22.7 C
Karnataka
Tuesday, May 21, 2024

    ಹಾರುತ್ತಿದ್ದ ವಿಮಾನನದಲ್ಲೇ ಜನಿಸಿದ ಮಗು; ಕ್ಯಾಪ್ಟನ್ ಹೇಳಿದ ಕ್ಷಣ ಕ್ಷಣದ ಕಥೆ

    Must read

    ದೆಹಲಿಯಿಂದ ಬೆಂಗಳೂರಿಗೆ ಧಾವಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ -6E 122- ಪ್ರಯಾಣಿಕರೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ವರದಿಯಾಗಿದೆ. ಈ ವಿಮಾನದ ಕ್ಯಾಪ್ಟನ್ ವಿಂಗ್ ಕಮಾಂಡರ್ ಸಂಜಯ್ ಮಿಶ್ರಾ ಅವರು ಈ ಘಟನೆಯ ವಿವರಗಳನ್ನು ಅವರ ಒಂದು ಕಾಲದ ಸಹೋದ್ಯೋಗಿ ಮಧುಸೂಧನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಅದರ ಪೂರ್ಣ ಪಾಠವನ್ನು ಕನ್ನಡಪ್ರೆಸ್. ಕಾಮ್ ಇಲ್ಲಿ ನೀಡಿದೆ.

    ದೆಹಲಿಯಿಂದ ನಮ್ಮ ವಿಮಾನ ಆಗಷ್ಟೆ ಹೊರಟಿತ್ತು. ವಾತಾವರಣವೂ ತಿಳಿಯಾಗಿತ್ತು. ಮುಸ್ಸಂಜೆಯ ಹೊತ್ತು. ಕ್ಯಾಬಿನ್ ಕ್ರ್ಯೂ ಒಬ್ಬರು ನನ್ನ ಬಳಿ ಧಾವಿಸಿ ಬಂದರು. ಅವರ ಧ್ವನಿಯಲ್ಲಿ ಸ್ವಲ್ಪ ಆತಂಕವಿತ್ತು.

    “ಕ್ಯಾಪ್ಟನ್….. ಸೀಟ್ 1ಸಿಯಲ್ಲಿ ರುವ ಮಹಿಳೆಯೊಬ್ಬರ ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾಗಿದೆ. ಡಿಸ್ ಕಂಫರ್ಟ್ ಆಗಿದ್ದಾರೆ. ಬೆಳಿಗ್ಗೆಯಿಂದ ಆಕೆ ಏನು ತಿಂದಂತೆ ಕಾಣುತ್ತಿಲ್ಲ” ಎಂದರು. ಆಕೆಗೆ ಏನಾದರು ತಿನ್ನಲು ಕೊಡಲು ಹೇಳಿದೆ. ಆದರೂ ಆಕೆಯ ಪರಿಸ್ಥಿತಿ ಸುಧಾರಿಸಿದಂತೆ ಕಾಣಲಿಲ್ಲ. ಆಕೆಯ ಸಂಕಟ ಹೆಚ್ಚಾಯಿತು. ಈ ಮಧ್ಯೆ ಹೊಟ್ಟೆ ನೋವು ಕೂಡ ಆರಂಭವಾಯಿತು.ಆಕೆ ಗರ್ಭಿಣಿ ಎಂದು ಗೊತ್ತಾಯಿತು. ಇನ್ನು ತಡಮಾಡುವುದು ಬೇಡವೆಂದು ಕೂಡಲೆ ವಿಮಾನದಲ್ಲಿ ಯಾರಾದರು ವೈದ್ಯರು ಇದ್ದಾರ ಎಂದು ಅನೌನ್ಸ್ ಮಾಡಲು ಹೇಳಿದೆ.

    ನಮ್ಮ ಅದೃಷ್ಟ ಇಬ್ಬರು ವೈದ್ಯರು ವಿಮಾನದ ಪ್ರಯಾಣಿಕರಾಗಿದ್ದರು. ಒಬ್ಬರು ರಿಯಾದ್ ನಲ್ಲಿ ಪ್ರಾಸ್ಲಿಕ್ ಸರ್ಜನ್ ಆಗಿರುವ ಡಾ. ನಾಗರಾಜ್ ಮತ್ತು ಇನ್ನೊಬ್ಬರು ಕ್ಲೌಡ್ ನೈನ್ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಶೈಲಜಾ.

