22.7 C
Karnataka
Tuesday, May 21, 2024

    SSLC ಫಲಿತಾಂಶ ಪ್ರಕಟ; ಎಂದಿನಂತೆ ಬಾಲಕಿಯರದೇ ಮೇಲುಗೈ

    Must read

    BENGALURU MAY 19

    2021-22 ಸಾಲಿನ SSLC ಫಲಿತಾಂಶ ಪ್ರಕಟವಾಗಿದ್ದು. ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ. ಉತ್ತೀರ್ಣ ಪ್ರಮಾಣ: ಬಾಲಕಿಯರು- ಶೇ. 90.29 ಬಾಲಕರು- ಶೇ. 81.30.

    8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪೂರಕ ಪರೀಕ್ಷೆ- ಜೂನ್ 27, 2022ರಂದು ನಡೆಯಲಿದೆ.

    ಈ ಸಲದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ 625 ಅಂಕಕ್ಕೆ 625 ಅಂಕವನ್ನ 145 ಮಕ್ಕಳು ಪಡೆದುಕೊಂಡಿದ್ದಾರೆ.

    ಇದುವರೆಗೆ ಎಸ್ ಎಸ್ ಎಲ್ ಸಿಯಲ್ಲಿ ಮೊದಲ, ದ್ವಿತೀಯ ಮತ್ತು ತೃತೀಯ ಜಿಲ್ಲೆಗಳೆಂದು ಫಲಿತಾಂಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ರೌಢ ಶಿಕ್ಷಣ ಇಲಾಖೆ ಗ್ರೇಡ್ ಮಾದರಿಯಲ್ಲಿ ಫಲಿತಾಂಶ ನೀಡಿದೆ. 

    20 ಶಾಲೆಗಳು ಶೂನ್ಯ ಸಂಪಾದನೆ ಮಾಡಿದರೆ 3,920 ಶಾಲೆಗಳು ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ. ರ‍್ಯಾಂಕ್‌ ಪದ್ದತಿ ಕೈ ಬಿಟ್ಟ ಇಲಾಖೆ ಈ ಬಾರಿ ಗ್ರೇಡ್ ವ್ಯವಸ್ಥೆಯಲ್ಲಿ ಫಲಿತಾಂಶ ಘೋಷಣೆ ಮಾಡಿದೆ. ಬೆಂಗಳೂರು ದಕ್ಷಿಣ ಮತ್ತು ಯಾದಗಿರಿ ಜಿಲ್ಲೆಗೆ ಬಿ ಗ್ರೇಡ್ ಸಿಕ್ಕಿದರೆ ಉಳಿದ ಎಲ್ಲಾ ಜಿಲ್ಲೆಗಳಿಗೆ ಎ ಗ್ರೇಡ್ ಸಿಕ್ಕಿದೆ.

    ಫಲಿತಾಂಶ ವೀಕ್ಷಣೆ: ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!