31.4 C
Karnataka
Sunday, May 12, 2024

    ಬಾರಿಸು ಕನ್ನಡ ಡಿಂಡಿಮವ

    Must read

    ಕನ್ನಡ ಗೀತೆಗಳ ಗಾಯನವಿಲ್ಲದೆ ರಾಜ್ಯೋತ್ಸವ ಪರಿಪೂರ್ಣವಾಗುವುದೇ ಇಲ್ಲ. ನಿಮ್ಮ ನೆಚ್ಚಿನ ಕನ್ನಡಪ್ರೆಸ್.ಕಾಮ್ ರಾಜ್ಯೋತ್ಸವವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಈ ಪಾಡ್ಕಾಸ್ಟ್ ಪ್ರಸ್ತುತಪಡಿಸುತ್ತಿದೆ.

    ಲಕ್ಷ್ಮಿ ಶ್ರೇಯಾಂಶಿ ಅವರು ಕವಿ ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾಚೇತನ …ಗೀತೆಯೊಂದಿಗೆ ಸಂಗೀತ ಸಂಜೆ ಆರಂಭಿಸಿದ್ದಾರೆ. ಮುಂದೆ ಬಾಣಾವಾರ ಮಂಜುನಾಥ್ ಸಿದ್ದಯ್ಯ ಪುರಾಣಿಕರ ಹೊತ್ತಿತೋ ಹೊತ್ತಿತು ಕನ್ನಡದ ದೀಪ ಗೀತೆಯನ್ನು ಮನತುಂಬಿ ಹಾಡಿದ್ದಾರೆ.

    ಯುವ ಗಾಯಕ ಪ್ರಜ್ವಲ್ ಬುರ್ಲಿ ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ ಎಂದು ಹಾಡಿ ಕನ್ನಡ ಪ್ರೇಮವನ್ನು ಬಡಿದೆಬ್ಬಿಸುತ್ತಾರೆ. ಪ್ರೊ. ಕೆ. ಎಸ್. ನಿಸ್ಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಗೀತೆಯನ್ನು ಹಾಡುವ ಮೂಲಕ ಜಿ .ಮೀರಾ ಸಂಗೀತ ಸಂಜೆ ಮುಕ್ತಾಯ ಮಾಡಿದ್ದಾರೆ.

    ಇದರ ಮಧ್ಯೆ ಶಿಕ್ಷಕಿ ಭಾನು ಅರುಣ್ ಶಾಲೆಗಳಲ್ಲಿ ಆಚರಿಸುವ ರಾಜ್ಯೋತ್ಸವದ ನೆನಪು ಮಾಡಿಕೊಂಡಿದ್ದಾರೆ. ಭಾರತಿ ಎಸ್ ಎನ್ ಪಾಡ್ಕಾಸ್ಟ್ ನಿರೂಪಿಸಿದ್ದಾರೆ.

    ಆಲಿಸಿ ಪ್ರತ್ರಿಕ್ರಿಯಿಸಿ.

    spot_img

    More articles

    10 COMMENTS

    1. ಮೊದಲು ತಮ್ಮ ನಿರೂಪಣೆ ಯಿಂದ ಕೇಳುಗರನ್ನು ಸೂಜಿಗಲ್ಲಿನಂತೇ ಆಕರ್ಷಣೆ ಮಾಡುತ್ತಿರುವ ಶ್ರೀ ಮತಿ ಭಾರತಿ ಯವರಿಗೆ ಧನ್ಯವಾದಗಳು. ಈ ದಿನದ ಶುಭ ಪರ್ವದಂದು. ಕನ್ನಡ ನಾಡಿನ ಕವಿ ಪುಂಗವರ ರಚನೆ ಗಳನ್ನು ಸುಮಧುರವಾಗಿ ಹಾಡಿದ ಎಲ್ಲ ಗಾಯಕ ಗಾಯಕಿಯರಿಗೂ ಅಭಿನಂದನೆಗಳು. ಕನ್ನಡ ಬಗ್ಗೆ ಅದರ ಹಿರಿಮೆ ಬಗ್ಗೆ ಎಲ್ಲರೂ ತಿಳಿಯುವಂತೆ ಮಾಡುತ್ತಿರುವ ಕನ್ನಡಪ್ರೆಸ್ com. ಇನ್ನು ಇನ್ನು ಉತ್ತಮ ಕಾರ್ಯಕ್ರಮ ನೀಡಿ ಕನ್ನಡಿಗರಲ್ಲಿ ಇರುವ ಕೀಳಿರಿಮೆ ಯನ್ನು ಹೊಡೆದು ಹೊಡಿಸಲಿ. ಧನ್ಯವಾದಗಳು 🙏🙏

    2. Bharati, dhanyavadagalu. Khayata kavi gala aayda nadageetegalannu tumba sogasagi hadiddare gayakarellaru. Allade Bharati nimma padcast adbhutavagide. Vyvidyaate inda moodi bandide Rajyotsava program. Jai Karnataka maate.