    ಈ ವೇಳೆಗೆ ನಮ್ಮ ವಿಮಾನ ಜೈಪುರದಲ್ಲಿತ್ತು. FL 390 ಆಲ್ಟಿಟ್ಯೂಡ್ ಲ್ಲಿ ಹಾರಾಡುತ್ತಿತ್ತು. ಆರಂಭದಲ್ಲಿ ಆ ಪ್ರಯಾಣಿಕರಿಗೆ ಗ್ಯಾಸ್ಟ್ರಿಕ್ ತೊಂದರೆ ಇರಬಹುದು ಎಂದು ವೈದ್ಯರು ಭಾವಿಸಿದರು. ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಆಕೆಯ ನೋವು ಹೆಚ್ಚುತ್ತಲೆ ಹೋಯಿತು. ಇಬ್ಬರೂ ವೈದ್ಯರು ಸತತ ನಿಗಾ ಇಟ್ಟಿದ್ದರು. ನಾನು ಲೇಡಿ ಡಾಕ್ಟರ್ ಬಳಿ ಮಾತಾಡಿದೆ. ಅವರು ಹೆದರುವ ಅಗತ್ಯ ಇಲ್ಲವೆಂತಲೂ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿಯೂ ಹೇಳಿದರು.

    ವಿಮಾನ ಭೋಪಾಲ್ ನ ಉತ್ತರದಲ್ಲಿತ್ತು. ಈ ವೇಳೆಗೆ ಆಕೆಯಲ್ಲಿ ತೀವ್ರ ರಕ್ತ ಸ್ರಾವ ಕಾಣಿಸಿತು. ಕ್ಯಾಬಿನ್ ಕ್ರ್ಯೂ ಸನ್ನದ್ಧರಾದರು. ಕ್ಷಣಾರ್ಧದಲ್ಲಿ ವಿಮಾನದ ಕಿಚನ್- galley- ಅನ್ನು ಲೇಬರ್ ರೂಮ್ ಆಗಿ ಪರಿವರ್ತಿಸಿದರು. ವಿಮಾನ ಹಾರುತ್ತಲೇ ಇತ್ತು. ನಾನು ಮುಂದೇನು ಮಾಡಬೇಕು ಎಂಬುದನ್ನು ಡಾಕ್ಟರ್ ಸಲಹೆ ಮೇರೆಗೆ ನಿರ್ಧರಿಸೋಣ ಎಂದು ಕೊಂಡೆ.

    ಇದಕ್ಕಿದ್ದಂತೆ ವಿಮಾನದೊಳಗೆ ಚಟುವಟಿಕೆ ಗರಿಗೆದರಿತು, ಕ್ಯಾಬಿನ್ ಸಿಬ್ಬಂದಿ ಗಡಿ ಬಿಡಿಯಲ್ಲಿ ಓಡಾಡ ತೊಡಗಿದರು. ಆತಂಕದ ವಾತಾವರಣ. ನಿಟ್ಟುಸಿರು, ನಿಶಬ್ಧ…ಇದೆಲ್ಲಾ ಕೆಲವೆ ಹೊತ್ತು .ಮರುಕ್ಷಣ ವಿಮಾನದಲ್ಲಿ ಚಪ್ಪಾಳೆ. ಗಂಡು ಮಗುವಿನ ಜನನವಾಗಿತ್ತು. ಆತಂಕದ ಕ್ಷಣಗಳು ಮಾಯಾವಾಗಿ ಎಲ್ಲೆಲ್ಲೂ ಸಂತಸ ಮೂಡಿತು. ಈ ಒಂದು ಸಂದರ್ಭದಲ್ಲಿ ರೋಮಾಂಚನ ಗೊಳ್ಳದ ಒಬ್ಬ ಪ್ರಯಾಣಿಕರು ಅಲ್ಲಿರಲಿಲ್ಲ ಎಂದು ನಾನು ಹೇಳಬಲ್ಲೆ. ಕ್ಲೌಡ್ ನೈನ್ ನಲ್ಲಿ ಕ್ಲೌಡ್ ನೈನ್ ವೈದ್ಯರ ನರೆವಿನೊಂದಿಗೆ ಹೊಸ ಜನ್ಮವೊಂದು ಅವತರಿಸಿತು.

