26 C
Karnataka
Sunday, May 19, 2024

    ಪ್ರೈಮರಿ ಶಾಲೆಗಳಿಗೆ ಜೂನ್ 14 ರವರಗೆ, ಹೈಸ್ಕೂಲ್ ಗಳಿಗೆ ಮೇ 31ರವರೆಗೆ ಬೇಸಿಗೆ ರಜೆ

    Must read

    ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದ್ದು, ಪ್ರಸಕ್ತ‌ ಸನ್ನಿವೇಶವನ್ನು ಗಮನದಲ್ಲಿರಿಸಿ 2020-21 ನೇ ಸಾಲಿನ ರಜಾವಧಿಯನ್ನು ಪರಿಷ್ಕರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಈ ಬಗ್ಗೆ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿರುವ ಬಗ್ಗೆ ಖಚಿತ‌ಪಡಿಸಿದ ಸಚಿವರು ಪ್ರಾಥಮಿಕ ಶಾಲೆಗಳಿಗೆ ಹಿಂದೆ ತಿಳಿಸಲಾದಂತೆ 14.06.2021ರವರೆಗೆ ಬೇಸಿಗೆ ರಜೆ, ಪ್ರೌಢ ಶಾಲೆಗಳಿಗೆ 27.04.2021 ರಿಂದ 31.05.2021ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ‌ ಎಂದಿದ್ದಾರೆ.

    01.06.2021ರಿಂದ 14.06.2021ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪುನರ್ಮನನ ತರಗತಿಗಳು ನಡೆಯಲಿವೆ. 15.06.2021ರಿಂದ 8-10 ನೇ ತರಗತಿಗಳು‌ ಪ್ರಾರಂಭವಾಗಲಿವೆ ಎಂದು ಹೇಳಿದ್ದಾರೆ. ಅಂದರೆ ಹೈಸ್ಕೂಲ್ ಶಿಕ್ಷಕರ ಬೇಸಿಗೆ ರಜೆ ಮೇ 31 ಕ್ಕೆ ಮುಗಿಯುತ್ತದೆ. ವಿದ್ಯಾರ್ಥಿಗಳಿಗೆ ಜೂನ್ 14 ರವರೆಗೂ ರಜೆ ಮುಂದುವರಿಯುತ್ತದೆ.

    ಪ್ರೌಢಶಾಲಾ‌ ಶಿಕ್ಷಕರು ರಜೆ ಅವಧಿಯಲ್ಲಿ‌ ಎಸ್.ಎಸ್.ಎಲ್.ಸಿ ಮಕ್ಕಳ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನ ಹರಿಸಬೇಕು, ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು ಅವರ ಕಲಿಕೆಗೆ ಪ್ರೇರೇಪಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!