35 C
Karnataka
Saturday, May 11, 2024

    ನಮೋ ಗಜಾನನ ಗಿರಿಜಾನಂದನ

    Must read

    ಇಂದು ಎಲ್ಲೆಡೆ ಗಣಪತಿ ಹಬ್ಬದ ಸಂಭ್ರಮ. ನಿಮ್ಮ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಈ ಪಾಡ್ಕಾಸ್ಟ್ ಅನ್ನು ಸಾದರ ಪಡಿಸುತ್ತಿದ್ದೇವೆ. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡತಿ ಶ್ರುತಿ  ಕೋಡನಾಡ್ ಅವರು ತಮ್ಮ ಸುಮಧುರ ಗಾಯನದಲ್ಲಿ ಗಣೇಶ ಭಕ್ತಿ ಸಂಗೀತವನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ.

    ಮೂಲತಃ ಚಿತ್ರದುರ್ಗದವರಾದ ಶ್ರುತಿ ಕೋಡನಾಡ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಮಕ ಕಲೆಯನ್ನು ಗಮಕ ಕಲಾನಿಧಿ ಶ್ರೀಮತಿ ಚಂಪಕಾ ಶ್ರೀಧರ್ ಇವರಲ್ಲಿ  ಅಭ್ಯಾಸ ಮಾಡಿದ್ದಾರೆ.ಚಿಕ್ಕವಯಸ್ಸಿನಲ್ಲೇ ತಮ್ಮ ತಾಯಿ ಗಮಕಿ ಶ್ರೀಮತಿ ಮಂಜುಳಾ ದತ್ತಾತ್ರೇಯ ಅವರಿಂದ ಗಮಕ ಕಲೆಗೆ ಪರಿಚಿತರಾಗಿರುತ್ತಾರೆ.

    ತಮ್ಮ  ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಗಮಕ ವಾಚನ ಹಾಗೂ ರೂಪಕ ಕಾರ್ಯಕ್ರಮಗಳನ್ನು  ನೀಡಿದ್ದು, ಪ್ರಮುಖವಾಗಿ ಹೊಸಳ್ಳಿಯಲ್ಲಿ ಗಮಕ ಗಂಧರ್ವ ಶ್ರೀ ಕೇಶವಮೂರ್ತಿರವರ ಸಮ್ಮುಖದಲ್ಲಿ ಗಮಕ ವಾಚನ ಮತ್ತು ೯ನೇ ಅಖಿಲ ಕರ್ನಾಟಕ  ಗಮಕ ಕಲಾ  ಸಮ್ಮೇಳನ(೨೦೧೩)ರಲ್ಲಿ ‘ಕುವೆಂಪು ರಾಮಾಯಣದರ್ಶನಂ’ ಗಮಕ ರೂಪಕದಲ್ಲಿ ಭಾಗವಹಿಸಿರುತ್ತಾರೆ.

     ಹಲವೆಡೆ ಶಾಸ್ತ್ರೀಯ ಸಂಗೀತ  ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಮತ್ತು ಆಕಾಶವಾಣಿಯಲ್ಲೂ ಹಾಡಿರುತ್ತಾರೆ.ಇವರು ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದು ನೃತ್ಯ, ನಾಟಕ, ಕರಕುಶಲ ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.

    ಪ್ರಸ್ತುತ ಶ್ರುತಿಯವರು ತಮ್ಮ ಪತಿ ಅಂಜನ್ ರಾಘವೇಂದ್ರ ಅವರೊಂದಿಗೆ ಅಮೇರಿಕಾದ  ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದು ಅಲ್ಲಿನ ಕನ್ನಡ ಸಂಘ ಹಾಗೂ ವಿವಿಧ ಸಂಸ್ಥೆಗಳಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

    ಪಾಡ್ಕಾಸ್ಟ್ ನಿರೂಪಣೆ ಭಾರತಿ ಅವರದ್ದು.

    ಆಲಿಸಿ ಪ್ರತಿಕ್ರಿಯಿಸಿ.

    spot_img

    More articles

    10 COMMENTS

    1. ಶೃತಿ ಯವರ ಹಾಡುಗಾರಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಬ್ಬಕ್ಕೆ ಶೃತಿನೇ ನಮ್ಮಗಳ ಮನೇಗೇ ಬಂದು ಹಾದಿದಹಾಗಿತ್ತು.ಧನ್ಯವಾದಗಳು ಶೃತಿ.ಭಾರತಿ ಯವರ ನಿರೂಪಣೆ ಸೊಗಸಾಗಿತ್ತು.ಹೀಗೇ ನಮಗೆ ಸಂಗೀತದ ರಸಾಯನವನ್ನು ಉಣಿಸುತ್ತಿರಿ.🙏🙏👏👏👏