    3. Sangeetaಸಂಜೆ ಕಾರ್ಯಕ್ರಮ ಸುಮಧುರ ವಾಗಿತ್ತು. ನಿರೂಪಣೆ ಯೂ ಅರ್ಥಪೂರ್ಣ ವಾಗಿತ್ತು. ಅಯೊಜನೆಯೂ ಚೆನ್ನಾಗಿತ್ತು.ಎಲ್ಲದರಲ್ಲು ಕನ್ನಡಾಭಿಮಾನ ತುಂಬಿ ತುಳುಕುತಿತ್ತು.

    4. ಭಾರತಿಯ ನಿರೂಪಣೆ ಸೂಪರ್.ಕನ್ನಡ ಭಾಷೆ ನುಡಿದರೆ ಮುತ್ತಿನ ಹಾಗೆ ಇರುತ್ತದೆ. ಇನ್ನು ಸೊಗಸಾಗಿ ಹಾಡಿದ್ದನ್ನು ಕೇಳಿದಾಗ ಅದರ ಸೊಗಸು ಹಾಡು ಕೇಳಿ ಅನುಭವಿಸಿದವರಿಗೆ ಗೊತ್ತು. ಸೂಪರ್ ಕಾರ್ಯಕ್ರಮ.

    5. ನಿಮ್ಮೆಲ್ಲರ ಅಭಿಮಾನ kannadapress.com ಮೇಲೆ ಹೀಗೇ ಇರಲಿ. ಧನ್ಯವಾದಗಳು

    6. ಕನ್ನಡ ಪ್ರೆಸ್ .com on lineಪತ್ರಿಕಾ ಬಳಗದವರು ಪ್ತಸಾರ ಮಾಡಿದ ಕನ್ನಡ ನಾಡುನುಡಿ ನೆನೆದು ಸಂಭ್ರಮಿಸುವುದಷ್ಟೇ ಅಲ್ಲ ಅದು ನಮ್ಮ‌ಜೀವನದ ಅಂತರಾತ್ಮ ಆಗಬೇಕೆನ್ನುವ ಸಾಂಸ್ಥತಿಕ ಕಾಳಜಿ ಈ ಪತ್ರಿಕಾ ಬಳಗಕ್ಕೆ ಅಭಿನಂದನೆಗಳು
      ಈ ಕಾರ್ಯಕ್ರಮವನ್ನು ಹಾಡು ಹಾಗೂ ಕರ್ನಾಟಕದ ಇತಿಹಾಸ ಪರಂಪರೆಯ ಸಿಂಹಾವಲೋಕನವನ್ನು‌ತಮ್ಮ ಅಸ್ಖಲಿತ ಕನ್ನಡದ ನಿರೂಪಣೆ ಮಾಡಿದ ಭಾರತಿ ಮೇಡಂಗೆ‌ಅಭಿನಂದನೆಗಳು.
      ಮೊದಲನೆಯ ಗೀತೆ ವಿಶ್ವ ವಿನೂತನ ವಿದ್ಯಾಚೇತನ ಸುಶ್ಗಾವ್ಯವಾಗಿ ಹಾಡಿದ ಲಕ್ಷ್ಮಿ
      ಶ್ರೇಯಾಂಷಿ ಅವರು ಕೇವಲ ಶೃತಿವಾದ್ಯದೊಡನೆ ಇಂಪಾಗಿ ಕೇಳಿಸಿತು.
      ನಾನು ಹಾಡಿದ ಹೊತ್ತಿ ತೋ ಹೊತ್ತಿತು ಕನ್ನಡದ‌ದೀಪ ಸ್ವಲ್ಪ ಉದ್ವಿಗ್ನತೆ ಯೊಡನೆ ಹಾಡಿದಂತೆ ಅನ್ನಿಸಿತು. ತಾಳದ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದರೆ ಇನ್ನೂ ಹೆಚ್ಚು ಸುಶ್ರಾವ್ಯ ವಾದ ಅನುಭವ ಕೇಳುಗರಿಗೆ ಕೊಡುತ್ತಿತ್ತೇನೋ!
      ದಾವಣಗೆರೆಯ ಪ್ರಜ್ವಲ್ ಈ ತಲೆಮಾರಿನ ಯುವಕರ ಕನ್ನಡ ಪ್ರೇಮದ ಪ್ರಾಮಾಣಿಕ ಕಾಳಜಿಯನ್ನು‌ಅನಿಸಿಕೆಯಲ್ಲಿ ತಿಳಿಸಿದರು.ಅವರ ಆಯ್ಕೆ ಬಾರಿಸು ಕನ್ನಡ ಡಿಂಡಿಮವ ಚೆನ್ನಾಗಿತ್ತು. ಇನ್ನೂ ಸ್ವಲ್ಪ ಜೋಷ್ ಇದ್ದಿದ್ದರೆ ಆ ಹಾಡಿನ ಭಾವತೀವ್ರತೆಗೆ ನ್ಯಾಯ ಸಲ್ಲಿಸುತ್ತಿತ್ತು.
      ಈ ಗೀತಯಾನದ ಕೊನೆಗೆ ಶ್ರೀಮತಿ ಜಿ.ಮೀರಾ ರವರು ತನ್ಮಯರಾಗಿ‌ಜೋಗದ ಸಿರಿಬೆಳಕಿನಲ್ಲಿ ನನ್ನ ಮನಸ್ದನ್ನು ಸೆಳೆಯಿತು.ಅದಕ್ಕೆ ಮುಖ್ಯ ಕಾರಣ ಅವರ trained/restrained ದನಿ.ಭಾವ ಗೀತೆಗೆ ‌ಅಗತ್ಯವಾದ ಸಾಹಿತ್ಯವೇ ಪ್ರಧಾನವಾಗಿ ಗೇಯತೆ ಅದಕ್ಕೆ ಜೊತೆಯಾದಾಗ ಇಂತಹ ರಸಪಾಕ ಮೂಡಲು ಸಾಧ್ಯ.
      ಮುಂದಿನ‌ದಿನಗಳಲ್ಲಿ ಕನ್ನಡದ ಮತ್ತಷ್ಟು ಪ್ರತಿಭೆಗಳಿಗೆ ಸ್ಪೂರ್ತಿ ಮೂಡುವಂತೆ‌ಕಾರ್ಯಕ್ರಮದ ರೂಪರೇಷೆ-ನಿಗದಿತ ಕಾಲಾವಧಿಯಲ್ಲಿ-ಸೊದಗದ ಪಡಿಸಿದ ಪತ್ರಿಕಾ ಬಳಗ ಅಭಿನಂದನಾರ್ಹರು

