33.6 C
Karnataka
Monday, May 13, 2024

    ಶ್ರಾವಣ ಬಂತು ನಾಡಿಗೆ …

    Must read

    ಮಳೆ ಸುರಿದು ಇಳೆ ತಂಪಾದ ಹೊತ್ತಿನಲ್ಲಿ ಮತ್ತೆ ಶ್ರಾವಣ ಮಾಸ ಬಂದಿದೆ. ಆಷಾಢದ ನಂತರ ಮಳೆರಾಯನು ಒಂದಿಷ್ಟು ಬಿಡುವು ಕೊಡುವ ಸಮಯ ಇದು. ಹೀಗಾಗಿ ಎಲ್ಲೆಡೆಯೂ ಸಡಗರ ಸಂಭ್ರಮ.

    ಕಳೆದೆರಡು ವರ್ಷಗಳಿಂದ ಕೊರೊನಾ ಎಂಬ ಮಹಾಮಾರಿ ಎಲ್ಲಾ ಹಬ್ಬಗಳ ಸಡಗರವನ್ನೇ ಕಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಶ್ರಾವಣ ಸಂಭ್ರಮಕ್ಕೆ ಕೊರತೆಯೇನು ಕಾಣುತ್ತಿಲ್ಲ.

    ಈ ಸಡಗರವನ್ನು ಹೆಚ್ಚಿಸಲು ಈ ಪಾಡ್ಕಾಸ್ಟ್ ಅನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಶ್ರಾವಣದ ಹಿರಿಮೆ ಗರಿಮಗೆಳ ಜೊತೆಗೆ ಶ್ರಾವಣದ ಸಂಭ್ರಮವನ್ನು ಹೆಚ್ಚಿಸುವ ಗೀತೆಗಳ ಗಾಯನವೂ ಇದೆ.

    ಮೂಲ ದಾವಣಗೆರೆಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಪರಿಮಳ ಎಸ್ ನರಹರಿರಾವ್ ಇಲ್ಲಿ ಶ್ರಾವಣದ ನೆನಪನ್ನು ಹಂಚಿಕೊಂಡಿದ್ದಾರೆ.ಶಾಸ್ತ್ರೀಯ ಸಂಗೀತವನ್ನು ಸೊಗಸಾಗಿ ಹಾಡುವ ಪರಿಮಳಾ ಅವರು ತಂದೆ ದಿ. ಶ್ರೀನಿವಾಸ ಮೂರ್ತಿ ಅವರಿಂದ ಸಂಗೀತ ಅಭ್ಯಾಸ ಶುರು ಮಾಡಿದರು. ನಂತರ ಚಿತ್ರದುರ್ಗದಲ್ಲಿ ವಿದ್ವಾನ್ ದಿ. ಎಚ್ ಎನ್ ನಾರಾಯಣಪ್ಪ ಅವರ ಬಳಿ ಸಂಗೀತ ಅಭ್ಯಾಸ ಮಾಡಿ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲ ಕಾಲ ಸಂಗೀತ ಶಿಕ್ಷಕಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.ಗಮಕ ಅಭ್ಯಾಸ ಮಾಡಿ ಪಾರೀಣದಲ್ಲೂ ತೇರ್ಗಡೆಹೊಂದಿದ್ದಾರೆ.

    ಇವರ ಜೊತಗೆ ಶ್ಯಾಮಲ ನರಸಿಂಹ ಮೂರ್ತಿ ಅವರು ಗೀತೆಗಳನ್ನು ಹಾಡಿ ಶ್ರಾವಣದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಭಾರತಿ ಶ್ರೀನಿವಾಸ್ ನಿರೂಪಿಸಿದ್ದಾರೆ.

    ಇನ್ನು ಆಲಿಸಿ ಸಡಗರ ನಿಮ್ಮದಾಗಲಿ.

    spot_img

    More articles

    10 COMMENTS

    1. ಸುಂದರವಾದ ಕಾರ್ಯಕ್ರಮ. ಪರಿಮಳ ಅವರು ಬಹಳಷ್ಟು ವಿಷಯಗಳನ್ನು ತಿಳಿಸಿ ಕೊಟ್ಟಿದ್ದಾರೆ ಹಾಗೂ ಸುಮಧುರವಾಗಿ ಹಾಡಿದ್ದಾರೆ.ಅವರಿಗೂ ಹಾಗೂ ಸುಂದರವಾಗಿ ನಿರೂಪಿಸಿದ ಭಾರತಿ ಅವರಿಗೆ ಧನ್ಯವಾದಗಳು

    2. ಶ್ರಾವಣ ಮಾಸ ಅಂದರೆ ಬಾಲ್ಯದಲ್ಲಿ ನನಗೆ ಅದೇನೋ ಸಂತೋಷ ಖುಷಿ.. ಅಮ್ಮ ಮಾಡುವ ಪೂಜೆ ಪುನಸ್ಕಾರಗಳು, ಆ ವೇಳೆ ಹಾಡುವ ಸಂಪ್ರದಾಯ ಹಾಡುಗಳು ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಿದೆ. ಅಜ್ಜಿ ಮಾಡುವ ಶ್ಯಾವಿಗೆ ಪಾಯಸ, ಹೂರಣದ ಹೋಳಿಗೆ ಇವುಗಳ ರುಚಿ ಇನ್ನೂ ಬಾಯಲ್ಲೇ ಇದೆ.
      ಇದನ್ನೆಲ್ಲಾ ಜ್ಞಾಪಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
      ಹಾಡುಗಳು ಸೊಗಸಾಗಿದೆ.
      ಸುಂದರ ನಿರೂಪಣೆಗೆ ಶ್ರೀಮತಿ ಭಾರತಿ ಅಭಿನಂದನಾರ್ಹರು

