28.3 C
Karnataka
Tuesday, May 14, 2024

    ಟೊಮೊಟೊ ಬೆಳೆದು ಕೈ ಸುಟ್ಟುಕೊಂಡ ರೈತರು

    Must read

    ನಿರಂತರ ಆದಾಯ ಗಳಿಸಲು ರೈತರು ವೈವಿಧ್ಯ ತರಕಾರಿ ಬೆಳೆಗಳನ್ನು ಪೋಷಿಸುತ್ತಾರೆ. ಅಪರೂಪಕ್ಕೆ ಬಂಪರ್ ಬೆಲೆ ಸಿಗುವ ರೈತರಿಗೆ ಬಹು ಪಾಲು ನಷ್ಟದ ಕಹಿ ಮಾಮೂಲು. ಉತ್ತಮ ಬೆಲೆ ನಿರೀಕ್ಷೆಯಲ್ಲಿ ಟೊಮೊಟೊ ಬೆಳೆದ ರೈತರಿಗೆ ಬೆಲೆ ಕುಸಿತದಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲದೆ ನಷ್ಟದ ಕಹಿ ಉಣಿಸಿದೆ.

    ಪ್ರತಿ ಕಿಲೋಗ್ರಾಂ ಟೊಮೊಟೊ ಸಗಟು ವಹಿವಾಟಿನಲ್ಲಿ ಸರಾಸರಿ ರೂ.5 ರಿಂದ 6 ಬೆಲೆಗೆ ಬಿಕರಿಗೊಂಡಿದೆ. ಕಳೆದ ಮಾರ್ಚ್ ಆರಂಭದಲ್ಲಿ ಟೊಮೊಟೊ ಸಸಿಗಳನ್ನು ಪೋಷಣೆ ಮಾಡಲಾಗಿತ್ತು. ಇಲ್ಲಿಯವರೆಗೆ ಸುಮಾರು 600 ಬಾಕ್ಸ್ ಮಾರಾಟ ಮಾಡಲಾಗಿದೆ. ಒಂದು ಬಾಕ್ಸ್ ನಲ್ಲಿ 28 ಕೆ.ಜಿ. ಟೊಮೊಟೊ ಸಂಗ್ರಹ ಸಾಮರ್ಥ್ಯ. ಕೇವಲ ರೂ.160 ರಂತೆ ಒಂದು ಬಾಕ್ಸ್ ದರ ನಿಗದಿಯಾಗಿದೆ. ವಾರದಲ್ಲಿ ಮೂರು ದಿನ 20 ಬಾಕ್ಸ್ ವರೆಗೆ ಇಳುವರಿ ಬಂದಿದೆ. ಬೇಡಿಕೆ ಇಲ್ಲದೆ ಪಾತಾಳಕ್ಕಿಳಿದ ಧಾರಣೆಯಿಂದ ಕಂಗಲಾಗಿದ್ದೇವೆ ಎನ್ನುತ್ತಾರೆ ರೈತ ಮೂರ್ತಿ.

    ದೀರ್ಘಾವಧಿ ಇಳುವರಿ ನೀಡುವ ಸಾವೊ ತಳಿಯ ಟೊಮೊಟೊ ಸಸಿಗಳನ್ನು ರೂ.1.80 ರಂತೆ ಖರೀದಿಸಲಾಗಿತ್ತು. ಮುಕ್ಕಾಲು ಎಕರೆಯಲ್ಲಿ 8 ಸಾವಿರ ಸಸಿಗಳನ್ನು ಪೋಷಣೆ ಮಾಡಲಾಗಿತ್ತು. ಔಷಧಿ ಗೊಬ್ಬರ ಸೇರಿ ಸುಮಾರು ರೂ.40 ರಿಂದ 50 ಸಾವಿರ ಖರ್ಚು ತಗುಲಿತ್ತು. ಮನೆಮಂದಿಯೆಲ್ಲಾ ಟೊಮೊಟೊ ಬಿಡಿಸಲು ತೆರಳಿದ್ದರಿಂದ ದುಬಾರಿ ಕೂಲಿ ಉಳಿದಿದೆ. ದಾವಣಗೆರೆಗೆ ರವಾನಿಸಿದ್ದರೆ ಬಾಡಿಗೆ, ಹಮಾಲಿ, ದಲ್ಲಾಳಿ ಖರ್ಚು ತೀವ್ರ ಹೊಡೆತ ಬೀಳುತ್ತಿತ್ತು. ಮನೆ ಬಾಗಿಲಲ್ಲೇ ಸಗುಟು ವ್ಯಾಪಾರಿಗಳಿಗೆ ಮಾರಾಟ ಮಾಡಿದೆವು. ಇಲ್ಲವಾದರೆ ಇನ್ನೂ ತೀವ್ರ ನಷ್ಟ ಅನುಭವಿಸಬೇಕಾಗಿತ್ತು ಎನ್ನುತ್ತಾರೆ ಅವರು.

