27.6 C
Karnataka
Monday, May 13, 2024

    ಮೊಬೈಲಿನೊಳಗೆ ಲಾಕ್ ಆಗುತ್ತಿರುವ ನಾವು!

    Must read

    ನಯನ್ ಕುಮಾರ್

    ನಾವು ನಮ್ಮ ಕಾಲೇಜು, ಕ್ಲಾಸ್‌, ಕ್ಲಾಸ್‌ಬಂಕ್, ಒಂದಷ್ಟು ಕಿರಿಕ್‌, ಪರೀಕ್ಷೆ ತಯಾರಿ ಅಂತೆಲ್ಲಾ ಬ್ಯುಸಿಯಾದ್ದ ನಮ್ಮ ವೇಗಕ್ಕೆ ಕೊರೋನಾ ಎಂಬ ಕ್ರಿಮಿ ಪೂರ್ಣವಿರಾಮವಿಟ್ಟಿತು. ಬೇಕು ಬೇಕು ಅಂತ ಕಾಯ್ತಿದ್ದ ರಜಾ ದಿನಗಳು ಈಗ ಜಡಿಮಳೆಯಂತೆ ನಿಲ್ಲುತ್ತಲೇ ಇಲ್ಲ. ಕಾಲೇಜು ದಿನಗಳಲ್ಲಿ ಪರೀಕ್ಷೆಗೆ ಹೆದರಿ ಅಲ್ಪಸ್ವಲ್ಪ ಓದುತ್ತಿದ್ದವರಿಗೆಲ್ಲ ಈಗ, “ಏನೇ ಆದ್ರು ಈ ಕೊರೋನಾ ಈ ವರ್ಷ ಕಡಿಮೆ ಆಗಲ್ಲ ”  ಅನ್ನೊ ದೈರ್ಯ ಬಂದಿದೆ.

    ಕಾಲೇಜು ನಡಿತಾ ಇದ್ದಾಗ ನಮ್ಮ ಕೈಯಲ್ಲಿರೋ ಮೊಬೈಲಿಗೆ ಉಸಿರಾಡೊದಕ್ಕಾದರೂ ಸ್ವಲ್ಪ ಸಮಯ ಸಿಗ್ತಾ ಇತ್ತು. ಆದ್ರೆ‌ ಈಗ ಹಾಗಿಲ್ಲ. ಇಡೀ ದೇಶ ಕೊರೋನಾದಿಂದ ನರಳಾಡುತ್ತಿದೆ, ನಮಗೂ ಬೇಡದ ವಿರಾಮ ಸಿಕ್ಕಿದೆ, ಆದ್ರೆ ಮೂಬೈಲಿಗೆ ಮಾತ್ರ ಇಪ್ಪತ್ತನಾಲ್ಕು ಗಂಟೆ ಕೆಲಸಾನೆ. ಮೊದಲೇ ಪುಸ್ತಕಗಳನ್ನ ಓದುವುದು ಅಷ್ಟಕ್ಕಷ್ಟೆ, ಈಗಂತು ಅವುಗಳ ನೆನಪೇ‌ ಇಲ್ಲ. ವಾಟ್ಸಾಪ್ , ಫೇಸ್ ಬುಕ್, ಯೂಟ್ಯೂಬ್ ಅಂತಲೇ ದಿನ ಕಳೆದು ಹೋಗುತ್ತಿದೆ.

    ದಿನ ಆರಂಭವಾಗೋದೆ ತಡ ಕೈಯಲ್ಲಿ ಮೊಬೈಲ್ ಕುಣಿಯುತ್ತಿರುತ್ತದೆ. ಅನಂತರ ರಾತ್ರಿ ಮಲಗುವವರೆಗೆ ನಾವು ಮತ್ತು ನಮ್ಮ ಮೊಬೈಲ್ ಮಾತ್ರವೆ ನಮ್ಮೊಳಗೆ. ಸುತ್ತಮುತ್ತ ಏನಾಗುತ್ತಿದೆ, ಯಾವಾಗ ಪರೀಕ್ಷೆ ನಡೆಸ್ತಾರೆ, ಪರೀಕ್ಷೆ ಆಗುವುದಿದ್ದರೆ ಅದಕ್ಕೆ ನಾವೇನು ತಯಾರಿ ಮಾಡಬೇಕು ಇದ್ಯಾವುದೂ ನಮ್ಮ ತಲೆಯಲ್ಲಿಲ್ಲ. ನಾವು ಪ್ರಸ್ತುತ ಯೋಚಿಸುತ್ತಿರುವುದು ಕೇವಲ ನಾಳೆಯ ಉಚಿತ ಡೇಟಾ ಹೇಗೆ ಖಾಲಿ ಮಾಡುವುದು ಎಂಬುದನ್ನಷ್ಟೆ!

