23.5 C
Karnataka
Monday, May 20, 2024

    ಶೃಂಗ ಪುರಾಧೀಶ್ವರಿ ಶಾರದೆ

    Must read

    ಇಂದು ನವರಾತ್ರಿ ಪಂಚಮಿ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಮತ್ತೊಂದು ಹಂತವನ್ನು ತಲುಪಿದೆ.ಭಾವಗೀತೆ, ಚಿತ್ರಗೀತೆ, ಶಾಸ್ತ್ರೀಯ ಸಂಗೀತವನ್ನು ಸುಮಧುರವಾಗಿ ಹಾಡುವ ಮೀರಾ ಜಿ ಇಂದಿನ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿರುವ ಮೀರಾ ರಾಜ್ಯ ಸರಕಾರದಲ್ಲಿ ಉದ್ಯೋಗದಲ್ಲಿದ್ದಾರೆ.

    ಬಾಲ್ಯದಲ್ಲೇ ಮಲ್ಲಾಡಿಹಳ್ಳಿಯ ಶ್ರೀರಾಘವೇಂದ್ರ ಸ್ವಾಮೀಜಿಯವರ ಪ್ರಭಾವಕ್ಕೆ ಒಳಗಾದ ಮೀರಾ ಅವರಿಗೆ ಓದುವ ಸಮಯದಲ್ಲಿ ಅಲ್ಲಿದ್ದ ಸಾಂಸ್ಕೃತಿಕ ವಾತಾವರಣ ಸಂಗೀತ ಕಲಿಯಲು ಪ್ರೇರಣೆ ನೀಡಿತು. ಅಂದಿನಿಂದ ಸಂಗೀತ ಅಭ್ಯಾಸ ಸತತವಾಗಿ ನಡೆದಿದೆ. ಹತ್ತಾರು ವರ್ಷಗಳಿಂದ ಕಾರ್ಯಕ್ರಮಗಳನ್ನು ನೀಡಿದ್ದಾರೆ.

    ಶರಣು ಶರಣು ಗಣಪನೆ ಎಂದು ವಿಘ್ನವಿನಾಯಕನ್ನು ಸ್ತುತಿಸುವ ಮೂಲಕ ಆರಂಭವಾಗುವ ಸಂಗೀತ ಸಂಜೆ ಮುಂದೆ ಶಾರದೆಯನ್ನು ಧ್ಯಾನಿಸುತ್ತದೆ.ಶೃಂಗ ಪುರಾಧೀಶ್ವರಿ ಶಾರದೆ, ಬಿಳಿಯ ವಸ್ತ್ರವ ಧರಿಸಿ..,ಸ ರಿ ಗ ಮ ಪ ದ ನಿ …ಸಪ್ತ ಸ್ವರ ಮಿಡಿಸಿ ವೀಣೆಯಲಿ, ನೀನೊಲಿದರೆ ಜ್ಞಾನ ಎನ್ನುತ್ತಾ ದೇವಿ ಸರಸ್ವತಿಯನ್ನು ಕೊಂಡಾಡುತ್ತಾ ಸಂಪನ್ನ ವಾಗುತ್ತದೆ..

    ಮಧುಸೂಧನ್

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ. ಚಿತ್ರದುರ್ಗದ ಮಧುಸೂಧನ್ ತಾವು ಕಂಡ ಮೈಸೂರು ದಸರಾ ನೆನಪನ್ನು ಹಂಚಿಕೊಂಡಿದ್ದಾರೆ. ಭಾರತದ ನಾನಾ ಕಡೆ ಆಚರಿಸುವ ದಸರಾ ವಿವರಗಳನ್ನು ಆರ್. ಶ್ರೀನಿವಾಸ್ ನೀಡಿದ್ದಾರೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    spot_img

    More articles

    19 COMMENTS

    1. ಬಹಳ ಸೊಗಸಾಗಿ ಹಾಡಿರುವೆ. ಹಳೇ ದಿನಗಳು ನೆನಪಾದವು ನಿನ್ನ ಹಾಡು ಕೇಳಿದಾಗ. ಮಂಜು ಕೂಡ ನಿನ್ನ ಹಾಡು ಕೇಳಿ ಖುಷಿ ಪಟ್ಟರು.

