33.6 C
Karnataka
Friday, May 10, 2024

    ಪುಸ್ತಕ ರೂಪದಲ್ಲಿ ಕೋವಿಡ್ ಡೈರಿ; ಸಾವಣ್ಣ ಪ್ರಕಾಶನದ ಕೊಡುಗೆ

    Must read

    ಕನ್ನಡ ಪ್ರೆಸ್.ಕಾಮ್ ನಲ್ಲಿ 25 ವಾರಗಳ ಕಾಲ ಪ್ರಕಟವಾಗಿ ಅಪಾರ ಓದುಗರನ್ನು ಸಂಪಾದಿಸಿದ್ದ ಡಾ. ಪ್ರೇಮಲತ ಬಿ ಅವರ ಜನಪ್ರಿಯ ಅಂಕಣ ಬರಹ ಕೋವಿಡ್ ಡೈರಿ ಇದೀಗ ಮತ್ತಷ್ಟುಸಮಗ್ರ ಅಪ್ ಡೇಟ್ ನೊಂದಿಗೆ ಪುಸ್ತಕ ರೂಪದಲ್ಲಿ ಹೊರ ಬರುತ್ತಿದೆ. ನಾಡಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಹೊರ ತರುತ್ತಿದೆ.

    ಈ ವರುಷ ಮನುಕುಲವನ್ನು ವಿಧ ವಿಧವಾಗಿ ಕಾಡುತ್ತಿರುವ ಕೊರೋನಾ ಎಂಬ ಮಹಾರೋಗದ ಸಮಗ್ರ ಚರಿತ್ರೆಯನ್ನು ಈ ಕೃತಿಯಲ್ಲಿ ಡಾ. ಪ್ರೇಮಲತ ತೆರೆದಿಟ್ಟಿದ್ದಾರೆ.  ಕೋವಿಡ್ 19 ಎಂಬ ವೈರಸ್ ಕಣ್ಣಿಗೆ ಕಾಣದಿದ್ದರೂ ಅದು ಇಡೀ ಜಗತ್ತನ್ನೆ ಅಲ್ಲಾಡಿಸಿದ್ದು ಈಗ ಇತಿಹಾಸ. ಕೊರೋನಾ ಕೇವಲ ಒಂದು ರೋಗವಷ್ಟೇ ಅಲ್ಲ ಅದು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಕಲಿಸಿದ  ಪಾಠ ದೊಡ್ಡದು. ಅದೆಲ್ಲವನ್ನೂ ಈ ಹೊತ್ತಿಗೆ ವಿಶ್ಲೇಷಿಸಿದೆ.

    ಪುಸ್ತಕ ರೂಪದಲ್ಲಿ ಬರುತ್ತಿರುವುದರಿಂದ ಮಾಹಿತಿಯನ್ನು ಮತ್ತಷ್ಟು ಅಪ್ ಡೇಟ್ ಮಾಡಿದ್ದೇನೆ. ಓದುಗರಿಗೆ ಈ ಕೃತಿ ಕೋವಿಡ್ ಬಗ್ಗೆ ಸಮಗ್ರ ಮಾಹಿತಿ ನೀಡುವ ಗ್ರಂಥವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದು ಲೇಖಕಿ ಪ್ರೇಮಲತ ಅಭಿಪ್ರಾಯ ಪಟ್ಟಿದ್ದಾರೆ. ಥಟ್ ಅಂತ ಹೇಳಿ ಖ್ಯಾತಿಯ ಲೇಖಕ ಡಾ. ನಾ .ಸೋಮೇಶ್ವರ ಅವರ ಮುನ್ನುಡಿ ಪುಸ್ತಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೆಸರಾಂತ ಕಲಾವಿದ ಸಂತೋಷ ಸಸಿಹಿತ್ಲು ಪ್ರತಿ ಅಧ್ಯಾಯಕ್ಕೂ ಚಿತ್ರದ ಬೆಂಬಲ ನೀಡಿದ್ದು ಓದುಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.