    ಒಂದಷ್ಟು ಬುದ್ದಿವಂತ ಎನಿಸಿಕೊಂಡವನೂ ಈ ಕೊರೋನಾ ರಜೆಯಿಂದಾಗಿ ದಡ್ಡನಾಗುತ್ತಿದ್ದಾನೆ. ಮೊಬೈಲ್ ಎಂಬ ಮಾಯಾಲೋಕದಲ್ಲಿ ಬಿದ್ದು ತನ್ನನ್ನು ತಾನೇ ಮರೆಯುತ್ತಿದ್ದಾನೆ. ನಾವದನ್ನು ಬಿಟ್ಟಿರಲಾರದಷ್ಟು ಅಂಟಿಕೊಂಡಿದ್ದೆವೆ. “ಊಟ ಇಲ್ಲದಿದ್ದರೂ ಪರವಾಗಿಲ್ಲ, ಮೊಬೈಲ್ ಡೇಟಾ ಇಲ್ಲದಿದ್ದರೆ ಬದುಕಲಾರೆ” ಎಂಬಷ್ಟು ಅದಕ್ಕೆ ಜೋತುಬಿದ್ದಿದೇವೆ. ಪ್ರಸ್ತುತ ಯುವ ಸಮುದಾಯವನ್ನು ಕೊರೋನಾಗಿಂತಲು ಪ್ರಬಲವಾಗಿ ಲಾಕ್ ಮಾಡಿರುವುದು ಮೊಬೈಲ್. ಅದರೊಳಗೆಯೇ ನಮಗೆ ಲಾಕ್ ಡೌನ್…

    ಈಗಲೇ‌ ಇದರಿಂದ ನಾವು ನಮ್ಮನ್ನು ಬಿಡುಗಡೆ ಮಾಡಿಕೊಳ್ಳದೇ ಹೋದರೆ ನಮ್ಮನ್ನೇ ನಾವೆಲ್ಲೋ ಕಳೆದುಕೊಳ್ಳಬಹುದು.

    ನಯನ್‌ ಕುಮಾರ್‌ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ ಅಂತಿಮ ಪದವಿ ಓದುತ್ತಿದ್ದಾರೆ.‌ ಎನ್‌ಎಸ್‌ಎಸ್‌ ಮೂಲಕ ನಟನೆ, ಮಿಮಿಕ್ರಿ, ಏಕಪಾತ್ರಾಭಿನಯ, ಹಾಡು, ಬರವಣಿಗೆಗಳಲ್ಲಿ ಪಳಗಿದ್ದಾರೆ. ಕಿರುಚಿತ್ರಗಳ ನಟನಾಗಿ, ಸಾಹಿತ್ಯಕಾರನಾಗಿ ಬಹುಮಾನ ಗೆದ್ದವರು. ಆರ್ಥಿಕ ಬೆಂಬಲವೇನೂ ಇಲ್ಲದಿದ್ದರೂ ಪ್ರತಿಭೆಯಿಂದಲೇ ತನ್ನಂತಹ ಹಲವರಿಗೆ ಮಾದರಿಯಾಗಿದ್ದಾರೆ.

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    spot_img

    More articles

    2 COMMENTS

    1. ನಿಜಕ್ಕೂ ಈಗಿನ ಜಡಭರಿತ ವಿದ್ಯಾರ್ಥಿಗಳನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಸಮಯದ ಸದುಪಯೋಗ ಮಾಡಿಕೊಳ್ಳಬಹುದು ಆದರೆ ಅದು ಬೇಡ ಅವರಿಗೆ. ಓದುವ ಹವ್ಯಾಸ, ಬರವಣಿಗೆ, ಮುಂತಾದುವುಗಳನ್ನು ರೂಢಿಸಿಕೊಳ್ಳ ಬಹುದು.
      ಕಿರಣ್ ಮಾಡಾಳ್ ರವರ Animated illustration superb.

    2. ಈಗ ಪುಸ್ತಕ ಓದುವ ರೂಢಿಯೂ ಇಲ್ಲ ಅಂದ ಮೇಲೆ ಬರವಣಿಗೆಯಂತೂ ದೂರದ ಮಾತು. ಈಗಿನವರು ಬಿಡಿ ನಮ್ಮವಯಸಿನವರೇ ಓದುವುದರ ರೂಢಿ ಬಿಟು ಹೋಗಿದೆ ಅನುವರು ಇದಾರೆ. ನೋಡುವಾಗ ಬೇಸರವಾಗುತ್ತದೆ

    LEAVE A REPLY

    Please enter your comment!
    Please enter your name here

    Latest article

    error: Content is protected !!