29.8 C
Karnataka
Monday, May 13, 2024

    ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ

    Must read

    ಇಂದು ದಸರಾ ಸಂಗೀತೋತ್ಸವದ ಒಂಭತ್ತನೇ ದಿನ. ಇಂದಿನ ಸಂಗೀತ ಕಚೇರಿಯನ್ನು ಮಕ್ಕಳು ನಡೆಸಿಕೊಟ್ಟಿದ್ದಾರೆ. ಮಕ್ಕಳ ಬಾಯಿಂದ ದೇವಿ ಸ್ತುತಿಯನ್ನು ಕೇಳುವುದೇ ಆನಂದ. ಮಕ್ಕಳು ಹೇಗೆ ಹಾಡಿದರು ಸೊಗಸೇ. ಇಂದಿನ ಕಛೇರಿಯಲ್ಲಿ ದೂರದ ಅಮೆರಿಕದಿಂದಲೂ ಮಕ್ಕಳು ಭಾಗವಹಿಸಿದ್ದಾರೆ.

    ಶ್ರೇಯಾ ಮುದಲಗಿ ಅವರ ಗಣೇಶ ಸ್ತುತಿಯಿಂದ ಆರಂಭವಾಗುವ ಕಛೇರಿ ಶ್ರೇಯಾ ವಿನೋದ್ ಅವರ ಜಯ ಜಯ ದುರ್ಗೆ ಜೈ ಭವಾನಿಯ ಮೂಲಕ ಮುಂದುವರಿಯುತ್ತದೆ. ಇದಾದ ನಂತರ ಪವನ್, ಪದುಮನಾಭನನ್ನು ಪ್ರಾರ್ಥಿಸಿದರೆ ಎಸ್ . ವರ್ಷಿಣಿ ತಾಯಿ ಚಾಮುಂಡಿಯನ್ನು ಕೊಂಡಾಡುತ್ತಾಳೆ. ಇದಾದ ನಂತರ ತೃಪ್ತಿ ಎಸ್ ತಮ್ಮ ಕೀ ಬೋರ್ಡ್ ಮೂಲಕ ದೇವಿಯನ್ನು ಸ್ತುತಿಸಿ ಕಛೇರಿಯನ್ನು ಮತ್ತೊಂದು ಹಂತಕ್ಕೆ ಸಜ್ಜುಗೊಳಿಸುತ್ತಾರೆ. ಮುಂದೆ ತನ್ಮಯ್ , ವಿರಾಜ್ ಜೋಡಿ ಆನಂದ ರಮಣನನ್ನು ಸ್ಮರಿಸಿದರೆ ಶ್ರೀಯಾ, ಗರುಡ ಗಮನ ತವ ಚರಣ ಎಂದು ಹಾಡುತ್ತಾಳೆ. ಮುಂದೆ ಸಿರಿ ಹಾಗೂ ಸಂಜನಾ ಸಹೋದರಿಯರು ಫಲುಕೇ ಬಂಗಾರ ಮಾಯಾನ ಕೋದಂಡಪಾಣಿ ಎನ್ನುತ್ತಾ ಶ್ರೀನಿವಾಸನನ್ನು ಕೊಂಡಾಡುತ್ತಾರೆ.ಕೊನೆಯಲ್ಲಿ ಶ್ರೀಕೃತಿ ರಾಧೇ ಶ್ಯಾಮ ಘನ ಶ್ಯಾಮ ಗೀತೆಯೊಂದಿಗೆ ಕಛೇರಿಯನ್ನು ಸಂಪನ್ನ ಗೊಳಿಸುತ್ತಾಳೆ.

    ಹಿರಿಯ ಪತ್ರಕರ್ತ ಸತ್ಯನಾರಾಯಣ ನಾಡಿಗರು ತಮ್ಮ ದಸರಾ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಭಾರತಿ ಮತ್ತು ಶ್ರೀನಿವಾಸ ರ ವ್ಯಾಖ್ಯಾನವೂ ಇದೆ.

    ಆಲಿಸಿ ಪ್ರತಿಕ್ರಿಯಿಸಿ

    spot_img

    More articles

    6 COMMENTS

    1. Makkalu OBBARIGINTHA obbaru bahala sushraavavaagi haadiddare Highly appreciated Bharathi Srinivasa avara Jodi niroopaneyannu atyntha chennagi nadisikottiddare Hats Off Ide reethi kaaryakram baruththirali

    2. Makkalu ellaru thumba channagi haadiddare.. dasara shubhashayagalu .. beautiful podcasts organized and hosted by kannada press and specially Bharati avaru.. looking for many more of this!

    3. ಎಲ್ಲಾ ಮಕ್ಕಳು ತುಂಬಾ ಮುದ್ದು ಮುದ್ದಾಗಿ ಹಾಡಿದ್ದಾರೆ. ದಸರಾ ಸಂಗೀತೊತ್ಸವದ ಮಂಗಳ ಚೆನ್ನಾಗಿ ಆಯಿತು.ನೀರುಪಣೆ ಯ ಹೊಸ ಹೊಸ ಪ್ರಯೋಗ ಆಮೊಘ ವಾಗಿತ್ತು. ಅಂತೂ ಈ ಬಾರಿಯ ದಸರಾ ವನ್ನು ವಿನೂತನ ವಾಗಿ ನಡಸಿ ಕೊಟ್ಟ ಕನ್ನಡ ಪ್ರೆಸ್.ಕಾಮ್ ನವರಿಗೆ ಅಭಿನಂದನೆ ಗಳು.🙏🙏

    4. ದಸರಾ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೀತ ಸಂಭ್ರಮವು ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಈ ನವರಾತ್ರಿಯ ನವ ದಿನಗಳಲ್ಲಿ ಶ್ರೋತೃಗಳಿಗೆ ಸಂಗೀತ ಸುಧೆಯನ್ನು ಉಣಬಡಿಸಿದ ಕನ್ನಡ ಪ್ರೆಸ್.ಕಾಮ್ ನವರ ಶ್ರಮ ಹಾಗೂ ಶ್ರೀಮತಿ ಭಾರತಿಯವರ ಅಚ್ಚುಕಟ್ಟಾದ ನಿರೂಪಣೆಯು , ವಿವಿಧ ವಯೋಮಾನದ ಮಕ್ಕಳ ಹಾಗೂ ಹಿರಿಯರ ಸಂಗೀತ, ಹಾಡುಗಳು ವೈವಿಧ್ಯಮಯವಾಗಿ, ಆಕರ್ಷಕವಾಗಿ ಮೂಡಿ ಬಂದು, ನವರಾತ್ರಿ ಕಳೆದುದೇ ಗೊತ್ತಾಗದೆ, ಇನ್ನೂ ಹೆಚ್ಚು ದಿನ ಮುಂದುವರಿದರೆ ಚೆನ್ನಿತ್ತು ಎಂದು ಅನಿಸುವ ಮಟ್ಟಿಗೆ ಕಾರ್ಯಕ್ರಮವು ಸಂಪೂರ್ಣ ಯಶಸ್ವಿಯಾಗಿದೆ. ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳ ಪುಟ್ಟ ಪುಟ್ಟ ದೇವರನಾಮಗಳನ್ನು ಕೇಳುವುದೇ ಮಹದಾನಂದ. ಭಾಗವಹಿಸಿದ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ಹಾಡಿ, ಶ್ರೋತೃಗಳ ಮನಸೂರೆಗೊಂಡು, ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಮೂಡಿಬರಲಿ ಎಂದು ಆಶಿಸುವೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!