    3. ಶ್ರಾವಣ ದ ಸಂಭ್ರಮ ಸೊಗಸಾಗಿ ಮೂಡಿಬಂದಿದೆ.ಹಬ್ಬಗಳ ಬಗ್ಗೆ ವಿವರಣೆ ಚೆನ್ನಾಗಿದೆ. ನಿರೂಪಣೆಯೂ ಅಷ್ಟೇ ಸೊಗಸಾಗಿದೆ. ಒಟ್ಟಾರೆ ಕಾರ್ಯಕ್ರಮ ಮುದ ಕೊಟ್ಟಿತು.ಎಲ್ಲರಿಗೂ ಧನ್ಯವಾದಗಳು.

    4. ಶ್ರಾವಣ ಆ ಹೆಸರೇ ಮೈ ಪುಳಕಿಸಿ ಹಳೆಯದೆಲ್ಲ ಜ್ಞಾಪಿಸುತ್ತದೆ. ನಿಗಿ ನಿಗಿ ರೇಷ್ಮೆ ಸೀರೆ ಉಟ್ಟು ಅಮ್ಮ ಮಾಡುತಿದ್ದ ಪೂಜೆ ಪುನಸ್ಕಾರಗಳು, ಬಗೆ ಬಗೆಯ ಸಂಪ್ರದಾಯ ಹಾಡುಗಳು ಇನ್ನೂ ಕಿವಿಯಲ್ಲಿ ಗುಯ್ಮಾ ಗುಡುತ್ತಿದೆ ಅಜ್ಜಿ ಮಾಡುತಿದ್ದ ಶ್ಯಾವಿಗೆ ಪಾಯಸ, ಹೊಟ್ಟಿನ ಒಲೆಯಲ್ಲಿ ಮಾಡುತಿದ್ದ ಹೂರ್ಣದ ಹೋಳಿಗೆ ರುಚಿ ಈಗಲೂ ಸವಿಯುವಂತೆ ಅನಿಸುತ್ತಿದೆ
      ಇದನ್ನೆಲ್ಲಾ ಜ್ಞಾಪಿಸಿದಕ್ಕೆ ಈ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದ ಶ್ರೀಮತಿ ಭಾರತಿ ಅವರು ಅಭಿನಂದಾರ್ಹರು

    5. ಎಣಿಸಿದಂತೆ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿ ಬಂದಿದೆ.ಅತ್ಯುತ್ತಮವಾಗಿ ನಿರೂಪಣೆ ಮಾಡಿದ ಶ್ರೀಮತಿ ಭಾರತಿಯವರಿಗೆ ಹಾಗೂ ಕನ್ನಡಪ್ರೆಸ್.ಕಾಂನ ಎಲ್ಲರಿಗೂ ಧನ್ಯವಾದಗಳು . ಇದೇ ರೀತಿಯ ಕಾರ್ಯಕ್ರಮಗಳು ಮುಂದೆಯೂ ಕನ್ನಡಪ್ರೆಸ್.ಕಾಂನಿಂದ ಹೊರಹೊಮ್ಮಿ ಕನ್ನಡದ ಅತ್ಯುತ್ತಮ ಅಂತರ್ಜಾಲ ಸುದ್ದಿತಾಣವಾಗಲೆಂದು ಹಾರೈಸುವೆ..

    6. ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ..ಮುಂಬರುವ ಹಬ್ಬಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದೇವೆ..

    7. ಶ್ರೀಮತಿ ಪರಿಮಳ ನರಹರಿ ರಾವ್ ಬಹಳ ಸೊಗಸಾಗಿ ಶ್ರಾವಣ ಮಾಸದ ಹಬ್ಬಗಳ ಬಗ್ಗೆ ತಿಳಿಸಿದ್ದಾರೆ. ಹಾಗೆ ಅವರ ಗಮಕ ವಾಛನವು ತುಂಬಾ ಸೊಗಸಾಗಿದೆ. ಶ್ರೀಮತಿ ಶ್ಯಾಮಲ ಅವರ ಹಾಡುಗಾರಿಕೆ ಮತ್ತು ಶ್ರೀಮತಿ ಭಾರತಿ ಶ್ರೀನಿವಾಸನ್ ರವರ ನೀರೂಪಣೆ ಅಮೋಘ ವಾಗಿತ್ತು. ಈ ಅವಕಾಶ ಕಲ್ಪಿಸಿದ ಕನ್ನಡ ಪ್ರೆಸ್ ನವರಿಗೆ ಧನ್ಯವಾದಗಳು

    8. Shravana bantu shravana…ಶ್ಯಾಮಲ ಅವರು ಹಾಡಿದ,.ಹಬ್ಬಗಳ ಮಾಸಕ್ಕೆ ಸ್ವಾಗತ ಕೋರಿದ ಹಾಡು super! Starting with a bang!

      ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿದೆ.

      ಪರಿಮಳ ಅವರೂ ಎಷ್ಟೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಭಾರತಿಯವರ ನಿರೂಪಣೆಯು ತುಂಬಾ ಚೆನ್ನಾಗಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!