    ಇಂಥ ಒಂದು ಮೌಲಿಕ ಕೃತಿ ತಮ್ಮ ಪ್ರಕಾಶನದಿಂದ ಹೊರ ಬರುತ್ತಿರುವ ಬಗ್ಗೆ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಪುಸ್ತಕದ ಮುದ್ರಣ ಅಂತಿಮ ಹಂತದಲ್ಲಿದ್ದು ಸಧ್ಯದಲ್ಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

    .

    spot_img

    More articles

    3 COMMENTS

    1. ಪುಸ್ತಕ ಎಲ್ಲಿ ಸಿಗುತ್ತದೆ.. ಓದಲು ಉತ್ಸುಕಳಾಗಿರುವೆ

      • ಧನ್ಯವಾದಗಳು ಅನುಪ್ರಿಯಾ ಅವರೇ. ಇನ್ನು ಕೆಲವು ದಿನಗಳಲ್ಲಿ ವಿವರಗಳನ್ನು ಹಂಚಿಕೊಳ್ಳುತ್ತೇವೆ.

    2. ಕನ್ನಡ ಪ್ರೆಸ್. ಕಾಂ ನಲ್ಲಿ ಬರೆಯುವ ಅವಕಾಶ ಮತ್ತು ಉತ್ತೇಜನವನ್ನು ಶ್ರೀವತ್ಸ ನಾಡಿಗರು ನೀಡಿರದಿದ್ದರೆ ತಲೆಮಾರುಗಳು ಕಂಡರಿಯದ ವಿಶ್ವ ವ್ಯಾಪಿ ಹೊಸ ವ್ಯಾಧಿ ಯೊಂದು ಪ್ರಪಂಚದ ಎಲ್ಲ ದೇಶಗಳನ್ನು , ವ್ಯವಹಾರಗಳನ್ನು ಹಲವು ರೂಪದಲ್ಲಿ ಕಾಡಿದ ಬಗೆಯನ್ನು ದಾಖಲು ಮಾಡಲು ಸಾಧ್ಯವಾಗುತ್ತಿರಲಿಲ್ಲ.

      ಇನ್ನೊಂದೆರಡು ವರ್ಷಗಳ ನಂತರ 2020 ರಲ್ಲಿ ಕೋವಿಡ್ ಹೇಗೆ ಅನಾವರಣಗೊಳ್ಳುತ್ತ ಹೋಯಿತು ಎನ್ನುವ ಮಾತುಗಳೆಲ್ಲ ನಮ್ಮ ನೆನಪುಗಳು ಅಥವಾ ಬರೇ ಅಂಬೋಣಗಳಿಗೆ ಸೀಮಿತವಾಗಬಹುದು.

      ಭಾರತವೂ ಸೇರಿದಂತೆ ಪ್ರಪಂಚವನ್ನು ಕಾಡಿದ ಕೊರೋನಾದ ಪ್ರಭಾವಗಳನ್ನು ಒಂದೆಡೆ ದಾಖಲಿಸಿಡಲು ಈ ಸಮಗ್ರ ಪುಸ್ತಕ ರೂಪ ಸಹಕರಿಸಿದೆ. ಅದೇ ಪ್ರಯೋಜನವನ್ನು ಓದುಗರಿಗೂ ನೀಡಬಲ್ಲದು ಎಂಬ ನಂಬಿಕೆ ನನ್ನದು.
      ಈ ಪುಸ್ತಕವನ್ನು ತರಲು ಕಾರಣಕರ್ತರಾದ ನಾಡಿಗರು, ಸವಣ್ಣ ಪ್ರಕಾಶನ, ಡಾ. ನಾ. ಸೋಮೇಶ್ವರ ರು ಮತ್ತು
      ನಿಮ್ಮೆಲ್ಲರಿಗೂ ಧನ್ಯವಾದಗಳು.
      ನಿಮ್ಮ ಪುಸ್ತಕ ಗಳ ಸಂಗ್ರಹಕ್ಕೆ ಇದನ್ನೂ ಸೇರಿಸಿಕೊಳ್ಳುತ್ತೀರೆಂಬ ನಂಬಿಕೆಯಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!