    ಆದರೆ ಆ ಮಗು ಪ್ರಿ ಮೆಚೂರ್. ಎಷ್ಟು ತಿಂಗಳ ಮಗು ಎಂಬುದು ಖಾತ್ರಿ ಆಗಲಿಲ್ಲ. ಆದರೆ ಮತ್ತೇನಾದರು ಹೆಚ್ಚು ಕಡಿಮೆ ಆಗಿ ಬಿಟ್ಟರೆ ಎಂಬ ಭಯ. ಡಾಕ್ಟರೇನೋ ಆತಂಕ ಪಡಬೇಕಾಗಿಲ್ಲ. ತಾಯಿ ಮಗು ಹುಷಾರಾಗಿದ್ದಾರೆ ಎಂಬ ಅಭಯ ನೀಡಿದರು. ಆದರೆ ನನಗೆ ಏನಾಗುವುದೋ ಎಂಬ ಆತಂಕ ದೂರವಾಗಲಿಲ್ಲ,

    ನಾಗಪುರ, ಇಂದೋರ್ ದೂರವಾಗಿತ್ತು. ಹತ್ತಿರವೆಂದರೆ ಹೈದರಾಬಾದ್. ಅಲ್ಲಿಗೆ ನನ್ನ ವಿಮಾನವನ್ನು ತಿರುಗಿಸಬೇಕಿತ್ತು. ಆದರೆ ಕೋವಿಡ್ ಕಾಲದಲ್ಲಿ ಆ ಮಗುವನ್ನು ಅಲ್ಲಿ ಇಳಿಸಿ ಹೋಗಲು ನನ್ನ ಮನಸ್ಸು ಒಪ್ಪಲಿಲ್ಲ. ಆ ಪ್ರಯಾಣಿಕರ ಜೊತೆ ಮತ್ತಾರು ಇರಲಿಲ್ಲ. ನಾನು ವಿಮಾನದಲ್ಲಿ ಹೊಸ ಪ್ರಯಾಣಿಕರು ಸೇರಿಕೊಂಡ ವಿಷಯನ್ನು ಪ್ರಕಟಿಸಿದೆ. ಚೆನ್ನೈ, ನಾಗಪುರ , ಬೆಂಗಳೂರು ಏರ್ ಟ್ರಾಫಿಕ್ ನಿಂದ ಅಭಿನಂದನೆಗಳು ಕೇಳಿ ಬಂದವು. ನಾಗಪುರದ ಏರ್ ಟ್ರಾಫಿಕ್ ನೇರವಾಗಿ ಬೆಂಗಳೂರು ಸೇರುವುದಕ್ಕೆ ಅನುವು ಮಾಡಿಕೊಟ್ಟರು. ಯಾವುದೇ ಅಡೆತಡೆ ಇಲ್ಲದೆ ವೇಗವಾಗಿ ಬೆಂಗಳೂರನ್ನು ಸೇರಿ ನಿಟ್ಟುಸಿರು ಬಿಟ್ಟೆ.

    ಈ ವೇಳೆಗೆ ಬೆಂಗಳೂರಿಗೆ ಸುದ್ದಿ ಮುಟ್ಟಿತ್ತು. ತಾಯಿ ಮಗುವಿಗೆ ಅದ್ದೂರಿ ಸ್ವಾಗತ. ಆಸ್ತರ್ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು, ಕೆಎಐಲ್ ಸಿಬ್ಬಂದಿ ಸ್ವಾಗತ ಕೋರಿದರು. ಬ್ಯಾನರ್ ಗಳು.. ಚಾಕೋಲೇಟ್ಗಳು…

    ಅರ್ಧಗಂಟೆಯ ಹಿಂದೆ ಹುಟ್ಚಿದ ಹೀರೋನನ್ನು ಕೈ ಗೆತ್ತಿಕೊಂಡೆ.. ಧನ್ಯತಾ ಭಾವ ಮೂಡಿತು. ಏರ್ ಪೋರ್ಸ್ ಡೇ ಹಿಂದಿನ ದಿನವೇ ನನಗೆ ಏರ್ ಪೋರ್ಸ್ ಡೇ ಯ ಶುಭಾಶಯ ಸಿಕ್ಕಂತಾಯಿತು.

    ಟ್ವಿಟರ್ ನಲ್ಲಿ ಪೋಸ್ಟ್ ಆಗಿರುವ ಒಂದು ವಿಡಿಯೋ ಇಲ್ಲಿದೆ.

