26.2 C
Karnataka
Sunday, May 12, 2024

    ಎರಡನೇ ವರ್ಷಕ್ಕೆ ಕನ್ನಡಪ್ರೆಸ್.ಕಾಮ್

    Must read

    ಪ್ರಿಯ ಓದುಗರೇ,

    ಒಂದು ವರ್ಷದ ಹಿಂದೆ ಇದೇ ದಿನ. ಆಗಷ್ಟೇ ಲಾಕ್ ಡೌನ್ ತೆರವಾಗಿ ಚಟುವಟಿಕೆಗಳು ಶುರುವಾಗುತ್ತಿದ್ದ ಸಮಯ. ವರ್ಕ್ ಫ್ರಮ್ ಹೋಮ್ ಗಳು, ಆನ್ ಲೈನ್ ತರಗತಿಗಳು , ಪರೀಕ್ಷೆ ನಡೆಯುವುದೋ ಇಲ್ಲವೋ ಗೊಂದಲ ಎಲ್ಲವೂ ಈಗ ಹೇಗಿದಿಯೋ ಆಗಲೂ ಹಾಗೆಯೇ ಇತ್ತು. ಆದರೆ ಸ್ವಲ್ಪ ದಿನದಲ್ಲೇ ಪರಿಸ್ಥಿತಿ ಮೊದಲಿನಂತೆ ಆಗುವ ಆಶಾ ಭಾವನೆಯಂತೂ ಇತ್ತು.

    ಇಂಥ ಸಂದರ್ಭದಲ್ಲೇ ವರ್ಷದ ಹಿಂದೆ -ಮೇ 29,2020- ನಾನು ಕನ್ನಡಪ್ರೆಸ್.ಕಾಮ್ ಅನ್ನು ಶುರುಮಾಡಿದ್ದು. ಹಿರಿಯ ನಿರ್ದೇಶಕ ಯೋಗರಾಜ ಭಟ್ಟರು ಲೋಕಾರ್ಪಣೆಗೊಳಿಸಿದ್ದರು. ಆ ದಿನ ಬರೆದ ಸಂಪಾದಕೀಯದಲ್ಲಿ ಬರೆದಿದ್ದ ಕೆಲ ಸಾಲು ಹೀಗಿತ್ತು….ಶುದ್ಧ ಪತ್ರಿಕೋದ್ಯಮದ ಆಶಯದೊಂದಿಗೆ ಕನ್ನಡಪ್ರೆಸ್.ಕಾಮ್ ಆರಂಭವಾಗುತ್ತಿದೆ. ನಿಮ್ಮ ಬೆಂಬಲ ಸದಾ ಇರಲಿ. ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ಕನ್ನಡಪ್ರೆಸ್ . ಕಾಮ್ ಅನ್ನು ನಿಮ್ಮ ಮಡಿಲಿಗೆ  ಹಾಕುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

    ಆದರೆ ವರ್ಷ ಕಳೆದರೂ ಕೋವಿಡ್ ಕಾರ್ಮೋಡ ಚದುರಿಲ್ಲ. ಇನ್ನೇನು ಮೋಡ ಸರಿಯುತ್ತಿದೆ ಎಂಬ ಸಂದರ್ಭದಲ್ಲಿ ಎರಡನೇ ಅಲೆ ಅಬ್ಬರಿಸಿತು. ಹೆಚ್ಚಿನ ಅವಾಂತರಗಳನ್ನೇ ಮಾಡಿ ಸಧ್ಯ ತಣ್ಣಗಾಗುವ ಲಕ್ಷಣಗಳನ್ನು ತೋರುತ್ತಿದೆ. ಈ ಸಂದರ್ಭದಲ್ಲಿ ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ನಾವು ಎರಡನೇ ವರ್ಷಕ್ಕೆ ಅಡಿ ಇಡುತ್ತಿದ್ದೇವೆ. ಈ ಬಾರಿ ನೂರಕ್ಕೂ ನೂರಷ್ಟು ಕೋವಿಡ್ ದೂರವಾಗುತ್ತದೆ ಮತ್ತೆ ಅದು ಮತ್ತೆಂದು ಮನುಕುಲವನ್ನು ಕಾಡುವುದಿಲ್ಲ ಎಂಬ ವಿಶ್ವಾಸವಂತೂ ಇದೆ.