    2. ಮೀರ ಅವರ ಹಾಡುಗಳ ಆಯ್ಕೆ ಸಂಧರ್ಭಕ್ಕೆ ತಕ್ಕಂತೆ ಬಹಳ ಸುಮಧುರವಾಗಿತ್ತು. ಗಾಯನವು ಅಷ್ಟೇ ಮಧುರವಾಗಿತ್ತು.

    3. ಎಲ್ಲ ಹಾಡುಗಳು ಚೆನ್ನಾಗಿತ್ತು. ಈ ದಿವ್ಯ ರೂಪ ಹಾಡು ತುಂಬಾ ಇಷ್ಟ ಆಯ್ತು. ಮೊದಲ ಎರಡು ಹಾಡುಗಳ volume ಸ್ವಲ್ಪ ಕಡಿಮೆ ಇತ್ತು ಎಂದು ಅನ್ನಿಸಿತು.

    4. Nanagantu behala ve santosha aytu…ee karyakrama keli. Bharati nimma hogalike ge nanu aabhariyagiruve. Aadaru nanu kaliyodu enu tumba ede. Ee songs ella nanna Light Music Guru Sri. RAJARAM, VIJAYNAGAR ravarinda kalitaddu. Endu avaru keli tumba khushi pattaru.

      Bharati, nimma nirargala vyakhyana Ati sundaravagittu. Neevu saha olle haadugarti -gottillave nanage? Dayamadi neevu saha hadi.

      Nanage kannadapress.com na vedike ge aahvanisi, gowravisiddakke Vatsa and Bharati, tumbu hrudayada dhanyavadagalu.

    5. ತುಂಬಾ ಸೊಗಸಾಗಿ ಹಾಡಿದೀಯ. ಮೀರಾ ನವರಾತ್ರಿ ಸಮಯದಲ್ಲಿ . ಧನ್ಯವಾದಗಳು. ಈ ಕಾರ್ಯಕ್ರಮ ಆಯೋಜಕರಿಗೆ. 🙏.ಸಂಜೆ ದೇವಿ ಪೂಜೆ ಸಮಯದಲ್ಲಿ ನಿನ್ನ ಹಾಡು ಕೇಳಿ ಖುಷಿ ಆಯಿತು. ಮತ್ತೊಮ್ಮೆ ನಮ್ಮೆಲ್ಲರನ್ನೂ ನಿನ್ನ ಸುಮಧುರವಾದ ಸಂಗೀತ ದಿಂದ ರಂಜಿಸುವ ಅವಕಾಶ ಬೇಗ ಸಿಗಲಿ 👍

    6. ಮೀರಾ ಮೇಡಂ, ನಾನು ಬಹಳ ಮೆಚ್ಚುವ ಗಾಯಕಿಯರ ಪೈಕಿ ನೀವು ಪ್ರಮುಖರು.ಮನೋಜ್ಞವಾಗಿ ಹಾಡಿದ್ದೀರಿ. ಶುಭಾಶಯಗಳು

      • Hagadare Padmapani ravaru bahala mechhuva gayakiyaralli praprathamavagi tamma wife …. Jenina kantha eruva Great Legend B.R. Chaya tane?😊
        Thanks to Padmapani

        • Dasara fest. Song of G.Meera is simply mind blowing.Clasical friend voice is asset of you. And we want to hear many more such songs.

    7. ನವರಾತ್ರಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮೀರಾ ತುಂಬಾ ಚೆನ್ನಾಗಿ ಹಾಡಿದ್ದಾಳೆ… ಶಾರದೆ ಕುರಿತು ಹಾಡಿದ್ದರ ಮೇಲು ಸ್ಥರ ಆಲಾಪ ದಲ್ಲಿ ರಾಗದ ಏರಿಳಿತ ಸೂಕ್ಷಮತೆ ಚನ್ನಾಗಿ ಮೂಡಿ ಬಂತು… ಕಂಠ ಸಿರಿ ಸಂಪತ್ತು ಅಭಿವೃದ್ಧಿ ಹೊಂದಿ ಹೆಚ್ಚು ಹೆಚ್ಚು ಅವಕಾಶಗಳು ದೊರೆಯಲಿ..
      ಕೆ.ಡಿ.ಬಡಿಗೇರ…

    8. Dasara fest. Song of G.Meera is simply mind blowing.Clasical friend voice is asset of you. And we want to hear many more such songs.

    LEAVE A REPLY

    Please enter your comment!
    Please enter your name here

    Latest article

    error: Content is protected !!