    ಇದು ಟೊಮೊಟೊ ಬೆಳೆದ ಒಬ್ಬ ರೈತನ ಅಳಲು. ರಾಜ್ಯಾದ್ಯಾಂತ ಟೊಮೊಟೊ ಬೆಳೆದ ರೈತರಿಗೆ ಏಕರೂಪದ ಲಾಭದಾಯಕ ಮಾರುಕಟ್ಟೆ ಬೆಲೆ ಸಿಕ್ಕಿಲ್ಲ. ಎಲ್ಲೆಂದರಲ್ಲೆ ಸರಕು ಸಾಗಣೆ ವಾಹನಗಳಿಂದ ಟೊಮೊಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಉತ್ಪನ್ನಗಳಿಗೆ ಲಾಕ್ ಡೌನ್ ಸಮಯದಲ್ಲಿ ಓಡಾಟಕ್ಕೆ ಪರವಾನಗಿ ಇದೆ. ಜನರ ಓಡಾಟವಿಲ್ಲದೇ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಹಾಗಾಗಿ ದರದಲ್ಲಿ ಭಾರಿ ಇಳಿಕೆ ಕಂಡಿದೆ. ದೀರ್ಘಾವಧಿ ಸಂಗ್ರಹಣೆ ಸಾಧ್ಯವಿಲ್ಲದೇ, ಮಾರಾಟ ಮಾಡಲು ಸಾಧ್ಯವಾಗದೇ ಬೀದಿಗೆ ಚೆಲ್ಲಿದ್ದಾರೆ.

    ಟೊಮೊಟೊ ಬೆಳೆಯಲ್ಲದೆ ಬಹುತೇಕ ತರಕಾರಿ, ಹಣ್ಣು ಬೆಳೆದ ರೈತರ ಗೋಳಿಗೆ ಕೊನೆಯಲ್ಲಿ. ವೈಜ್ಞಾನಿಕ ಯುಗದಲ್ಲಿಯೂ ಬೇಡಿಕೆ, ಪೂರೈಕೆಯ ವಿಶ್ಲೇಷಣೆ ಪ್ರಾಮಾಣಿಕವಾಗಿ ನಡೆಸಿಲ್ಲ. ಸರ್ಕಾರ ರೈತ ಪರ ಇಲಾಖೆಗಳ ಮೂಲಕ ತರಕಾರಿ ಬೆಳೆ ಭೂಮಿ ಸರ್ವೇ ನಡೆಸಬೇಕು. ವಿವಿಧ ತರಕಾರಿ, ಹಣ್ಣುಗಳ ಬೇಡಿಕೆಯ ಅಂಕಿಅಂಶಗಳನ್ನು ಸಂಗ್ರಹಿಸಬೇಕು. ಪ್ರಾದೇಶಿಕ ಹವಾಗುಣ ವಿಶ್ಲೇಷಿಸಿ ತರಕಾರಿ, ಹಣ್ಣು ಬೆಳೆ ವಿಭಜಿಸಬೇಕು. ಬೇಡಿಕೆಗನುಗುಣವಾಗಿ ಇಂತಿಷ್ಟೇ ಹೆಕ್ಟೇರ್ ನಲ್ಲಿ ಬೆಳೆಯಲು ಉತ್ತೇಜಿಸಬೇಕು. ಒಂದೆರಡು ವರ್ಷ ಇಂತಹ ವೈಜ್ಞಾನಿಕ ಪ್ರಯೋಗ ಅಳವಡಿಸಿದಲ್ಲಿ ರೈತರಿಗೆ ಲಾಭ ತಂದುಕೊಡಲು ಸಾಧ್ಯ.