    ಈ ಒಂದು ವರ್ಷದಲ್ಲಿ ನಾನು ಎಣಿಸಿದಕ್ಕಿಂತಲೂ ಹೆಚ್ಚು ಪ್ರೀತಿಯಿಂದ ಕನ್ನಡಪ್ರೆಸ್.ಕಾಮ್ ಅನ್ನು ನೀವು ಪ್ರೀತಿಸಿದ್ದೀರಿ. ಒಪ್ಪಿಕೊಂಡಿದ್ದೀರಿ. ಮೆಚ್ಚಿದ್ದೀರಿ. ಕಾಮೆಂಟ್ ಮಾಡಿದ್ದೀರಿ. ಇದಕ್ಕಾಗಿ ಮೊದಲಿಗೆ ನಿಮ್ಮೆಲ್ಲರಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು.

    ಈ ಒಂದು ವರ್ಷದ ಅವಧಿಯಲ್ಲಿ ಡಿಜಿಟಲ್ ಮಾಧ್ಯಮದ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡಿದ್ದೇವೆ. ಪಾಡ್ಕಾಸ್ಟ್ ಅನ್ ಕನ್ನಡ ಪತ್ರಿಕೋದ್ಯಮಕ್ಕೆ ಪರಿಚಯಿಸಿದ ಹೆಮ್ಮೆಯೂ ನಮಗಿದೆ. ಆಡಿಯೋ ವಿಡಿಯೋ ಮತ್ತು ಟೆಕ್ಸ್ಟ್ ಈ ಮೂರು ಸಾಧ್ಯತೆಗಳನ್ನು ಬಳಸಿಕೊಂಡಿದ್ದೇವೆ. ಭಾರತ ಮಾತ್ರವಲ್ಲ ದೂರದ ಇಂಗ್ಲೆಂಡ್, ಅಮೆರಿಕಾ , ಕೆನಡಾ , ಆಸ್ಛ್ರೇಲಿಯಾ ಮತ್ತು ಕೊಲ್ಲಿ ರಾಷ್ಷ್ರಗಳಲ್ಲೂ ನಮ್ಮ ಓದುಗ ಬಳಗ ವಿಸ್ತರಿಸಿದೆ.

    ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಲೇಖಕ ಬಂಧುಗಳು ನಾನು ಕೇಳಿದಾಗ, ಕೆಲವು ವೇಳೆ ನಾನು ಕೇಳುವ ಮುನ್ನವೇ ತಮ್ಮ ವಿದ್ವತ್ ಪೂರ್ಣ ಲೇಖನಗಳನ್ನು ಬರೆದು ಕಳಿಸಿದ್ದಾರೆ. ವೈಯಕ್ತಿಕವಾಗಿ ನಾನು ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಲು ಹೊರಟರೆ ಪಟ್ಟಿ ದೊಡ್ಡದಾಗುತ್ತದೆ. ಅವರಿಗೆಲ್ಲಾ ನಾನು ಈ ಮೂಲಕ ಹೃದಯ ತುಂಬಿದ ಧನ್ಯವಾದ ಅರ್ಪಿಸುವೆ. ಕನ್ನಡಪ್ರೆಸ್ ನ ಈ ಯಾತ್ರೆಯಲ್ಲಿ ನಿಮ್ಮ ಕೊಡುಗೆ ದೊಡ್ಡದು ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ ನಿಮ್ಮ ಲೇಖನಗಳಿಂದ ಕನ್ನಡಪ್ರೆಸ್.ಕಾಮ್ ಮತ್ತಷ್ಟು ಶ್ರೀಮಂತವಾಗಲಿ ಎಂದಷ್ಟೇ ಹೇಳಬಲ್ಲೆ.