    7. ಬಾಣಾವರ ಮಂಜುನಾಥ ಅವರೆ, ಪ್ರತಿಯೊಬ್ಬರ ಹಾಡುಗಳನ್ನು ಕೇಳಿ ಅದನ್ನು ವಿಮರ್ಷಿಸಿದ ರೀತಿ ತುಂಬಾ ಇಷ್ಟವಾಯಿತು. ಧನ್ಯವಾದಗಳು. ಪ್ರಪಂಚದಲ್ಲಿ ಬೇರೆಯವರ ತಪ್ಪುಗಳನ್ನು ಮೊದಲು ಹುಡುಕುವವರೇ ಜಾಸ್ತಿ ಆದರೆ ನೀವು ಅದಕ್ಕೆ ಅಪವಾದ. ನಿಮ್ಮ ತಪ್ಪನ್ನೂ ವಿಮರ್ಷಿಸಿಕೊಂಡಿದ್ದೀರ. ನಿಜಕ್ಕೂ ದೊಡ್ಡ ಗುಣ ನಿಮ್ಮದು. ನಿಮ್ಮ ಹಾಡುಗಳನ್ನು ಆಗಾಗ ನಮಗೆ ಕೇಳಿಸುತ್ತಿರಿ. ಮತ್ತೊಮ್ಮೆ ಧನ್ಯವಾದಗಳು.

    8. ಚೆನ್ನಾಗಿ ಮೂಡಿ ಬಂದಿದೆ ಕಾರ್ಯಕ್ರಮ.. ಲಕ್ಷ್ಮಿ, ಪ್ರಜ್ವಲ್ ಸೊಗಸಾದ ಹಾಡುಗಾರಿಕೆ.. ಮಂಜುನಾಥ್ ಅವರ ಹಾಡು ಕೂಡಾ ಚೆನ್ನಾಗಿತ್ತು.. ಪ್ರಜ್ವಲ್ ಹೊಸ ಪೀಳಿಗೆಯ ಕನ್ನಡಿಗರ ಪ್ರತಿನಿಧಿಯಾಗಿ ಕಂಡೆ..

    9. ಮೀರಾ ಅವರ ನಿತ್ಯೋತ್ಸವ ಹಾಡು ಕೂಡ ಚೆನ್ನಾಗಿ ಮೂಡಿಬಂದಿದೆ.. ಅಭಿನಂದನೆಗಳು

    10. ಭಾರತಿ ಮೇಡಂ ನಿಜಕ್ಕೂ ಮೊದಲು ನಿಮ್ಮ ನಿರೂಪಣಾ ಕೌಶಲ್ಯದ ಬಗ್ಗೆ ನನಗೆ ಅಷ್ಟಾಗಿ ತಿಳಿದಿರಲಿಲ್ಲ. ನನಗೂ ಆಗಾಗ ನಿರೂಪಣೆ ಮಾಡುವ ಹವ್ಯಾಸವಿದೆ.ಆದರೆ ನಿಮ್ಮಷ್ಟು spontaneity ಕಡಿಮೆ ಎಂದು ನಿಮ್ಮ ಸುಲಿದ ಬಾಳೆಯ ಹಣ್ಣಿನಂದದ ಸರಿಗನ್ನಡ ಕೇಳಿ ಖುಷಿಯಾಗಿದೆ.
      ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಈ ಕ್ಷೇತ್ರದಲ್ಲಿ ಸಿಗಲಿ
      ಬಾಣಾವರ ಮಂಜುನಾಥ್

    LEAVE A REPLY

    Please enter your comment!
    Please enter your name here

    Latest article

    error: Content is protected !!