    2. ಶೃತಿ ಯವರ ಹಾಡುಗಾರಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಬ್ಬಕ್ಕೆ ಶೃತಿನೇ ನಮ್ಮಗಳ ಮನೇಗೇ ಬಂದು ಹಾಡಿದಾ ಹಾಗಿತ್ತು. .ಧನ್ಯವಾದಗಳು ಶೃತಿ. ಭಾರತಿ ಯವರ ನಿರೂಪಣೆ ಸೊಗಸಾಗಿತ್ತು.ಹೀಗೇ ನಮಗೆ ಸಂಗೀತದ ರಸಾಯನವನ್ನು ಉಣಿಸುತ್ತಿರಿ.🙏🙏👏👏👏

    3. ನಮ್ಮ ಗಣೇಶ ಹಬ್ಬವನ್ನು ಇಂದಿನ ಗಾಯನ ಸಮೃದ್ಧ ಗೊಳಿಸಿತು.

    4. Solo performance by Ms.Shruthi Kodanad is amazing. The songs composed by all time greats from Purandara Dasa to Thyagaraja on Lord Ganesha has been blended and sung very well in Carnatic style with mix of Gamaka. Team Kannadapress. Com has been giving variety of good podcast by class artists and Ms.Shruti Kodanad is one among them. Very melodious and outstanding rendering of songs on Lord Ganesha.

    5. ಉತ್ತಮವಾಗಿ ಮೂಡಿ ಬಂದಿದೆ ಸುಶ್ರಾವ್ಯ ,ಸುಮಧುರ..ಕಂಠ ಕಿವಿಗೆ ಮುದ ತಂದಿತು ಅಭಿನಂದನೆಗಳು

    6. ಶ್ರುತಿ ಯವರ ಗಾಯನ ಬಹಳ ಸುಶ್ರಾವ್ಯವಾಗಿದೆ. ಕಿವಿಗೆ ಬಹಳ ಇಂಪಾದ ಹಾಡುಗಳು . ಭಾರತಿಯ ನಿರೂಪಣೆ ಚೆನ್ನಾಗಿ ಮೂಡಿಬಂದಿದೆ. ಈ ಕಾರ್ಯ ಕ್ರಮ ಕೇಳಿ ಸಂತೋಷ ವಾಯಿತು.