    ಮುಂದಿನ ದಿನಗಳಲ್ಲಿ ಈ ಜಾಲತಾಣವನ್ನು ಮತ್ತಷ್ಟು ವೈಶಿಷ್ಟಪೂರ್ಣವಾಗಿ ಮಾಡಬೇಕೆಂಬ ಹಂಬಲವಂತೂ ಇದೆ. ಅದಕ್ಕಾಗಿ ಈ ಜಾಲತಾಣಕ್ಕೆ ಸಾಂಸ್ಥಿಕ ಸ್ವರೂಪ ಕೊಡುವ ಕೆಲಸ ಆರಂಭಿಸಿದ್ದೇನೆ. ನಾಡಿನ ಕೆಲವು ಹೆಸರಾಂತ ಪತ್ರಕರ್ತರು ಕೈ ಜೋಡಿಸುವರಿದ್ದಾರೆ. ಅದರ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವೆ.

    ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ. ನಮ್ಮ ಯಾತ್ರೆಯೆ ಎರಡನೇ ವರ್ಷದ ಮೊದಲ ದಿನವಾದ ಇಂದು ಶುದ್ಧ ಪತ್ರಿಕೋದ್ಯಮಕ್ಕೆ ನಮ್ಮನ್ನು ಪುನಃ ಸಮರ್ಪಿಸಿಕೊಳ್ಳುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳಿಗೆ ಎಂದಿನಂತೆ ಸದಾ ಸ್ವಾಗತ.

    ಶ್ರೀವತ್ಸ ನಾಡಿಗ್,ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    25 COMMENTS

    1. ನನ್ನ ಹೃದಯ ತುಂಬಿದ ಶುಭಾಶಯಗಳು. Kannadapress.com ಹಿಮಾಲಯ ಪರ್ವತದಷ್ಟು ಎತ್ತರಕ್ಕೆ ಬೆಳೆದು ದೇಶವಿದೇಶಗಳಲ್ಲೂ ತನ್ನ ಕಂಪು ಬೀರಲಿ ಎಂದು ಹಾರೈಸುವೆ.

    2. Congratulations on completing one year of successful publication of unbiased, high quality and unique digital platform to kannada readers and admirers all over the world. Wish some of the best collection from writers of previous editions and future editions can also be published in English which can be reached for wider readers .
      Wish all the best for sucess of kannadapress.com for bright future and prosperity.

    3. ಹಾರ್ಧಿಕ ಶುಭಾಶಯ ವತ್ಸ. ಕನ್ನಡ ಪ್ರೆಸ್.ಕಾಮ್ ಇನ್ನೂ ಎತ್ತರಕ್ಕೇರಲಿ. ಅಲ್ಪಾವಧಿಯಲ್ಲೆ ಸಾಕಷ್ಟು ಉನ್ನತ ಪ್ರಯತ್ನಗಳನ್ನು ಮಾಡಿ ಓದುಗರ ಮನ್ನಣೆ ಗಳಿಸಿದೆ

    4. Hearty Congratulations for successfully completing one year in the field of online journalism . I wish that Kannada press.com would reach Himalayan heights in its quality and popularity in the days to come.All the best for your future endeavours.

    5. ಸಂಪಾದಕರ ಸಾಹಸಕ್ಕೆ ಶುಭಾಶಯಗಳು. ಈ ಒಂದರ ಪಕ್ಕ ಇನ್ನೂ ಎರಡು ಸೊನ್ನೆ ಸೇರಲಿ. ಶುಭಾಶಯಗಳು ಸರ್‌ 💐💐💐

    6. 👏👏 congratulations . I wish Kannadapress to have many more milestones and many such success ful years ahead .
      Thanks for sharing wonderful and useful articles 🙏🙏

    7. Congratulation and best of luck for the future.hope u will continue to give neutral news and articles based on facts.

    8. ಸಂಪಾದಕರಾಗಿರುವ ಶ್ರೀವತ್ಸ ನಾಡಿಗ್ ಅವರಿಗೆ ಶುಭಾಶಯಗಳು.⚘🌷
      ಕನ್ನಡ ಪ್ರೆಸ್.ಕಾಂ.ತಮ್ಮ ನೇತೃ ತ್ವದಲ್ಲಿ ಮುಗಿಲೆತ್ತರಕ್ಕೆ ಏರಲಿ, ಪ್ರಕಾಶಿಸಲಿ ಎಂದು ಆಶಿಸುತ್ತಾ, ಅಭಿನಂದಿಸುತ್ತಾ, ಶುಭಕೋರುವೆ.👍👏

    9. ಹಾರ್ದಿಕ ಶುಭಾಶಯಗಳು.ಕನ್ನಡ ಪ್ರೆಸ್.ಕಂ.ಇನ್ನು ಉತ್ತುಂಗ ಶಿಖರ ದಷ್ಟು ಎತ್ತರಕ್ಕೆ ಬೆಳೆ ಯಲಿ…ಇದು ನಮ್ಮ ಶುಭಕಾಮನೆ….

