತ್ತಿರುವ ಹಣದ ಹೊಳೆ, ಹೂಡಿಕೆದಾರರ ಆಸಕ್ತಿಗಳು ಎತ್ತ ಬೇಕಿದ್ದರೂ ತಿರುಗಿಸಬಹುದು. ಈ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ಷೇರುಪೇಟೆ ಪ್ರವೇಶಿಸಿದವರ ಸಂಖ್ಯೆ ಶೇ.55 ರಿಂದ 60 ರಷ್ಟು ಹೆಚ್ಚಿದೆ. ಇವರನ್ನು ಸಾಧ್ಯವಾದಷ್ಠು ಸುರಕ್ಷಿತವಾಗಿ ಉಳಿಸಿಕೊಂಡಲ್ಲಿ, ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಪ್ರಭಾವವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದಾಗಿದೆ. ಈ ದಿಶೆಯಲ್ಲಿ ಆರಂಭಿಕ ಷೇರು ವಿತರಣೆ ಅಂದರೆ ಐಪಿಒ ವಿಭಾಗದಲ್ಲಿ ಕೆಲವು ಸುಧಾರಣೆಗಳು ಅಗತ್ಯವೆನಿಸುತ್ತದೆ. ಅವುಗಳಲ್ಲಿ ಕೆಲವು ಈ ರೀತಿ ಇರಬಹುದಲ್ಲವೇ?

    ಐಪಿಒ ವಿಭಾಗದಲ್ಲಿ ಕೆಲವು ಸುಧಾರಣೆಗಳು ಅಗತ್ಯ

    1. Safety net method should be introduced to protect the ignorant investors from getting screwed. Minimum 50% of the collections should be in escrew account for a period of one year.

    ಮೊದಲನೆಯದಾಗಿ ಐಪಿಒ ಮೂಲಕ ವಿತರಣೆಯಾದ
    ಷೇರುಗಳಿಗೆ ಒಂದು ವರ್ಷಕಾಲ ಸುರಕ್ಷಾ ಚಕ್ರದ ವ್ಯವಸ್ಠೆ ಜಾರಿಗೊಳಿಸುವುದರಿಂದ, ನ್ಯಾಯಸಮ್ಮತ ಬೆಲೆಯಲ್ಲಿ ವಿತರಣೆಗಳು ಸಾಗುತ್ತವೆ. ಶೇ.50 ರಷ್ಠು, ಭರವಸಾತ್ಮಕ ಖಾತೆಯಲ್ಲಿರಿಸಬೇಕು.

    1. All IPOs should be issued at a facevalue of Rs.10 only to enable public atlarge to handle the issues judiciasly.

    ಎಲ್ಲಾ ಐಪಿಒ ಗಳ ಷೇರಿನ ಮುಖಬೆಲೆಯನ್ನು ರೂ.10 ರಲ್ಲಿಯೇ ವಿತರಿಸಬೇಕು. ಇದು ಸಣ್ಣ ಹೂಡಿಕೆದಾರರು ನ್ಯಾಯಸಮ್ಮತವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯ.

    1. Companies which converted into public limited Companies should have compleated one year before floating IPOs.

    ಕಂಪನಿಗಳು ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಕಂಪನಿಗಳಾಗಿ ಪರಿವರ್ತಿಸಿದ ನಂತರ ಐಪಿಒ ವಿತರಿಸಲು ಒಂದು ವರ್ಷದ ಕೂಲಿಂಗ್ ಸಮಯವಿರಬೇಕು.

    1. Promotors should be blocked for a peiod of one year from buying and selling their Company shares after one year.

    ಪ್ರವರ್ತಕರು ಒಂದು ವರ್ಷಕಾಲ ಅವರ ಕಂಪನಿಯ ಷೇರುಗಳನ್ನು ಖರೀದಿಸಲಾಗಲಿ ಅಥವಾ ಮಾರಾಟಮಾಡುವುದಾಗಲಿ ನಿರ್ಬಂದಿಸಬೇಕು.

    1. Companies should have compleated one year after issue of bonus / huge dividend before the public issue.

    ಕಂಪನಿಗಳು ಬೋನಸ್ ಷೇರು ಅಥವಾ ಭಾರಿ ಪ್ರಮಾಣದ ಲಾಭಾಂಶ ವಿತರಣೆ ಮಾಡಿದ ನಂತರ ಐಪಿಒ ವಿತರಿಸಲು ಒಂದು ವರ್ಷ ಕಾಯಲೇಬೇಕು.

    1. Anchor Investors lock in should be extended from one month to 6 months, to justify the issue price.

    ಆಂಕರ್ ಇನ್ವೆಸ್ಟರ್ ಗಳು ತಮ್ಮ ಷೇರುಗಳನ್ನು 6 ತಿಂಗಳಕಾಲ ಮಾರಾಟಮಾಡದಿರಲು ನಿರ್ಬಂದಿಸುವುದು ಸಣ್ಣ ಹೂಡಿಕೆದಾರರ ದೃಷ್ಠಿಯಿಂದ ಸೂಕ್ತವೆನಿಸುತ್ತದೆ.

    1. If IPOs are priced at very high level, then they should be given green signal to list it in Secondary Market without IPO route. Markets will decide the fate of it. Thereby innocent investors interest will be protected. This category should be brought under T series ( Trade to trade segment)

    ಐಪಿಒ ಗಳು ಅತಿ ಹೆಚ್ಚಿನ ಬೆಲೆಯಲ್ಲಿ ವಿತರಿಸುವುದಕ್ಕಿಂತ ಅವುಗಳನ್ನು ನೇರವಾಗಿ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಲಿಸ್ಟಿಂಗ್ ಮಾಡಿ, ಪೇಟೆಯೇ ಆ ಷೇರುಗಳ ಮೌಲ್ಯಮಾಪನ ಮಾಡುವಂತಾದಲ್ಲಿ ಸಣ್ಣ ಹೂಡಿಕೆದಾರರ ಹಿತದ ನಿರ್ಧಾರವಾಗುವುದು. ಈ ಲೀಸ್ಟಿಂಗ್ ಸಂದರ್ಭದಲ್ಲಿ ಒಂದು ತಿಂಗಳ ಕಾಲ ʼ ಟಿ ʼ ಗುಂಪಿನಲ್ಲಿ ಬಿಡುಗಡೆಯಾಗಬೇಕು.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    error: Content is protected !!