33.6 C
Karnataka
Tuesday, May 14, 2024

    ಪಠ್ಯಪುಸ್ತಕ ಸ್ವಯಂ ಅಧ್ಯಯನದಿಂದ ಜ್ಞಾನಾರ್ಜನೆ

    Must read

    ಕೊರೊನಾ 1 ಹಾಗೂ 2 ಅಲೆಯ ಭೀಭತ್ಸತೆ ಶಿಕ್ಷಣ ವ್ಯವಸ್ಥೆಯನ್ನು ಅತಂತ್ರಗೊಳಿಸಿದೆ. ಶೈಕ್ಷಣಿಕ ವರ್ಷದ ಕಾರ್ಯಯೋಜನೆಗಳಿಗೆ ಹಿಂದೆಂದೂ ಕಾಣದ ಹಿನ್ನಡೆ ಉಂಟಾಗಿದೆ. ಶಿಕ್ಷಣಕ್ಕಿಂತ ಜೀವ ಅಮೂಲ್ಯ. ಜೀವ ಇದ್ದರೆ ಜೀವನ. ಇಂತಹ ಸಂದಿಗ್ಧತೆಯಲ್ಲಿ 2020-21 ಸಾಲಿನ ಎಲ್ಲಾ ಹಂತದ ಶಿಕ್ಷಣ ವ್ಯವಸ್ಥೆ ಅನಿಶ್ಚಿತತೆಯಲ್ಲಿದೆ. ಯಾರನ್ನೂ ಹೊಣೆಯಾಗಿಸದ ಸ್ಥಿತಿಯಲ್ಲಿ ಮಕ್ಕಳಿಗೆ ಸ್ವ ಅಧ್ಯಯನದ ಆಸಕ್ತಿ ಚಿಗುರೊಡೆಯುವಂತೆ ಪೋಷಿಸುವುದು ಪೋಷಕರ ಕರ್ತವ್ಯ.

    ಪರೀಕ್ಷೆ ಇಲ್ಲ, ಓದೂ ಇಲ್ಲ ಎಂಬ ತಾತ್ಸಾರದಲ್ಲಿ ಜಡತೆ, ನಿಷ್ಕ್ರಿಯತೆ, ಮುಂದೂಡುವ ಪ್ರವೃತ್ತಿ ಮೈಗೂಡುತ್ತವೆ. ಸದಾ ಚಂಚಲಗೊಳ್ಳುವ ಮನಸ್ಸು ಅನಾಹುತಗಳ ಸೃಷ್ಟಿಸುವುದ ಖಚಿತ. ಏಕಾಗ್ರತೆ ಕ್ಷೀಣಿಸಿ, ಅನಿಯಂತ್ರಿತ ಭಾವಾವೇಶದಲ್ಲಿ ನೈತಿಕ ಮೌಲ್ಯಗಳ ಕೊರತೆ ಎದ್ದು ಕಾಣತ್ತಿದೆ.  ಮನೆಯಲ್ಲೇ ಉಳಿದ ಮಕ್ಕಳು ಓದಿನಿಂದ ವಿಮುಖಗೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜ್ಞಾನ ಸಂಪಾದನೆಯ ಅನಿವಾರ್ಯತೆಯಲ್ಲಿ ಪ್ರತ್ಯಕ್ಷ ಶಿಕ್ಷಣದಿಂದ(formal education) ವಂಚಿತ ಮಕ್ಕಳಿಗೆ ಸ್ವ ಅಧ್ಯಯನ ಭವಿಷ್ಯ ರೂಪಿಸಬಲ್ಲುದು.

    1 ರಿಂದ 10 ನೆ ತರಗತಿ ಮಕ್ಕಳಿಗೆ ಪಠ್ಯಪುಸ್ತಕಗಳಿವೆ. ಬೋಧಿಸದ ಪಠ್ಯವನ್ನು ‘ಪಾಠ ಮಾಡಿಲ್ಲ’ ಅದು ಅಪರಚಿತ ಎಂಬ ಭ್ರಮೆ ಬಿಡಬೇಕು. ಪಠ್ಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಿಕ್ಷಕರು ಅನಕ್ಷರಸ್ಥ ಪೋಷಕರೊಂದಿಗೆ ಸಂವಾದ ಸೃಷ್ಟಿಸುವ ಮೂಲಕ ಮಕ್ಕಳಗೆ ಪಠ್ಯಪುಸ್ತಕ ಅಭ್ಯಾಸಿಸುವ ಗೀಳು ಹಚ್ಚಬೇಕು. ಇದೆಲ್ಲಾ ಸಾಧ್ಯವಾ…ಎಂಬ ಹತಾಶೆ ಸಲ್ಲದು. ಪಠ್ಯ ಪುಸ್ತಕ ಸ್ಪರ್ಶಿಸುವ ಓದು ಮನೋಕೋಶದಲ್ಲಿ ಚಿರಸ್ಥಾಯಿ. ಅಧ್ಯಾಯಗಳ ಅಡಿಪಾಯ ಹೆಕ್ಕುವ ಮೂಲಕ ಸ್ವಯಂ ಕಲಿಕೆಗೆ ನಾಂದಿ ಹಾಡಬಹುದು.