    10. ಕೋವಿಡ್ ಸಮಯದಲ್ಲೂ ಯಾವುದೇ ಇನ್ಫೆಕ್ಷನ್ಗೆ (ಆರ್ಥಿಕ ಸಂಕಷ್ಟ) ಒಳಗಾಗದೆ… ಬಲಿಷ್ಠವಾಗಿ ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಕನ್ನಡ ಪ್ರೆಸ್.ಕಾಂ ಗೆ ಶುಭಾಶಯಗಳು… ಈ ಬಲಿಷ್ಠತೆಯ ಹಿಂದೆ ನಿಮ್ಮ ಶ್ರಮ, ಚದರದೇ ಇರುವ ನಿಮ್ಮ ಮನಸ್ಥರ್ಯ ಹಿಂದೆ ನಿಮ್ಮ ಸ್ನೇಹಿತರ ಸಹಾಯ / ಬೆಂಬಲ ಎಷ್ಟು ಅನ್ನೋದು ಊಹಿಸಬಹುದು… ಈ ನಂಬಿಕೆ ನಿಮ್ಮ ಶ್ರಮವನ್ನು, ಸಂಸ್ಥೆಯನ್ನು ಮತ್ತಷ್ಟು ಬಲವಾಗಿಸಲು ಯಾವುದೇ ಅನುಮಾನವಿಲ್ಲ…. ಶುಭವಾಗಲಿ

    11. ಅಭಿನಂದನೆಗಳು ಸರ್.ಕನ್ನಡಪ್ರೆಸ್.ಕಾಂ ಹೀಗೆಯೆ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾಸಾಗಲಿ ಎಂದಯ ಹಾರೈಸುವೆ.

    12. ಅಭಿನಂದನೆಗಳು ಸರ್.ಕನ್ನಡಪ್ರೆಸ್.ಕಾಂ ಹೀಗೆಯೆ ಯಶಸ್ಸಿನ‌ ಮೆಟ್ಟಲ್ಲನ್ನು ಏರುತ್ತಾ ಸಾಗಲಿ ಎಂದು ಹಾರೈಸುವೆ.

    13. ಆಗಲೇ ಒಂದು ವರ್ಷ ಆಯಿತು.ಒಂದು ವರ್ಷದ ಅವಧಿಯಲ್ಲಿ ಬಂದ ಲೇಖನಗಳು, ಜನರಿಗೆ ತಲುಪಿಸುವ ನಿನ್ನ ಪ್ರಯತ್ನಕ್ಕೆ ಒಂದು ವರ್ಷ.ಶುಭವಾಗಲಿ ವತ್ಸ. ಇನ್ನಷ್ಟು ಮತ್ತಷ್ಟು ಮಗದಷ್ಟು ಯಶಸ್ಸು ಸಿಗಲಿ.ದೇಶ ವಿದೇಶಗಳಲ್ಲೂತನ್ನ ಕಂಪು ಬೀರಲಿ. ಶುಭವಾಗಲಿ ವತ್ಸ.

    14. ವಾರ್ಷಿಕೋತ್ಸವದ ಸಂಭ್ರಮಕ್ಕೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಈ ಪ್ರಯತ್ನ ಇನ್ನೂ ಹೆಚ್ಚು ಬೆಳೆಯಲಿ. ಶುಭಕಾಮನೆಗಳು.

    15. ಕನ್ನಡಪ್ರೇಸ್. ಕಾಮ್ ಯಶಸ್ವಿ ಯಾಗಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಸರ್ವರಿಗೂ ಹಾರ್ದಿಕ ಅಭಿನಂದನೆಗಳು 🙏🙏

    16. Thank you Sir. Congratulations for successful completion of one year and stepping into second year. I wish let the journey of true journalism be continued throughout. I wish you many more success.

    LEAVE A REPLY

    Please enter your comment!
    Please enter your name here

    Latest article

    error: Content is protected !!