    ದೈಹಿಕ ಶ್ರಮ, ಆರ್ಥಿಕ ಹೊರೆ, ದೀರ್ಘಾವಧಿ ಕಾಯುವಿಕೆಯಿಂದ ಬೆಳೆ ಮಾರುಕಟ್ಟೆಗೆ ತಲುಪಿಸಿದರೆ ಕೇವಲ ಕೆಲವೇ ನಿಮಿಷದಲ್ಲಿ ದಲ್ಲಾಲಿಗಳು ಅವರಿಗಿಂತ ಹೆಚ್ಚು ಲಾಭ ಗಳಿಸುವರು. ಇದು ಅಸೂಯೆ ವೃದ್ಧಿಸುವ ವ್ಯವಸ್ಥೆ. ತಾತ್ಕಾಲಿಕ ಕೊರತೆ ಸೃಷ್ಟಿಸುವ ಮೂಲಕವೂ ರೈತರಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಲಾಭ ಪಡೆಯುವ ಹುನ್ನಾರಗಳು ನಡೆಯುತ್ತವೆ. ಸರ್ಕಾರ ಇಂದಿನ ಡಿಜಿಟಲ್ ತಂತ್ರಜ್ಞಾನದಲ್ಲಿ ರೈತರಿಗೆ ಬೇಡಿಕೆ, ಪೂರೈಕೆಯ ಪರಿಕಲ್ಪನೆಯಲ್ಲಿ ಉತ್ಪನ್ನಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು.

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    3 COMMENTS

    1. ನಮ್ಮ ರೈತರು ಬೆಳೆದ ಬೆಳೆಗಳನ್ನು ಅಂದೇ ಮಾರಿ,ಹಣ ಮಾಡುವ ವಿಧಾನ ಮರೆಯಬೇಕು. ಈಗಾಗಲೇ ಶೈತ್ಯ ಸಂಗ್ರಹಣಾ ವ್ಯವಸ್ಥೆ ಬಂದು ಹಲವಾರು ದಿನಗಳವರೆಗೆ ಕಾಯ್ದಿರಿಸುವ ವ್ಯವಸ್ಥೆ ಲಭ್ಯವಿದೆ. ಜೊತೆಯಲ್ಲಿ ಇಂತಹ ಸಮಯದಲ್ಲಿ ಉಪಯೋಗಕ್ಕೆ ಬರುವ ಮತ್ತೊಂದು ವ್ಯವಸ್ಥೆ ಈ ಟೊಮೊಟೊ ಹಣ್ಣಿಗೆ ಹೇಳುವುದಾದ್ರೆ ಅದು ಟೋಮೋಟೋ ಸಾಸ್ ಮಾಡುವ ಯಂತ್ರದ ಅಳವಡಿಕೆ. ಇದಕ್ಕೆ ಅಂತಹ ಹೆಚ್ಚೇನೂ ಬಂಡವಾಳ ಬೇಕಿಲ್ಲ. ಸಾಸನ್ನು ವರ್ಷದ ವರೆಗೂ ಕಾಯ್ದಿರಿಸಿ,ಮಾರಬಹುದು.

    2. ಮಂಜುನಾಥ ಬೊಮ್ಮ ಘಟ್ಟ ಅವರ ಸಲಹೆಯನ್ನು ನಾನು ಬೆಂಬಲಿಸುತ್ತೀನಿ.ರೈತರಿಗೂ ಸಹನೆ ವಾಸ್ತವದಲ್ಲಿ athyagatya.

    3. Why they every time growing tomoro others vegetables like badanekai bendelva menesenakai growing farmers not that much of problem

    LEAVE A REPLY

    Please enter your comment!
    Please enter your name here

    Latest article

    error: Content is protected !!