    1. ರಿಂದ 5 ನೇ ತರಗತಿ ಮಕ್ಕಳು ಶಾಲೆಯಿಂದ ದೂರ ಉಳಿದು ಕಲಿತದ್ದನ್ನು ಮರೆತಿದ್ದಾರೆ. ಸ್ವಯಂ ಪಠ್ಯ ಓದಿಗೆ ಕೆಲ ಸಲಹೆಗಳನ್ನು ಪಾಲಿಸಿ.ಅಧ್ಯಾಯಗಳನ್ನು ಓದುವ ಉದ್ದೇಶ ಸ್ಪಷ್ಟತೆ ಇರಲಿ. ರಚನಾತ್ಮಕತೆ ಪ್ರೇರಿಪಿಸುವ ಪ್ರಶ್ನೆಗಳು, ಕಿರು ಉತ್ತರ ಪ್ರಶ್ನೆಗಳು ಹಾಗೂ ದೀರ್ಘ ಉತ್ತರ ಪ್ರಶ್ನೆಗಳನ್ನು ವಿಂಗಡಿಸಿ ಉತ್ತರಿಸುವ ತಾದಾತ್ಮ್ಯ ಇರಲಿ. ಪಠ್ಯದ ಓದಿನ ಛಾಪು ಮೂಡಿಸಲು ಗಟ್ಟಿ ಧ್ವನಿಯಲ್ಲಿ ಓದಿ. ಆನಂತರ ಸಾಧ್ಯಾವಾದರೆ ಸಮೀಪದ ಪದವೀಧರರಲ್ಲಿ ಚರ್ಚೆ ನಡೆಸಿ.

    2. ಸುದೀರ್ಘ ಅಧ್ಯಾಯದಲ್ಲಿನ ಸಾರವನ್ನು ಮನನ ಮಾಡಿಕೊಳ್ಳಿ. ಶಿರೋನಾಮೆ, ಉಪ ಶಿರೋನಾಮೆಗಳನ್ನು ಗ್ರಹಿಸಿ. ಪಠ್ಯ ಪುಸ್ತಕಗಳೊಂದಿಗೆ ನಿಮ್ಮ ಜೊತೆಗಾರನಂತೆ ಸ್ವೀಕರಿಸಿ. ಈ ಅಂಶಗಳತ್ತ ಪೋಷಕರ ಗಮನ ಹರಿಸಬೇಕು. ತಮ್ಮ ಮಕ್ಕಳಲ್ಲಿ ಧನಾತ್ಮಕ ಬದಲಾವಣೆಗೆ ಪ್ರೇರಕರಾಗಬೇಕು.

    3.ದೈಹಿಕ ಶಕ್ತಿ ಗರಿಷ್ಟತೆ ಸಮಯ ಮುಂಜಾವಿನಲ್ಲಿ ಪಠ್ಯ ಓದಲು ರೂಢಿಸಿಕೊಳ್ಳಿಬೇಕು. 10 ರಿಂದ 15 ನಿಮಿಷಗಳ ಸಮಯವನ್ನು ಚಿಕ್ಕ ವಿಭಾಗ ಮಾಡಿಕೊಂಡ ಓದಿ. ಓದಿದ್ದನ್ನು ಚಿತ್ರಗಳ ರೂಪಕದಲ್ಲಿ ಮನನ ಮಾಡಿ. ಇದರಿಂದ ಜ್ಞಾಪಕ ಶಕ್ತಿ ಶಾಶ್ವತವಾಗಿ ಉಳಿಯಲಿದೆ.