    7. ವಿಜಯನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿ, ವ್ಯಾಸಕೂಟ ಹಾಗೂ ದಾಸಕೂಟ ಎರಡೂ ಪ್ರಕಾರಗಳಿಗೂ ವಿಶೇಷ ಮಹತ್ವ ನೀಡಿ, ಆಚಾರ್ಯರ ತತ್ವವಾದದ ಸಿದ್ದಾಂತವನ್ನು ದೇವಭಾಷೆಯಾದ ಸಂಸ್ಕೃತವರಿಯದ, ಪಾಮರ ಜನರಿಗೆ ಅಥ೯ವಾಗುವ ಸರಳ ಕನ್ನಡ ಭಾಷೆಯಲ್ಲಿ ಪದ ಪದ್ಯ ಸುಳಾದಿ ಕೀತ೯ನೆಗಳನ್ನು ರಚಿಸಿ ಹಾಡಿ, ದೇವತಾರಾಧನೆ ಸಮಯದಲ್ಲಿ ಸಂಗೀತ ಸೇವೆಯನ್ನು ಕಡ್ಡಾಯಗೊಳಿಸಿದ, ಹರಿದಾಸ ಸಾಹಿತ್ಯದ ಹರಿಕಾರರೆಂದು, ‘ನಮ: ಶ್ರೀ ಪಾದರಾಜಾಯ ನಮಸ್ತೇ ವ್ಯಾಸಯೋಗಿನ:’ ಎಂದು ಇವರಿಬ್ಬರ ಹೆಸರನ್ನು ತೆಗೆದುಕೊಳ್ಳುತ್ತೇವೆ. ಅಂತಹ ಶ್ರೀ ವ್ಯಾಸರಾಯರು ಪುರಂದರ ದಾಸರನ್ನು ಕುರಿತು ಹೊಗಳಿದ ‘ದಾಸರೆಂದರೆ ಪುರಂದರ ದಾಸರಯ್ಯಾ,’ ಕೀತ೯ನೆಯಲ್ಲಿ ‘ಗೀತ ನತ೯ನದಿಂದ ಕೃಷ್ಣನ್ನ ಪೂಜಿಸುವ ಪೂತಾತ್ಮರು’ ಎಂದಿದ್ದಾರೆ. ಪುರಂದರ ದಾಸರು ತಮ್ಮ ಉಗಾಭೋಗ ಒಂದರಲ್ಲಿ “ಧ್ಯಾನವು ಕೃತಯುಗದಲ್ಲಿ ಯಜ್ಞಯಾಗವು ತ್ರೇತಾಯುಗದಲ್ಲಿ! ಅಚ೯ನೆ ದ್ವಾಪರದಲ್ಲಿ! ಕೀತ೯ನೆ ಮಾತ್ರದಿ ಕಲಿಯುಗದಲ್ಲಿ! ಮುಕುತಿಯನೀವ ಪುರಂದರ ವಿಠಲ” ಎಂದಿದ್ದಾರೆ.
      ಪ್ರಸ್ತುತ ವಿನಾಯಕ ಚತುರ್ಥಿಯ ಶುಭ ಅವಸರದಲ್ಲಿ, ಗಣಪತಿಯನ್ನು ಮಂತ್ರ ಸ್ತೋತ್ರ ಪುರಸ್ಸರವಾಗಿ ಆರಾಧಿಸುವ ಶುಭ ವೇಳೆಯಲ್ಲಿ ಕನ್ನಡ ಪ್ರೆಸ್.ಕಾಮ್ ನವರು ಪಾಡ್ಕಾಸ್ಟ್ ಮೂಲಕ ಶ್ರೀಮತಿ ಶೃತಿ ಕೋಡನಾಡ್ ರವರ ವಿನಾಯಕ ಭಕ್ತಿ ಗೀತೆಗಳ ಗಾಯನವನ್ನು , ಶ್ರೀಮತಿ ಭಾರತಿ ಶ್ರೀನಿವಾಸರವರ ನಿರೂಪಣೆಯೊಂದಿಗೆ ಪ್ರಸ್ತುತ ಪಡಿಸಿ, ಸಂದಭೋ೯ಚಿತವಾಗಿ ಈ ಕಾಯ೯ಕ್ರಮ ಹಮ್ಮಿಕೊಂಡಿದ್ದು ತುಂಬಾ ಅಥ೯ಪೂಣ೯ವಾಗಿತ್ತು. ಇಂತಹ ಸುಮಧುರ ಸಂಗೀತವನ್ನು ಆಸ್ವಾದಿಸಲು ಅನುವು ಮಾಡಿಕೊಟ್ಟ “ಕನ್ನಡ ಪ್ರೆಸ್.ಕಾಮ್” ತಂಡದ ಕಾರ್ಯಕ್ಕೆ ಅಭಿನಂದನೆಗಳು. ಹಾಗೆಯೇ ವಿನಾಯಕನ ಕುರಿತು ೨೫ ನಿಮಿಷಗಳ ಕಾಲ ತಮ್ಮ ಸುಮಧುರ ಕಂಠದಿಂದ ಸಂಗೀತ ಸುಧೆ ಹರಿಸಿ, ಶ್ರೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿ, ಬೇರೊಂದು ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾದ ಶ್ರೀಮತಿ ಶ್ರುತಿ ಕೋಡನಾಡರಿಗೂ ಮತ್ತು ತಮ್ಮ ದಿಟ್ಟ ಸ್ಪಷ್ಟ ನಿರೂಪಣೆಯಿಂದ ಕಾರ್ಯಕ್ರಮವನ್ನು ಕಳೆಗಟ್ಟಿಸಿ, ಸಂಗೀತ ರಸದೌತಣವನ್ನು ಉಣಬಡಿಸಿದ ಶ್ರೀಮತಿ ಭಾರತಿ ಶ್ರೀನಿವಾಸರವರಿಗೂ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇನ್ನು ಮುಂದೆ ವಿವಿಧ ವಿಷಯಗಳಿಂದ ಕೂಡಿದ ಅನೇಕ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.

    8. ರಾಘವೇಂದ್ರ ರಾವ್ ಅವರಿಗೆ ನನ್ನ ಹೃದಯ ತುಂಬಿದ ಧನ್ಯವಾದಗಳು. ನಿಮ್ಮ comment ಸಹ ಒಂದು ಲೇಖನದಂತಿದೆ. ತುಂಬಾ ವಿಷಯಗಳನ್ನು ತಿಳಿಸಿದ್ದೀರಿ. ಎಲ್ಲರ ಸಹಕಾರ,ಸಲಹೆ,ಸೂಚನೆಗಳು ನಮಗೆ ತುಂಬಾ ಮುಖ್ಯ. ಎಲ್ಲರ ಅಭಿಮಾನ ಹೀಗೆ ಇರಲಿ.

    LEAVE A REPLY

    Please enter your comment!
    Please enter your name here

    Latest article

    error: Content is protected !!