    ಮಧುಸೂಧನ್
    ಮಧುಸೂಧನ್
    ಭಾರತೀಯ ವಾಯು ಪಡೆಯಲ್ಲಿ 20 ವರ್ಷಗಳ ಸೇವೆ. ನಂತರ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ. ಈಗ ಸೇವೆಯಿಂದ ನಿವೃತ್ತ. ಪ್ರವೃತ್ತಿಯಿಂದ ಬರಹಗಾರ
    spot_img

    More articles

    11 COMMENTS

    1. ವಾಹ್ ಸೂಪರ್ ಗೆಳೆಯಾ. ಅವರು ಎದುರಿಸಿದ ಆ ಆತಂಕದ ಕ್ಷಣಗಳು, ಅವರು ತಗೊಂಡ ಸಮಯೋಚಿತ ನಿರ್ಧಾರ, ಇದೆಲ್ಲಾ ನಿನ್ನಿಂದ ತಿಳಿಯಿತು. ಮೈ ಜುಂ ಅನ್ನಿಸುತ್ತಾ ಇದೆ. ಕಾರಣ ಅಲ್ಲಿ ಮಗುವಿನ ಜನನ ಮಾತ್ರವಲ್ಲ ಆ ತಾಯಿಗೂ ಮರು ಜನ್ಮವೇ. ಅಂತಹ ಸಂದರ್ಭದಲ್ಲಿ ಡಾಕ್ಟರ್ ಗಳು ಸಮಯಪ್ರಜ್ಞೆ ಮತ್ತು ಆಮೇಲೆ ಪೈಲೆಟ್ ರವರ ಜಾಣ್ಮೆ . ಮಗುವಿನ ಆರೋಗ್ಯದ ಬಗ್ಗೆ ಅವರಿಗಿರುವ ಕಾಳಜಿ ಎಲ್ಲವನ್ನೂ ತಿಳಿಸಿದೆ ನಿನ್ನ ಲೇಖನ. ಇನ್ನಷ್ಟು ನಿನ್ನ ಎರ್ ಫೋರ್ಸ್ ಸೇವೆಯ ಅನುಭವಗಳು ಲೇಖನವಾಗಿ ಬರಲಿ ಗೆಳೆಯಾ.

    2. Beautifully narrated! I felt as though I was there witnessing everything. Thanks to Pilot Sanjay Mishra for sharing his wonderful experience and Madhusudhan sir for narrating it so beautifully. A big kudos to the cabin crew and the entire team of Indigo flight and also to the doctors present. Best wishes to the new mom and son.

    3. ಲೇಖನ ಓದಿ ರೋಮಾಂಚನ. ಅಬ್ಬ ನಿಜವಾಗ್ಲೂ. ವಿಮಾನ ಸಿಬ್ಬಂದಿ. ಮಾನವೀಯತೆ ಶ್ಲಾಘನೀಯ. ಮತ್ತು ವೈದರ ಸಮಯ ಪ್ರಜ್ಞೆ ಎರಡು ಜೀವ ಉಳಿಸಿದೆ. ಇದು ಇತಿಹಾಸ ದಲ್ಲಿ ಮರೆಯಲಾಗದ ಘಟನೆ. ಇಂತ ರೋಚಕ ಘಟನೆಯನ್ನು ನಮ್ಮೆಲ್ಲರೊಂದಿಗೆ ಹಂಚಿ ಕೊಂಡ ಮಧುಸೂದನ್ ಕೂಡ ಏರ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸಿರುವ ಯೋಧ.

    4. ಅದ್ಭುತವಾದ ಘಟನೆ. ಪ್ರಕರಣವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ. ನನಗೆ ತುಂಬಾ ಇಷ್ಟವಾದ ಪ್ರಸಂಗ ” ಪೈಲಟ್ ಮಗುವನ್ನು ಎತ್ತಿಕೊಂಡ ಕ್ಷಣ” ಧನ್ಯತಾ ಭಾವದ ವಿವರಣೆ. ದೇವರು ಇನ್ನೂ ಹೆಚ್ಚು ಲೇಖನಗಳನ್ನು ಬರೆಯಲು ಪ್ರೇರಣೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಧನ್ಯವಾದಗಳು.

    5. Kudos to team indigo & applause to the cabin crew! Truly a life saver.
      Excellent narration, like you could visualise the moment as it is happening around you.

    LEAVE A REPLY

    Please enter your comment!
    Please enter your name here

    Latest article

    error: Content is protected !!