    4.ಕಲಿಕೆ ಸೃಜನಾತ್ಮಕತೆಗೆ ದಾರಿ, ಸೃಜನಾತ್ಮಕತೆ ಚಿಂತನೆಗೆ ಮಾರ್ಗಸೂಚಿ. ಚಿಂತನೆಯಿಂದ ಜ್ಞಾನ ವೃದ್ಧಿ. ಜ್ಞಾನದಿಂದ ಮಹಾನ್ ವ್ಯಕ್ತಿಗಳಾಗಲು ಸಾಧ್ಯ

    5. ಗುರಿ, ನಿರಂತರ ಜ್ಞಾನ ಸಾಧನೆ, ಕಠಿಣ ಪರಿಶ್ರಮ, ಗ್ರಹಿಕೆ ಮಂತ್ರಗಳನ್ನು ಪಠಿಸುವ ಮೂಲಕ ಸ್ವಾವಲಂಬನೆ ಪಡೆಯಬೇಕು. ಪಠ್ಯದ ಅಭ್ಯಾಸ ಪ್ರತಿಗಳಲ್ಲಿ ಅಧ್ಯಾಯದ ಪ್ರಶ್ನೆಗಳಿಗೆ ಉತ್ತರ ದಾಖಲಿಸಬೇಕು. ನಿರಂತರ ಓದಿದ್ದನ್ನು ಬರೆಯುವ ಮೂಲಕ ಕಲಿಕೆ ಸ್ಥಿರಗೊಳಿಸಬೇಕು. ಸಂಬಂಧಪಟ್ಟ ಅಧ್ಯಾಯಗಳ ಚಿತ್ರಸಹಿತ ವಿವರಣೆಗೆ ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ವಯಂ ಕಲಿಕೆಯಲ್ಲಿ ಸಂತೃಪ್ತಿ ಸಿಗಲಿದೆ.

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    15 COMMENTS

    1. ವರದಿಯು ಉತ್ತಮವಾಗಿದೆ ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗಳು ಅತ್ಯಂತ ದುಸ್ತರವಾಗಿದೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪೋಷಕರು ಮಕ್ಕಳ ಕಲಿಕೆಗೆ ದೃಢೀಕರಿಸುವುದು ಯಾರೂ ಯೋಚನೆ ಮಾಡುತ್ತಿಲ್ಲ ಹಾಗೂ ಕಲಿಕೆಯಲ್ಲಿ ದೊಡ್ಡ ಮಕ್ಕಳು ಪಠ್ಯಪುಸ್ತಕವನ್ನು ಬಿಟ್ಟು ಬೇರೆ ಕೆಲಸಕ್ಕೆ ಹೊಂದಿಕೊಂಡು ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿ ಕೊಳ್ಳುತ್ತಿದ್ದಾರೆ ಶೈಕ್ಷಣಿಕವಾಗಿ ಯಾರೂ ಚಿಂತೆ ಮಾಡುತ್ತಿಲ್ಲ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರನ್ನು ಎಚ್ಚರಿಸಿ ಮತ್ತು ಪೋಷಕರು ಮತ್ತು ಶಿಕ್ಷಕರು ದಿನಗಳಲ್ಲಿ ಮಗುವಿನ ಕಲಿಕೆಗೆ ಹೀಗೆ ಸಹಕಾರಿಯಾಗಬಹುದು ಮೊದಲ ಉತ್ತಮ ವರದಿ ಮಾಡಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು.

    2. ಬಹಳ ಅದ್ಬುತವಾಗಿ ಸಲಹೆಗಳನ್ನು ನೀಡಿದ್ದೀರ ಸರ್ ಈ ಬರಹದಲ್ಲಿ ,ಈ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಲ್ಲಿ ಖಂಡಿತವಾಗಿ ವಿದ್ಯಾರ್ಥಿಗಳ ಜ್ಞಾನ ಅತ್ಯುತ್ತಮ ಮಟ್ಟದಲ್ಲಿ ಹೆಚ್ಚಾಗುತ್ತದೆ .
      ಈ ಲೇಖನ ಓದುತ್ತಿದ್ದಾಗ ನನಗೆ ನನ್ನ ಶಾಲಾ ಶಿಕ್ಷಣದ ನೆನಪಾಗುತ್ತಿತ್ತು …ಯಾಕಂದರೆ ನನ್ನ ಕಲಿಕೆಯು ಹಾಗೆ ಇತ್ತು .
      ನನ್ನ 6 ನೇ ತರಗತಿ ಪರೀಕ್ಷೆ ಮುಗಿದ ತಕ್ಷಣ 7 ನೇ ತರಗತಿಯ ಪಠ್ಯ ಪುಸ್ತಕಗಳನ್ನು ಓದಲು ಹಚ್ಚುತ್ತಿದ್ದರು ನನ್ನ ತಂದೆ .ಅದೇ ರೀತಿ ಎಲ್ಲ ತರಗತಿ ಪರೀಕ್ಷೆ ಮುಗಿದ ತಕ್ಷಣ ಮುಂದಿನ ತರಗತಿ ಪುಸ್ತಕ ಓದುತ್ತಿದ್ದೆ.ಇದರಿಂದ ಓದುವುದರ ಬಗ್ಗೆ ಆಸಕ್ತಿ ಎಂದಿಗೂ ಕಡಿಮೆ ಆಗುತ್ತಿರಲಿಲ್ಲ ಮತ್ತು ಪುಸ್ತಕ ದ ಹಿಂದಿರುವ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ನೆನಪಿನ ಶಕ್ತಿಯು ಹೆಚ್ಚುತ್ತದೆ.
      ನಿಮ್ಮ ಬರಹ ಅತ್ತ್ಯುತ್ತಮವಾಗಿದೆ ಸರ್ ಒಬ್ಬ ಶಿಕ್ಷಕ ಪಾಠ ಮಾಡುವುದು ಮಾತ್ರವಲ್ಲದೆ ಹೀಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾಗಿರುವ ಸಲಹೆ ನೀಡಿ ನಿಮ್ಮ ಶಿಕ್ಷಕ ಎನ್ನುವ ಪದವಿಗೆ ಸಂಪೂರ್ಣವಾಗಿ ನ್ಯಾಯ ಸಲ್ಲಿಸುತ್ತಿದ್ದೀರಾ…‌ಅನಂತ ಧನ್ಯವಾದಗಳು ನಿಮಗೆ🙏

    3. ಚೆನ್ನಾಗಿದೆ, ಜೊತೆಗೆ ಪೋಷಕರು ಮಕ್ಕಳ ಜೊತೆಯಲ್ಲಿ ಸಮಯವನ್ನು ಕಳೆದು ಅವರ ಜ್ಞಾನ ರ್ಜನೆ ಗೆ ಪೂರಕ ವಾಗಿ ಇರಬೇಕು. ಅವರಿಗೆ ತಿಳಿದಮಟ್ಟಿಗೆ ಮಕ್ಕಳಿಗೆ ಅದನ್ನ ಕಲಿಸುವ ಪ್ರಯತ್ನ ಮಾಡಬೇಕು ಅಲ್ವಾ.

    4. Certainly sir,this younger generations are blessed with all the facilities especially ICT,which has helped them to get all the required information at their finger tips.As a parent and teacher,we need to motivate them for self learning.

    5. ಇಂದಿನ ದಿನಗಳಿಗೆ ಪ್ರೇರಣಾದಾಯಕ ಬರಹ

    6. ತುಂಬಾ ಅರ್ಥಪೂರ್ಣ ಲೇಖನ. ಈಗಿನ ಪ್ರಸಕ್ತ ವಾತಾವರಣಕ್ಕೆ ಉಪಯುಕ್ತ ವಾಗಿದೆ. ಈ ಮಹಾಮಾರಿ ರೋಗ ಬಂದು ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಶಿಕ್ಷಣ ದ ವಿಷಯಕ್ಕೆ ಬಂದರಂತೂ ಕೇಳುವುದೇ ಬೇಡ. ಶಾಲೆ ಇಲ್ಲದೆ ಮನೆಯಲ್ಲೇ ಇರುವುದರಿಂದ ಮಕ್ಕಳಿಗೆ ಜಡತ್ವ ಬಂದಿರುವುದು 100ಕ್ಕೆ 100% ನಿಜ. ನೀವು ಕೊಟ್ಟಿರುವ ಸಲಹೆ ತುಂಬಾ ಅಮೂಲ್ಯ. ಇದನ್ನು ಎಲ್ಲ ಪೋಷಕರು ತಪ್ಪದೆ ಪಾಲಿಸಿದರೆ ಮಕ್ಕಳು ಅಭ್ಯಾಸದಿಂದ ವಿಮುಖ ರಾಗದೆ ಇರುವುದು ತಪ್ಪುತ್ತದೆ. ವಿಪಿ ಧನ್ಯವಾದಗಳು. ಇಂತ ಉತ್ತಮ ಲೇಖನ ನೀಡಿದಕ್ಕೆ 🙏🙏

    7. ಒಳ್ಳೆಯ ಮಾಹಿತಿ. ಈ ಪರಿಸ್ಥಿತಿ. ಗೇ ಉಪಯುಕ್ತ ಲೇಖನ. ಎಲ್ಲರೂ ಪಾಲಿಸಿದರೆ ಮಕ್ಕಳ ಭವಿಷ್ಯ ಉತ್ತಮ . ಧನ್ಯವಾದಗಳು 🙏

    LEAVE A REPLY

    Please enter your comment!
    Please enter your name here

    Latest article

    error: Content is protected !!